For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವ ಸಮಸ್ಯೆಗೂ ಅಂಗೈಯಲ್ಲಿಯೇ ಇದೆ ಮದ್ದು!

ಕೂದಲನ್ನು ಸುಂದರವಾಗಿಡಲು ಸುರಕ್ಷಿತ ವಿಧಾನದಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಕೂದಲಿನ ಸುರಕ್ಷಿತ ಆರೈಕೆಯ ಟಿಪ್ಸ್‌ಗಳನ್ನು ಪಾಲಿಸಿದರೆ ನೀವು ನಿರೀಕ್ಷಿಸಿದ ಫಲಿತಾಂಶ ಪಡೆಯಲು ಅದು ನೆರವಾಗಲಿದೆ.....

By Hemanth
|

ಹೆಣ್ಣಿನ ಸೌಂದರ್ಯವಿರುವುದು ಕೂದಲಿನಲ್ಲಿ ಎನ್ನುವ ಮಾತಿದೆ. ಸುಂದರವಾಗಿರುವ ಕೂದಲುಗಳು ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ದಪ್ಪ ಹಾಗೂ ಉದ್ದ ಕೂದಲನ್ನು ಪಡೆಯಲು ಮಹಿಳೆಯರು ಏನನ್ನಾದರೂ ಮತ್ತು ಪ್ರತಿಯೊಂದನ್ನು ಪ್ರಯತ್ನಿಸಲು ತಯಾರಿರುತ್ತಾರೆ. ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಆದರೆ ಹೆಚ್ಚಿನ ಸಲ ಇಂತಹ ಪ್ರಯತ್ನಗಳ ಫಲಿತಾಂಶವು ಕೆಟ್ಟದಾಗಿರುತ್ತದೆ. ಕೂದಲನ್ನು ಸುಂದರವಾಗಿಡಲು ಸುರಕ್ಷಿತ ವಿಧಾನದಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ.... ಅದು ಹೇಗೆ ಎಂಬ ನಿಮ್ಮ ಪ್ರಶ್ನೆಯೇ? ತುಂಬಾ ಸಿಂಪಲ್... ಕೂದಲಿನ ಸುರಕ್ಷಿತ ಆರೈಕೆಯ ವಿಷಯಕ್ಕೆ ಬಂದಾಗ ಮನೆಯಲ್ಲಿಯೇ ಮಾಡಬಹುದಾದಂತಹ ಟಿಪ್ಸ್ ಗಳನ್ನು ಪಾಲಿಸಿದರೆ ನೀವು ನಿರೀಕ್ಷಿಸಿದ ಫಲಿತಾಂಶ ಪಡೆಯಲು ಅದು ನೆರವಾಗಲಿದೆ.

ಅಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಕೂದಲಿನ ಆರೈಕೆಯ ಕೆಲವೊಂದು ಉತ್ಪನ್ನಗಳಲ್ಲಿ ರಾಸಾಯನಿಕಗಳಿರುವ ಕಾರಣ ನೈಸರ್ಗಿಕ ಆರೈಕೆಯು ತುಂಬಾ ಸುರಕ್ಷಿತ. ಮನೆಯಲ್ಲಿಯೇ ನೀವು ಕೆಲವೊಂದು ನಿಸರ್ಗದತ್ತವಾಗಿ ಸಿಗುವ ವಸ್ತುಗಳಿಂದಲೇ ಆರೈಕೆ ಮಾಡಿ, ಕೂದಲಿನ ಸರ್ವ ಸಮಸ್ಯೆಯನ್ನು ಹೋಗಲಾಡಿಸಬಹುದು....ಮುಂದೆ ಓದಿ...


ಬಿಳಿ ಕೂದಲಿನ ಸಮಸ್ಯೆಗೆ ಹಾಗಲಕಾಯಿ ಜ್ಯೂಸ್!

ಬಿಳಿ ಕೂದಲಿನ ಸಮಸ್ಯೆಗೆ ಹಾಗಲಕಾಯಿ ಜ್ಯೂಸ್!

ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿ೦ದ ದಪ್ಪ ರಸವನ್ನು ಪಡೆದುಕೊ೦ಡು, ಆ ರಸವನ್ನು ಬಿಳಿಕೂದಲಿನ ಮೇಲೆ ಹಚ್ಚಿರಿ ಹಾಗೂ ಅದನ್ನು ಒ೦ದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಬಿಡಿ. ಬಳಿಕ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ. ಉತ್ತಮ ಫಲಿತಾಂಶಕ್ಕಾಗಿ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ....

ಸೀಬೆ ಎಲೆ

ಸೀಬೆ ಎಲೆ

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ. 'ಸೀಬೆ ಎಲೆ' ಕೂದಲಿನ ಸರ್ವ ರೋಗಕ್ಕೂ ಪರ್ಫೆಕ್ಟ್ ಮನೆಮದ್ದು

ಕರಿಬೇವಿನ ಎಲೆ ಹಾಗೂ ಮೊಸರು....

ಕರಿಬೇವಿನ ಎಲೆ ಹಾಗೂ ಮೊಸರು....

ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ. ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುವುದರ ಜೊತೆಗೆ ಕೂದಲು ಇನ್ನಷ್ಟು ನೀಳವಾಗಿ ಬೆಳೆಯುತ್ತದೆ

ಈರುಳ್ಳಿ

ಈರುಳ್ಳಿ

ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ.

ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು, ಇದರಿಂದ ಕೂದಲು ಈಗಿರುವುದಕ್ಕಿಂತ ಗಾಢ ಹಾಗೂ ಉತ್ತಮ ಆರೋಗ್ಯವನ್ನು ಪಡೆಯುತ್ತದೆ

ಕಡಲೆ ಹಿಟ್ಟು ಮತ್ತು ಮೊಸರು

ಕಡಲೆ ಹಿಟ್ಟು ಮತ್ತು ಮೊಸರು

1. ಸ್ವಲ್ಪ ಅರಿಶಿನ, ಕಡಲೆಹಿಟ್ಟು, ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿರಿ

2. ಈ ಪೇಸ್ಟ್ ಅನ್ನು ಭಾದಿತ ಭಾಗಕ್ಕೆ ಲೇಪಿಸಿರಿ ಹಾಗೂ ಅದನ್ನು ಒಣಗಲು ಬಿಡಿರಿ

3. ಒಣಗಿದ ಪೇಸ್ಟ್ ಅನ್ನು ಹಾಗೆಯೇ ಸ್ವಲ್ಪ ಕಾಲ ಉಜ್ಜಿರಿ ನಂತರ ಅದನ್ನು ನಯವಾಗಿ ತೊಳೆಯಿರಿ

4. ತದನಂತರ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಈ ಜಾಗಕ್ಕೆ ಲೇಪಿಸಿರಿ

English summary

Natural Home Remedies to Get Rid Of Hair fall Problem

Hairs are the beauty secret of any girl. Dealing with Hair fall problem becomes easier, when you have Home Remedies to get rid of Hair fall problem....
X
Desktop Bottom Promotion