For Quick Alerts
ALLOW NOTIFICATIONS  
For Daily Alerts

ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

By Su.Ra
|

ಕೂದಲು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು. ಇತ್ತೀಚೆಗೆ ಕೂದಲು ಉದುರುವಿಕೆ ಮತ್ತು ಕೂದಲಿನ ಇತರೆ ಸಮಸ್ಯೆಗಳು ಅಧಿಕವಾಗುತ್ತಲೇ ಸಾಗುತ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಕೂದಲಿನ ಸಮಸ್ಯೆಗಳನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳುತ್ತಾ ಇರೋ ಅದೆಷ್ಟೊ ಕಂಪೆನಿಗಳು, ಬೇರೆಬೇರೆ ರೀತಿಯ ಪ್ರೊಡಕ್ಟ್ ಗಳನ್ನು ಮಾರುಕಟ್ಟೆಗೆ ಬಿಟ್ಟು ಮಕ್ಮಲ್ ಟೋಪಿ ಹಾಕುತ್ತಿವೆ. ಸಮಸ್ಯೆಯಿಂದ ತತ್ತರಿಸಿರುವ ಜನ ಅದಕ್ಕೆ ಮಾರು ಹೋಗಿ, ಇರೋ ಚೂರುಪಾರು ಕೂದಲನ್ನೂ ಹಾಳು ಮಾಡಿಕೊಳುತ್ತಾ ಇರೋದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇಂದು ಪ್ರತಿಯೊಬ್ಬರೂ ನೆನಪಿನಲ್ಲಿ ಇಡಲೇಬೇಕಾಗಿರುವ ಅಂಶವೇನೆಂದರೆ ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲೇ ಇರುತ್ತೆ. ಅದು ನಿಮಗೆ ತಿಳಿದರಬೇಕು ಅಷ್ಟೇ.

ಒಮ್ಮೆ ನೀವೇ ಯೋಚಿಸಿ.. ಹಿಂದಿನ ಕಾಲದವರ ಕೂದಲು ಎಷ್ಟು ಗಟ್ಟುಮುಟ್ಟಾಗಿ, ಎಷ್ಟು ದಟ್ಟವಾಗಿ, ಕಪ್ಪಾಗಿ ಇರುತ್ತಾ ಇತ್ತು ಅಲ್ಲವಾ.. ಈಗಿನ ಯುವಕ ಯುವತಿಯರ ಕೂದಲಿನಲ್ಲಿ ಯಾಕೆ ಇಷ್ಟೊಂದು ಸಮಸ್ಯೆ ಅನ್ನೋದಕ್ಕೆ ಪ್ರಮುಖ ಕಾರಣವೇ ಅವರು ಬಳಸುವ ಕೆಮಿಕಲ್‌ಗಳು. ಯಾರು ಕೆಮಿಕಲ್‌ಗಳಿಂದ ದೂರವಿರುತ್ತಾರೋ ಅಂತವರಿಗೆ ಖಂಡಿತ ಕೂದಲಿನ ಸಮಸ್ಯೆ ಇರೋದಿಲ್ಲ.

ಆದರೆ ಏನು ಮಾಡೋದು ನಾವೀಗ ಬದುಕುತ್ತಿರುವ ವಾತಾವರಣವೇ ಕಲುಷಿತಗೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನೀವು ಬಳಸಬಹುದಾದ ಅತ್ಯಮೂಲ್ಯ ವಸ್ತುವೆಂದರೆ ಪುದೀನಾ.. ಪುದೀನಾ ಎಲೆಗಳಿಂದ ನಿಮ್ಮ ಕೂದಲನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳೋದಕ್ಕೆ ಸಾಧ್ಯವಿದೆ. ಪ್ರಮುಖವಾಗಿ ಎರಡು ವಿಧಾನದಲ್ಲಿ ನೀವು ಪುದೀನಾ ಎಲೆಗಳನ್ನು ಬಳಕೆ ಮಾಡಬಹುದು...

ಮೊದಲನೆ ವಿಧಾನ

ಮೊದಲನೆ ವಿಧಾನ

ಪುದೀನಾ ಎಲೆಗಳನ್ನು ಹಸಿಯಾಗಿಯೇ ರುಬ್ಬಿ ಅದಕ್ಕೆ ಇತರೆ ಮಿಶ್ರಣಗಳನ್ನು ಸೇರಿಸಿ ಬಳಕೆ ಮಾಡಬಹುದು. ಯಾವುದನ್ನು ಮಿಶ್ರಣ ಮಾಡಬಹುದು ಮತ್ತು ಅದ್ರಿಂದಾಗುವ ಲಾಭಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ..

ಎರಡನೇ ವಿಧಾನ

ಎರಡನೇ ವಿಧಾನ

ಒಂದಷ್ಟು ಪುದೀನಾ ಎಲೆಗಳನ್ನು ಸ್ವಚ್ಛಗೊಳಿಸಿ ಅವುಗಳ ಕಡ್ಡಿ ಅಥವಾ ಕಾಂಡದ ಭಾಗವನ್ನೂ ಕೂಡ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡು, ಅದರ ಪುಡಿಯನ್ನು ತಯಾರಿಸಿ ಇಟ್ಟುಕೊಳ್ಳಬಹುದು. ಇದು ನಿಮ್ಮ ಅಡುಗೆಯಲ್ಲೂ ಫ್ಲೇವರ್ ಆಗಿ ಬಳಕೆ ಮಾಡಬಹುದು..

ಡ್ಯಾಂಡ್ರಫ್ ನಿವಾರಣೆಗೆ ಪುದೀನಾ ಎಲೆಗಳು

ಡ್ಯಾಂಡ್ರಫ್ ನಿವಾರಣೆಗೆ ಪುದೀನಾ ಎಲೆಗಳು

ಹಸಿಯಾದ ಪುದೀನಾ ಎಲೆಗಳಾಗಿದ್ದಲ್ಲಿ ಅದನ್ನು ರುಬ್ಬಿಕೊಂಡು ಅದಕ್ಕೆ ಲಿಂಬೆರಸ ಸೇರಿಸಿ ಕೂದಲಿಗೆ ಹಚ್ಚಿಕೊಂಡ್ರೆ ಡ್ಯಾಂಡ್ರಫ್ ನಿವಾರಣೆಯಾಗಿ ಶೈನಿ ಕೂದಲು ನಿಮ್ಮದಾಗುತ್ತೆ. ಒಂದುವೇಳೆ ಒಣಗಿಸಿದ ಪುಡಿಯನ್ನ ಬಳಕೆ ಮಾಡೋದ್ರಿಂದ ಲಿಂಬೆರಸವನ್ನು ಅದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿ, ಅರ್ಧ ಅಥ್ವಾ ಮುಕ್ಕಾಲು ತಾಸಿನ ನಂತ್ರ ಹೇರ್ ವಾಷ್ ಮಾಡಿಕೊಳ್ಳಿ,.

ತುರಿಕೆ ನಿವಾರಕವಾಗಿ ಪುದೀನಾ

ತುರಿಕೆ ನಿವಾರಕವಾಗಿ ಪುದೀನಾ

ಪುದೀನಾ ಎಲೆಗಳಿಗೆ ಸ್ವಲ್ಪ ಅಲವೀರಾ ರಸ ಮತ್ತು ಲಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಅಪ್ಲೈ ಮಾಡಿ ನೋಡಿ..ತುರಿಕೆಯ ಸಮಸ್ಯೆ ನಿವಾರಣೆಯಾಗಿ ಕೂದಲು ಶೈನಿಯಾಗಿ ಬೇಗ ಬೆಳವಣಿಗೆಯಾಗಲು ಈ ಮಿಶ್ರಣ ನೆರವಾಗುತ್ತೆ.

ಕೂದಲಿಗೆ ಬೆಸ್ಟ್ ಕಂಡೀಷನರ್ ಪುದೀನಾ

ಕೂದಲಿಗೆ ಬೆಸ್ಟ್ ಕಂಡೀಷನರ್ ಪುದೀನಾ

ಕೆಲವು ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಪ್ರತಿದಿನ ನಿಮ್ಮ ಕೂದಲಿಗೆ ಬಳಸಿದ್ರೆ, ಇದಕ್ಕಿಂತ ಬೆಸ್ಟ್ ಕಂಡೀಷನರ್ ನಿಮ್ಮ ಕೂದಲಿಗೆ ಮತ್ತೊಂದಿರಲಿಕ್ಕಿಲ್ಲ. ಟ್ರೈ ಮಾಡಿ ನೋಡಿ. ಡ್ರೈ ಆಗಿ, ಕಡ್ಡಿಕಡ್ಡಿಯಂತೆ ಕಾಣುವ ನಿಮ್ಮ ಕೂದಲು ಫಳಫಳ ಹೊಳೆಯಲು ಈ ಮಿಂಟ್ ಜ್ಯೂಸ್ ನೆರವಾಗಲಿದೆ.

ಹೇನುಗಳ ನಿವಾರಣೆಗೆ ಪುದೀನಾ ಎಲೆಗಳು

ಹೇನುಗಳ ನಿವಾರಣೆಗೆ ಪುದೀನಾ ಎಲೆಗಳು

ಯಾರ ತಲೆಯಲ್ಲಿ ಹೇನುಗಳಿವೆಯೋ ಅಂತವರು ವಾರಕ್ಕೆ ಮೂರು ನಾಲ್ಕು ಬಾರಿ ಪುದೀನಾ ಎಲೆಗಳನ್ನು ತಮ್ಮ ಕೂದಲಿಗೆ ಹಚ್ಚಿಕೊಂಡ್ರೆ ಕೆಲವೇ ವಾರಗಳಲ್ಲಿ ಹೇನುಗಳಿಂದ ಮುಕ್ತಿ ಪಡೀಬಹುದು. ಕೆಲವು ಪುದೀನಾ ಎಲೆಗಳನ್ನು ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ, ಆರಿಸಿ ಆ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡಿಕೊಳ್ಳೋದ್ರಿಂದಲೂ ಕೂಡ ಹೇನುಗಳು ನಿವಾರಣೆಯಾಗುತ್ತೆ.

English summary

Top benefits of Peppermint Leaves for haircare

Peppermint is a popular herb known for its distinct aroma and medicinal value. It belongs to the Lamiaceae family, of the genus Mentha and its botanical name is Mentha piperita. There are lot of benefits in Peppermint leaves, in the same way, we also introduce you haircare with peppermint leaves, have a look...
Story first published: Friday, January 22, 2016, 14:47 [IST]
X
Desktop Bottom Promotion