ಮೊಟ್ಟೆಯ ಬಿಳಿಭಾಗ+ಆಲಿವ್ ಎಣ್ಣೆಯ ಹೇರ್ ಪ್ಯಾಕ್....

By: Arshad
Subscribe to Boldsky

ಮಹಿಳೆಯರ ಸೌಂದರ್ಯ ಪ್ರಸಾಧನಗಳ ಜಾಹೀರಾತಿನ ವೆಚ್ಚ ಆ ವಸ್ತುವಿನ ನಿಜವಾದ ಬೆಲೆಗಿಂತಲೂ ಹೆಚ್ಚಿರುತ್ತದೆಯಂತೆ. ಅಂತೆಯೇ ನೋಡಲು ಸುಂದರವಾಗಿರುವ, ಸೌಂದರ್ಯವನ್ನು ಬೊಗಸೆ ತುಂಬಿ ನೀಡುವ ಪೊಳ್ಳು ಭರವಸೆ ನೀಡುವ ನೂರಾರು ಶಾಂಪೂ, ಕಂಡೀಶನರ್, ಸೀರಮ್ ಮೊದಲಾದವು ಮಾರುಕಟ್ಟೆಯನ್ನು ತುಂಬಿವೆ.     ಕೂದಲುದುರುವ ಸಮಸ್ಯೆಗೆ ಬಿಸಿ ಎಣ್ಣೆಯ ಮಸಾಜ್...

ವಾಸ್ತವವಾಗಿ ಇವೆಲ್ಲವೂ ನೈಸರ್ಗಿಕ ಹೂವು, ಕಾಯಿ, ಹಣ್ಣುಗಳನ್ನು ಹೊಂದಿದೆ ಎಂದು ಭರ್ಜರಿಯಾಗಿ ಪ್ರಕಟಿಸಿ ಸುಂದರ ಚಿತ್ರಗಳನ್ನೂ ಉತ್ಪನ್ನದ ಮೇಲೆ ಮುದ್ರಿಸುವ ಕಾರಣ ಗ್ರಾಹಕರು ಇದು ನಿಜವಾಗಿಯೂ ನೈಸರ್ಗಿಕವೇ ಎಂದು ನಂಬಿ ಕೊಂಡುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಇವೆಲ್ಲವೂ ರಾಸಾಯನಿಕ ಆಧಾರಿತವಾಗಿದ್ದು ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ನೈಸರ್ಗಿಕ ಅಂಶವಿರುತ್ತದೆ. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಈ ರಾಸಾಯನಿಕಗಳು ತಾತ್ಕಾಲಿಕವಾಗಿ ಕೂದಲಿಗೆ ಹೊಳಪು ಆರೋಗ್ಯ ನೀಡಿದಂತೆ ಕಂಡುಬಂದರೂ ಕಾಲಕಳೆದಂತೆ ಇದರಿಂದ ಹಾನಿಯೇ ಹೆಚ್ಚು. ಆದ್ದರಿಂದ ನಿಜವಾದ ಪೋಷಣೆ ಹಾಗೂ ಶಾಶ್ವತವಾದ ಪರಿಣಾಮ ಪಡೆಯಲು ನಿಸರ್ಗದ ಪೋಷಣೆ ಪಡೆಯುವುದೇ ಸರಿಯಾದ ಕ್ರಮ. ಇದಕ್ಕೆ ಕಾಡಿಗೇನೂ ಅಲೆಯಬೇಕಾಗಿಲ್ಲ, ಅಡುಗೆ ಮನೆಗೆ ಧಾವಿಸಿದರೆ ಸಾಕು. ಕೂದಲ ಆರೈಕೆಗೆ ಉತ್ತಮವಾದ ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗ ಅತ್ಯುತ್ತಮವಾಗಿದ್ದು ಇದರ ಬಳಕೆಯ ವಿಧಾನವನ್ನು ಕೆಳಗೆ ವಿವರಿಸಲಾಗಿದೆ..

ತಯಾರಿಸುವ ವಿಧಾನ

ಒಂದು ದೊಡ್ಡಚಮಚ ಆಲಿವ್ ಎಣ್ಣೆ ಮತ್ತು ಒಂದು ಮಧ್ಯಮ ಗಾತ್ರದ ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಮಿಕ್ಸಿಯ ಚಿಕ್ಕ ಜಾರಿನಲ್ಲಿ ಹಾಕಿ ಕೆಲವು ಸೆಕೆಂಡುಗಳ ಕಾಲ ಗೊಟಾಯಿಸಿ. ಈ ಲೇಪನವನ್ನು ತಣ್ಣೀರಿನಿಂದ ತೇವಗೊಳಿಸಿ ಕೊಂಚವೇ ಒಣಗಿದ ಕೂದಲಿಗೆ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬನ್ನಿ, ಇದರ ಪ್ರಯೋಜನಗಳೇನು ಎಂಬುದನ್ನು ನೋಡೋಣ:

ಕೂದಲ ಉದುರುವಿಕೆಯನ್ನು ತಡೆಯುತ್ತದೆ

ಈ ನೈಸರ್ಗಿಕ ಲೇಪನದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನುಗಳಿದ್ದು ಇವು ಚರ್ಮದ ಒಳಗಿಳಿದು ಕೂದಲ ಬುಡದಿಂದ ಪೋಷಣೆ ನೀಡುತ್ತದೆ. ಅಲ್ಲದೆ ಕೂದಲ ಉದುರುವಿಕೆಯನ್ನು ತಡೆಯಲು ನೆರವಾಗುತ್ತದೆ.

ತುದಿಸೀಳುವ ಪ್ರಕ್ರಿಯೆ ಕೊನೆಗೊಳಿಸುತ್ತದೆ

ಕೂದಲ ಬುಡದಲ್ಲಿಯೇ ಪೋಷಣೆ ಕಡಿಮೆಯಾದರೆ ತುದಿ ವಿಪರೀತ ಒಣಗಿ ಸೀಳುಬಿಡಲು ಪ್ರಾರಂಭವಾಗುತ್ತದೆ. ಈ ಲೇಪನದ ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ಲಭಿಸಿ ಕೂದಲ ಉದ್ದವನ್ನು ಹೆಚ್ಚಿಸಲು ಮತ್ತು ಆರೋಗ್ಯಕರವಾಗಿಸಲು ನೆರವಾಗುತ್ತದೆ. ಪರಿಣಾಮವಾಗಿ ಬುಡದಿಂದ ತುದಿಯವರೆಗೂ ಯಾವುದೇ ಸೀಳಿಲ್ಲದ ಕೂದಲು ಹೊಂದಲು ಸಾಧ್ಯವಾಗುತ್ತದೆ.

ಗುಂಗುರಾಗಿ ಸಿಕ್ಕುಗೊಳ್ಳುವುದು ಇಲ್ಲವಾಗುತ್ತದೆ

ಪೋಷಣೆಯ ಕೊರತೆಯಿಂದಾಗಿ ಕೂದಲು ಗುಂಗುರಾಗಿ ಒಂದಕ್ಕೊಂದು ಸಿಕ್ಕಿಕೊಂಡು ಬಿಡಿಸಲಾರದೇ ಕಗ್ಗಂಟಾಗುತ್ತದೆ. ಈ ಲೇಪನದ ಬಳಕೆಯಿಂದ ಕೂದಲು ಆರೋಗ್ಯಕರವಾಗಿದ್ದು ಗುಂಗುರಾಗುವ ಸಿಕ್ಕುಗೊಳ್ಳುವ ಸಂಭವ ಕಡೆಮೆಯಾಗುತ್ತದೆ. ಸೌಮ್ಯವಾದರೂ ದೃಢವಾದ ಕೂದಲನ್ನು ಗಂಟುಗಳಿಂದ ಬಿಡಿಸಿಕೊಳ್ಳಲೂ ಸುಲಭವಾಗುತ್ತದೆ.

ಕೂದಲಿಗೆ ಆರ್ದ್ರತೆ ನೀಡುತ್ತದೆ

ಚರ್ಮದಂತೆ ಕೂದಲಿಗೂ ಆರ್ದ್ರತೆ ಅಗತ್ಯ. ಇದನ್ನು ಕೂದಲು ವಾತಾವರಣದಿಂದ ಪಡೆಯಲಾಗದು, ಬುಡದಿಂದಲೇ ಬರಬೇಕು. ಈ ಲೇಪನವನ್ನು ಕೂದಲ ಬುಡಕ್ಕೆ ಕೊಂಚವೇ ಮಸಾಜ್ ಮೂಲಕ ಹಚ್ಚಿದಾಗ ಉತ್ತಮ ಪ್ರಮಾಣದ ಆರ್ದ್ರತೆ ಲಭ್ಯವಾಗುತ್ತದೆ. ತನ್ಮೂಲಕ ಕೂದಲು ತುದಿಯವರೆಗೂ ಸೊಂಪಾಗಿ, ಮೃದುವಾಗಿ ರೇಷ್ಮೆಯಂತೆ ಹೊಳೆಯುತ್ತದೆ.

ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ

ಈ ನೈಸರ್ಗಿಕ ಲೇಪನದಲ್ಲಿ ಹಲವಾರು ಪೋಷಕಾಂಶಗಳಿದ್ದು ಇವು ಕೂದಲ ಬುಡ ಮತ್ತು ಕೂದಲ ಒಳಭಾಗಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ಕೂದಲು ಹೆಚ್ಚು ಹೆಚ್ಚು ದೃಢವಾಗುತ್ತಾ ಹೋಗುತ್ತದೆ. ತನ್ಮೂಲಕ ಸುಲಭವಾಗಿ ತುಂಡಾಗುವ ಸಂಭವವನ್ನು ಅಪಾರವಾಗಿ ಕಡಿಮೆ ಮಾಡುತ್ತದೆ.

ಕೂದಲಿಗೆ ಹೊಳಪನ್ನು ನೀಡುತ್ತದೆ

ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗ ಎರಡರಲ್ಲಿಯೂ ಕೂದಲಿಗೆ ಹೊಳಪು ನೀಡುವ ಗುಣವಿದ್ದು ಕೂದಲ ಹೊರಭಾಗ ನಯವಾಗಿ ಮತ್ತು ಇದರ ಹೊರಪದರಗಳು ಒಪ್ಪವಾಗಿರಲು ನೆರವಾಗುತ್ತವೆ. ಪರಿಣಾಮವಾಗಿ ಕೂದಲು ಬುಡದಿಂದ ತುದಿಯವರೆಗೆ ಗಾಢ ಕಪ್ಪು ಬಣ್ಣದಿಂದ ಹೊಳೆಯುತ್ತದೆ.

ತಲೆಹೊಟ್ಟನ್ನು ನಿವಾರಿಸುತ್ತದೆ

ತಲೆಯ ಚರ್ಮದ ಹೊರಪದರ ತೀರಾ ಒಣಗಿ ಚಿಕ್ಕ ಚಿಕ್ಕ ಪಕಳೆಗಳು ಏಳುತ್ತವೆ. ಇದೇ ತಲೆಹೊಟ್ಟು. ಈ ಚರ್ಮ ಒಣಗದೇ ಇರಲು ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗದ ಪೋಷಕಾಂಶಗಳು ನೆರವಾಗುತ್ತವೆ. ಹೆಚ್ಚಿನ ಆರ್ದ್ರತೆ ಲಭಿಸಿದ ಕಾರಣ ತಲೆಯ ಚರ್ಮದ ಹೊರಪದರ ಪಕಳೆ ಏಳುವುದಿಲ್ಲ. ಇದರಿಂದ ತಲೆಹೊಟ್ಟೂ ಇಲ್ಲವಾಗುತ್ತದೆ.  ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

ಕೂದಲ ಉದ್ದವನ್ನು ಹೆಚ್ಚಿಸುತ್ತದೆ

ಕೂದಲ ಬುಡಕ್ಕೆ ಲಭಿಸಿದ ಪೋಷಣೆಯ ಪರಿಣಾಮವಾಗಿ ಕೂದಲಿಗೆ ಉದ್ದವಾಗಿ ಬೆಳೆಯದೇ ಅನ್ಯಮಾರ್ಗವೇ ಉಳಿಯುವುದಿಲ್ಲ. ಇದರಿಂದ ದಿನೇ ದಿನೇ ಕೂದಲ ತುದಿ ಬೆನ್ನ ಕೆಳಗೆ ಧಾವಿಸುವುದನ್ನು ಕಂಡು ಹರ್ಷ ನೂರ್ಮಡಿಗೊಳ್ಳುತ್ತದೆ.

ಕೂದಲು ನಯವಾಗಿರಲು ನೆರವಾಗುತ್ತದೆ

ಕೂದಲ ಆರೋಗ್ಯವನ್ನು ಹೊರಪದರ ಎಷ್ಟು ನಯವಾಗಿದೆ ಎಂಬುದನ್ನು ನೋಡಿ ಕಂಡುಕೊಳ್ಳಬಹುದು. ಆರೋಗ್ಯಕರವಲ್ಲದ ಕೂದಲನ್ನು ಸೂಕ್ಷ್ಮವಾಗಿ ನೋಡಿದಾಗ ಇದು ಒರಟಾಗಿದ್ದು ಕೊಂಚ ದಪ್ಪ, ಕೊಂಚ ಸಪೂರ, ಕೊಂಚ ಮೊಳಕೆ ಬಂದಂತೆ ಇರುತ್ತದೆ. ಆದರೆ ಆರೋಗ್ಯಕರ ಕೂದಲು ಬುಡದಿಂದ ತುದಿಯವರೆಗೂ ನಯವಾಗಿ ಒಂದೇ ತೆರನಾದ ದಪ್ಪ ಹೊಂದಿರುತ್ತದೆ. ಈ ನೈಸರ್ಗಿಕ ಲೇಪನ ಕೂದಲನ್ನು ನಯವಾಗಿರಿಸಲು ನೆರವಾಗುತ್ತದೆ.

 

Story first published: Monday, October 3, 2016, 11:17 [IST]
English summary

What Happens When You Apply Olive Oil & Egg Whites To Your Hair?

Just add 1 tablespoon of olive oil and an egg white from 1 egg into a blender to obtain a mixture. You can apply this mixture on to your hair and leave it on for 15 minutes, before rinsing it off. So, have a look at the hair benefits of the mixture of olive oil and egg whites hair mask, here.
Please Wait while comments are loading...
Subscribe Newsletter