For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕಾಗಿ ತಿನ್ನುವುದು ಹೇಗೆ?

By ಲೇಖಕ
|

ಆರೋಗ್ಯ ಸಂಬಂಧಿ ಕಾಯಿಲೆಗಳು , ನಿಮ್ಮ ತೂಕದಲ್ಲಿನ ಏರಿಳಿತಗಳು ತನ್ಮೂಲಕ ನಿಮ್ಮ ಸ್ವಾತ್ಥ್ಯವನ್ನು ಅಪಾಯದ ಅಂಚಿನಲ್ಲಿ ನಿಲ್ಲಿಸುವುದರ ಮೂಲಹೊಣೆ ನಿಮ್ಮ ಆಹಾರ ಪದ್ಧತಿ. ಆರೋಗ್ಯಕರ, ಪಥ್ಯ ಆಹಾರಗಳನ್ನೇ ತಿನ್ನುತ್ತೇವೆಂದು ನಿರ್ಧರಿಸುವದು ತುಂಬಾ ಸುಲಭ ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟೇ ಕಷ್ಟದ ಕೆಲಸ. ಅದರಲ್ಲೂ ಸದಾ ಆಕರ್ಷಿಸುವ ಅಪಥ್ಯ ಆಹಾರಗಳನ್ನು ವರ್ಜಿಸುವದು ನಮ್ಮ ಆರೋಗ್ಯಕ್ಕಾಗಿ ನಾವು ಆಚರಿಸಲೇ ಬೇಕಾದ ತಪಸ್ಸು.

ಯಾವೆಲ್ಲಾ ಆಹಾರಗಳು ಆರೋಗ್ಯಕರ ಮತ್ತು ಅವನ್ನು ಹೇಗೆ ಸೇವಿಸಬೇಕು ಎಂಬುದನ್ನು ಮೊದಲು ತಿಳಿಯಬೇಕು.

How to Eat Healthy Diets

1. ವಿವಿಧ ಬಣ್ಣಗಳ, ವಿಭಿನ್ನ ಪೌಷ್ಟಿಕಾಂಶಗಳನ್ನೊಳಗೊಂಡ ವಿಧವಿಧದ ಆಹಾರಗಳನ್ನು ಸೇವಿಸಬೇಕು. ಇಂಥವುಗಳಲ್ಲಿ ಸಿ ಜೀವಸತ್ವ ಹೆಚ್ಚಿನ ಪ್ರಮಾಣದಲ್ಲಿದ್ದು ಇವು ಆಂಟಿಆಕ್ಸಿಡೆಂಟ್ಗಳಾಗಿವೆ (ಉತ್ಕರ್ಷಣಗಳಿಂದ ತುಂಬಿವೆ).

2. ಉತ್ಪನ್ನಗಳ ಮಳಿಗೆಗಳಿಗೆ ಹೋದರೆ ನಿಮಗೆ ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ವರ್ಣಗಳ ವಿವಿಧ ತರಹದ ಹಣ್ಣು ಮತ್ತು ತರಕಾರಿಗಳು ಕಂಡುಬರುತ್ತವೆ.ಅಂತೆಯೇ ನಿಮ್ಮ ಪೇಟೆ ಬುಟ್ಟಿಯೂ ವಿವಿಧ ಬಣ್ಣ ಮತ್ತು ವಿಧ ವಿಧಗಳ ಹಣ್ಣು-ತರಕಾರಿಗಳಿಂದ ತುಂಬಿರಬೇಕು. ಬಾಳೆಹಣ್ಣುಗಳು, ಬ್ಲೂಬೆರಿಹಣ್ಣುಗಳು, ಸೇಬು, ಕಿತ್ತಳೆ, ಅನಾನಸ ಇವು ವರ್ಣಮಯ ಫಲಗಳಾದರೆ , ಗಜ್ಜರಿ,ಸವತೆ,ಮೂಲಂಗಿ , ಹಸಿರು ಸೊಪ್ಪುಗಳು, ಬೀಟ್ರೂಟ್ ,ಬೀನ್ಸ ಇವೇ ಮೊದಲಾದವು ವರ್ಣಮಯ ತರಕಾರಿಗಳಿಗೆ ಉದಾಹರಣೆಗಳಾಗಿವೆ. ವರ್ಣಮಯ ಹಣ್ಣು , ತರಕಾರಿಗಳು ಆರೋಗ್ಯವೃದ್ಧಿಗೆ ಸಹಾಯಕಾರಿ.

3. ಆರೋಗ್ಯಕರ ಆಹಾರದಲ್ಲಿ ಲಘುಉಪಹಾರದ ಅಗತ್ಯತೆ: ನೀವು ತೂಕವನ್ನು ಇಳಿಸಲು ಬಯಸಿವದರಿಂದ ಲಘುಉಪಹಾರವನ್ನು ತ್ಯಜಿಸಬೇಕಾಗಿಲ್ಲ. ವಾಸ್ತವವಾಗಿ, ನೀವು ಸರಿಯಾದ ಆಹಾರಗಳ ಸೇವನೆಯ ಅಭ್ಯಾಸದಲ್ಲಿದ್ದರೆ ನಿಮ್ಮಂಥವರಿಗೆ ಲಘು ಉಪಹಾರಗಳು ಸಾಕಷ್ಟು ಒಳ್ಳೆಯ ರೀತಿಯ ಪರಿಣಾಮ ಬೀರಬಲ್ಲವು.

ಸಲಹೆಗಳು

ಸಾಮಾನ್ಯವಾಗಿ, ಲಘು ತಿಂಡಿ ಎಂದರೆ ಬಿಸ್ಕತ್ತು ಅಥವಾ ಕುರುಕಲು ತಿಂಡಿಗಳು ಎಂದುಕೊಳ್ಳುವದು ಸಹಜ. ಆದರೆ , ನಿಮಗೆ ಆರೋಗ್ಯಕರ ಉಪಹಾರ ಬೇಕಾಗಿದ್ದಲ್ಲಿ ನಿಮ್ಮ ಉಪಹಾರವನ್ನು ನಟ್ಸ್( ಸಿಪ್ಪೆ ಒಡೆದು ತಿನ್ನುವ ಕಾಳುಗಳು-ಬಾದಾಮಿ) ಕಾಳುಗಳು , ಹಣ್ಣು ಮತ್ತು ತರಕಾರಿಗಳಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮಗೆ ಶಕ್ತಿಯೂ ಬರುತ್ತದೆ, ಮುಂದಿನ ಊಟದವರೆಗೆ ನಿಮ್ಮ ಹೊಟ್ಟೆ ತುಂಬಿರುತ್ತದೆ ಮತ್ತು ಇದು ಸಂಪೂರ್ಣವಾಗಿ ಆರೋಗ್ಯಕರವೂ ಆಗಿದೆ.

ಈಗ ನೀವು ಆಹಾರದ ಪಥ್ಯ-ಅಪಥ್ಯಗಳ ಬಗ್ಗೆ ಅರಿತಿದ್ದು ನಿಮ್ಮ ಆರೋಗ್ಯಕರ ಆಹಾರದ ಯೋಜನೆಯನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಈ ಮೇಲಿನ ಸಲಹೆಗಳು ನಿಮ್ಮ ಆರೋಗ್ಯಕರ ಆಹಾರದ ಯೋಜನೆ ರೂಪಿಸುವಲ್ಲಿ ಸಹಾಯಕವಾಗುವವೆಂದು ಆಶಿಸುತ್ತೇನೆ.

English summary

How to Eat Healthy Diets | ಆರೋಗ್ಯಕ್ಕಾಗಿ ತಿನ್ನುವುದು ಹೇಗೆ?

Health diseases are caused by your diet which affects your weight and increases your health risks. Deciding on an eating healthy diet is easier to say than to do because it is tempting to eat less healthy foods.
X
Desktop Bottom Promotion