For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ ನೆಲ್ಲಿಕಾಯಿ-ತೆಂಗಿನಎಣ್ಣೆಯ ಚಿಕಿತ್ಸೆ

By Suma
|

ಕೂದಲ ಆರೈಕೆ ಎಲ್ಲರ ಹೊಣೆಗಾರಿಕೆ. ಇತ್ತೀಚೆಗಂತೂ ವಿಶೇಷವಾಗಿ ಮಹಿಳೆಯರು ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಆದರೆ ಕೆಲವು ತಪ್ಪು ತಿಳುವಳಿಕೆಗಳಿಂದ ಅರಿಯದ ರಾಸಾಯನಿಕ ಉತ್ಪನ್ನಗಳನ್ನು ಕೂದಲ ಆರೈಕೆಗೆ ಬಳಸಿ ಅಪೇಕ್ಷಿಸಿದ ಫಲಿತಾಂಶ ಹೊಂದದೆ ನಿರಾಸೆ ಅನುಭವಿಸುತ್ತಿದ್ದಾರೆ ಅಲ್ಲದೇ ಈ ರಾಸಾಯನಿಕ ವಿಧಾನಗಳಿಂದ ಅಡ್ಡಪರಿಣಾಮಗಳು ಉಂಟಾಗಿ ಇನ್ನು ಹೆಚ್ಚಿನ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯ ಸುಲಭ ಪರಿಹಾರಕ್ಕಾಗಿ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಹೆಚ್ಚು ಸೂಕ್ತ. ಏಕೆಂದರೆ ನೈಸರ್ಗಿಕ ವಿಧಾನಗಳಲ್ಲಿ ಪರಿಣಾಮಕಾರಿಯಾಗಿ ಸಮಸ್ಯೆ ನಿವಾರಣೆಯಾಗುವುದಲ್ಲದೇ ಅಡ್ಡಪರಿಣಾಮಗಳು ಬರದಂತೆ ನೋಡಿಕೊಳ್ಳುತ್ತದೆ.

ಈ ಲೇಖನದಲ್ಲಿ ಕೂದಲುದುರುವ ಸಮಸ್ಯೆಗೆ ನೈಸರ್ಗಿಕ ವಿಧಾನದ ಪರಿಹಾರವನ್ನು ಸೂಚಿಸಲಾಗಿದೆ. ಕೂದಲುಗಳ ಉದುರುವಿಕೆಗೆ ಅನೇಕ ಕಾರಣಗಳಿದ್ದು, ಮುಖ್ಯವಾಗಿ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಅಂಶಗಳು ಕಾರಣಗಳಾಗಿವೆ. ನೀವು ಕೂದಲು ಬಾಚಿಕೊಳ್ಳುವಾಗ ಬಾಚಣಿಗೆಯಲ್ಲಿ ಅನೇಕ ಕೂದಲ ತುಂಡುಗಳನ್ನು ಕಂಡಲ್ಲಿ, ನಿಧಾನಿಸದಿರಿ. ನಾವು ಈ ಲೇಖನದಲ್ಲಿ ತಿಳಿಸಿರುವ ನೈಸರ್ಗಿಕವಾದ ಕೇಶದ ಮಾಸ್ಕ್ ಅನ್ನು ಉಪಯೋಗಿಸಿ ಕೂದಲುದುರುವ ಸಮಸ್ಯೆಯಿಂದ ಮುಕ್ತರಾಗಿ.

Try this amla and coconut oil hair mask to control hairfall

*ಮೊದಲು ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಬಟ್ಟಲಿನಲ್ಲಿ ಹಾಕಿಕೊಳ್ಳಿ
*ಇದಕ್ಕೆ ಎರಡು ಚಮಚ ಕಚ್ಚಾ ಅಥವಾ ಸಂಸ್ಕರಿಸಿದ ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತೆಂಗಿನ ಎಣ್ಣೆಯು ಗಟ್ಟಿಯಾಗಿದ್ದಲ್ಲಿ ಅದಕ್ಕೆ ಮೈಕ್ರೊವೇವ್ ನಲ್ಲಿ ಕರಗಲು ಶಾಖ ಕೊಡಿ.
*ನಂತರ 1 ಚಮಚ ಹರಳೆಣ್ಣೆಯನ್ನು ಬೆರೆಸಿಕೊಳ್ಳಿ.
*ಅಂತಿಮವಾಗಿ 4 ರಿಂದ 5 ಹನಿ ರೋಸ್ ಮೆರಿ ತೈಲವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
*ನಿಮ್ಮ ಕೂದಲಿಗೆ ಮಾಸ್ಕ್ ಇದೀಗ ಸಿದ್ಧ.

ಉಪಯೋಗಿಸುವ ಕ್ರಮ
*ಬ್ರಶ್‌ನ ಸಹಾಯದಿಂದ ಕ್ರಮವಾಗಿ ಸಮವಾಗಿ ನೆತ್ತಿಯ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ.
*ಸಂಪೂರ್ಣವಾಗಿ ತಲೆಯ ಚರ್ಮಕ್ಕೆ ಹಚ್ಚಿಕೊಂಡಿರುವುದನ್ನು ಖಚಿತಪಡಿಸಿಕೊಂಡು, ಶವರ್ ಕ್ಯಾಪ್ ಅನ್ನು ಬಳಸಿ ಮುಚ್ಚಿಕೊಳ್ಳಿ.
*ನಂತರ ಸುಮಾರು 2 ಗಂಟೆಗಳ ಕಾಲ ಹಾಗೆಯೇ ಬಿಟ್ಟು ಸೌಮ್ಯವಾದ ಶಾಂಪೂವಿನಿಂದ ಸ್ವಚ್ಛಗೊಳಿಸಿ.

ಪ್ರಯೋಜನಗಳು
*ನೆಲ್ಲಿಕಾಯಿ ಪುಡಿಯಲ್ಲಿ ವಿಟಮಿನ್ ಸಿ ಸತ್ವವಿದ್ದು, ಕೂದಲ ಉತ್ಪತ್ತಿ ಮತ್ತು ಸಮೃದ್ಧ ಬೆಳವಣಿಗೆಗೆ ನೆರವಾಗುತ್ತದೆ.
*ತೆಂಗಿನ ಎಣ್ಣೆಯು ಚರ್ಮದ ಒಳಭಾಗಕ್ಕೆ ಹರಿದು ಒಳಗಿನಿಂದಲೇ ತೇವಾಂಶವನ್ನು ನೀಡುತ್ತದೆ. ಇದರಿಂದ ಕೇಶವು ಕಾಂತಿಯುಕ್ತಗೊಂಡು ನಳನಳಿಸುತ್ತದೆ.
*ಹರಳೆಣ್ಣೆಯಲ್ಲಿ ವಿಟಮಿನ್ ಇ ಮತ್ತು ಒಮೆಗಾ 6 ಮತ್ತು 9 ಅವಶ್ಯಕ ಬೊಜ್ಜಿನ ಅಂಶಗಳಿದ್ದು, ಕೂದಲುದುರುವಿಕೆಯನ್ನು ಮತ್ತು ಕೂದಲು ತುಂಡಾಗುವುದನ್ನು ತಡೆದು ಕೂದಲು ಸದೃಢಗೊಳ್ಳಲು ನೆರವಾಗುತ್ತದೆ.
*ರೋಸ್ ಮೆರಿ ತೈಲವು ನೆತ್ತಿಯ ಚರ್ಮದಲ್ಲಿ ರಕ್ತ ಚಲನವನ್ನು ಸುಗಮಗೊಳಿಸಿ ಕೇಶದ ಶೀಘ್ರ ಬೆಳವಣಿಗೆಗೆ ನೆರವಾಗುತ್ತದೆ. ಇದರಲ್ಲಿರುವ ಸತ್ವವು ಕೇಶಕ್ಕೆ ಹೆಚ್ಚಿನ ಆರೈಕೆ ನೀಡುವುದಲ್ಲದೆ ನಳನಳಿಸುವಂತೆ ಮಾಡುತ್ತದೆ. ಈ ವಿಧಾನವನ್ನು ಒಂದು ತಿಂಗಳ ಕಾಲ ವಾರಕ್ಕೆ ಎರಡು ಬಾರಿ ಅನುಸರಿಸಿದರೆ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ.

English summary

Try this amla and coconut oil hair mask to control hairfall

Who doesn’t like to have the long, black tresses? But factors like lack of moisture and unhealthy food and lifestyle habits causes the hair to fall. All these also reduce its sheen and make them look frizzy and dull. If you have been seeing a lot of hair strands on your comb of late, you could try using this all-natural hair mask to control hair fall.
Story first published: Friday, February 12, 2016, 9:39 [IST]
X
Desktop Bottom Promotion