For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವರೋಗಕ್ಕೂ 'ಮುಲ್ತಾನಿ ಮಿಟ್ಟಿ' ಹೇರ್ ಪ್ಯಾಕ್...

ಮುಲ್ತಾನಿ ಮಿಟ್ಟಿಯಲ್ಲಿರುವ ಕೆಲವೊಂದು ಗುಣಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು. ಆದರೆ ಮುಲ್ತಾನಿ ಮಿಟ್ಟಿಯನ್ನು ಕೂದಲಿನ ಆರೈಕೆಗೆ ಬಳಸುವ ಬಗ್ಗೆ ನೀವು ಕೇಳಿದ್ದೀರಾ? ಹೌದು ಇದನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಕೂಡ ಮಾಡಬಹುದು

By Hemanth
|

ಹಿಂದಿನ ಕಾಲದಲ್ಲಿ ಮುಖದ ಅಂದವನ್ನು ಹೆಚ್ಚಿಸಲು ಯಾವುದೇ ಕ್ರೀಮ್ ಇರಲಿಲ್ಲ. ಆಗ ಗಿಡಮೂಲಿಕೆಗಳು ಮತ್ತು ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಲಾಗುತ್ತಿತ್ತು. ಅದರಲ್ಲಿ ಪ್ರಮುಖವಾಗಿ ಮುಲ್ತಾನಿ ಮಿಟ್ಟಿಯನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿತ್ತು. ಮುಲ್ತಾನಿ ಮಿಟ್ಟಿಯನ್ನು ಈಗಲೂ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಲಾಗುತ್ತದೆ. ಮುಖದ ಅಂದಕ್ಕೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿಯಲ್ಲಿರುವ ಕೆಲವೊಂದು ಗುಣಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು. ಆದರೆ ಮುಲ್ತಾನಿ ಮಿಟ್ಟಿಯನ್ನು ಕೂದಲಿನ ಆರೈಕೆಗೆ ಬಳಸುವ ಬಗ್ಗೆ ನೀವು ಕೇಳಿದ್ದೀರಾ? ಹೌದು ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಕೂಡ ಮಾಡಬಹುದು. ಕೂದಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಲ್ತಾನಿ ಮಿಟ್ಟಿಯನ್ನು ಬಳಸಬಹುದು ಎಂದು ಇತ್ತೀಚಿಗಿನ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಪುರಾತನ ಕಾಲದ ಸೌಂದರ್ಯ ರಹಸ್ಯ-ಮುಲ್ತಾನಿ ಮಿಟ್ಟಿ

ಬನ್ನಿ ಕೂದಲಿನ ವಿವಿಧ ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಲ್ತಾನಿ ಮಿಟ್ಟಿಯನ್ನು ಯಾವ ರೀತಿ ಬಳಸಿ ಕೊಳ್ಳಬಹುದು ಎಂದು ತಿಳಿಯಲು ಬೋಲ್ಡ್ ಸ್ಕೈ ನಿಮಗಿಲ್ಲಿ ನೆರವಾಗಲಿದೆ....

ಬಲಿಷ್ಠ ಕೂದಲಿಗೆ

ಬಲಿಷ್ಠ ಕೂದಲಿಗೆ

ಕೂದಲಿನ ಕೋಶಗಳನ್ನು ಬಲಪಡಿಸಲು ಮತ್ತು ಆರೋಗ್ಯಕರ ತಲೆಬುರುಡೆಗಾಗಿ ಮುಲ್ತಾನಿ ಮಿಟ್ಟಿಯ ಹೇರ್ ಪ್ಯಾಕ್ ತುಂಬಾ ಉಪಯುಕ್ತವಾಗಿದೆ. ಅರ್ಧ ಕಪ್ ನಷ್ಟು ರೀತಾ ಹುಡಿ ಮತ್ತು ಅರ್ಧ ಕಪ್ ನಷ್ಟು ಮುಲ್ತಾನಿ ಮಿಟ್ಟಿಯ ಜತೆ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಈಗ ಒಂದು ಚಮಚ ಲಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. 30 ನಿಮಿಷ ಕಾಲ ಈ ಪೇಸ್ಟ್ ಅನ್ನು ಹಾಗೆ ಬಿಡಿ.

ವಾರದಲ್ಲಿ ಎರಡು ಸಲ ಈ ಪ್ಯಾಕ್ ಬಳಸಿ....

ವಾರದಲ್ಲಿ ಎರಡು ಸಲ ಈ ಪ್ಯಾಕ್ ಬಳಸಿ....

ಮುಲ್ತಾನಿ ಮಿಟ್ಟಿ ನೀರನ್ನು ಸರಿಯಾಗಿ ಹೀರಿಕೊಳ್ಳಲಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಕೂದಲು ತೊಳೆದುಕೊಳ್ಳಿ. ವಾರದಲ್ಲಿ ಎರಡು ಸಲ ಈ ಪ್ಯಾಕ್ ಬಳಸಿದರೆ ಬಲಿಷ್ಠ ಕೂದಲು ನಿಮ್ಮದಾಗುವುದು.

ಕೂದಲು ಉದುರುವುದಕ್ಕೆ

ಕೂದಲು ಉದುರುವುದಕ್ಕೆ

ಕೂದಲು ಉದುರುವ ಸಮಸ್ಯೆಯನ್ನು ಮುಲ್ತಾನಿ ಮಿಟ್ಟಿಯಿಂದ ಸುಲಭವಾಗಿ ಬಗೆಹರಿಸಬಹುದಾಗಿದೆ. ಇದು ನಿರ್ವಿಷಕಾರಿಯಂತೆ ಕೆಲಸ ಮಾಡಿ ತಲೆಬುರುಡೆಯ ಮೇಲ್ಭಾಗದಲ್ಲಿರುವ ಪದರವನ್ನು ಕಿತ್ತು ಹಾಕಿ ಕೂದಲು ಬೆಳೆಯಲು ನೆರವಾಗುವುದು. 6-8 ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ.ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

2 ಚಮಚ ಕರಿಮೆಣಸಿನ ಹುಡಿ ಮತ್ತು ಸ್ವಲ್ಪ ಮೊಸರನ್ನು ಇದಕ್ಕೆ ಸೇರಿಸಿಕೊಳ್ಳಿ. ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಟ್ಟು ತಣ್ಣೀರಿನಲ್ಲಿ ತೊಳೆದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು.

ತುರಿಕೆ ಮತ್ತು ಕಿರಿಕಿರಿಯ ತಲೆಬುರುಡೆಗೆ

ತುರಿಕೆ ಮತ್ತು ಕಿರಿಕಿರಿಯ ತಲೆಬುರುಡೆಗೆ

ತಲೆಹೊಟ್ಟು ಮತ್ತು ರಾಸಾಯನಿಕ ತಲೆಬುರುಡೆಯ ಮೇಲ್ಭಾಗದಲ್ಲಿ ಬಂದು ನಿಲ್ಲುವುದರಿಂದ ತುರಿಕೆ ಮತ್ತು ಕಿರಿಕಿರಿಯಾಗಬಹುದು. ಇದನ್ನು ನಿವಾರಣೆ ಮಾಡಲು ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಳ್ಳಿ. ಎರಡು ಚಮಚ ಕಿತ್ತಳೆ ಸಿಪ್ಪೆಯ ಹುಡಿ, ಎರಡು ಚಮಚ ಕಡಲೆ ಹಿಟ್ಟು ಮತ್ತು ಎರಡು ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ.

ತುರಿಕೆ ಮತ್ತು ಕಿರಿಕಿರಿಯ ತಲೆಬುರುಡೆಗೆ

ತುರಿಕೆ ಮತ್ತು ಕಿರಿಕಿರಿಯ ತಲೆಬುರುಡೆಗೆ

ಒಂದು ಕಪ್ ಮೊಸರನ್ನು ತೆಗೆದುಕೊಂಡು ಈ ಎಲ್ಲಾ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಈ ಮಾಸ್ಕ್ ಅನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಲು ಮರೆಯಬೇಡಿ. ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

English summary

Multani Mitti Packs To Try For Different Hair Problems

Multani mitti is one among the ancient ingredients that is used to beautify the skin. This age-old ingredient is known to treat acne on face, hyperpigmentation, etc. It can also lighten your complexion and help deal with many other skin-related problems. But did you know that Fuller's earth or multani mitti is equally beneficial on hair like it is on the skin?
X
Desktop Bottom Promotion