For Quick Alerts
ALLOW NOTIFICATIONS  
For Daily Alerts

ಕೂದಲು ಬೇಗನೇ ಬೆಳೆಯಬೇಕೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

By Manu
|

ಯಾವುದೋ ಕಾರಣದಿಂದ ಹಿಂದಿನ ಬಾರಿ ಕೂದಲು ಕತ್ತರಿಸಿಕೊಂಡ ಬಳಿಕ ಹಿಂದಿನಷ್ಟು ಬೇಗನೇ ಬೆಳೆಯುತ್ತಿಲ್ಲವೇ? ಸಾಮಾನ್ಯವಾಗಿ ಪ್ರತಿ ಬಾರಿ ಕೂದಲ ತುದಿಯನ್ನು ಕತ್ತರಿಸಿಕೊಂಡ ಕೆಲವೇ ದಿನಗಳಲ್ಲಿ ಮತ್ತೆ ಬೆಳೆಯುತ್ತಿದ್ದುದು ಈಗ ಆ ವೇಗ ಕಾಣಿಸುತ್ತಿಲ್ಲವೇ? ಹಾಗಾದರೆ ಇದಕ್ಕೆ ನೀವು ಈಗ ಬಳಸುತ್ತಿರುವ ಕೆಲವು ಪ್ರಸಾಧನಗಳಲ್ಲಿರುವ ರಾಸಾಯನಿಕಗಳು ಕಾರಣವಿರಬಹುದು. ಇದರಿಂದ ಕೂದಲನ್ನು ಕಳೆದುಕೊಳ್ಳುವ, ಬಕ್ಕತಲೆ ಆವರಿಸುವ ಸಾಧ್ಯತೆಗಳೂ ಬಹುವಾಗಿಯೇ ಹೆಚ್ಚುತ್ತವೆ.

ಈ ರೀತಿಯಾಗಿ ತಮ್ಮ ಕೂದಲನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ಇದನ್ನು ಮೊದಲಿನಂತಾಗಿಸುವುದೇ ಒಂದು ಕನಸಾಗಿರುತ್ತದೆ. ಹಿಂದಿನ ಕಾಲದಲ್ಲಿ ಕೂದಲನ್ನು ಕತ್ತರಿಸುವುದು ಎಂದರೆ ಸೌಂದರ್ಯವನ್ನು ಕಳೆದುಕೊಳ್ಳುವುದು ಎಂದಿತ್ತು. ಅಂತೆಯೇ ಮಹಿಳೆಯರೂ, ಪುರುಷರೂ ತಮ್ಮ ಕೂದಲನ್ನು ಸಾಧ್ಯವಾದಷ್ಟು ಉದ್ದಕ್ಕೆ ಬಿಡುತ್ತಿದ್ದರು. ಮಹಾಭಾರತ ಗ್ರಂಥದಲ್ಲಿನ ಪಾತ್ರಗಳ ಚಿತ್ರಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಆದರೆ ಇಂದು ನಮ್ಮ ಆದ್ಯತೆಗಳು ಸಮಾಜದ ಬದಲಾವಣೆಗೆ ತಕ್ಕಂತೆ ಬದಲಾಗುತ್ತಿವೆ. ನಮ್ಮ ಬದಲಾದ ಜೀವನಶೈಲಿಯೂ ಕೂದಲ ಮೇಲೆ ಪ್ರಭಾವ ಬೀರುತ್ತಿದೆ.

Try This Simple Home Remedy To Grow Hair Faster!

ಒಂದು ವೇಳೆ ನಮ್ಮ ಆರೈಕೆಯ ಕೊರತೆಯಿಂದ ಕೂದಲು ಉದುರಿದ್ದು ಬೆಳವಣಿಗೆ ಕುಂಠಿತವಾಗಿದ್ದರೆ ಇದನ್ನು ಸರಿಪಡಿಸಲು ಸಾಧ್ಯವಿದೆ. ಆದರೆ ಅನುವಂಶಿಕ ಕಾರಣಗಳಿಂದ ಕೂದಲು ಉದುರುತ್ತಿದ್ದರೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ಆದಷ್ಟು ತಡವಾಗಿಸಬಹುದು. ಯಾವುದೇ ಸಂದರ್ಭದಲ್ಲಿ ನಮ್ಮ ಆಹಾರಕ್ರಮವನ್ನು ಉತ್ತಮಗೊಳಿಸುವುದು, ಸರಿಯಾದ ಕ್ರಮದಲ್ಲಿ ಕೂದಲಿಗೆ ಆರೈಕೆ ಮತ್ತು ಪೋಷಣೆ ನೀಡುವ ಮೂಲಕ ಕಳೆದುಕೊಂಡಿದ್ದ ಆ ಸುಂದರ ಕೂದಲನ್ನು ಮತ್ತೆ ಪಡೆಯಬಹುದು. ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಇಲ್ಲಿದೆ ಟಿಪ್ಸ್

ಈ ನಿಟ್ಟಿನಲ್ಲಿ ಸಮರ್ಥ ಮತ್ತು ಫಲಪ್ರಧವಾದ ವಿಧಾನವೊಂದಿದ್ದು ಇದರ ಮೂಲಕ ಕೂದಲ ಬೆಳವಣಿಗೆಯ ವೇಗವನ್ನು ಹೆಚ್ಚಿಸಬಹುದು. ಇದಕ್ಕಾಗಿ ಹೆಚ್ಚೇನೂ ಬೇಕಾಗಿಲ್ಲ, ಮನೆಯಲ್ಲಿಯೇ ತಯಾರಿಸಬಹುದಾದ ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣವೇ ಸಾಕು. ಕೂದಲ ಲೇಪನ ತಯಾರಿಸುವ ವಿಧಾನ:

ಅಗತ್ಯವಿರುವ ಸಾಮಾಗ್ರಿಗಳು
*ಆಲಿವ್ ಎಣ್ಣೆ: ಒಂದು ದೊಡ್ಡಚಮಚ
*ಮೊಟ್ಟೆಯ ಹಳದಿಭಾಗ: ಎರಡು ದೊಡ್ಡಚಮಚ

ಕೂದಲು ಉದುರಲಿಕ್ಕೆ ಒಂದು ಪ್ರಮುಖ ಕಾರಣವೆಂದರೆ ವಿಟಮಿನ್ ಇ ಕೊರತೆ. ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ಕೂದಲಿಗೆ ಹಚ್ಚಿಕೊಂಡಾಗ ಕೂಲದ ಬುಡಕ್ಕೆ ಪೋಷಣೆ ಒದಗಿಸಲು

ಸಮರ್ಥವಾಗಿದೆ. ಮೊಟ್ಟೆಯ ಹಳದಿಭಾಗದಲ್ಲಿಯೂ ಕೂದಲ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಿದ್ದು ಈ ಎರಡರ ಜೋಡಿ ಕೂದಲನ್ನು ಬೇಗನೇ ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ಕೂದಲು ವೇಗವಾಗಿ ಬೆಳೆಯಬೇಕೇ? ಹೀಗೆ ಮಾಡಿ

ಒಂದು ವೇಳೆ ಆರೈಕೆಯ ಕೊರತೆಯಿಂದ ಕೂದಲು ಉದುರಿದ್ದು ಬಕ್ಕತಲೆ ಆವರಿಸಿದ್ದಲ್ಲಿ ಆಲಿವ್ ಎಣ್ಣೆ ಈ ಸ್ಥಿತಿಯಿಂದ ಹಿಂದಕ್ಕೆ ಬರಲು ನೆರವಾಗುತ್ತದೆ. ಇದಕ್ಕೆ ಮೊಟ್ಟೆಯಲ್ಲಿನ ಪ್ರೋಟೀನುಗಳು ನೆರವಾಗುತ್ತವೆ. ಈ ಪರಿಸ್ಥಿತಿಗೆ ಒಳಗಾದವರಿಗೆ ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣದ ಲೇಪನ ಅಧ್ಬುತಗಳನ್ನೇ ಸಾಧಿಸಲು ನೆರವಾಗುತ್ತದೆ.

ತಯಾರಿಸುವ ವಿಧಾನ
*ಒಂದು ಬೋಗುಣಿಯಲ್ಲಿ ಈ ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ.
*ಈಗತಾನೇ ತೊಳೆದು ಒಣಗಿಸಿಕೊಂಡ ಕೂದಲನ್ನು ಹರಡಿ ಬುಡದಿಂದ ತುದಿಯವರೆಗೆ ಈ ಲೇಪನವನ್ನು ಹಚ್ಚಿ.
*ಕೂದಲ ಬುಡಕ್ಕೆ ಹೆಚ್ಚು ತಗಲುವಂತೆ ಕೊಂಚ ಮಸಾಜ್ ಮೂಲಕ ಹಚ್ಚಿ
*ಕೂದಲ ತುದಿಗಳಿಗೆಲ್ಲಾ ಹಚ್ಚಿದ ಬಳಿಕ ಮತ್ತೊಮ್ಮೆ ಕೂದಲ ಬುಡಕ್ಕೆ ನಯವಾದ ಮಸಾಜ್ ಮಾಡಿ.
*ಸುಮಾರು ಅರ್ಧಗಂಟೆ ಕಾಲ ಕೂದಲನ್ನು ಹರಡಿ ಒಣಗಲು ಬಿಡಿ.
*ಬಳಿಕ ಸೌಮ್ಯ ಶಾಂಪೂ ಮತ್ತು ತಣ್ಣೀರು, ತಣ್ಣೀರು ಸಾಧ್ಯವಾಗದಿದ್ದರೆ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಬೇಡ, ಏಕೆಂದರೆ ಬಿಸಿನೀರು ಕೂದಲ ಬುಡ ಹೀರಿಕೊಂಡಿದ್ದ ಪೋಷಕಾಂಶಗಳನ್ನು ಮತ್ತೆ ನಿವಾರಿಸಿಬಿಡುತ್ತದೆ.

English summary

Try This Simple Home Remedy To Grow Hair Faster!

Do you feel that your hair has not grown an inch since your last hair cut? Are you yearning for long, healthy hair, so that you can try trendy new hair-dos? Are you experiencing baldness or hair loss? Well, it is quite a natural desire to want to have a lovely, long mane that can be the talk of the town! Did you know that during the ancient times long, healthy hair was the sign of exceptional beauty, and that too for men and women alike! Well, the times have changed now, and our unhealthy lifestyles make it a tad harder for us to maintain the health of our tresses.
X
Desktop Bottom Promotion