For Quick Alerts
ALLOW NOTIFICATIONS  
For Daily Alerts

ಮೈ ಅಧಿಕವಾಗಿ ಬೆವರುವುದನ್ನು ತಡೆಯುವುದು ಹೇಗೆ?

By Super
|

ಬೇಸಿಗೆ ಕಾಲ ಬಂತೆಂದರೆ ಸಾಕು ಎಲ್ಲರಲ್ಲೂ ರಜೆಯ ಸಂಭ್ರಮ. ದೂರದ ಊರುಗಳಿಗೆ ಪ್ರವಾಸಕ್ಕಾಗಿ ಹೋಗುವುದಕ್ಕೆ ಎಲ್ಲರೂ ಸಿದ್ಧರಾಗಿರುತ್ತಾರೆ. ಇಂಥಹ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ಉರಿವ ಬಿಸಿಲಿನಿಂದಾಗಿ ಉಂಟಾಗುವ ಸಮಸ್ಯೆ ಬೆವರುವುದು.

ಅತಿಯಾದ ಬೆವರಿನಿಂದಾಗಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಪ್ರಯಾಣ ಮಾಡುವಾಗ ದುರ್ವಾಸನೆ ಬರಬಹುದು. ಈ ಸಮಯದಲ್ಲಿ ಹೆಚ್ಚುಬಾರಿ ಬಟ್ಟೆ ಬದಲಾಯಿಸುವುದಕ್ಕಾಗಲಿ, ಅಥವಾ ದಪ್ಪನೆಯ ಬಟ್ಟೆಗಳನ್ನು ಧರಿಸುವುದಕ್ಕಾಗಲಿ ಸಾಧ್ಯವೇ ಇಲ್ಲ.

ಈ ಕೆಳಗಿನ ಕೆಲವು ಸಲಹೆಗಳು ಬೇಸಿಗೆಯ ಸಮಸ್ಯೆಯಿಂದ ದೂರವುಳಿಯಲು ಸಹಾಯಕವಾಗಬಲ್ಲದು.

How To Deal With Excessive Sweating On Holiday

ಹಂತಗಳು:

• ಬೇಸಿಗೆಯಲ್ಲಿ ಅತೀಯಾಗಿ ಬೆವರುವುದನ್ನು ತಪ್ಪಿಸಲು ವೆಸ್ಟ್ ಟಾಪ್ಸ್ ಅಥವಾ ಟೀ ಶರ್ಟ್ ಗಳನ್ನು ಧರಿಸಿ. ಉದ್ದನೆಯ ಕೈ ಇಲ್ಲದಿದ್ದರೆ ಉತ್ತಮ. ಇದರಿಂದ ಆರಾಮದಾಯಕವಾಗಿರಬಹುದು ಹಾಗೂ ಬೆವರು ಬಂದರೂ ಕಿರಿಕಿರಿ ಎನ್ನಿಸುವುದಿಲ್ಲ. ಟೀ ಶರ್ಟ್ ಗಳು ಚಿಕ್ಕದಾಗಿರುವುದರಿಂದ ಧರಿಸುವುದು ಉತ್ತಮವೆನಿಸುವುದು.

• ಭುಜದ ಸುತ್ತು, ಶಾಲು, ಅಥವಾ ಹವಾಮಾನ ತಂಪಾದ ವೇಳೆಯಲ್ಲಿ ಬಳಸಲು ನಿಮ್ಮ ಭುಜದ ಸುತ್ತ ಟೈ ಇಂಥಹ ಬಟ್ಟೆಗಳನ್ನು ಕೊಂಡುಕೊಳ್ಳಿ. ಇಂಥಹ ಬಟ್ಟೆಗಳು ನಿಮ್ಮ ದೇಹ ಅತೀ ಉಷ್ಣ ಅಥವಾ ಅತೀ ತಂಪಾಗಿರುವುದನ್ನು ತಪ್ಪಿಸುತ್ತವೆ. ಇದರಿಂದ ನೀವೇ ಸ್ವತಃ ನಿಮ್ಮ ದೇಹಕ್ಕೆ ಬೇಕಾದ ಹವಾಮಾನವನ್ನು ನಿರ್ಮಿಸಿಕೊಳ್ಳಬಹುದು.

• ಒಂದು ಶರ್ಟ್, ಬಟ್ಟೆಯ ಚೂರು. ತುಂಡು, ಶಾರ್ಟ್ಸ್, ಹಾಗೂ ಸಡಿಲವಾದ ಚಪ್ಪಲಿಗಳನ್ನು ಜೊತೆಯಲ್ಲಿಟ್ಟುಕೊಂಡಿರಿ. ಇದರಿಂದ ನಿಮಗೆ ವಾತಾವರಣ ಅತ್ಯಂತ ಬಿಸಿ ಎನಿಸಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಬಹುದು.

• ನಿಮ್ಮ ಬಳಿ ಇರಬೇಕಾದ ತುರ್ತು ಕಿಟ್

ಡಿಯೋಡ್ರೆಂಟ್ (ಸುಗಂಧ ದ್ರವ್ಯ)
ಬೆವರು ಒರೆಸುವ ಬಟ್ಟೆ
ಎರಡು ಜೊತೆ ಶರ್ಟ್ / ಬಟ್ಟೆಗಳು
ಸ್ವೆಟ್ ಪ್ಯಾಡ್ (ಬೆವರು ಒರೆಸುವ ಪ್ಯಾಡ್)
ಅಡುಗೆ ಸೋಡ(ಬೇಕಿಂಗ್ ಪೌಡರ್) ಚಿಕ್ಕ ಡಬ್ಬ

• ಆನ್ ಲೈನ್ / ಅಂತರ್ಜಾಲ ಶಾಪಿಂಗ್ ಗಳಲ್ಲಿ ಪುನಃ ಬಳಸಬಹುದಾದಂಥಹ ಹಾಗೂ ಎಸೆಯಬಹುದಾದ, ಮಹಿಳೆ ಮತ್ತು ಪುರುಷರೂ ಬಳಸಬಹುದಾದಂತಹ ಸ್ವೆಟ್ ಪ್ಯಾಡ್ ಗಳು ದೊರಕುತ್ತವೆ. ಇವು ರಜಾ ದಿನಗಳಲ್ಲಿ ಪ್ರಯಾಣ ಮಾಡುವಾಗ ಅತ್ಯಂತ ಸಹಾಯಕವಾಗುತ್ತವೆ.
• ನಿಮಗೆ ಈಜಲು ಗೊತ್ತಿದ್ದರೆ ನೀವಿರುವ ಸ್ಥಳದಲ್ಲಿ ಈಜುವ ಸೌಲಭ್ಯವಿದ್ದರೆ ಈಜಾಡಿ. ಇದು ನಿಮಗೆ ಫ್ರೇಶ್ ಅನುಭವವನ್ನು ನೀಡುತ್ತದೆ.

• ಪ್ರಶಾಂತವಾದ ಹಾಗೂ ಸ್ನೇಹಿ ವಾತಾವರಣವಿರುವ ಸ್ಥಳಗಳಲ್ಲಿ ರಜೆಯನ್ನು ಕಳೆಯಿರಿ. ಇದು ನಿಮ್ಮ ಅತಿಯಾದ ಒತ್ತಡವನ್ನು ಕಡಿಮೆ ಮಾಡಿ ನಿಮ್ಮ ಮೂಡ್ ಕೂಡ ಫ್ರೇಶ್ ಆಗಿರುವಂತೆ ಮಾಡುತ್ತದೆ.

ಈ ಮೇಲಿನ ಮುಂಜಾಗ್ರತಾ ಕ್ರಮಗಳಿಂದಾಗಿ ನೀವು ಬೆವರಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

English summary

How To Deal With Excessive Sweating On Holiday | Tips For Health | ಬೇಸಿಗೆಯ ಬೆವರು ಬೆನ್ನಟ್ಟಿದೆಯೇ ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Excessive sweating can be an embarrassing problem, especially when travelling or staying abroad when it is not as easy to change your shirt five times a day, or wear a thick jumper over sweat patches.
X
Desktop Bottom Promotion