For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೂ 'ಗುಲಾಬಿ ನೀರು'! ಪ್ರಯತ್ನಿಸಿ ನೋಡಿ...

By Hemanth
|

ಈ ಗುಲಾಬಿಯು ನಿನಗಾಗಿ...ಅದು ಚೆಲ್ಲುವ ಪರಿಮಳ ನಿನಗಾಗಿ ಎನ್ನುವ ಹಾಡನ್ನು ಕೇಳಿರುತ್ತೇವೆ. ಗುಲಾಬಿಯ ಬಗ್ಗೆ ಹಲವಾರು ರೀತಿಯ ವರ್ಣನೆಗಳು ಇವೆ. ಅದರಲ್ಲೂ ಪ್ರೇಮಿಗಳಿಗೆ ಗುಲಾಬಿಯೆಂದರೆ ತುಂಬಾ ಇಷ್ಟ. ಇಂತಹ ಗುಲಾಬಿಯಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ.

ಗುಲಾಬಿ ನೀರನ್ನು ಬಳಸಿಕೊಂಡು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ಸೌಂದರ್ಯವರ್ಧಕಗಳಲ್ಲಿ ಗುಲಾಬಿ ನೀರು ಮುಖ್ಯ ಪಾತ್ರವನ್ನು ವಹಿಸಿದೆ. ಇಂತಹ ಗುಲಾಬಿ ನೀರನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು ಎಂದು ನಿಮಗೆ ತಿಳಿದಿದೆಯಾ? ಮೊಡವೆಯ ಸಮಸ್ಯೆಗೆ ಗುಲಾಬಿ ನೀರಿನ ನಲ್ಮೆಯ ಆರೈಕೆ

ಹೌದು, ಗುಲಾಬಿ ನೀರನ್ನು ಕೂದಲಿನ ಆರೈಕೆಗೆ ಬಳಸಬಹುದಾಗಿದೆ. ಗುಲಾಬಿ ನೀರಿನಿಂದ ಕೂದಲಿನ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು. ಗುಲಾಬಿ ನೀರನ್ನು ಬಳಸಿಕೊಂಡು ಕೂದಲು ಸುಂದರ ಹಾಗೂ ಕಾಂತಿಯುತವಾಗಿರುವಂತೆ ಮಾಡಲು ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡಲಿದೆ. ಇದನ್ನು ತಿಳಿಯುತ್ತಾ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ....

ಅಲೋವೆರಾ ಜತೆ ಗುಲಾಬಿ ನೀರು

ಅಲೋವೆರಾ ಜತೆ ಗುಲಾಬಿ ನೀರು

ಒಣಗಿದ ಕೂದಲಿನ ಬಗ್ಗೆ ಚಿಂತೆಯಾಗಿದ್ದರೆ ಅಲೋವೆರಾ ಲೋಳೆ ಮತ್ತು ಗುಲಾಬಿ ನೀರನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಶಾವರ್ ಕ್ಯಾಪ್ ಹಾಕಿಕೊಂಡು ಒಂದು ಗಂಟೆ ಕಾಲ ಹಾಗೆ ಕುಳಿತುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಜೇನುತುಪ್ಪ ಮತ್ತು ಗುಲಾಬಿ ನೀರು

ಜೇನುತುಪ್ಪ ಮತ್ತು ಗುಲಾಬಿ ನೀರು

ಗುಲಾಬಿ ನೀರು ಮತ್ತು ಜೇನುತುಪ್ಪದ ಮಿಶ್ರಣವನ್ನು ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಉದ್ದಕ್ಕೆ ಅನುಸಾರವಾಗಿ ಗುಲಾಬಿ ನೀರು ಮತ್ತು ಜೇನುತುಪ್ಪವನ್ನು ಹಾಕಿಕೊಳ್ಳಿ. ಸುಮಾರು 40 ನಿಮಿಷ ಇದನ್ನು ಕೂದಲಿಗೆ ಹಚ್ಚಿಕೊಂಡು ಬಳಿಕ ತೊಳೆಯಿರಿ.

ಗುಲಾಬಿ ನೀರಿನೊಂದಿಗೆ ಗ್ರೀನ್ ಟೀ

ಗುಲಾಬಿ ನೀರಿನೊಂದಿಗೆ ಗ್ರೀನ್ ಟೀ

ಗುಲಾಬಿ ನೀರು ಮತ್ತು ಗ್ರೀನ್ ಟೀ ಮಿಶ್ರಣವನ್ನು ಕೂದಲು ತೊಳೆಯಲು ಬಳಸಿಕೊಳ್ಳಿ. ಕೂದಲಿಗೆ ಶಾಂಪೂ ಹಾಕಿಕೊಂಡ ಬಳಿಕ ಗುಲಾಬಿ ನೀರು ಹಾಗೂ ಗ್ರೀನ್ ಟೀ ಮಿಶ್ರಣದಿಂದ ತೊಳೆಯಿರಿ. ಇದು ಕೂದಲನ್ನು ಬಲಿಷ್ಠಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುವುದು.

ಉಪ್ಪಿನೊಂದಿಗೆ ಗುಲಾಬಿ ನೀರು

ಉಪ್ಪಿನೊಂದಿಗೆ ಗುಲಾಬಿ ನೀರು

ಒಂದು ಚಮಚ ಉಪ್ಪು ತೆಗೆದುಕೊಂಡು ಅದನ್ನು 4-5 ಹನಿ ಗುಲಾಭಿ ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಕೂದಲು ತುಂಬಾ ತೆಳ್ಳಗಾಗುತ್ತಿದೆ ಎಂದು ನಿಮಗೆ ಅನಿಸುತ್ತಾ ಇದ್ದರೆ ಗುಲಾಬಿ ನೀರು ಮತ್ತು ಉಪ್ಪಿನ ಮಿಶ್ರಣವನ್ನು ವಾರಕ್ಕೆ ಎರಡು ಸಲ ತಲೆಬುರುಡೆಗೆ ಹಚ್ಚಿಕೊಳ್ಳಿ.

ಗುಲಾಬಿ ನೀರು ಮತ್ತು ಹರಳೆಣ್ಣೆ

ಗುಲಾಬಿ ನೀರು ಮತ್ತು ಹರಳೆಣ್ಣೆ

ಒಂದು ಚಮಚ ಹರಳೆಣ್ಣೆಯೊಂದಿಗೆ ನಾಲ್ಕು ಹನಿ ಗುಲಾಬಿ ನೀರನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಗೆ ಹಾಕಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಟ್ಟರೆ ಇದು ಒಳ್ಳೆಯ ಫಲಿತಾಂಶ ನೀಡುವುದು. ಉದ್ದಗಿನ ಹಾಗೂ ಬಲಿಷ್ಠ ಕೂದಲಿಗೆ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

English summary

Wonderful Ways To Use Rose Water For Hair Care

Today, at Boldsky, we have brought together a list of wonderful ways to use rose water for hair care. Try these natural ways to make your hair beautiful and strong. Take a peek at these ways here. Note: It is important to do a scalp test before applying any natural ingredient to your tresses, to ensure that the ingredients suit your hair type.
X
Desktop Bottom Promotion