For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಇಂತಹ ಎಣ್ಣೆಗಳನ್ನು ಬಳಸಿದರೆ- ಕೂದಲುದುರುವ ಸಮಸ್ಯೆ ಬರಲ್ಲ!

ನೈಸರ್ಗಿಕವಾಗಿ ಸಿಗುವ ಕೆಲವೊಂದು ಎಣ್ಣೆಗಳನ್ನು ಬಳಸಿದರೆ, ಕೂದಲು ಉದುರುವ ಮತ್ತು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದು..

By Hemanth
|

ಕೂದಲು ಉದುರುವ ಹಾಗೂ ತಲೆಹೊಟ್ಟಿನ ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವೊಂದು ತೈಲಗಳು ಕೂದಲು ಉದುರುವ ಮತ್ತು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಇಂತಹ ತೈಲಗಳನ್ನು ತಲೆಗೆ ಸರಿಯಾಗಿ ಮಸಾಜ್ ಮಾಡುವುದರಿಂದ ಕೂದಲು ತುಂಬಾ ಸದೃಢ ಹಾಗೂ ಕಾಂತಿಯುತವಾಗಿರುತ್ತದೆ.

ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಒಂದೇ ರಾಮಬಾಣ- ಹರಳೆಣ್ಣೆ

ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳಿಗಿಂತ ನೈಸರ್ಗಿಕ ತೈಲವು ಕೂದಲಿನ ಬೆಳವಣಿಗೆಯನ್ನು ವೃದ್ಧಿಸುವುದು. ನೈಸರ್ಗಿಕ ತೈಲವನ್ನು ಬಳಸಿದರೆ ಅದರಿಂದ ಯಾವೆಲ್ಲಾ ಲಾಭಗಳು ಕೂದಲಿಗೆ ಆಗಲಿದೆ ಮತ್ತು ಕೂದಲನ್ನು ಯಾವ ರೀತಿಯಲ್ಲಿ ಆರೈಕೆ ಮಾಡಬಹುದು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ....

ಅರ್ಗಾನ್ ತೈಲ

ಅರ್ಗಾನ್ ತೈಲ

ಅರ್ಗಾನ್ ತೈಲವನ್ನು ಮೊರಕ್ಕಾನ್ ತೈಲವೆಂದು ಕರೆಯಲಾಗುತ್ತದೆ ಮತ್ತು ಇದು ನೈಸರ್ಗಿಕ ತೈಲಗಳ ಸಾಲಿನಲ್ಲಿ ತುಂಬಾ ಜನಪ್ರಿಯವಾಗಿದೆ ಮತ್ತು ಇದು ಹಲವಾರು ರೀತಿಯಿಂದ ಕೂದಲಿಗೆ ಲಾಭವನ್ನು ಉಂಟು ಮಾಡುತ್ತದೆ. ಕೂದಲಿನ ಆರೈಕೆಯಲ್ಲಿ ಅರ್ಗಾನ್ ತೈಲವನ್ನು ಪ್ರತಿನಿತ್ಯ ಬಳಸಬೇಕು. ಅರ್ಗಾನ್ ತೈಲವನ್ನು ಬಳಸಿಕೊಂಡು ಮಾಡಿರುವಂತಹ ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸಿ. ವಿಟಮಿನ್ ಬಿ, ವಿಟಮಿನ್ ಇ ಮತ್ತು ಸಾರಭೂತ ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಅರ್ಗಾನ್ ತೈಲವು ತಲೆಬುರುಡೆಯನ್ನು ಆರೋಗ್ಯವಾಗಿರಿಸಿ ಕೂದಲಿಗೆ ಕಾಂತಿ ಮತ್ತು ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದು.

ಮಿರಮಿರನೇ ಮಿಂಚುವ ಕೂದಲಿಗಾಗಿ ಮೆಂತೆ ಕರಿಬೇವಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಇತರ ತೈಲಗಳಿಗೆ ಹೋಲಿಸಿದರೆ ತೆಂಗಿನ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿದೆ. ತೆಂಗಿನ ಎಣ್ಣೆಯು ವಿಟಮಿನ್ ಕೆ ಮತ್ತು ಇತರ ಸಾರಭೂತ ಕೊಬ್ಬಿನಾಮ್ಲವನ್ನು ಹೊಂದಿದೆ. ಇದು ತಲೆಬುರುಡೆಗೆ ಬೇಕಾಗಿರುವ ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತದೆ. ಉಗುರುಬೆಚ್ಚಗಿನ ತೆಂಗಿನ ಎಣ್ಣೆಯಿಂದ ನಿಯಮಿತವಾಗಿ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ. ಇದು ತಲೆಬುರುಡೆಯನ್ನು ಆರೋಗ್ಯ ಹಾಗು ತೇವಾಂಶದಿಂದ ಇಡುವುದು.

ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!

ರೋಸ್ಮರಿ ಸಾರಭೂತ ತೈಲ

ರೋಸ್ಮರಿ ಸಾರಭೂತ ತೈಲ

ರೋಸ್ಮರಿ ಸಾರಭೂತ ತೈಲವು ತಲೆಬುರುಡೆಯಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ತುಂಬಾ ನೆರವಿಗೆ ಬರಲಿದೆ. ಇದರಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಕಬ್ಬಿನಾಂಶ, ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂ ತಲೆಬುರುಡೆಯನ್ನು ಸ್ವಚ್ಛಗೊಳಿಸಿ ಕೂದಲನ್ನು ನೈಸರ್ಗಿಕವಾಗಿ ದಪ್ಪಗಾಗಿಸಲು ನೆರವಾಗುವುದು. ರೋಸ್ಮೆರಿ ತೈಲದಿಂದ ತಲೆಬುರುಡೆಗೆ ಮಸಾಜ್ ಮಾಡಿದರೆ ಇದು ಕೂದಲು ಅಕಾಲಿಕವಾಗಿ ಬಿಳಿಯಾಗಿವುದನ್ನು ತಡೆಯುವುದು. ಕೂದಲಿಗೆ ರೋಸ್ಮೆರಿ ತೈಲವನ್ನು ಬಳಸುವ ಮೊದಲು ಬೇರೆ ಯಾವುದಾದರೂ ತೈಲವನ್ನು ಹಾಕಿಕೊಳ್ಳಿ.

ಅವಕಾಡೊ ತೈಲ

ಅವಕಾಡೊ ತೈಲ

ಅವಕಾಡೊದಲ್ಲಿ ಉನ್ನತ ಮಟ್ಟದ ಪ್ರೋಟೀನ್, ಕೊಬ್ಬಿನಾಮ್ಲ, ವಿಟಮಿನ್ ಎ, ಇ ಮತ್ತು ಡಿ ಇದೆ. ಅವಕಾಡೊ ತೈಲದಲ್ಲಿ ಇರುವಂತಹ ಪ್ರೋಟೀನ್ ಕೂದಲನ್ನು ದಪ್ಪ ಹಾಗೂ ಬಲಿಷ್ಠವಾಗಿಸುವುದು. ಇದು ಕೂದಲು ಒಣಗಿ ತುಂಡಾಗುವುದನ್ನು ತಡೆಯುತ್ತದೆ. ಅವಕಾಡೊ ತೈಲವು ತುಂಬಾ ದಪ್ಪವಾಗಿರುತ್ತದೆ. ಇದು ಮಧ್ಯಮ ಮತ್ತು ದಪ್ಪಗಿನ ಕೂದಲಿನವರು ಬಳಸಿಕೊಳ್ಳಬಹುದು.

ಕೂದಲಿನ ಸಮೃದ್ಧ ಪೋಷಣೆಗೆ-ಬಿಸಿ ಎಣ್ಣೆಯ ಚಿಕಿತ್ಸೆ

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲವನ್ನು ಎಲ್ಲಾ ತೈಲಗಳ ತಾಯಿಯೆಂದು ಪರಿಗಣಿಸಲಾಗಿದೆ. ಇದರಲ್ಲಿ ಹಲವಾರು ರೀತಿಯ ಚರ್ಮ ಮತ್ತು ಕೂದಲಿನ ಲಾಭಗಳು ಇವೆ. ಆಲಿವ್ ತೈಲವನ್ನು ತಲೆಬುರುಡೆಗೆ ಹಚ್ಚಿಕೊಳ್ಳುವುದರಿಂದ ಇದು ಒಣ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದು. ಆಲಿವ್ ತೈಲದಲ್ಲಿ ಇರುವಂತಹ ಮೊಶ್ಚಿರೈಸರ್ ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ತಲೆಬುರುಡೆಯನ್ನು ತೇವಾಂಶದಿಂದ ಇಡುವುದು. ಆಲಿವ್ ತೈಲದೊಂದಿಗೆ ಬೇರೆ ಯಾವುದಾದರೂ ತೈಲವನ್ನು ಮಿಶ್ರಣ ಮಾಡಿಕೊಂಡು ಬಳಸಿದರೆ ಅದು ನಿಮಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಿಂದ ಕೂದಲಿಗೆ ಆಲಿವ್ ತೈಲ ಅಂಟಿಕೊಂಡಿರುವುದು ತಪ್ಪುತ್ತದೆ.

ಕೂದಲಿನ ಸಮೃದ್ಧ ಪೋಷಣೆಗೆ-ಬಿಸಿ ಎಣ್ಣೆಯ ಚಿಕಿತ್ಸೆ

English summary

Natural Oils For Dry And Damaged Hair

Dry and damaged hair seems to be one among the common problems everyone of us suffers from. Also, if you have undergone any hair-colouring jobs, it may have left your scalp unhealthy and in a terrible condition. Using natural oil on the scalp can help to get rid of this problem and also prevent detangling of hair and split end issues. So here is a list of some of the natural oils which can work wonders for damaged hair.
X
Desktop Bottom Promotion