For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಬೇಕೇ? ಶುಂಠಿ ಹೇರ್ ಪ್ಯಾಕ್ ಪ್ರಯತ್ನಿಸಿ

ನಿಸರ್ಗ ಕೂದಲ ಶೀಘ್ರ ಬೆಳವಣಿಗೆಗೆ ಕೆಲವು ಪೋಷಕಾಂಶಗಳನ್ನು ನೀಡಿದ್ದು ಇದನ್ನು ಹಸಿ ಶುಂಠಿಯಲ್ಲಿರಿಸಿದೆ.... ಈ ಅದ್ಭುತ ಮೂಲಿಕೆಯ ಲೇಪವನ್ನು ಸರಿಯಾಗಿ ಉಪಯೋಗಿಸುವ ಮೂಲಕ ಕೂದಲಿನ ಅಂದ ಚಂದವನ್ನು ಹೆಚ್ಚಿಸಬಹುದು

By Manu
|

ನಿಮ್ಮ ಕೂದಲು ಭುಜದವರೆಗೆ ಬೆಳೆದು ಅಲ್ಲಿಯೇ ನಿಂತುಬಿಟ್ಟಿದೆಯೇ? ಈ ಉದ್ದವನ್ನು ಇನ್ನಷ್ಟು ಹೆಚ್ಚಿಸಲು ನಿಮ್ಮ ಇದುವರೆಗಿನ ಪ್ರಯತ್ನಗಳೆಲ್ಲಾ ವಿಫಲಗೊಂಡಿದೆಯೇ? ಹಾಗಾದರೆ ನೀವು ನಿಸರ್ಗದ ನೆರವು ಪಡೆಯುವುದೇ ಒಳ್ಳೆಯದು. ನಿಸರ್ಗ ಕೂದಲ ಶೀಘ್ರ ಬೆಳವಣಿಗೆಗೆ ಕೆಲವು ಪೋಷಕಾಂಶಗಳನ್ನು ನೀಡಿದ್ದು ಇದನ್ನು ಹಸಿ ಶುಂಠಿಯಲ್ಲಿರಿಸಿದೆ.

ಈ ಅದ್ಭುತ ಮೂಲಿಕೆಯ ಲೇಪವನ್ನು ಸರಿಯಾಗಿ ಉಪಯೋಗಿಸುವ ಮೂಲಕ ಕೂದಲು ಸೊಂಟದವರೆಗೂ ಬೆಳೆಯುವ ಕಾಲ ದೂರವಿಲ್ಲ. ನಮ್ಮ ಆಹಾರಕ್ಕೆ ರುಚಿ, ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಪೋಷಕಾಂಶಗಳು ಕೂದಲ ಬುಡಕ್ಕೆ ಪ್ರಚೋದನೆ ನೀಡಿ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅಷ್ಟೇ ಅಲ್ಲ, ಇದರ ಪ್ರತಿಜೀವಕ ಗುಣ ತಲೆಯ ಚರ್ಮದಲ್ಲಿ ಶಿಲೀಂಧ್ರದ ಸೋಂಕು ಆಗುವುದನ್ನು ತಪ್ಪಿಸಿ ತಲೆಹೊಟ್ಟಾಗದಂತೆ ನೋಡಿಕೊಳ್ಳುತ್ತದೆ. ಬನ್ನಿ, ಹಸಿಶುಂಠಿಯನ್ನು ತಲೆಗೂದಲ ವೃದ್ಧಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ....

ಹಂತ1

ಹಂತ1

ಸುಮಾರು ಮಧ್ಯಮ ಗಾತ್ರದ ಒಂದು ಹಸಿಶುಂಠಿಯ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಜಜ್ಜಿ ಅರೆಯಿರಿ. ಬಳಿಕ ಸ್ವಚ್ಛ ಬಟ್ಟೆಯ ತುಂಡಿನಲ್ಲಿ ಇದನ್ನು ಹಿಂಡಿ ರಸವನ್ನು ಸಂಗ್ರಹಿಸಿ.

ಹಂತ 2

ಹಂತ 2

ಈ ರಸಕ್ಕೆ ಒಂದು ದೊಡ್ಡಚಮಚ ಬೆಣ್ಣೆಹಣ್ಣಿನ ಎಣ್ಣೆಯನ್ನು (avocado oil) ಹಾಕಿ ಮಿಶ್ರಣ ಮಾಡಿ. ಬೆಣ್ಣೆಹಣ್ಣಿನ ಎಣ್ಣೆಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಅಮೈನೋ ಆಮ್ಲಗಳು, ಅವಶ್ಯಕ ಕೊಬ್ಬುಗಳು ಸಹಾ ಇದ್ದು ಕೂದಲ ಬೆಳವಣಿಗೆಗೆ ಸಹಕರಿಸುತ್ತವೆ.

ಹಂತ3

ಹಂತ3

ಈ ಮಿಶ್ರಣಕ್ಕೆ ಅರ್ಧ ಕಪ್ ತೆಂಗಿನ ಹಾಲನ್ನು ಮಿಶ್ರಣ ಮಾಡಿ. ಕೊಬರಿಯಲ್ಲಿರುವ ಲಾರಿಕ್ ಆಮ್ಲ ಕೂದಲ ತುದಿಗಳು ಒಣಗಿದ್ದರೆ ಅಥವಾ ಸೀಳಿದ್ದರೆ ಇದನ್ನು ಸರಿಪಡಿಸಲು ನೆರವಾಗುತ್ತದೆ.

ಹಂತ 4

ಹಂತ 4

ಬಳಿಕ ಇದಕ್ಕೆ ಹತ್ತು ಹನಿ ಲಿಂಬೆರಸವನ್ನು ಸೇರಿಸಿ. ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಹಾಗೂ ವಿಟಮಿನ್ ಸಿ ತಲೆಯನ್ನು ಸ್ವಚ್ಛಗೊಳಿಸಿ ಸೋಂಕಿನಿಂದ ರಕ್ಷಿಸುತ್ತದೆ ಹಾಗೂ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಹಂತ 5

ಹಂತ 5

ಈ ಮಿಶ್ರಣವನ್ನು ಹೆಚ್ಚುವ ಮುನ್ನ ದೊಡ್ಡಹಲ್ಲುಗಳ ಬಾಚಣಿಗೆಯಿಂದ ತಲೆಯನ್ನು ಬಾಚಿಕೊಂಡು ಸಿಕ್ಕುಗಳನ್ನೆಲ್ಲಾ ಬಿಡಿಸಿಕೊಳ್ಳಿ. ಆದರೆ ಇದಕ್ಕೆ ಹೆಚ್ಚಿನ ಒತ್ತಡ ಹೇರಬೇಡಿ. ಇದರಿಂದ ಕೂದಲು ತುಂಡಾಗಬಹುದು.

ಹಂತ 6

ಹಂತ 6

ಬಳಿಕ ಈ ಮಿಶ್ರಣವನ್ನು ತಲೆಯ ಮೇಲೆ ಹಚ್ಚಿಕೊಂಡು ನಯವಾದ ಮಸಾಜ್ ಮೂಲಕ ಇಡಿಯ ತಲೆ ಅವರಿಸುವಂತೆ ಮಾಡಿ. ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಮಸಾಜ್ ಮೂಲಕ ಈ ದ್ರವ ತಲೆಗೂದಲ ಬುಡಕ್ಕೆ ಇಳಿಯಲು ಸಾಧ್ಯವಾಗುತ್ತದೆ ಹಾಗೂ ರಕ್ತಸಂಚಾರ ಹೆಚ್ಚಿಸಲು ಪ್ರಚೋದನೆ ನೀಡುತ್ತದೆ.

ಹಂತ 7

ಹಂತ 7

ಈ ಲೇಪನ ಹಚ್ಚಿದ ಬಳಿಕ ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಡಿ. ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಅಗತ್ಯವೆನಿಸಿದರೆ ಮಾತ್ರ ರಾಸಾಯನಿಕಗಳಿಲ್ಲದ ಸೌಮ್ಯ ಕ್ಲೀನ್ಸರ್ ಬಳಸಿ.

ಹಂತ 8

ಹಂತ 8

ಸ್ನಾನದ ಬಳಿಕ ದಪ್ಪ ಟವೆಲ್ಲನ್ನು ಒತ್ತಿಕೊಂಡು ನೀರನ್ನು ಒರೆಸಿಕೊಳ್ಳಿ. ಇತರ ಸಮಯದಂತೆ ತಲೆಯನ್ನು ಉಜ್ಜಿಕೊಳ್ಳಲು ಹೋಗಬೇಡಿ. ಏಕೆಂದರೆ ಕೂದಲ ಬುಡಗಳು ಈಗ ತೀರಾ ಸಡಿಲವಾಗಿದ್ದು ಕೂದಲು ಸುಲಭವಾಗಿ ಕಳಚಿ ಬರುತ್ತವೆ. ಬಳಿಕ ತಲೆಯನ್ನು ಬಾಚದೇ ಹಾಗೇ ಒಣಗುವಂತೆ ಮಾಡಿ. ಪೂರ್ಣವಾಗಿ ಒಣಗಿದ ಬಳಿಕವೇ ಬಾಚಿಕೊಳ್ಳಿ.

English summary

Ginger Hair Mask Recipe To Fasten Your Hair Growth!

Is your hair not growing beyond the designated shoulder length? Do you want long and lush hair that reaches your waistline? Then, what you need is this ginger hair mask! That's right, ginger does more than add a tinge of flavour to your food or clear your bowel system! Ginger stimulates blood circulation, which in turn allows your hair follicles to absorb nutrients and oxygen better!
X
Desktop Bottom Promotion