For Quick Alerts
ALLOW NOTIFICATIONS  
For Daily Alerts

ನಿಮ್ಮ ಉಗುರುಗಳ ಬಗ್ಗೆ ಕಾಳಜಿ ವಹಿಸುವುದು ಹೇಗೆ?

|

ಕೈಬೆರಳುಗಳ ಉಗುರುಗಳಿರಲಿ ಮತ್ತು ಕಾಲ್ಬೆರಳಿನ ಉಗುರುಗಳಿರಲಿ ಎಲ್ಲವು ನಮಗೆ ತುಂಬಾ ಮುಖ್ಯ. ಏಕೆಂದರೆ ಅವು ನಮ್ಮ ಕೈ ಮತ್ತು ಕಾಲಿನ ಅವಿಭಾಜ್ಯ ಅಂಗಗಳು. ಹಾಗಾಗಿ ಅವುಗಳ ಕುರಿತು ನಾವು ಶ್ರದ್ಧೆಯಿಂದ ಕಾಳಜಿವಹಿಸುವುದು ಅತ್ಯಗತ್ಯ.

ಸ್ವಚ್ಛ ಮತ್ತು ಆರೋಗ್ಯಕರ ಉಗುರುಗಳು ಕೇವಲ ನಮ್ಮ ಕೈ ಮತ್ತು ಬೆರಳುಗಳ ಅಂದವನ್ನು ಮಾತ್ರ ಹೆಚ್ಚಿಸುವುದಿಲ್ಲ. ಅದರ ಜೊತೆಗೆ ಬ್ಯಾಕ್ಟೀರಿಯಾ ಮುಂತಾದ ಕೀಟಾಣುಗಳಿಂದ ಸಂಭವಿಸಬಹುದಾದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಂದ ಸಹ ನಮ್ಮನ್ನು ರಕ್ಷಿಸುತ್ತದೆ.

How to Care For Your Nails at Home

ಹಂತಗಳು
ನಿಮ್ಮ ಉಗುರುಗಳಿಗಾಗಿ ಉತ್ತಮ ಆಹಾರವನ್ನು ಸೇವಿಸಿ; ಕಬ್ಬಿಣಾಂಶದ ಕೊರತೆಯಿಂದ ಬಹುತೇಕ ಉಗುರಿನ ಸಮಸ್ಯೆಗಳು ಉದ್ಭವಿಸುತ್ತವೆ. ಆ ಸಮಸ್ಯೆಗಳು ಉಗುರನ್ನು ಮತ್ತಷ್ಟು ನಾಜೂಕನ್ನಾಗಿಸುತ್ತವೆ. ಉಗುರುಗಳ ಆರೋಗ್ಯಕ್ಕೆ ಕಬ್ಬಿಣಾಂಶವು ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿರಬೇಕು. ಕೆಂಪು ಮಾಂಸ, ಕರುಳು, ಮೀನು, ಸೋಯಾ ಆಹಾರ, ಹುರುಳಿ, ಮಸೂರ ಅವರೆ, ಧಾನ್ಯಗಳು, ಹಸಿರು ಸೊಪ್ಪು, ತಾಜಾ ತರಕಾರಿಗಳು,ಅಸ್ಪರಗುಸ್, ಟರ್ಕಿ ಕೋಳಿ, ಮೊಟ್ಟೆ, ಲೋಳೆ, ರೈಸಿನ್ಸ್, ಖರ್ಜೂರ ಮತ್ತು ಅಪ್ರಿಕೋಟ್ಸ್ ನಂತಹ ಒಣ ಹಣ್ಣು ಇತ್ಯಾದಿಗಳನ್ನು ಸೇವಿಸಿದರೆ ಉತ್ತಮ.

ಬೀಟ್‍ರೂಟ್‍ಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ಉಗುರಿನ ಬೆಳವಣಿಗೆಗೆ ಅತ್ಯಾವಶ್ಯಕ. ನಿಯಮಿತವಾಗಿ ದಿನ ಬಿಟ್ಟು ದಿನ ಬೀಟ್‍ರೂಟ್ ಸೇವಿಸುವುದರಿಂದಾಗಿ ನಿಮ್ಮ ಉಗುರುಗಳು ಆರೋಗ್ಯಕರವಾಗಿ ಮತ್ತು ಧೃಡವಾಗಿ ಬೆಳೆಯುತ್ತವೆ. ಇದರೊಂದಿಗೆ ದಿನಂಪ್ರತಿ ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಸೇವಿಸುವುದರಿಂದಾಗಿ ನಿಮ್ಮ ಉಗುರಿಗೆ ಬೇಕಾದ ಅಂಶಗಳನ್ನು ಒದಗಿಸಬಹುದು.

ಸಲಹೆಗಳು
ಒಂದು ಚಮಚದಷ್ಟು ನಿಂಬೆಹಣ್ಣನ್ನು ನೀರಿನಲ್ಲಿ ಬೆರೆಸಿ ಮತ್ತು ನಿಮ್ಮ ಕೈಬೆರಳಿನ ಅಥವಾ ಕಾಲ್ಬೆರಳಿನ ಉಗುರುಗಳನ್ನು ಅದರಲ್ಲಿ ಕೆಲ ನಿಮಿಷಗಳಷ್ಟು ಕಾಲ ಮುಳುಗಿಸಿ. ಅನಂತರ ಮೋಯಿಶ್ಚರೈಜರ್ ಬಳಸಿ ಬಿಸಿನೀರಿನಲ್ಲಿ ಈ ಉಗುರುಗಳನ್ನು ಸ್ವಚ್ಛಗೊಳಿಸಿ. ಈ ವಿಧಾನವು ನಿಮ್ಮ ಉಗುರುಗಳ ಮೇಲೆ ಇರುವ ಕಲೆಗಳನ್ನು ಹೋಗಲಾಡಿಸಲು ನೆರವಿಗೆ ಬರುತ್ತದೆ.

ಉಗುರುಗಳನ್ನು ರಕ್ಷಿಸಲು ಮತ್ತೊಂದು ಸಲಹೆ ಹೀಗಿದೆ;- ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು, ಅದನ್ನು ನಿಂಬೆಹಣ್ಣಿನ ರಸದಲ್ಲಿ ಅದ್ದಿ, ಅದರಿಂದ ನಿಮ್ಮ ಉಗುರನ್ನು ಪೂರ್ತಿಯಾಗಿ ಮಸಾಜ್ ಮಾಡಿ. ಸ್ವಲ್ಪ ಹೊತ್ತಿನ ನಂತರ ಅದನ್ನು ಶುಭ್ರವಾಗಿ ತೊಳೆಯಿರಿ. ಈ ರೀತಿ ಮಾಡುವುದರಿಂದಾಗಿ ನಿಮ್ಮ ಉಗುರುಗಳು ಗಟ್ಟಿಯಾಗುತ್ತವೆ ಹಾಗು ಫಳ ಫಳನೆ ಹೊಳೆಯುತ್ತವೆ.

ತಾಜಾ ಆಗಿ ಅಂಗಡಿಯಿಂದ ತಂದ ಆಲೀವ್ ಎಣ್ಣೆಯು ಮನೆಯಲ್ಲಿ ದೊರೆಯುವ ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳಲ್ಲಿ ಸ್ಥಾನ ಪಡೆದಿದೆ. ಇದು ಉಗುರಿಗು ಸಹ ಸಹಾಯ ಮಾಡುತ್ತದೆ. ನಿಮ್ಮ ಉಗುರು ಹೊಳೆಯಬೇಕೆಂದರೆ ಹಾಗು ಚಂದ ಕಾಣಬೇಕೆಂದರೆ ಪ್ರತಿ ನಿತ್ಯ ಆಲೀವ್ ಎಣ್ಣೆಯನ್ನು ಅದಕ್ಕೆ ಲೇಪಿಸುತ್ತಿರಿ.

ಉಗುರಿನ ರಕ್ಷಣೆಗೆ ನಿಮ್ಮ ಎಲ್ಲ ಉಗುರುಗಳನ್ನು ಬೆಚ್ಚಗಿನ ಸಾಸಿವೆ ಎಣ್ಣೆಯಲ್ಲಿ 8-10 ನಿಮಿಷಗಳ ಕಾಲ ಅದ್ದಿ. ಆನಂತರ ಅದನ್ನು ಉಜ್ಜಿ ತೆಗೆಯಿರಿ, ಇದರಿಂದಾಗಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದನ್ನು ಪ್ರತಿನಿತ್ಯ ಮಾಡುತ್ತಿದ್ದರೆ ನಿಮ್ಮ ಉಗುರುಗಳು ಸಧೃಡವಾಗುತ್ತವೆ. ಬೇಸಿಗೆಯಲ್ಲಿ ಬೆವರನ್ನು ತಡೆಗಟ್ಟಲು ಹತ್ತಿಯ ಉಂಡೆಗಳಿಂದ ಬೆವರನ್ನು ಹೀರಿ ತೆಗೆಯಿರಿ. ಹೀಗೆ ಮಾಡುವುದರಿಂದಾಗಿ ಮುಂದೆ ಉಂಟಾಗಬಹುದಾದ ಕೀಟಾಣು ಮತ್ತು ಬ್ಯಾಕ್ಟೀರಿಯಾದ ತೊಂದರೆಗಳಿಂದ ನಿಮ್ಮ ಉಗುರನ್ನು ಕಾಪಾಡಬಹುದು.

ನಿಮ್ಮ ಉಗುರುಗಳ ಕುರಿತು ಕಾಳಜಿ ಇದ್ದರೆ, ಮೊದಲು ಕಾಲಿನ ಉಗುರುಗಳನ್ನು ಸಮಾನಾಂತರವಾಗಿ ಕತ್ತರಿಸಿ. ಕಮಾನಿನಾಕಾರವಾಗಿ ಕತ್ತರಿಸಬೇಡಿ. ಕಮಾನಿನಾಕಾರವಾಗಿ ಕತ್ತರಿಸುವುದರಿಂದಾಗಿ ಕಾಲ್ಬೆರಳಿನ ಗಾಯವಾಗಬಹುದು ಅಥವಾ ಶೂ ಮುಂತಾದ ಪಾದರಕ್ಷೆಗಳಿಂದ ಸಹ ಹಾನಿಯಾಗಬಹುದು. ಹೀಗೆ ಮಾಡುವುದರಿಂದ ನಿಮ್ಮ ಉಗುರುಗಳು ಸರಿಯಾಗಿ

ಬೆಳವಣಿಗೆಯಾಗುವುದಿಲ್ಲ.
ದಿನ ಬಿಟ್ಟು ದಿನ ನಿಮ್ಮ ಉಗುರುಗಳನ್ನು ಬೆಚ್ಚಗಿನ ಆಲೀವ್ ಆಯಿಲ್‍ನಲ್ಲಿ 15-20 ನಿಮಿಷಗಳ ಕಾಲ ಅದ್ದಿ. ಹೀಗೆ ಮಾಡುವುದರಿದ ನಿಮ್ಮ ಉಗುರುಗಳು ಗಟ್ಟಿಯಾಗಿ ಆರೋಗ್ಯಕರವಾಗುತ್ತವೆ.

English summary

How to Care For Your Nails at Home | Tips For Beauty |ಮನೆಯಲ್ಲಿಯೇ ನಿಮ್ಮ ಉಗುರುಗಳ ಬಗ್ಗೆ ಕಾಳಜಿ ವಹಿಸುವುದು ಹೇಗೆ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Fingernails or toenails really are very important segments connected with our hands and feet so that perfect care concerning nails can be taken.
X
Desktop Bottom Promotion