For Quick Alerts
ALLOW NOTIFICATIONS  
For Daily Alerts

ಕೂದಲು ತೊಳೆದುಕೊಳ್ಳುವ ಮುನ್ನ, ಒಮ್ಮೆ ಈ ಲೇಖನ ಓದಿ

By Manu
|

ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆಗಿಂತ ಮಿಗಿಲಾದುದು ಇನ್ನೊಂದಿಲ್ಲ. ಸ್ನಾನಕ್ಕೂ ಮೊದಲು ಎಣ್ಣೆಯನ್ನು ಕೊಂಚ ಬಿಸಿ ಮಾಡಿ ನವಿರಾದ ಮಸಾಜ್ ನೊಂದಿಗೆ ಕೂದಲಿಗೆ ಹಚ್ಚಿಕೊಳ್ಳುವುದು ಕೂದಲ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಕೂದಲಿಗೆ ಹೊಳಪು ಮತ್ತು ದೃಢತೆ ದೊರಕುತ್ತದೆ. ಆದರೆ ಸ್ನಾನಕ್ಕೂ ಮೊದಲು ಕೇವಲ ಬಿಸಿ ಎಣ್ಣೆಯ ಲೇಪನ ಸಾಕಾಗುವುದಿಲ್ಲ. ಇಲ್ಲಿ ನೀಡಲಾಗಿರುವ ವಿಧಾನಗಳಿಂದ ಇನ್ನೂ ಹೆಚ್ಚಿನ ಆರೈಕೆ ಮತ್ತು ಪ್ರಯೋಜನಗಳನ್ನು ಪಡೆಯಬಹುದು:

ಎರಡು ವಿಧದ ಎಣ್ಣೆ ಆಯ್ಕೆ ಮಾಡಿ
ಕೇವಲ ಕೊಬ್ಬರಿ ಎಣ್ಣೆ ಹಚ್ಚುವುದಕ್ಕಿಂತ ಎರಡು ಅಥವಾ ಹೆಚ್ಚಿನ ಎಣ್ಣೆ ಮತ್ತು ಇತರ ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ಹಚ್ಚಿದರೆ ಹೆಚ್ಚಿನ ಫಲ ದೊರಕುತ್ತದೆ. ಉದಾಹರಣೆಗೆ ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯೊಂದಿಗೆ ಕೊಂಚ ವಿಟಮಿನ್ ಇ ಮಾತ್ರೆಯ ಕೊಂಚ ಪುಡಿ ಬೆರೆಸಿ ಹಚ್ಚಿದರೆ ಉತ್ತಮ ಪೋಷಣೆ ದೊರಕುತ್ತದೆ. ಸ್ನಾನಕ್ಕೂ ಕನಿಷ್ಠ ಇಪ್ಪತ್ತು ನಿಮಿಷದ ಮುನ್ನ ಈ ಎಣ್ಣೆಯನ್ನು ಹಚ್ಚಿಕೊಂಡು ಒಣಗಲು ಬಿಡಬೇಕು. ಆದರೆ ತಲೆಗೂದಲನ್ನು ತೊಳೆದುಕೊಳ್ಳಲು ಬಿಸಿನೀರು ಉಪಯೋಗಿಸಿದರೆ ಈ ಎಣ್ಣೆಯಿಂದ ಪಡೆದ ಲಾಭವೆಲ್ಲಾ ನೀರಿನಲ್ಲೇ ತೊಳೆದುಹೋಗುತ್ತದೆ.

Things to do before washing your hair

ಇದಕ್ಕೆ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರನ್ನು ಮಾತ್ರ ಉಪಯೋಗಿಸಿ. ಪರ್ಯಾಯವಾಗಿ ಮೊಸರು ಮತ್ತು ಮೊಟ್ಟೆಯ ಮಿಶ್ರಣವನ್ನು ಕೂದಲಿಗೆ ಹಚ್ಚಿ ಬಳಿಕ ಸ್ನಾನ ಮಾಡಬಹುದು. ಇದು ಒಂದು ಉತ್ತಮ ಕಂಡೀಶನರ್ ಆಗಿದ್ದು ನಿಮ್ಮ ಕೂದಲಿಗೆ ಒಂದೇ ಸ್ನಾನದಲ್ಲಿ ಉತ್ತಮ ಹೊಳಪು ನೀಡುತ್ತದೆ. ಅಲ್ಲದೇ ಕೂದಲು ಜಡೆಕಟ್ಟಲು ಮತ್ತು ಬಾಚಿಕೊಳ್ಳಲೂ ಸುಲಭವಾಗುತ್ತದೆ. ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

*ಕೂದಲಿಗೆ ಲೇಪನ ತಯಾರಿಸಿ
ಸ್ನಾನಕ್ಕೂ ಮೊದಲು ಕೂದಲಿಗೆ ಮೊಸರು ಮತ್ತು ಜೇನುತುಪ್ಪದ ಮಿಶ್ರಣವನ್ನು ದಪ್ಪನಾಗಿ ಹಚ್ಚಬೇಕು. ಜೇನು ಒಂದು ಉತ್ತಮ ತೇವಕಾರಕವಾಗಿದ್ದು ಕೂದಲ ಬುಡದವರೆಗೂ ಕಂಡೀಶನ್ ನೀಡುತ್ತದೆ. ಪರ್ಯಾಯವಾಗಿ ಎರಡು ಚೆನ್ನಾಗಿಹಣ್ಣದ ಬಾಳೆಹಣ್ಣುಗಳನ್ನು ಕಿವುಚಿ ನಯವಾದ ಬಳಿಕ ಎರಡು ದೊಡ್ಡ ಚಮಚ ಮಾಯೋನ್ನೀಸ್ (mayonnaise) ಮತ್ತು ಒಂದು ದೊಡ್ಡಚಮ್ಚ ಆಲಿವ್ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ.
ಈ ಲೇಪನವನ್ನು ದಪ್ಪನಾಗಿ ಕೂದಲ ಮೇಲೆ ಹಚ್ಚಿ ಒಂದು ಗಂಟೆ ಬಿಟ್ಟು ಬಳಿಕ ಸ್ನಾನ ಮಾಡಿ. ಸ್ನಾನಕ್ಕೆ ಕೇವಲ ಉಗುರುಬೆಚ್ಚನೆಯ ನೀರನ್ನು ಮಾತ್ರ ಬಳಸಿ. ಬಾಳೆಹಣ್ಣಿನ ಉಪಯೋಗದಿಂದ ಕೂದಲು ಅತಿ ಮೃದು ಮತ್ತು ಹೊಳಪುಳ್ಳದ್ದಾಗುತ್ತದೆ. ಇದು ಕಳೆಗುಂದಿದ ಮತ್ತು ಸಿಕ್ಕುಸಿಕ್ಕಾದ ಕೂದಲಿನವರಿಗೆ ಸೂಕ್ತವಾಗಿದೆ.

*ಉದ್ದಿನಬೇಳೆಯ ಲೇಪನ ತಯಾರಿಸಿ
ಮೂರು ದೊಡ್ಡಚಮಚ ಉದ್ದಿನ ಬೇಳೆ ಅಥವಾ ಸಿಪ್ಪೆ ಸಹಿತ ಇರುವ ಉದ್ದಿನ ಕಾಳನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಮಿಕ್ಸಿಯಲ್ಲಿ ನಯವಾಗಿ ಅರೆಯಿರಿ. ಇದಕ್ಕೆ ಒಂದು ಮೊಟ್ಟೆ. ಒಂದು ದೊಡ್ಡಚಮಚ ಲಿಂಬೆರಸ ಮತ್ತು ಒಂದು ಕಪ್ ಮೊಸರು ಸೇರಿಸಿ ಚೆನ್ನಾಗಿ ಕಲಕಿ. ಈ ಲೇಪನವನ್ನು ಕೂದಲ ಮೇಲೆ ದಪ್ಪನಾಗಿ ಹಚ್ಚಿ ಅರ್ಧಗಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

English summary

Things to do before washing your hair

Oiling your hair is one of the most important steps of hair care regime. Going for a hot oil hair massage before taking a bath is always a good idea. It not only adds shine to your hair, but also helps in improving its health. Here are a few steps that you should keep in mind before going for a hair wash.
Story first published: Tuesday, February 23, 2016, 9:53 [IST]
X
Desktop Bottom Promotion