For Quick Alerts
ALLOW NOTIFICATIONS  
For Daily Alerts

ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ?

By ಲೇಖಕ
|

ನಿಮ್ಮ ಮುದ್ದು ಮುಖಕ್ಕೆ ಫೇಸ್ ಮಾಸ್ಕ್ ಹಾಗೂ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದು ಬಹಳ ಸುಲಭ ಹಾಗೂ ಅದು ದುಬಾರಿಯಾದದ್ದೂ ಅಲ್ಲ. ನೀವೇ ನಿಮ್ಮ ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಇಲ್ಲಿ ಕೆಲವು ಸಲಹೆಗಳಿವೆ.

ಸಲಹೆಗಳು :-
ನೀವು ಮನೆಯಲ್ಲೇ ಸಿದ್ಧ ಮಾಡಿದ ಫೇಸ್ ಪ್ಯಾಕ್ ಬಳಸುತ್ತಿದ್ದರೆ,ಚರ್ಮದ ಕಾಂತಿಯನ್ನು ಕಾಪಾಡಲು ಹೊಸದಾಗಿ ಫೇಸ್ ಪ್ಯಾಕ್ ತಯಾರು ಮಾಡಿಕೊಳ್ಳಿ.

ಮಾರುಕಟ್ಟೆಯಲ್ಲಿ ಸಿಗುವ ಪ್ರಾಡೆಕ್ಟ್ ಗಳನ್ನು ಬಳಸುತ್ತಿದ್ದರೆ,ಫ್ಯಾಕ್ ಹಚ್ಚಿಕೊಳ್ಳಲು ಬಳಸುವ ಸಲಕರಣೆಗಳು ಹಾಗೂ ಬ್ರಶನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಳ್ಳಿ.ಹಾಗೂ ಕಾಟನ್ ಪ್ಯಾಡುಗಳು ಮತ್ತು ಶುದ್ಧವಾದ ತೆಳು ಬಟ್ಟೆಯನ್ನು ಬಳಸಿ.

How to Apply Face Masks Correctly

ಸೌತೆಕಾಯಿ ಅಥವಾ ಆಲೂಗೆಡ್ಡೆಯನ್ನು ತೆಳುವಾಗಿ ಕತ್ತರಿಸಿಕೊಂಡು ನಿಮ್ಮ ಕಣ್ಣುಗಳ ಮೇಲೆ ಸ್ವಲ್ಪ ಸಮಯ ಇಟ್ಟುಕೊಳ್ಳಿ.
ಎಲ್ಲಾ ವಸ್ತುಗಳು ರೆಫ್ರೀಜಿರೇಟರ್ ನಲ್ಲಿ ಇಟ್ಟಿರಿ ಬಳಸುವ ಮೊದಲು ಅವುಗಳು ತಣ್ಣಗಾಗುವಂತೆ ಮಾಡಿಕೊಳ್ಳಿ.

ಈ ನಡುವೆ ನಿಮ್ಮ ಮುಖದ ಚರ್ಮವನ್ನು ಶುದ್ಧ ಮಾಡಿಕೊಳ್ಳಿ.
ಪದರ ಪದರವಾಗಿ ಒಣಗಿದ ಚರ್ಮ ತೆಗೆದು ಬಿಟ್ಟರೆ ಒಳ್ಳೆಯದು.ಇದರಿಂದಾಗಿ ಮಾಸ್ಕ್ ಹಚ್ಚಿಕೊಂಡಾಗ ತಾಜಾ ಚರ್ಮವು ಅದನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

ಒಂದೆರಡು ನಿಮಿಷ ಬಿಸಿ ಹಬೆಯನ್ನು ಮುಖದ ಭಾಗಕ್ಕೆ ತೆಗೆದುಕೊಳ್ಳುವುದರಿಂದ ಚರ್ಮದ ರಂಧ್ರಗಳಿ ತೆರೆದುಕೊಳ್ಳುತ್ತವೆ.ಇದು ಸಾಧ್ಯವಾಗದಿದ್ದರೆ ಒಂದು ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಅದ್ದಿ(ನಿಮ್ಮ ಮುಖಕ್ಕೆ ಹಿತವೆನಿಸುವಷ್ಟು ಬಿಸಿ)ಬಟ್ಟೆ ತಣ್ಣಗಾಗುವವರೆಗೂ ಮುಖದ ಮೇಲೆ ಇಟ್ಟುಕೊಳ್ಳಿ.

ಫೇಸ್ ಮಾಸ್ಕ್ ಹಚ್ಚಿಕೊಳ್ಳುವ ಸಾಧನ ಅಥವಾ ದೊಡ್ಡ ಬ್ರೆಶ್ ತೆಗೆದುಕೊಳ್ಳಿ.ನಿಮ್ಮಲ್ಲಿ ಬ್ರಶ್ ಇಲ್ಲದಿದ್ರೆ ನಿಮ್ಮ ಕೈ ಶುದ್ಧವಾಗಿದೆಯೇ ಎಂದು ಖಾತರಿ ಪಡಿಸಿಕೊಳ್ಳಿ.ಅಗತ್ಯವಿದ್ದರೆ ಚೆನ್ನಾಗಿ ಕೈ ತೊಳೆದುಕೊಂಡು ಮಾಸ್ಕ್ ಹಚ್ಚಿಕೊಳ್ಳುವ ಮೊದಲು ಪೂರ್ತಿ ಒಣಗಿದೆಯೇ ಎಂದು ಮನದಟ್ಟು ಮಾಡಿಕೊಳ್ಳಿ.

ಮಾಸ್ಕ್ ಹಚ್ಚಿಕೊಂಡ ಬಳಿಕ ಕಣ್ಣಿನ ಮೇಲೆ ಸೌತೆಕಾಯಿ ಅಥವಾ ಆಲೂಗಡ್ಡೆಯ ತೆಳುವಾದ ಸ್ಲೈಸ್ ಇಟ್ಟುಕೊಂಡು ಎಷ್ಟು ಹೊತ್ತಿ ಅದು ಬಣಗಲು ಬಿಡಬೇಕೆಂದು ಸೂಚನೆ ನೀಡಲಾಗಿರುತ್ತದೋ ಅಷ್ಟು ಹೊತ್ತು ರಿಲ್ಯಾಕ್ಸ್ ಮಾಡಿ.ಲೈಟ್ ಆಫ್ ಮಾಡಿದರೆ ರಿಲ್ಯಾಕ್ಸ್ ಮಾಡುವಾಗ ಇನ್ನೂ ಹಿತವಾಗಿರುತ್ತದೆ.

ನಿಮಗೆ ತಿಳಿಸಿದ ಸಮಯದವರೆಗೂ ರಿಲ್ಯಾಕ್ಸ್ ಮಾಡಿದ ನಂತರ,ಕಾಟನ್ ಪ್ಯಾಡ್ ಅಥವಾ ಶುದ್ಧವಾದ ಬಟ್ಟೆಯನ್ನು ತಣ್ಣೀರಿನಲ್ಲಿ ಒದ್ದೆ ಮಾಡಿ ನಿಧಾನವಾಗಿ ಮುಖ ಒರೆಸಿಕೊಳ್ಳಿ.ಕ್ಲೇ ಮಾಸ್ಕ್ ಹಚ್ಚಿಕೊಂಡಿದ್ದರೆ ಅದು ಬಹಳವಾಗಿ ಒಣಗುವ ಮೊದಲೇ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.ಮಾಸ್ಕ್ ಸಂಪೂರ್ಣವಾಗಿ ಒಣಗುವವರೆಗೂ ಕಾಯುವುದು ಬೇಡ.

ಮಾಯಿಶ್ಚರೈಜರ್ ಹಾಗೂ ಟೋನರ್ ಬಳಸಿ

ಟಿಪ್ಸ್ :-
* ಉತ್ತಮ ಪೋಷಣೆಗಾಗಿ ಅಗತ್ಯವಿರುವ ಎಣ್ಣೆಯನ್ನು ಲೇಪನ ಮಾಡಿ.
* ಮ್ಯಾನಿಕ್ಐರ್(ಉಗುರು ಕತ್ತರಿಸಿದ)ಮಾಡಿದ ನಂತರ ಫೇಸ್ ಮಾಸ್ಕ ಮಾಡಿ ಏಕೆಂದರೆ ನೀವು ಪ್ಯಾಕ್ ಮಾಡಲು ಕೈ ಬಳಕೆ ಮಾಡುವಾಗ ಉಗುರು ಸಂದಿಯಲ್ಲಿ ಕೊಳೆ ಇಲ್ಲದಿದ್ದರೆ ಒಳ್ಳೆಯದು ಅಲ್ವೇ.
* ಮಾಸ್ಕ್ ತೆಗೆದ ಮೇಲೆ ಮುಖಕ್ಕೆ ತಣ್ಣೀರು(ತುಂಬಾ ತಣ್ಣಗಿರಬೇಕೆಂದೇನಿಲ್ಲ)ಎರಚಿಕೊಳ್ಳಿ.ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳಲು ಸಹಾಯವಾಗಿದ್ದು ಉತ್ತಮ ರಕ್ತ ಸಂಚಾರವಾಗಿ ಮುಖದ ಬಣ್ಣ ಕೆಂದು ಗುಲಾಬಿಯಂತಾಗುತ್ತದೆ.

ಎಚ್ಚರಿಕೆಗಳು :-
ಮುಖಕ್ಕೆ ಹಚ್ಚಿಕೊಂಡಿರುವ ಕ್ಲೇ ಮಾಸ್ಕ್ ಸಂಪೂರ್ಣವಾಗಿ ಬಣಗದಂತೆ ಗಮನ ಹರಿಸಬೇಕು ಏಕೆಂದರೆ ಇದರಿಂದ ಮುಖದಲ್ಲಿ ಸುಕ್ಕು ಹಾಗೂ ಗೆರಗಳು ಮೂಡಿಬರಬಹುದು,ಹಾಗೂ ಕ್ಲೇ ಮುಖದಲ್ಲಿರುವ ನೀರಿನಂಶವನ್ನೇ ಹೀರುವುದರಿಂದ ಬೇರೆ ಬೇರೆ ತೊಂದರೆಗಳಿಗೆ ಕಾರಣವಾಗುತ್ತದೆ.

English summary

How to Apply Face Masks Correctly | Tips For Beauty | ಫೇಸ್ ಮಾಸ್ಕ್ ಹಚ್ಚುವುದು ಹೇಗೆ? | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Face Masks and Face Packs are an easy and inexpensive way to perk up your skin and pamper yourself. Here are some tips which will help you get the best out of your mask.
X
Desktop Bottom Promotion