For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

By Suma
|

ಕೂದಲು ಉದುರುವ ಸಮಸ್ಯೆ ಯಾರಿಗಿಲ್ಲ ಹೇಳಿ? ಇದು ಪ್ರತಿಯೊಬ್ಬರನ್ನೂ ಬಿಡದೇ ಕಾಡುತ್ತಿರುವ ಸಾಮಾನ್ಯ ಸಮಸ್ಯೆ. ಕೂದಲು ಉದುರುವುದನ್ನು ನಿಲ್ಲಿಸಲು ಏನೆಲ್ಲಾ ವಿಧಾನಗಳನ್ನು ಅನುಸರಿಸಿರುತ್ತೀರಿ. ಅವರಿವರ ಅಭಿಪ್ರಾಯಗಳನ್ನು ಕೇಳಿ ಅದರಂತೆ ಅನುಸರಿಸಿರುತ್ತೀರಿ. ಆದರೂ ಸಹ ಕೂದಲು ಉದುರುವುದನ್ನು ತಡೆಯಲು ಸಾಧ್ಯವಾಗಿರುವುದಿಲ್ಲ. ಇದರಿಂದ ಬೇಸರ ಪಟ್ಟು ಅನೇಕ ರಾತ್ರಿಗಳು ನಿದ್ರೆಯಿಲ್ಲದೇ ಇದನ್ನೇ ಯೋಚಿಸುತ್ತಾ ಮಾನಸಿಕವಾಗಿ ಕುಗ್ಗಿಹೋಗಿರುತ್ತೀರಿ.

ಈ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿರುವುದನ್ನು ಕೇಳಿರುತ್ತೀವಿ. ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿವೆ, ಕಾರಣಗಳನ್ನು ಹುಡುಕುತ್ತಾ ಕಾಲಹರಣ ಮಾಡುವ ಬದಲು ನಾವು ತಿಳಿಸುವ ನೈಸರ್ಗಿಕ ವಿಧಾನವನ್ನು ಬಳಸಿದರೆ ಸಾಕು. ನಿಮ್ಮ ಸಮಸ್ಯೆಯು ನಿವಾರಣೆಯಾಗುವುದರಲ್ಲಿ ಎರಡು ಮಾತೇ ಇಲ್ಲ. ಹೌದು, ಇಂದು ನಾವು ಈರುಳ್ಳಿಯಿಂದ ಕೂದಲು ಉದುರುವುದನ್ನು ನಿಲ್ಲಿಸುವ ಅಚ್ಚರಿಯ ಸಂಗತಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಈ ವಿಧಾನದ ಬಳಕೆಯಿಂದ ನಿಮ್ಮ ಕೂದಲುಗಳ ಬೆಳವಣಿಗೆಯು ಇಮ್ಮಡಿಯಾಗಿ ಆರೋಗ್ಯಯುಕ್ತವಾದ ಕೂದಲು ಹೊಂದಲು ನೆರವಾಗುತ್ತದೆ.

ಈರುಳ್ಳಿಯಲ್ಲಿ ಸಲ್ಫರ್ ಅಂಶವು ಯಥೇಚ್ಛವಾಗಿದ್ದು, ಸುಗಮ ರಕ್ತ ಸಂಚಲನಕ್ಕೆ ನೆರವಾಗುತ್ತದೆ. ಅಲ್ಲದೇ ಕೂದಲ ಬೆಳವಣಿಗೆಗೆ ಉಪಯುಕ್ತವಾಗುವ ಕೊಲಾಜೆನ್ ಅಂಶವನ್ನು ಉತ್ಪತ್ತಿ ಮಾಡಲು ಹೆಚ್ಚು ಸಹಕಾರಿಯಾಗಲಿದೆ. ಕೇಶದ ಸಮರ್ಪಕ ಬೆಳವಣಿಗೆಗೆ ಕೊಲಾಜೆನ್ ಸತ್ವ ತುಂಬಾ ಅವಶ್ಯಕ. ಈರುಳ್ಳಿಯ ರಸ ಕೂದಲ ಬೇರುಗಳನ್ನು ಸದೃಢಗೊಳಿಸಿ, ಅದರಲ್ಲಿರುವ ಮೈಕ್ರೋಬ್ ನಿರೋಧಕ ಲಕ್ಷಣದಿಂದ ಕೇಶ ಉದುರುವುದನ್ನು ನಿಲ್ಲಿಸಿ, ನೆತ್ತಿಯ ಚರ್ಮದ ಸೋಂಕನ್ನು ನಿವಾರಿಸುತ್ತದೆ. ತಲೆಹೊಟ್ಟು ನಿವಾರಣೆಗೆ ಈರುಳ್ಳಿ ರಸವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ತಲೆಹೊಟ್ಟು ಉತ್ಪತ್ತಿಯನ್ನು ತಡೆಯಲು ಮತ್ತು ಅದರ ನಿವಾರಣೆಗೆ ಈರುಳ್ಳಿಯ ರಸ ನಿಜಕ್ಕೂ ಸಂಜೀವಿನಿಯಿದ್ದಂತೆ. ಈರುಳ್ಳಿ ರಸವನ್ನು ಅನೇಕ ರೀತಿಯಲ್ಲಿ ಬಳಸಬಹುದಾಗಿದೆ. ಕೂದಲು ಉದುರುವುದನ್ನು ತಡೆಯಲು ಈರುಳ್ಳಿ ರಸವನ್ನು ಅನೇಕ ವಿಧಾನಗಳಲ್ಲಿ ಬಳಸುವ ಸಂಗತಿಯನ್ನು ನಿಮ್ಮ ಉಪಯೋಗಕ್ಕಾಗಿ ಕೆಳಕಂಡಂತೆ ನೀಡಲಾಗಿದೆ. ಇದನ್ನು ಅನುಸರಿಸಿ ಕೂದಲು ಉದುರುವ ಸಮಸ್ಯೆಯಿಂದ ಮುಕ್ತರಾಗಿರಿ.

Ways To Use Onion Juice For Hair Loss

ಈರುಳ್ಳಿ ರಸ ಮತ್ತು ಜೇನು
ಈರುಳ್ಳಿ ರಸ ಮತ್ತು ಜೇನಿನ ಮಿಶ್ರಣ ನಿಮ್ಮ ತಲೆ ಹೊಟ್ಟು ಮತ್ತು ಕೇಶ ಉದುರುವ ಸಮಸ್ಯೆಗೆ ಹೆಚ್ಚು ಪರಿಣಾಮಕಾರಿ. ಇದು ಕೂದಲ ಬೆಳವಣೆಗೆಗೆ ಹೆಚ್ಚು ಉಪಯುಕ್ತವಾಗಿದ್ದು, ಕೂದಲ ಮರುಬಳವಣಿಗೆಗೆ ಸಹ ಸಹಕಾರಿಯಾಗಿದೆ. ಈರುಳ್ಳಿ ರಸ ಮತ್ತು ಜೇನನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೇಶಕ್ಕೆ ನಯವಾಗಿ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಸ್ವಚ್ಛಗೊಳಿಸಿ.

ಈರುಳ್ಳಿ ರಸ ಮತ್ತು ಬಾದಾಮಿ ತೈಲ
ಬಾದಾಮಿ ತೈಲವು ನಿಮ್ಮ ಕೇಶಕ್ಕೆ ಹೊಳಪನ್ನು ನೀಡುತ್ತದೆ. ಇದನ್ನು ಈರುಳ್ಳಿಯ ರಸದೊಂದಿಗೆ ಬೆರೆಸಿ ಹಚ್ಚಿದಲ್ಲಿ ಕೇಶ ಉದುರುವ ಸಮಸ್ಯೆಯು ನಿವಾರಣೆಯಾಗಿ, ಒಳಗಿನಿಂದಲೇ ಶಕ್ತಿ ನೀಡಿ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಹೆಚ್ಚು ನೆರವಾಗುತ್ತದೆ.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ
ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಈರುಳ್ಳಿ ರಸ ಮತ್ತು ಆಲಿವ್ ತೈಲ
ಕೇಶ ಉದುರುವುದನ್ನು ನಿಲ್ಲಿಸಲು ಈರುಳ್ಳಿ ರಸ ಮತ್ತು ಆಲಿವ್ ತೈಲದ ಮಿಶ್ರಣ ಹೆಚ್ಚು ಪರಿಣಾಮಕಾರಿ. ಮೊದಲಿಗೆ ಆಲಿವ್ ತೈಲವನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಯ ಚರ್ಮದ ಭಾಗಕ್ಕೆ ನಯವಾಗಿ ಹಚ್ಚಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶ್ಯಾಂಪೂವಿನಿಂದ ಸ್ವಚ್ಛಗೊಳಿಸಿ.

ಈರುಳ್ಳಿ ರಸ ಮತ್ತು ಬಿಸಿ ನೀರು
ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ ಬಳಸಬಹುದು. ಅಗತ್ಯದಷ್ಟು ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಒಂದೇ ತಿಂಗಳಲ್ಲಿ ಅದರ ವ್ಯತ್ಯಾಸ ನಿಮಗೇ ತಿಳಿಯುತ್ತದೆ.

English summary

Ways To Use Onion Juice For Hair Loss

Hair loss or hair thinning is a common problem we all go through, irrespective of the age groups. Hair loss gives us sleepless nights and can even lead to stress. Now, you don't have to fret! In this article, we will be sharing with you an amazing ingredient and its wonderful uses for the treatment of hair loss.
X
Desktop Bottom Promotion