For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದು!

By Manu
|

ಕೂದಲು ಬಿಳಿಯಾಗುವುದು ವಯಸ್ಸಾಗುವುದರ ಲಕ್ಷಣವೆನ್ನಬಹುದು. ಹಿಂದಿನ ಕಾಲದಲ್ಲಿ 50 ವರ್ಷ ದಾಟಿದ ಬಳಿಕ ಕಪ್ಪು ಕೂದಲು ನಿಧಾನವಾಗಿ ಬಳಿಯಾಗುತ್ತಿತ್ತು. ಆದರೆ ಆಧುನಿಕ ಜೀವನ ಶೈಲಿ, ಕಲುಷಿತ ವಾತಾವರಣ ಮತ್ತು ಅನಾರೋಗ್ಯಕರ ಆರೋಗ್ಯ ಕ್ರಮದಿಂದಾಗಿ ಹೀಗೀಗ 30ರ ಹರೆಯದವರಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ಕಾಣಬಹುದು.

ಕೆಲವೊಂದು ಸಮೀಕ್ಷೆಗಳ ಪ್ರಕಾರ ಅಮೆರಿಕನ್ನರು ತಮ್ಮ ಮೂವತ್ತೈದನೇ ಪ್ರಾಯದಲ್ಲಿ ಕೂದಲ ಬಣ್ಣ ಕಳೆದುಕೊಂಡರೆ ಏಷ್ಯನ್ನರು ಮೂವತ್ತೆಂಟು ಮೂವತ್ತೊಂಬತ್ತರ ವಯಸ್ಸಿನಲ್ಲಿ ಬಿಳಿಕೂದಲ ತೊಂದರೆಯನ್ನು ಅನುಭವಿಸುತ್ತಾರೆ. ಆಫ್ರಿಕನ್ ಹಾಗೂ ಅಫ್ರಿಕನ್ ಅಮೆರಿಕನ್ ಸಂಜಾತರ ತಲೆಗೂದಲು ನಲವತ್ತೈದರ ಬಳಿಕ ನೆರೆಯುತ್ತದೆ. ಬಿಳಿ ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು ಸಂಗತಿ

Ways To Prevent Premature Greying

ಕೂದಲಿಗೆ ಕಪ್ಪುಬಣ್ಣ ಬರಲು ಮೆಲನಿನ್ ಎಂಬ ವರ್ಣದ್ರವ್ಯ ಕಾರಣ. ಈ ಮೆಲನಿನ್ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ ಪರಿವರ್ತಿತವಾಗಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಆದರೆ ನಮ್ಮ ಯಾವ ಆಹಾರದಿಂದ ಹೈಡ್ರೋಜನ್ ಪೆರಾಕ್ಸೈಡ್ ಕೂದಲಿಗೆ ಬರುತ್ತದೆ? ಇದನ್ನು ತಡೆಯುವುದು ಹೇಗೆ? ಈಗಾಗಲೇ ಬಿಳಿಯಾಗಿರುವ ಕೂದಲನ್ನು ಮತ್ತೆ ಒಂದೇ ತಿಂಗಳಿನಲ್ಲಿ ಕಪ್ಪಗಾಗಿಸುವುದು ಹೇಗೆ ಎಂದು ಕುತೂಹಲಗಳನ್ನು, ಇಲ್ಲಿ ನೀಡಿರುವ ಮನೆಮದ್ದುಗಳು ಸಾಬೀತುಪಡಿಸಲಿವೆ, ಮುಂದೆ ಓದಿ...

ಕೊಬ್ಬರಿ ಎಣ್ಣೆ+ಬೇವಿನ ಎಲೆ
ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ಬ್ಲ್ಯಾಕ್ ಟೀ

ಒಂದು ಕಪ್ ನೀರಿನಲ್ಲಿ ಮೂರು ಅಥವಾ ನಾಲ್ಕು ಚಮಚ ಕಪ್ಪು ಟೀ ಹಾಕಿ ಕುದಿಸಿ. ಬಳಿಕ ಒಂದು ಟೇಬಲ್ ಚಮಚದಷ್ಟು ಉಪ್ಪನ್ನು ಹಾಕಿ ಟೀಪುಡಿಯನ್ನು ಸೋಸಿ. ಪ್ರತಿದಿನ ಈ ನೀರನ್ನು ಕೂದಲಿಗೆ ಹಚ್ಚಿಕೊಂಡುಒಂದು ಗಂಟೆಯ ಬಳಿಕ ಸ್ನಾನ ಮಾಡುವ ಮೂಲಕ ನೆರೆಗೂದಲಿಗೆ ಉತ್ತಮ ಪರಿಣಾಮವನ್ನು ಪಡೆಯಬಹುದು.

ಈರುಳ್ಳಿ ರಸ

ಈರುಳ್ಳಿಯ ರಸವನ್ನು ಹಿಂಡಿಹೊಂಡು ಸ್ವಲ್ಪವಾಗಿಯೇ ಕೂದಲ ಬುಡಕ್ಕೆ ಹಚ್ಚಿ ಮಾಲಿಶ್ ಮಾಡುವುದರಿಂದ ಕೂದಲು ನೆರೆಯದಂತೆ ತಡೆಯಬಹುದು ಹಾಗೂ ಕೂದಲುದುರುವುದನ್ನೂ ತಡೆಯಬಹುದು.

ತೆಂಗಿನ ಎಣ್ಣೆ
ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಕೂದಲಿಗೆ ರಕ್ತ ಸಂಚಲನವನ್ನು ಹೆಚ್ಚು ಮಾಡಿ ಬೆಳವಣಿಗೆಗೆ ನೆರವಾಗುವುದು. ಇದರಿಂದ ನಿಮ್ಮ ಕೂದಲು ನೈಸರ್ಗಿಕ ಬಣ್ಣವನ್ನು ಪಡೆಯುವುದು.

ಮೆಹೆಂದಿ ಮತ್ತು ಮೊಸರು
ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.


ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಇತ್ತ ಗಮನಿಸಿ

ಸೀಬೆ (ಪೇರಲೆ ಮರದ ಎಲೆ)
ಮರದ ಎಲೆಗಳನ್ನು ತಣ್ಣೀರಿನೊಂದಿಗೆ ನಯವಾಗಿ ಅರೆದು ಬಿಳಿ ಕೂದಲಿಗೆ ಪ್ರತಿದಿನ ಹಚ್ಚುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪುಬಣ್ಣ ಪಡೆಯುತ್ತದೆ.

English summary

Ways To Prevent Premature Greying

Greying of hair starts in the early to mid-thirties in most Indians. But sometimes, a silver hair randomly crops up and can be a really disturbing sight for most people. Grey hair eventually is inevitable. But the early onset of grey hair can be avoided. It is normally associated with old age, but these days can be seen in young people too.
Story first published: Thursday, July 21, 2016, 20:28 [IST]
X
Desktop Bottom Promotion