ಕೇಳಿ ಇಲ್ಲಿ ನಿಮ್ಮ ಜಡೆಯನ್ನು ಮಾತ್ರ ಬಿಗಿಯಾಗಿ ಕಟ್ಟಬೇಡಿ!

ನಿತ್ಯದ ಕೆಲಸಗಳಿಗೆ ಕೂದಲನ್ನು ಬಿಡಿಯಾಗಿ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಇದರಿಂದ ಕೆಲಸಕ್ಕೆ ಅಡಚಣೆ ಯುಂಟಾಗಬಹುದು, ಆದರೆ ಸಡಿಲ ಕೂದಲು ಕೆಲವೆಡಿ ಸಿಲುಕಿ ಅಪಾಯವೂ ಎದುರಾಗಬಹುದು....

By: manu
Subscribe to Boldsky

ಆಗಾಗ ಜಡೆ ಸಡಿಲವಾಗುತ್ತಾ ಇರುತ್ತದೆ ಎಂಬ ಕಾರಣದಿಂದ ಕೆಲವರು ತಮ್ಮ ಜಡೆಯನ್ನು ಅತಿ ಬಿಗಿಯಾಗಿ ಎಳೆದು ಕಟ್ಟಿರುತ್ತಾರೆ. ಹೀಗೆ ಕಟ್ಟುವುದರಿಂದ ಯಾವ ಪ್ರಯೋಜನಗಳಿವೆ ಮತ್ತು ಯಾವ ಅಪಾಯಗಳಿವೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಇಂದಿನ ದಿನಗಳಲ್ಲಿ ಚಿತ್ರವಿಚಿತ್ರ ಕೇಶ ವಿನ್ಯಾಸಗಳ ಮೂಲಕ ಕೂದಲನ್ನು ಹಿಂದೆಂದಿಗಿಂತಲೂ ಬಿಗಿಯಾಗಿ ಕಟ್ಟಲಾಗುತ್ತಿದೆ.  ಕೂದಲು ಸೊಂಪಾಗಿ ಬೆಳೆಯಬೇಕೇ?-ಪದೇ ಪದೇ ತೊಳೆಯದಿರಿ

ಇದರಿಂದ ಅರಿವೇ ಇಲ್ಲದಂತೆ ಕೂದಲ ಬುಡಗಳಿಗೆ ಹೆಚ್ಚಿನ ಒತ್ತಡ ನೀಡಿ ಹಲವು ಅಪಾಯಗಳಿಗೆ ಆಹ್ವಾನ ನೀಡಲಾಗುತ್ತಿದೆ. ಅದರಲ್ಲೂ ಕ್ರೀಡಾಪಟುಗಳು ಮತ್ತು ಹೊರಗೆ ಓಡಾಡುವ ಉದ್ಯೊಗಸ್ಥ ಮಹಿಳೆಯರು ತಮ್ಮ ಉದ್ಯೋಗ ಮತ್ತು ತರಬೇತಿಗೆ ಕೂದಲು ಅಡ್ಡಿಯಾಗಬಾರದೆಂದು ಇನ್ನಷ್ಟು ಬಿಗಿಯಾಗಿಸುತ್ತಾರೆ. ಬಿಸಿಲು, ಸೆಖೆಯ ದಿನಗಳೂ ಹಲವರಿಗೆ ಜಡೆಯನ್ನು ಬಿಗಿಯಾಗಿಸಲು ಪ್ರೇರಣೆ ನೀಡುತ್ತವೆ.   ಬಿಗಿಯಾಗಿ ಜಡೆ ಹಾಕಿದರೆ ಕೂದಲು ಬರುತ್ತದೆಯೆ?

ನಿತ್ಯದ ಕೆಲಸಗಳಿಗೆ ಕೂದಲನ್ನು ಬಿಡಿಯಾಗಿ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಇದರಿಂದ ಕೆಲಸಕ್ಕೆ ಅಡಚಣೆ ಯುಂಟಾಗಬಹುದು, ಸಡಿಲ ಕೂದಲು ಕೆಲವೆಡಿ ಸಿಲುಕಿ ಅಪಾಯವೂ ಎದುರಾಗಬಹುದು. ನಿತ್ಯವೂ ಒಂದೇ ಬಗೆಯ ಗಂಟು ಕಟ್ಟಿಕೊಳ್ಳುವ ಮೂಲಕ ತಲೆಯ ಒಂದು ಭಾಗದ ಕೂದಲ ಬುಡಗಳು ಇತರ ಕೂದಲುಗಳಿಗಿಂತ ಹೆಚ್ಚು ಸೆಳೆತಕ್ಕೆ ಒಳಗಾಗುತ್ತವೆ. ಹಾಗಾದರೆ ಕೂದಲನ್ನು ಆರೋಗ್ಯವಾಗಿಟ್ಟೂಕೊಳ್ಳಲು, ಕೆಲಸಕ್ಕೆ ಬಾಧೆಯೂ ಆಗದಂತೆ ನಿರ್ವಹಿಸುವುದು ಹೇಗೆ? ಮುಂದೆ ಓದಿ...   


ಕೂದಲನ್ನು ಶಿಥಿಲಗೊಳಿಸುತ್ತದೆ

ಕೂದಲನ್ನು ಸತತವಾಗಿ ಒಂದೇ ಕಡೆ ಗಂಟು ಕಟ್ಟುವ ಮೂಲಕ ಒಂದು ಭಾಗದ ಕೂದಲ ಮೇಲೆ ಸತತವಾಗಿ ಒತ್ತಡ ಬೀಳುವ ಕಾರಣ ಈ ಭಾಗದ ಕೂದಲು ಹೆಚ್ಚು ಹೆಚ್ಚು ಶಿಥಿಲವಾಗುತ್ತಾ ಹೋಗುತ್ತದೆ. ಪರಿಣಾಮವಾಗಿ ಇಲ್ಲಿನ ಕೂದಲು ಸುಲಭವಾಗಿ ತುಂಡಾಗುವುದು ಅಥವಾ ಉದುರುವುದು ಕಂಡುಬರುತ್ತದೆ.

ಕೂದಲು ನಡುವೆ ತುಂಡಾಗುತ್ತವೆ

ವಿಶೇಷವಾಗಿ ಕೂದಲನ್ನು ಜುಟ್ಟು ಕಟ್ಟಿ ಕ್ಲಿಪ್ ಅಥವಾ ಬ್ಯಾಂಡ್ ಮೂಲಕ ಅತಿ ಹೆಚ್ಚು ಬಿಗಿಯಾಗಿಸಿದರೆ ಇದೇ ಬಿಗಿತನ ದಿನವಿಡೀ ಇದ್ದು ಸಂಜೆ ಇದರನ್ನು ಬಿಡಿಸಿದಾಗ ಕೂದಲು ಬಿಗಿಯಾಗಿದ್ದ ಭಾಗದಲ್ಲಿ ತುಂಡಾಗುವ ಸಾಧ್ಯತೆ ಹೆಚ್ಚುತ್ತದೆ.

ಶಾಶ್ವತ ವಕ್ರತೆ ಉಳಿಯಬಹುದು

ರಬ್ಬರ್ ಬ್ಯಾಂಡ್ ಅಥವಾ ಕ್ಲಿಪ್ ಅನ್ನು ಕೂದಲು ಬಿಗಿಯಾಗಿಸಲು ಉಪಯೋಗಿಸಿದಾಗ ಈ ಸ್ಥಳದಲ್ಲಿ ಕೂದಲು ವಕ್ರವಾಗಿ ಇದನ್ನು ನೇರಗೊಳಿಸಲು ಸಾಧ್ಯವಾಗದೇ ಹೋಗುತ್ತದೆ. ಕೂದಲು ಬೆಳೆದಂತೆ ಈ ವಕ್ರತೆಯೂ ಮುಂದೆ ಮುಂದೆ ಹೋಗುತ್ತಾ ನಿಮ್ಮ ಕೂದಲು ವಕ್ರವಕ್ರವಾಗುತ್ತಾ ಹೋಗುತ್ತದೆ. ಆದ್ದರಿಂದ ಪ್ರತಿಬಾರಿ ಈ ಗಂಟನ್ನು ತಲೆಯ ವಿವಿಧ ಭಾಗಗಳಿಗೆ ಬದಲಾಯಿಸುತ್ತಾ ಇರಬೇಕು.

ರಾತ್ರಿ ಸಡಿಲ ಬಿಡಿ

ದಿನವಿಡೀ ಕೂದಲನ್ನು ಗಂಟುಕಟ್ಟಲು ಕಾರಣಗಳೇನೇ ಇದ್ದರೂ ರಾತ್ರಿ ಮಲಗುವ ಮುನ್ನ ಮಾತ್ರ ಬಿಡಿಯಾಗಿಸಲೇಬೇಕು. ಪೂರ್ಣವಾಗಿ ಬಿಡಿಯಾಗಿ ಬಿಟ್ಟರೆ ತುಂಬಾ ಉತ್ತಮ. ಇದು ಸಾಧ್ಯವಾಗದಿದ್ದರೆ ಅತಿ ಸಡಿಲವಾಗಿ ಜಡೆಕಟ್ಟಿ ಮಲಗಬೇಕು. ರಬ್ಬರ್ ಬ್ಯಾಂಡ್ ಅಥವಾ ಕ್ಲಿಪ್ ಸರ್ವಥಾ ಸಲ್ಲದು.

ಒದ್ದೆಗೂದಲನ್ನು ಗಂಟುಕಟ್ಟಿದರೇನಾಗುತ್ತದೆ?

ಕೂದಲು ಒದ್ದೆಯಾಗಿದ್ದಾಗ ಹೆಚ್ಚು ಶಿಥಿಲವಾಗಿರುತ್ತದೆ. ಆದ್ದರಿಂದ ಕೂದಲು ಬಾಚಿಕೊಳ್ಳುವಾಗಲೂ, ಜಡೆ ಕಟ್ಟಿಕೊಳ್ಳುವಾಗಲೂ ಹೆಚ್ಚಿನ ಒತ್ತಡ ಹಾಕಬಾರದು. ಆದ್ದರಿಂದ ಕೂದಲು ಸಾಕಷ್ಟು ಒಣಗಿದ ಬಳಿಕವೇ ಜಡೆಕಟ್ಟಿ ರಬ್ಬರ್ ಬ್ಯಾಂಡ್ ಅಥವಾ ಕ್ಲಿಪ್ ತೊಡಬೇಕು.

ಗಂಟು ಹೆಚ್ಚು ಕಟ್ಟಿದಷ್ಟೂ ಹೆಚ್ಚು ಘಾಸಿಯಾಗುತ್ತದೆ

ನಿಮ್ಮ ಕೂದಲನ್ನು ಸಾಧ್ಯವಾದಷ್ಟೂ ಸಡಿಲವಾಗಿರಿಸಬೇಕು. ವಿಶೇಷವಾಗಿ ರಜಾದಿನಗಳಲ್ಲಿ ಕೂದಲನ್ನು ಇಡಿಯ ದಿನ ಸಡಿಲವಾಗಿ ಬಿಡುವುದು ಇತರ ದಿನಗಳಲ್ಲಿ ಬಿಗಿಯಾಗಿಸಿದ್ದ ಕೂದಲಿನ ಸ್ಥಿತಿಸ್ಥಾಪಕತ್ವ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಕೂದಲಿಗೆ ಘಾಸಿಯಾಗುವ ಸಾಧ್ಯತೆ ಕನಿಷ್ಠವಾಗಿಸಬಹುದು.

ಕೂದಲ ಘಾಸಿಯನ್ನು ಕಡಿಮೆಗೊಳಿಸುವ ಇತರ ವಿಧಾನಗಳು

ದಿನವೂ ನಿಮ್ಮ ಕೂದಲ ವಿನ್ಯಾಸವನ್ನು ಬದಲಿಸುತ್ತಾ ಇರಿ. ಪೋನಿ ಟೈಲ್ ನಿಂದ ಅತಿ ಹೆಚ್ಚು ಘಾಸಿಯಾಗುವ ಕಾರಣ ಈ ವಿನ್ಯಾಸವನ್ನು ಕನಿಷ್ಠಗೊಳಿಸಿ ಸಡಿಲ ಇರುವ ವಿನ್ಯಾಸಗಳನ್ನು ಹೆಚ್ಚು ಹೆಚ್ಚಾಗಿ ಆಯ್ದುಕೊಳ್ಳಿ. ಸಾಂಪ್ರಾದಾಯಿಕ ಸಡಿಲ ಜಡೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.

 

Story first published: Monday, November 14, 2016, 11:56 [IST]
English summary

What Happens When You Too Tight?

It is just impossible to deal with hair that tickles your neck and back when all you're trying to do is to focus on your work. So, the most natural thing that most women come up with is to tie their hair. Most often, you tie your hair at the same spot. However, we'll let you know on what happens when you tie your hair. So, keep reading to find out how this is bad for your hair.
Please Wait while comments are loading...
Subscribe Newsletter