For Quick Alerts
ALLOW NOTIFICATIONS  
For Daily Alerts

ಮನೆ ಔಷಧಿ: ಎಣ್ಣೆಯಲ್ಲಿದೆ ಬಣ್ಣಿಸಲಾಗದಷ್ಟು ಉಪಯೋಗಗಳು

ಅಕಾಲಿಕ ಕೂದಲುದುರುವಿಕೆ, ಬಣ್ಣಗಳ ಬದಲಾವಣೆ ಹಾಗೂ ದಟ್ಟವಾದ ಕೂದಲು ಹುಟ್ಟುವಿಕೆಗೆ ಸಹಾಯ ಮಾಡಬಲ್ಲ ಕೆಲವು ಉತ್ಪನ್ನಗಳು ನಮ್ಮ ಮನೆಯಲ್ಲಿಯೇ ಇವೆ. ಇವುಗಳ ಬಳಕೆಯಿಂದ ಹೇಗೆ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು

By Manu
|

ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು ಎನ್ನುವ ಭೇದವಿಲ್ಲದೆ ಕೂದಲುದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಪ್ರತಿದಿನ ಕೂದಲು ಉದುರುವುದು ನಿಸರ್ಗದ ಸಾಮಾನ್ಯ ನಿಯಮವಾದರೂ, ಮಿತಿ ಮೀರಿದ ಉದುರುವಿಕೆ ಆರೋಗ್ಯಕರವಾದುದಲ್ಲ. ಈ ಸಮಸ್ಯೆಯನ್ನು ನಿವಾರಿಸಬಲ್ಲ ಉತ್ಪನ್ನ ಎಂದರೆ ತೆಂಗಿನ ಎಣ್ಣೆ. ಇದನ್ನು ಪ್ರತಿದಿನ ಕೇಶರಾಶಿಗೆ ಹೆಚ್ಚಿಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಕೂದಲು ಉದುರುವುದು ಈ ಕಾಯಿಲೆಗಳ ಪ್ರಮುಖ ಲಕ್ಷಣ

ತೆಂಗಿನೆಣ್ಣೆಯಲ್ಲಿ ಆಂಟಿಮೈಕ್ರೊಬಿಯಲ್, ಲಾರಿಕ್ ಆಸಿಡ್, ಕೊಬ್ಬಿನ ಆಮ್ಲ, ವಿಟಮಿನ್‍ಗಳು, ಖನಿಜಗಳು ಮತ್ತು ಫೋಷಕಾಂಶಗಳು ಸಮೃದ್ಧವಾಗಿವೆ. ಇವು ತಲೆ ಬುರುಡೆಯನ್ನು ಬಲಗೊಳಿಸಿ ಕೇಶರಾಶಿಯು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುವಂತೆ ಮಾಡುತ್ತದೆ. ಕೂದಲುದುರುವಿಕೆಯು ಅನುವಂಶಿಕವಾಗಿ, ಕಳಪೆ ಪೋಷಣೆ, ಹಾರ್ಮೋನ್‍ಗಳ ಏರಿಳಿತ, ಧೂಮಪಾನ, ಮಾಲಿನ್ಯ, ಒತ್ತಡ, ಅಸಮರ್ಪಕ ಕೇಶಗಳ ಉತ್ಪನ್ನಗಳ ಬಳಕೆ, ದೀರ್ಘಕಾಲಿಕ ಶೀತ, ಸೈನುಟಿಸ್ ಮತ್ತು ಥೈರಾಯಿಡ್ ಸಮಸ್ಯೆಯಿಂದಲೂ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವಿಕೆ ತಡೆಯಲು ಇಲ್ಲಿದೆ ಮನೆಮದ್ದು

ಅಕಾಲಿಕ ಕೂದಲುದುರುವಿಕೆ, ಬಣ್ಣಗಳ ಬದಲಾವಣೆ ಹಾಗೂ ದಟ್ಟವಾದ ಕೂದಲು ಹುಟ್ಟುವಿಕೆಗೆ ಸಹಾಯ ಮಾಡಬಲ್ಲ ಕೆಲವು ಉತ್ಪನ್ನಗಳು ನಮ್ಮ ಮನೆಯಲ್ಲಿಯೇ ಇವೆ. ಇವುಗಳ ಬಳಕೆಯಿಂದ ಹೇಗೆ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ ಬನ್ನಿ...

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಶುದ್ಧ ಮತ್ತು ಸರಳವಾದ ತೆಂಗಿನೆಣ್ಣೆಯನ್ನು ಬಳಸುವುದರಿಂದ ಅತ್ಯುತ್ತಮವಾದ ಮತ್ತು ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು. ನೆತ್ತಿ ಮತ್ತು ಕೂದಲ ಬುಡದಲ್ಲಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ರಾತ್ರಿ ಇದನ್ನು ಹಚ್ಚಿಕೊಂಡು ಬೆಳಗ್ಗೆ ಎದ್ದು ಸ್ನಾನ ಮಾಡಿದರೆ ಸಮಸ್ಯೆ ಗುಣಮುಖವಾಗುವುದು. ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಗೋರಂಟಿ ಪುಡಿ

ಗೋರಂಟಿ ಪುಡಿ

ಕೂದಲಿಗೆ ಸುಂದರವಾದ ಬಣ್ಣ ಹಾಗೂ ಕಂಡಿಷನರ್ ಅನುಭವ ನೀಡಬಲ್ಲ ಉತ್ಪನ್ನ ಗೋರಂಟಿ (ಮದರಂಗಿ) ಪುಡಿ. ಗೋರಂಟಿಪುಡಿಯನ್ನು ಎಣ್ಣೆ ಅಥವಾ ನೀರಿನಲ್ಲಿ ಕಲಸಿ ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಡಬೇಕು. ನಂತರ ತಂಪಾದ ನೀರಿನಲ್ಲಿ ತೊಳೆದರೆ ಕೂದಲು ಮೃದು ಹಾಗೂ ಸುಂದರ ಬಣ್ಣದಿಂದ ಕೂಡಿರುತ್ತದೆ.

ಕರಿಬೇವಿನ ಎಲೆ(ಒಗ್ಗರಣೆ ಸೊಪ್ಪು)

ಕರಿಬೇವಿನ ಎಲೆ(ಒಗ್ಗರಣೆ ಸೊಪ್ಪು)

ಕೂದಲುದುರುವಿಕೆ ಹಾಗೂ ಕಪ್ಪು ಬಣ್ಣವನ್ನು ನೀಡುವಲ್ಲಿ ಕರಿಬೇವಿನ ಪಾತ್ರ ಮಹತ್ತರವಾದದ್ದು. ಕರಿಬೇವಿ ರಸವನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಕುದಿಸಿಟ್ಟುಕೊಳ್ಳಬೇಕು. ನಿತ್ಯವೂ ಈ ಮಿಶ್ರಣದ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಿಕೊಂಡು 30-45 ನಿಮಿಷ ಬಿಡಬೇಕು. ಹೀಗೆ ಮಾಡುವುದರಿಂದ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುವುದು. ತಲೆಯಲ್ಲಿ ತುರಿಕೆಯೇ? ಕರಿಬೇವಿನ ಹೇರ್ ಪ್ಯಾಕ್ ಪ್ರಯತ್ನಿಸಿ

ನೆಲ್ಲಿಕಾಯಿ

ನೆಲ್ಲಿಕಾಯಿ

ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‍ಗಳು ನೆಲ್ಲಿಕಾಯಿಯಲ್ಲಿ ಸಮೃದ್ಧವಾಗಿವೆ. ನೆಲ್ಲಿಕಾಯಿಯ ರಸವನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ಕುದಿಸಬೇಕು. ತಣಿದ ಮೇಲೆ ಕೂದಲಿಗೆ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಬೇಕು. ಆಗ ಕೂದಲು ಹೆಚ್ಚು ಕಪ್ಪು ಬಣ್ಣದಿಂದ ಕಂಗೊಳಿಸಿ, ಕೂದಲುದುರುವುದನ್ನು ತಡೆಗಟ್ಟುತ್ತದೆ. ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ನಿಂಬೆ ಹಣ್ಣು

ನಿಂಬೆ ಹಣ್ಣು

ಸ್ವಲ್ಪ ತೆಂಗಿನ ಎಣ್ಣೆಗೆ ಮೂರು ಚಮಚ ನಿಂಬೆ ರಸವನ್ನು ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನೆತ್ತಿಯ ಮೇಲೆ ಮತ್ತು ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದ್ದವಾಗಿ ಬೆಳೆಯುತ್ತದೆ.

ಶಾಂಪೂ ಮತ್ತು ತೆಂಗಿನ ಎಣ್ಣೆ

ಶಾಂಪೂ ಮತ್ತು ತೆಂಗಿನ ಎಣ್ಣೆ

ತಲೆ ಸ್ನಾನ ಮಾಡುವಾಗ ಶಾಂಪೂವಿನ ಜೊತೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರೆಸಿ ಕೂದಲನ್ನು ಮಸಾಜ್ ಮಾಡಿ. ಇದರಿಂದ ಕೂದಲುದುರುವುದನ್ನು ತಡೆಯಬಹುದು.

English summary

Remedies For Premature Greying Of Hair

In this article we intend to bring out several simple ways of using coconut oil and other ingredients to prevent premature greying of hair.
X
Desktop Bottom Promotion