For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವ ರೋಗಕ್ಕೂ 'ಬಾಳೆಹಣ್ಣಿನ' ಹೇರ್ ಮಾಸ್ಕ್

By Hemanth
|

ಚಳಿಗಾಲ ಕಳೆದು ಇನ್ನೇನು ಬೇಸಿಗೆ ಕಾಲ ಬರಲು ಕೆಲವೇ ದಿನಗಳು ಉಳಿದಿರುವಾಗ ನಮ್ಮ ದೇಹ ಹಾಗೂ ಆರೋಗ್ಯದ ಕಡೆ ಗಮನಹರಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಬೋಲ್ಡ್ ಸ್ಕೈ ಬೇಸಿಗೆ ಕಾಲದಲ್ಲಿ ದೇಹ ಹಾಗೂ ಆರೋಗ್ಯದ ಬಗ್ಗೆ ಯಾವ ರೀತಿಯ ಕಾಳಜಿ ವಹಿಸಿಕೊಳ್ಳಬೇಕು ಎನ್ನುವ ಬಗ್ಗೆ ಸರಣಿ ಲೇಖನಗಳನ್ನು ನೀಡಲಿದೆ.

ಇದನ್ನು ಓದಿಕೊಂಡು ಬೇಸಿಗೆಯಲ್ಲಿ ನಿಮ್ಮ ದೇಹದ ಸೌಂದರ್ಯ ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಬೇಸಿಗೆಯಲ್ಲಿ ತುಂಬಾ ಕಠಿಣ ಕೆಲಸವೆಂದರೆ ಕೂದಲಿನ ಆರೈಕೆ ಮಾಡಿಕೊಳ್ಳುವುದು. ಬಿಸಿಲು ಹೆಚ್ಚಾಗಿರುವ ಕಾರಣದಿಂದ ಬೇಸಿಗೆಯಲ್ಲಿ ಕೂದಲು ಒಣಗುವುದು ಈ ವೇಳೆ ಹಾನಿಗೊಂಡಿರುವ ಕೂದಲು ಉದುರುವುದು. ಕೂದಲು ತುಂಡಾಗುವುದು ಹಾಗೂ ಇತರ ಸಮಸ್ಯೆಗಳು ಕಾಡಬಹುದು. ಆದರೆ ಇದನ್ನು ಹೋಗಲಾಡಿಸಲು ಮನೆಯಲ್ಲೇ ಮಾಡಿದಂತಹ ಮಾಸ್ಕ್ ಬಳಸಿದರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ ಮತ್ತು ಫಲಿತಾಂಶವು ಚೆನ್ನಾಗಿ ಸಿಗಲಿದೆ. ಕೂದಲಿನ ಸಮಸ್ಯೆಗೂ ಬಾಳೆಹಣ್ಣಿಗೂ ಎತ್ತಿಂದೆತ್ತ ಸಂಬಂಧ..?

Banana And Rice Flour Hair Mask For Damaged Hair

ಬೇಕಾಗುವ ಸಾಮಗ್ರಿಗಳು
*ಬಾಳೆಹಣ್ಣಿನ ಕೆಲವು ತುಂಡುಗಳು
*2-3 ಚಮಚ ಜೇನುತುಪ್ಪ
*5-8 ಚಮಚ ಅಕ್ಕಿಹಿಟ್ಟು

ತಯಾರಿಸುವ ವಿಧಾನ
1. ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಹಲವಾರು ತುಂಡುಗಳನ್ನಾಗಿ ಮಾಡಿಕೊಳ್ಳಿ. ಬಾಳೆಹಣ್ಣಿನ 4-5 ತುಂಡುಗಳು ಬೇಕು.
2. 2-3 ಚಮಚ ಜೇನುತುಪ್ಪನ್ನು ಅದಕ್ಕೆ ಬೆರೆಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.


3. ಈ ಮಿಶ್ರಣಕ್ಕೆ ಅಕ್ಕಿಹಿಟ್ಟನ್ನು ಹಾಕಿಕೊಳ್ಳಿ.
4. ಇದನ್ನು ಸರಿಯಾಗಿ ಕಲಸಿಕೊಳ್ಳಿ. ಯಾವುದೇ ತುಂಡುಗಳು ಇದರಲ್ಲಿ ಇರಬಾರದು.
5. ಮೃದುವಾದ ಪೇಸ್ಟ್ ಪಡೆಯಲು ಇದನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
6. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಶವರ್ ಕ್ಯಾಪ್ ಹಾಕಿಕೊಳ್ಳಿ.
7. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಮುಖದ ಅಂದಕ್ಕೆ- ಬಾಳೆ ಹಣ್ಣಿನ ಫೇಸ್ ಪ್ಯಾಕ್....

ಬಾಳೆಹಣ್ಣು ಮತ್ತು ಅಕ್ಕಿಹಿಟ್ಟಿನ ಹೇರ್ ಮಾಸ್ಕ್ ನ ಲಾಭಗಳು
*ಬಾಳೆಹಣ್ಣು ಮತ್ತು ಅಕ್ಕಿ ಹಿಟ್ಟಿನ ಹೇರ್ ಮಾಸ್ಕ್ ತಲೆಬುರುಡೆ ಮತ್ತು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕೋಶ ಹಾಗೂ ಬುಡಕ್ಕೆ ಪೋಷಕಾಂಶಗಳನ್ನು ಒದಗಿಸುವುದು.
*ಬಾಳೆಹಣ್ಣು ತಲೆಬುರುಡೆಯನ್ನು ತೇವಾಂಶದಿಂದ ಇಟ್ಟು ಕೂದಲು ಉದುರುವುದನ್ನು ಕಡಿಮೆ ಮಾಡುವುದು. ವಾರದಲ್ಲಿ ಎರಡು ಸಲ ಈ ಮಾಸ್ಕ್ ಅನ್ನು ಬಳಸುವುದರಿಂದ ಒಣ, ನಿಸ್ತೇಜ ಮತ್ತು ಹಾನಿಗೊಂಡಿರುವ ಕೂದಲಿಗೆ ಆರೈಕೆ ಮಾಡಬಹುದು.

ಬಾಳೆಹಣ್ಣಿನಿಂದ ಕೂದಲಿಗೆ ಲಾಭಗಳು


*ಬಾಳೆಹಣ್ಣಿನಲ್ಲಿ ಕೆಲವೊಂದು ಅಗತ್ಯ ಪೌಷ್ಠಿಕಾಂಶಗಳು ಲಭ್ಯವಿರುವ ಕಾರಣದಿಂದಾಗಿ ಇದು ಕೂದಲಿಗೆ ಹಾನಿಯಾಗುವುದನ್ನು ತಡೆದು ತಲೆಹೊಟ್ಟನ್ನು ನಿವಾರಿಸುವುದು.
*ಬಾಳೆಹಣ್ಣು ತೇವಾಂಶವನ್ನು ಕಾಪಾಡಿಕೊಳ್ಳುವುದರಿಂದ ಕೂದಲು ನಯವಾಗುವುದು.
*ಇದು ನೈಸರ್ಗಿಕ ಮಾಯಿಶ್ಚರೈಸರ್ ನಂತೆ ಕೆಲಸ ಮಾಡುವುದು. ಇದರಿಂದ ಕೂದಲು ಹಾಗೂ ತಲೆಬುರುಡೆ ತೇವಾಂಶದಿಂದ ಇರುತ್ತದೆ.
*ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಂಶವು ಹೆಚ್ಚಾಗಿರುವ ಕಾರಣದಿಂದ ಕೂದಲು ಉದುರುವುದರ ವಿರುದ್ಧ ಇದು ಹೋರಾಡುವುದು.

* ಇದು ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
*ಕೂದಲು ಸ್ವಲ್ಪ ಭಿನ್ನವಾಗಿದ್ದರೆ ಅಕ್ಕಿ ಹಿಟ್ಟು ಅದಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದು.

ಸೂಚನೆ: ಮಿಶ್ರಣ ಮಾಡುವಾಗ ಯಾವುದೇ ತುಂಡು ಉಳಿಯದಂತೆ ನೋಡಿಕೊಳ್ಳಿ. ಮಾಸ್ಕ್ ತುಂಬಾ ನಯವಾಗಿದ್ದರೆ ಅದನ್ನು ಕೂದಲಿಗೆ ಹಚ್ಚಿಕೊಳ್ಳುವುದು ಸುಲಭ.

English summary

DIY: Banana And Rice Flour Hair Mask For Damaged Hair

Sadly, our hair can be affected not only due to environmental factors, but also by hair-washing mistakes that we make. Women using a lot of styling tools have a common complaint of dry and damaged hair. Well, if you are struggling with dry and damaged hair as well, here is a simple DIY hair mask recipe that will help to nourish your scalp and tresses....
Story first published: Tuesday, February 21, 2017, 18:04 [IST]
X
Desktop Bottom Promotion