For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!

ಒಣ ಕೂದಲಿಗೆ ಪ್ರಮುಖವಾಗಿ ನಾವು ಅನುಸರಿಸಿಕೊಂಡು ಹೋಗುವಂತಹ ಜೀವನಶೈಲಿ, ಕೂದಲಿನ ಆರೈಕೆಗೆ ಬಳಸುವಂತಹ ಉತ್ಪನ್ನಗಳು ಪ್ರಮುಖ ಕಾರಣವಾಗಿರುತ್ತದೆ. ಒಣ ಕೂದಲಿಗೆ ಕೆಲವೊಂದು ಕಾರಣಗಳು ಇವೆ. ಇದು ಯಾವುದೆಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ.....

By Manu
|

ನಟಿಯರ ಉದ್ದಗಿನ ಹಾಗೂ ರೇಷ್ಮೆಯಂತಹ ಕೂದಲನ್ನು ನೋಡಿದರೆ ನಮಗೂ ಇದೇ ರೀತಿಯ ಕೂದಲು ಇದ್ದರೆ ಎಷ್ಟು ಚಂದ ಎಂದು ಅನಿಸುವುದಿದೆ. ಆದರೆ ಹಲವಾರು ಜನರಿಗೆ ಕೂದಲಿನ ಸಮಸ್ಯೆ ಕಾಡುತ್ತಾ ಇರುತ್ತದೆ. ಅದರಲ್ಲೂ ಒಣ ಕೂದಲಿನ ಸಮಸ್ಯೆ ಹೆಚ್ಚಿನವರನ್ನು ಕಾಡುವುದು. ಒಣ ಕೂದಲಿನ ಕಿರಿಕಿರಿಗೆ ನೈಸರ್ಗಿಕ ಹೇರ್ ಮಾಸ್ಕ್

ಒಣಕೂದಲಿನಿಂದಾಗಿ ಒಣ ತಲೆಬುರುಡೆ, ತಲೆಹೊಟ್ಟು ಮತ್ತು ಸೋಂಕು ಕಾಣಿಸಿಕೊಳ್ಳಬಹುದು. ಒಣ ಕೂದಲಿಗೆ ಪ್ರಮುಖವಾಗಿ ನಾವು ಅನುಸರಿಸಿಕೊಂಡು ಹೋಗುವಂತಹ ಜೀವನಶೈಲಿ, ಕೂದಲಿನ ಆರೈಕೆಗೆ ಬಳಸುವಂತಹ ಉತ್ಪನ್ನಗಳು ಪ್ರಮುಖ ಕಾರಣವಾಗಿರುತ್ತದೆ. ಒಣ ಕೂದಲಿಗೆ ಕೆಲವೊಂದು ಕಾರಣಗಳು ಇವೆ. ಇದು ಯಾವುದೆಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ. ಕೂದಲು ನಾರಿನಂತೆ ಒರಟಾಗಿದೆಯೇ?

hair wash

ಅತಿಯಾಗಿ ತೊಳೆಯುವುದು
ಅತಿಯಾಗಿ ಕೂದಲು ತೊಳೆಯುವುದೇ ಒಣ ಕೂದಲಿಗೆ ಮೊದಲ ಕಾರಣವಾಗಿದೆ. ಅತಿಯಾಗಿ ತೊಳೆದರೆ ಮತ್ತು ಶಾಂಪೂ ಬಳಸಿದರೆ ಕೂದಲು ಒಣಗುವಂತಹ ಸಾಧ್ಯತೆ ತುಂಬಾ ಹೆಚ್ಚು. ಕೂದಲನ್ನು ಯಾವಾಗಲೂ ತೊಳೆದರೆ ಅದು ತಲೆಬುರುಡೆಯಲ್ಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಿ ಕೂದಲು ಒಣಗುವಂತೆ ಮಾಡುವುದು. ದಿನ ಬಿಟ್ಟು ದಿನ ಕೂದಲನ್ನು ತೊಳೆದರೆ ತುಂಬಾ ಒಳ್ಳೆಯದು. ಕೂದಲು ತೊಳೆಯಲು ಬಿಸಿನೀರಿಗಿಂತ ತಣ್ಣೀರೇ ಉತ್ತಮ ಏಕೆ?

ಒಣಗಿಸುವುದು
ಬ್ಲೋ ಡ್ರೈಯರ್ ಅನ್ನು ಬಳಸಿಕೊಂಡು ಕೂದಲನ್ನು ಒಣಗಿಸಿದರೆ ಅದು ತುಂಬಾ ಸ್ಟೈಲ್ ಆಗಿರುತ್ತದೆಯಾ? ಇದು ನಿಮ್ಮ ಕೂದಲಿಗೆ ತುಂಬಾ ಹಾನಿಯನ್ನು ಉಂಟು ಮಾಡುವ ಹಾಗೂ ಕ್ರೂರ ಸಾಧನವಾಗಿದೆ. ಬ್ಲೋ ಡ್ರೈಯರ್ ಅನ್ನು ಬಳಸುವುದರಿಂದ ತಲೆಬುರುಡೆಯಲ್ಲಿರುವ ನೈಸರ್ಗಿಕ ಎಣ್ಣೆಯು ಹೋಗಿ ಕೂದಲು ಒಣಗುವುದು. ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಲು ಕಡಿಮೆ ಬಿಸಿಯಲ್ಲಿ ಇದನ್ನು ಬಳಸಿ.

ಒಣ ವಾತಾವರಣ
ನೀವು ತುಂಬಾ ಒಣ ವಾತಾವರಣದಲ್ಲಿ ವಾಸಿಸುತ್ತಾ ಇದ್ದರೆ ಕೂದಲು ಒಣಗುವುದು ಮತ್ತು ಕಳೆಗುಂದಿದಂತೆ ಕಾಣುವುದು. ಇಂತಹ ವಾತಾವರಣದಲ್ಲಿ ಹೆಚ್ಚು ಹೊತ್ತು ಬಿಸಿಲಿಗೆ ಮೈಯೊಡ್ಡಬೇಡಿ, ಕಂಡೀಷನರ್ ಬಳಸಿಕೊಂಡು ಕೂದಲಿಗೆ ತೇವಾಂಶ ನೀಡಿ. ಟೋಪಿ ಹಾಕಿಕೊಂಡು ಹೊರಗಡೆ ಹೋದರೆ ಸಮಸ್ಯೆ ನಿವಾರಣೆಯಾಗುವುದು.

ವಿನ್ಯಾಸ
ಕೂದಲನ್ನು ಬ್ಲೋ ಡ್ರೈಯರ್ ನಂತಹ ಸಾಧನದಿಂದ ಅತಿಯಾಗಿ ವಿನ್ಯಾಸ ಮಾಡುವುದರಿಂದ ಕೂದಲು ಒಣಗಬಹುದು. ಕೂದಲನ್ನು ನೇರವಾಗಿಸಲು ಅಥವಾ ಗುಂಗುರು ಮಾಡಲು ಯಾವುದೇ ಸಾಧನ ಬಳಸುತ್ತಾ ಇದ್ದರೆ ಮುಂದೆ ಕೂದಲು ಕೆಟ್ಟದಾಗಿ ಕಾಣಿಸಬಹುದು. ಕೂದಲಿಗೆ ರಕ್ಷಣಾತ್ಮಕವಾಗಿರುವ ಕ್ರೀಮ್ ಅನ್ನು ಬಳಸಿಕೊಂಡರೆ ಸಾಧನಗಳಿಂದ ಆಗುವ ತೊಂದರೆ ತಪ್ಪಿಸಬಹುದು. ಕೂದಲನ್ನು
ಬಿಸಿ ಮಾಡದೆ ವಿನ್ಯಾಸ ಮಾಡುವಂತಹ ಸಾಧನ ಬಳಸಿ. ಒದ್ದೆ ಕೂದಲಿಗೆ ಹೀಗೆ ಕಾಳಜಿ ಮಾಡಿ

ಪೋಷಕಾಂಶದ ಕೊರತೆ
ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಕೂದಲು ಹಾಗೂ ತಲೆಬುರುಡೆಯು ಒಣಗುತ್ತದೆ. ಪೋಷಕಾಂಶಗಳ ಕೊರತೆ ಅನುಭವಿಸುವವರು, ಕಡಿಮೆ ಪೋಷಕಾಂಶವುಳ್ಳ ಆಹಾರ ಸೇವಿಸುವವರು ಮತ್ತು ಕೆಲವೊಂದು ಔಷಧಿಗಳಿಂದಾಗಿ ಹೀಗೆ ಆಗಬಹುದು. ದೇಹದಲ್ಲಿನ ಹಾರ್ಮೋನು ಬದಲಾವಣೆಯಿಂದ ಕೂದಲು ಒಣಗಬಹುದು.

ಆಲ್ಕೋಹಾಲ್
ಆಲ್ಕೋಹಾಲ್ ಸೇವಿಸುವುದರಿಂದ ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ತಲೆಬುರುಡೆ ಹಾಗೂ ಕೂದಲಿನ ಮೇಲೆ ಪರಿಣಾಮ ಬೀರಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳಲ್ಲಿಯೂ ಅತಿಯಾಗಿ ಆಲ್ಕೋಹಾಲ್ ಅನ್ನು ಬಳಸಿರುತ್ತಾರೆ. ಇದರಿಂದ ಕೂದಲು ಹಾಗೂ ತಲೆಬುರುಡೆ ಒಣಗುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ಆಲ್ಕೋಹಾಲ್ ಮಾತ್ರವಲ್ಲದೆ ಇತರ ರಾಸಾಯನಿಕಗಳು ಇರುವುದು. ಇದು ಕೂದಲು ಹಾಗೂ ತಲೆಬುರುಡೆಯನ್ನು ಒಣಗಿಸುವುದು.

English summary

Things You Should Never Do To Dry Hair!

Dry hair can result from a variety of factors and hence, it is very important to be cautious while adopting the type of lifestyle you want to live. Apart from your regular beauty routine, there are many other ways that you can adopt to make your hair moisturised and soft. Here are some factors that can lead to dry hair and the quick-fixes for them.
X
Desktop Bottom Promotion