For Quick Alerts
ALLOW NOTIFICATIONS  
For Daily Alerts

ಉದ್ದನೆಯ ಕೂದಲನ್ನು ಹೊಂದಲು ಆರೈಕೆ ಹೀಗಿರಲಿ

By CM Prasad
|

ನಾವು ಕೆಲವು ಸಮಾರಂಭಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅಥವಾ ನಮ್ಮ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದಾಗ ಉದ್ದನೆಯ ಕೂದಲು ಹೊಂದಿದವರನ್ನು ನೋಡಿ ಅಸೂಯೆಯುಂಟಾಗುತ್ತದೆ ಹಾಗೂ ನಮ್ಮ ಕಿರಿದಾದ ಕೂದಲನ್ನು ಕಂಡು ಬೇಸರವಾಗುತ್ತದೆ. ಇದು ಮಾನಸಿಕವಾಗಿಯೂ ಸಹ ದುರ್ಬಲಗೊಳ್ಳುವಂತೆ ಮಾಡುತ್ತದೆ.

ಆತ್ಮವಿಶ್ವಾಸವನ್ನು ಕುಗ್ಗಿಸಿ ಹತಾಶೆಯನ್ನುಂಟು ಮಾಡುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರವಿಲ್ಲ ಎಂದುಕೊಳ್ಳಬೇಡಿ. ನಿಮ್ಮ ಕೂದಲು ಹೆಚ್ಚು ಬೆಳವಣಿಗೆಯಾಗುತ್ತಿಲ್ಲದಿರುವ ಬಗ್ಗೆ ಚಿಂತಿಸದಿರಿ. ಇದಕ್ಕೆ ಅನೇಕ ಕಾರಣಗಳಿದ್ದು, ನೀವು ಬಳಸುವ ಬಣ್ಣದ ಕೂದಲ ಡೈಗಳು ಅಥವಾ ಲೇಪನಗಳು. ಇದರಲ್ಲಿರುವ ಬಣ್ಣಗಳು ದೀರ್ಘಕಾಲದಲ್ಲಿ ನಿಮ್ಮ ಕೂದಲ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತವೆ. ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಇಲ್ಲಿದೆ ಟಿಪ್ಸ್

ಇದರಿಂದ ನಿಮ್ಮ ಕೂದಲಿಗೆ ನೈಜ ಆರೈಕೆಯ ಕೊರತೆಯುಂಟಾಗಿ ಕೇಶವು ಕಡಿಮೆ ಗಾತ್ರದಲ್ಲೇ ತುಂಡಾಗಲು ಕಾರಣವಾಗುತ್ತದೆ. ನೀವೂ ಸಹ ಉದ್ದನೆಯ ಕೂದಲನ್ನು ಸುಲಭವಾಗಿ ಹೊಂದಬಹುದು. ನಿರಾಶರಾಗದೇ ನಾವು ನಿಮಗಾಗಿ ನೀಡಿರುವ ಕೆಲವು ಸುಲಭ ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಉದ್ದನೆಯ ಕೂದಲುಗಳೂ ಸಹ ಇತರರನ್ನು ಅಸೂಯೆ ಪಡುವಂತೆ ಮಾಡುತ್ತದೆ. ವಿವರಗಳಿಗೆ ಮುಂದೆ ಓದಿ...

ಕ್ರಮವಾಗಿ ಕೂದಲುಗಳನ್ನು ಟ್ರಿಮ್ ಮಾಡಿ

ಕ್ರಮವಾಗಿ ಕೂದಲುಗಳನ್ನು ಟ್ರಿಮ್ ಮಾಡಿ

ಕೂದಲುಗಳು ಅಗಾಗ ತುಂಡಾಗುವುದನ್ನು ತಡೆಯಲು ಕ್ರಮವಾಗಿ ಸಕಾಲದಲ್ಲಿ ಟ್ರಿಮ್ ಮಾಡಿಕೊಳ್ಳಿ. ಮೂರು ತಿಂಗಳಿಗೊಮ್ಮೆ ಟ್ರಿಮ್ ಮಾಡಿಕೊಳ್ಳಿ. ಇದರಿಂದ ಬೇರುಗಳು ಸದೃಢಗೊಂಡು ದೀರ್ಘಕಾಲದಲ್ಲಿ ಕೂದಲು ಉದ್ದನೆಯ ಬೆಳವಣಿಗೆಗೆ ನೆರವಾಗುತ್ತದೆ.

ಕ್ರಮವಾಗಿ ಅನುಸರಿಸುವ ಶೈಲಿಯನ್ನು ನಿಲ್ಲಿಸಿ

ಕ್ರಮವಾಗಿ ಅನುಸರಿಸುವ ಶೈಲಿಯನ್ನು ನಿಲ್ಲಿಸಿ

ಪ್ರತಿದಿನ ಅಥವಾ ಕ್ರಮವಾಗಿ ಕೂದಲ ಶೈಲಿಯನ್ನು ಅನುಸರಿಸಿದರೆ ಬಹುಬೇಗ ತುಂಡಾಗುವ ಅಪಾಯವಿರುತ್ತದೆ. ವಿಶೇಷ ಸಮಾರಂಭಗಳನ್ನು ಹೊರತುಪಡಿಸಿ ಇತರೆ ಸಮಯಗಳಲ್ಲಿ ನಿಮ್ಮ ಕೂದಲುಗಳನ್ನು ಕಟ್ಟುವುದನ್ನು, ಬನ್ಸ್ ಆಕಾರವಾಗಿ ಕಟ್ಟುವುದನ್ನು ರೂಢಿಸಿಕೊಳ್ಳಿ.

ಸರಿಹೊಂದುವ ಉಪಕರಣಗಳನ್ನು ಬಳಸಿ

ಸರಿಹೊಂದುವ ಉಪಕರಣಗಳನ್ನು ಬಳಸಿ

ದೊಡ್ಡಗಾತ್ರದ ಹಲ್ಲುಗಳುಳ್ಳ ಬಾಚಣಿಗೆಗಳು ನಿಮ್ಮ ಕೂದಲುಗಳನ್ನು ಹಂತಹಂತವಾಗಿ ಬೇರ್ಪಡಿಸಿ ನಿಮ್ಮ ಕೂದಲ ವಿನ್ಯಾಸವನ್ನು ಸರಿಮಾಡುತ್ತದೆ ಮತ್ತು ನಿಮ್ಮ ಕೇಶದ ಬೇರುಗಳ ಭಾಗಕ್ಕೆ ಸುಲಭವಾಗಿ ತಲುಪಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಮರದ ಸ್ವಾಭಾವಿಕ ಕೇಶದ ಬ್ರಶ್ ಬಳಕೆ ನಿಜಕ್ಕೂ ಉತ್ತಮವಾಗಿದ್ದು, ಅವಶ್ಯಕ ತೈಲಗಳನ್ನು ಕೇಶದ ಬುಡಕ್ಕೆ ತಲುಪಿಸಿ ಕೂದಲ ಬೆಳವಣಿಗೆಗೆ ಹೆಚ್ಚು ನೆರವಾಗಲಿದೆ.

ಸರಿಹೊಂದುವ ಉಪಕರಣಗಳನ್ನು ಬಳಸಿ

ಸರಿಹೊಂದುವ ಉಪಕರಣಗಳನ್ನು ಬಳಸಿ

ಸೌಮ್ಯವಾದ ಮತ್ತು ಕೂದಲಿಗೆ ಹಾನಿ ಮಾಡದಂತಹ ಉಪಕರಣಗಳನ್ನು ಬಳಸುವುದು ಸೂಕ್ತ. ಬಿಗಿಯಾದ ತಲೆ ಪಟ್ಟಿ ಅಥವಾ ರಬ್ಬರ್ ಪಟ್ಟಿಯನ್ನು ಉಪಯೋಗಿಸದಿರಿ. ಏಕೆಂದರೆ ಇದರಿಂದ ಕೇಶ ತುಂಡಾಗುವ ಅಪಾಯವಿರುತ್ತದೆ.

ಮಲಗಿರುವಾಗಲೂ ನಿಮ್ಮ ಕೂದಲ ಆರೈಕೆಯತ್ತ ಗಮನವಿರಲಿ

ಮಲಗಿರುವಾಗಲೂ ನಿಮ್ಮ ಕೂದಲ ಆರೈಕೆಯತ್ತ ಗಮನವಿರಲಿ

ಕೂದಲುಗಳಿಗೆ ಆಗುವ ಒತ್ತಡವನ್ನು ತಡೆಯಲು ಸೌಮ್ಯವಾದ ಅಥವಾ ಮೆತುವಾದ ತಲೆದಿಂಬುಗಳನ್ನು ಮಲಗಲು ಬಳಸಿ. ಕೇಶ ತುಂಡಾಗುವುದನ್ನು, ಅದಕ್ಕೆ ಒತ್ತಡವಾಗುವುದನ್ನು ತಡೆಯಲು ತಲೆಗೆ ಸ್ಕಾರ್ಫ್ ಅಥವಾ ಕಿರುವಸ್ತ್ರವನ್ನು ಕಟ್ಟಿಕೊಂಡು ಮಲಗಿ. ಇದರಿಂದ ಕೇಶ ತುಂಡಾಗುವಿಕೆಯನ್ನು ತಡೆಯಬಹುದು.

English summary

Top tips for growing long hair

Mostt of us are worried about our hair not growing as much as we want it to. The reason might range from using too much of chemicals in the form of dyes, colors on in practicing too much of straightening or curling treatments for styling. This lack of care leads to breakage and prevents the hair from adequate growth. Take some time out and remember these five tips to grow long hair
Story first published: Monday, January 25, 2016, 10:01 [IST]
X
Desktop Bottom Promotion