For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ 'ಅಲೋವೆರಾ ಹೇರ್' ಪ್ಯಾಕ್

By Manu
|

ಕೂದಲು ಉದುರುವ ಸಮಸ್ಯೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಕಾಡುತ್ತಲಿದೆ. ಕಲುಷಿತ ವಾತಾವರಣ, ನೀರು, ಕೆಟ್ಟ ಆಹಾರ ಕ್ರಮ ಮೊದಲಾದವುಗಳು ಕೂದಲು ಉದುರಲು ಕಾರಣವಾಗಿದೆ. ಇದರಿಂದಾಗಿ ಕೆಲವರು ಕೂದಲಿಗೆ ಕೈಹಾಕಲು ಹೆದರುತ್ತಾರೆ.

ಕೂದಲಿಗೆ ಕೈ ಹಾಕಿದರೆ ಕೂದಲು ಉದುರಿ ಕೈಯಲ್ಲಿಯೇ ಬರುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಶಾಂಪೂಗಳನ್ನು ಬಳಸಿಕೊಂಡರೂ ಕೂದಲು ಉದುರುವ ಸಮಸ್ಯೆ ಮಾತ್ರ ಸರಿಯಾವುದಿಲ್ಲ. ಇದಕ್ಕಾಗಿಯೇ ಮನೆಯಲ್ಲಿಯೇ ಯಾವುದೇ ರಾಸಾಯನಿಕ ಬಳಸದೆ ತಯಾರಿಸುವ ಹೇರ್ ಪ್ಯಾಕ್ ಅನ್ನು ಬಳಸಿ ನೋಡಿ.

Aloe Vera

ಅಲೋವೆರಾವನ್ನು ಅಥವಾ ಲೋಳೆಸರವನ್ನು ಬಳಸಿಕೊಂಡು ತಯಾರಿಸುವ ಹೇರ್ ಪ್ಯಾಕ್ ನಿಂದ ಕೂದಲು ಉದುರುವುದು ಕಡಿಮೆಯಾಗುವುದು. ಅಲೋವೆರಾದ ಗಿಡದಲ್ಲಿ ಶೇಕಡಾ 96ರಷ್ಟು ನೀರಿದೆ. 18ರಿಂದ 20ರಷ್ಟು ಆಮಿನೋ ಆ್ಯಸಿಡ್ ಇದೆ. ಪ್ರಮುಖವಾದ ಪ್ರೋಟೀನ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ. ಕೂದಲು ಉದುರುವಿಕೆ ತಡೆಯಲು ಇಲ್ಲಿದೆ ಮನೆಮದ್ದು

ಈ ಹೇರ್ ಪ್ಯಾಕ್ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲಿಗೆ ರೇಷ್ಮೆಯಂತಹ ಕಾಂತಿಯನ್ನು ನೀಡಿ, ಬೇರನ್ನು ಬಲಗೊಳಿಸುವುದು. ಅಲೋವೆರಾ ಮಾಸ್ಕ್ ಅನ್ನು ತಯಾರಿಸುವ ವಿಧಾನಗಳನ್ನು ತಿಳಿದುಕೊಳ್ಳಿ.

ಅಲೋವೆರಾ ಮತ್ತು ಲಿಂಬೆರಸ
*ಒಂದು ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಲಿಂಬೆರಸವನ್ನು ಹಾಕಿ.
* ಕೂದಲನ್ನು ಸರಿಯಾಗಿ ಒಣಗಿಸಿ. ಹೇರ್ ಪ್ಯಾಕ್ ಅನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ.
* 15 ನಿಮಿಷ ಬಿಟ್ಟು ತಂಪಾದ ನೀರಿನಿಂದ ತಲೆಗೆ ಸ್ನಾನ ಮಾಡಿ.

ಅಲೋವೆರಾ , ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ
* ಒಂದು ಚಮಚ ತಾಜಾ ಅಲೋವೆರಾ ಜೆಲ್ ಅನ್ನು ಒಂದು ಚಮಚ ಈರುಳ್ಳಿ ರಸ ಮತ್ತು ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
* ಇದನ್ನು ಒಂದು ತವಾಗೆ ಹಾಕಿಕೊಂಡು 15 ನಿಮಿಷಗಳ ಕಾಲ ಬಿಸಿ ಮಾಡಿ.
* ಇದನ್ನು ಕೂದಲಿಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.
* ರಾತ್ರಿ ಪೂರ್ತಿ ಹಾಗೆ ಬಿಡಿ ಮತ್ತು ಬೆಳಿಗ್ಗೆ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಅಲೋವೆರಾ, ಮೊಟ್ಟೆ ಮತ್ತು ಮೊಸರು
* ಒಂದು ಪಿಂಗಾಣಿಗೆ ಮೊಟ್ಟೆಯನ್ನು ಹಾಕಿ ಬಿಳಿ ಲೋಳೆಯನ್ನು ತೆಗೆಯಿರಿ.
* ಮೊಟ್ಟೆಯ ಬಿಳಿ ಲೋಳೆಗೆ ಒಂದು ಚಮಚ ಮೊಸರು ಹಾಗೂ ಒಂದು ಚಮಚ ಅಲೋವೆರಾ ಜೆಲ್ ಹಾಕಿಕೊಳ್ಳಿ.
* ಇದು ಸರಿಯಾಗಿ ಮಿಶ್ರಣವಾಗುವ ತನಕ ಕಳಸಿಕೊಳ್ಳಿ. ಇದನ್ನು ತೆಳುವಾಗಿ ಕೂದಲಿಗೆ ಹಚ್ಚಿಕೊಳ್ಳಿ.
* 40 ನಿಮಿಷ ಕೂದಲನ್ನು ಹಾಗೆ ಬಿಟ್ಟು ಬಳಿಕ ಶಾಂಪೂವಿನಿಂದ ತೊಳೆಯಿರಿ.
* ಉತ್ತಮ ಫಲಿತಾಂಶವನ್ನು ಪಡೆಯಲು ಅಲೋವೆರಾದ ಹೇರ್ ಪ್ಯಾಕ್ ಅನ್ನು ವಾರದಲ್ಲಿ ಎರಡು ಸಲ ಬಳಿಸಿಕೊಳ್ಳಿ.

English summary

Ways To Use Aloe Vera For Hair Loss

About 9 out of 10 people are scared to touch their hair. Reason? Rapidly falling hair! If you are at the end of your nerves and are desperate for that one solution that actually shows result. We have one suggestion for you and that is aloe vera hair mask for hair fall.
Story first published: Friday, September 23, 2016, 20:18 [IST]
X
Desktop Bottom Promotion