For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗಳಿಗೆ 'ಮೆಂತೆಕಾಳಿನ' ಹೇರ್ ಪ್ಯಾಕ್

ವಾರಕ್ಕೊಮ್ಮೆ ಮೆಂತೆ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ರುಬ್ಬಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯುವುದರಿಂದ ನಿಮ್ಮ ಕೂದಲನ್ನು ಉದುರದಂತೆ, ಅಕಾಲಿಕ ನೆರೆ ಕೂದಲು ಉಂಟಾಗದಂತೆ ರಕ್ಷಣೆ ಮಾಡಬಹುದು.

By Hemanth
|

ಮಹಿಳೆಯರ ಹಾಗೂ ಪುರುಷರ ಸೌಂದರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತಹ ಕೂದಲಿನ ಆರೈಕೆ ಮಾಡಿಕೊಳ್ಳಲು ಹಲವಾರು ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಶಾಂಪೂಗಳು ಹಾಗೂ ಕಂಡೀಷನರ್‌ಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡುವವರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚುತ್ತಾ ಇದೆ. ಆದರೆ ಇದು ಸ್ವಲ್ಪ ಸಮಯದ ಕಾಲ ನಿಮಗೆ ಕಾಂತಿಯುತ ಹಾಗು ಸದೃಢ ಕೂದಲನ್ನು ನೀಡಿದರೂ ಮುಂದಿನ ದಿನಗಳಲ್ಲಿ ಇದರ ಅಡ್ಡಪರಿಣಾಮಗಳು ಇದ್ದೇ ಇರುತ್ತದೆ. ಮೆಂತೆ: ಅಡುಗೆಮನೆಗೆ ರಾಣಿ-ಆರೋಗ್ಯಕ್ಕೆ ಸಂಜೀವಿನಿ!

ಆದರೆ ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಮಾಡಬಹುದು. ಕೂದಲಿನ ಆರೈಕೆ ಮಾಡಲು ಮೆಂತೆ ಕಾಳುಗಳನ್ನು ಹಿಂದಿನಿಂದಲೂ ಭಾರತೀಯರು ಬಳಸುತ್ತಾ ಇದ್ದಾರೆ. ಇದು ಯಾವ ರೀತಿಯಲ್ಲಿ ನಿಮ್ಮ ಕೂದಲನ್ನು ಆರೈಕೆ ಮಾಡುತ್ತದೆ ಮತ್ತು ಕೂದಲಿನ ಆರೋಗ್ಯವನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದು ಹೇಗೆಂದು ಲೇಖನವನ್ನು ಓದುತ್ತಾ ತಿಳಿಯಿರಿ....

ಆರೋಗ್ಯಕರ ಕೂದಲಿಗೆ

ಆರೋಗ್ಯಕರ ಕೂದಲಿಗೆ

ಮೆಂತೆಕಾಳಿನ ಪೇಸ್ಟ್ ಮಾಡಿಕೊಂಡು ಅದನ್ನು ತೆಂಗಿನ ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಬಳಿಕ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಕೂದಲು ತುಂಬಾ ಆರೋಗ್ಯಕಾರಿಯಾಗಿರುತ್ತದೆ. ಕೂದಗೆ ರೇಷ್ಮೆಯಂತಹ ಹೊಳಪು ಹಾಗೂ ಕಾಂತಿಯನ್ನು ನೀಡುವುದು.

ಕೂದಲು ಉದುರುವುದನ್ನು ತಡೆಯಲು

ಕೂದಲು ಉದುರುವುದನ್ನು ತಡೆಯಲು

ಮೆಂತೆ ಕಾಳಿನ ಪೇಸ್ಟ್ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಮೃಧುವಾದ ಪೇಸ್ಟ್ ಮಾಡಿಕೊಳ್ಳಿ. ತಲೆಕೂದಲಿಗೆ ಹಾನಿಯಾಗಿರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಇದನ್ನು ಒಣಗಲು ಬಿಡಿ. ಶಾಂಪೂವಿನಿಂದ ಕೂದಲು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ಅಲೋವೆರಾ ಜೆಲ್ ನ್ನು ಇದಕ್ಕೆ ಸೇರಿಸಿಕೊಳ್ಳಬಹುದು.

ತಲೆಹೊಟ್ಟಿನ ಚಿಕಿತ್ಸೆಗೆ

ತಲೆಹೊಟ್ಟಿನ ಚಿಕಿತ್ಸೆಗೆ

ಮೆಂತೆ ಕಾಳನ್ನು ನೆನೆಸಿಕೊಂಡ ಬಳಿಕ ಅದರ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ನಿಂಬೆರಸ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ತಲೆಹೊಟ್ಟನ್ನು ನಿವಾರಿಸಲು ಇದು ಅತ್ಯುತ್ತಮವಾದ ವಿಧಾನವಾಗಿದೆ. ತಲೆಹೊಟ್ಟಿನಿಂದ ಸಮಸ್ಯೆಯನ್ನು ಎದುರಿಸುವಂತಹ ಜನರಿಗೆ ಇಲ್ಲಿ ಮತ್ತೊಂದು ವಿಧಾನವಿದೆ. 2-3 ಚಮಚ ಮೊಸರನ್ನು ಪಡೆಯಿರಿ ಮತ್ತು ಅದಕ್ಕೆ 2-3 ಚಮಚ ಮೆಂತೆಯನ್ನು ಸೇರಿಸಿಕೊಳ್ಳಿ. ಮೆಂತೆಯನ್ನು ರಾತ್ರಿಯಿಡಿ ನೆನೆಸಿಟ್ಟು ಮೆತ್ತಗಿನ ಪೇಸ್ಟ್ ಮಾಡಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ.

ನೆಲ್ಲಿಕಾಯಿ ಜತೆ ಮೆಂತೆ

ನೆಲ್ಲಿಕಾಯಿ ಜತೆ ಮೆಂತೆ

ಕೂದಲು ಬಿಳಿಯಾಗುವುದನ್ನು ತಡೆಯಲು ಮೆಂತೆಯ ಹುಡಿಗೆ ಸ್ವಲ್ಪ ನೆಲ್ಲಿಕಾಯಿ ಹುಡಿ ಮತ್ತು ನಿಂಬೆರಸ ಬೆರೆಸಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸರಿಯಾಗಿ ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತಂಪಾದ ನೀರಿನಿಂದ ಕೂದಲು ತೊಳೆಯಿರಿ.

ಮೊಟ್ಟೆ ಮತ್ತು ಮೆಂತೆ

ಮೊಟ್ಟೆ ಮತ್ತು ಮೆಂತೆ

ತುಂಬಾ ಒಣ ಕೂದಲನ್ನು ಹೊಂದಿರುವವರು ಮೆಂತೆಯ ಜತೆಗೆ ಮೊಟ್ಟೆಯನ್ನು ಬೆರೆಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಬೇಕು. ಸ್ವಲ್ಪ ಮೆಂತೆಯನ್ನು ನೆನೆಸಿಟ್ಟು ಬಳಿಕ ಪೇಸ್ಟ್ ಮಾಡಿಕೊಳ್ಳಿ. ಒಂದು ಮೊಟ್ಟೆಯನ್ನು ಇದಕ್ಕೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನಿಯಮಿತವಾಗಿ ಬಳಸಿದರೆ ಫಲಿತಾಂಶ ಸಿಗುವುದು.

ಕೋಮಲವಾದ ಕೇಶರಾಶಿಗೆ

ಕೋಮಲವಾದ ಕೇಶರಾಶಿಗೆ

ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶಾಂಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

English summary

How To Apply Methi On Hair

Fenugreek, also called methi in India, is an easily available ingredient in the kitchen with a host of health benefits and medicinal properties. Fenugreek oil is extensively used these days for several kinds of body massages. Fenugreek leaves have also been extensively used for ages now in cooking, especially in Indian cuisine.
X
Desktop Bottom Promotion