ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಮಾಸ್ಕ್

By: Jaya subramanya
Subscribe to Boldsky

ಕೂದಲಿನ ಅಭಿವೃದ್ಧಿಗಾಗಿ ನೀವು ಸಾಕಷ್ಟು ಪರಿಹಾರ ಕ್ರಮಗಳನ್ನು ಕೈಗೊಂಡಿರುತ್ತೀರಿ ಅಲ್ಲವೇ? ಅದಾಗ್ಯೂ ಕೂದಲಿನ ಪೋಷಣೆ ಸರಿಯಾಗಿ ನಡೆಯುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ. ಹಾಗಿದ್ದರೆ ಕೂದಲಿಗಾಗಿ ಅತ್ಯದ್ಭುತವಾಗಿರುವ ಹೇರ್ ಮಾಸ್ಕ್ ವಿಧಾನಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮೊಟ್ಟೆಯನ್ನು ಕೂದಲಿನ ಮಾಸ್ಕ್ ಸಿದ್ಧಪಡಿಸಲು ಬಳಸುವುದು ನಮಗೆಲ್ಲಾ ತಿಳಿದೇ ಇದೆ. ಮೊಟ್ಟೆಯಲ್ಲಿರುವ ಅತ್ಯಧಿಕ ಪೋಷಕಾಂಶಗಳು ಕೂದಲಿನ ಬುಡ ಮತ್ತು ತುದಿಗೆ ಆಳವಾದ ಪೋಷಕಾಂಶವನ್ನು ಒದಗಿಸಿ, ಕೂದಲು ತುಂಡಾಗುವುದು ಮತ್ತು ಸೀಳುವುದನ್ನು ತಪ್ಪಿಸುತ್ತದೆ. ಇಂದಿನ ಲೇಖನದಲ್ಲಿ ಮೊಟ್ಟೆಯನ್ನು ಇತರ ಅಗತ್ಯ ಪೋಷಕಾಂಶಗಳುಳ್ಳ ಸಾಮಾಗ್ರಿಗಳೊಂದಿಗೆ ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.   ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!  

Egg hair pack
 

ಒಣ ಕೂದಲಿಗಾಗಿ ಮಾಸ್ಕ್
ಈ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ತಂದುಕೊಡುವಲ್ಲಿ ಮತ್ತು ನಯಗೊಳಿಸುವಲ್ಲಿ ಈ ಹೇರ್ ಮಾಸ್ಕ್ ಸಹಕಾರಿಯಾಗಲಿದೆ ಒಂದು ಬೌಲ್ ತೆಗೆದುಕೊಂಡು ಇದಕ್ಕೆ ಮೊಟ್ಟೆಯ ಹಳದಿ ಭಾಗ, ಒಂದು ಚಮಚ ಜೇನು, ಸ್ವಲ್ಪ ಹನಿಗಳಷ್ಟು ಗ್ರೇಪ್ ಸೀಡ್ ಆಯಿಲ್ ಅನ್ನು ಹಾಕಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ, ಮೃದುವಾದ ಮಿಶ್ರಣ ತಯಾರಿಸಿ

Egg pack
 

ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಕೂದಲಿನ ಉದ್ದಕ್ಕೆ ಅನುಗುಣವಾಗಿ ಹಚ್ಚಿ ಮತ್ತು ಬುಡಕ್ಕೂ ಬಳಸಿಕೊಳ್ಳಿ ಒಂದು ಗಂಟೆಯ ಕಾಲ ಹಾಗೆಯೇ ಬಿಡಿ, ನಂತರ ಶಾಂಪೂ ಮಾಡಿ ಕಂಡೀಷನಿಂಗ್ ಮಾಡಿ

ಜಿಡ್ಡಿನ ಕೂದಲಿಗಾಗಿ ಮಾಸ್ಕ್
ನಿಮ್ಮ ಕೂದಲಿಗೆ ಇನ್ನಷ್ಟು ಪೋಷಣೆಯನ್ನು ಈ ಮಾಸ್ಕ್ ಮಾಡುತ್ತದೆ, ನಿಮ್ಮ ಕೂದಲನ್ನು ಇನ್ನಷ್ಟು ಜಿಡ್ಡಾಗಿಸದೆಯೇ ಈ ಮಾಸ್ಕ್ ಅನ್ನು ಕೂದಲಿಗೆ ಬಳಸಿಕೊಳ್ಳಬಹುದಾಗಿದೆ ಒಂದು ಪಾತ್ರೆಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚದಷ್ಟು ಆಲೀವ್ ಆಯಿಲ್ ಸೇರಿಸಿ ಮತ್ತು ಕೆಲವು ಹನಿ ಲಿಂಬೆ ರಸವನ್ನು ಸೇರಿಸಿಕೊಳ್ಳಿ

ಇನ್ನು ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಮಿಶ್ರಗೊಳ್ಳುವವರೆಗೆ ಮಿಶ್ರ ಮಾಡಿ ನಿಮ್ಮ ಕೂದಲನ್ನು ಸಣ್ಣ ಭಾಗಗಳನ್ನಾಗಿ ಮಾಡಿ ಮತ್ತು ಕೂದಲಿನ ಉದ್ದ ಹಾಗೂ ತಲೆಬುಡಕ್ಕೆ ಅನುಗುಣವಾಗಿ ಮಾಸ್ಕ್ ಹಚ್ಚಿಸರಳವಾಗಿ ಬನ್ ಮಾದರಿಯಲ್ಲಿ ಕೂದಲನ್ನು ಕಟ್ಟಿಕೊಳ್ಳಿ ಮತ್ತು ಗಂಟೆಯಷ್ಟು ಕಾಲ ಮಾಸ್ಕ್ ಅನ್ನು ಹಾಗೆಯೇ ಬಿಡಿ ಮೃದುವಾದ ಶಾಂಪೂ ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ

Egg hair pack
 

ಡೀಪ್ ಕಂಡೀಷನಿಂಗ್ ಹೇರ್ ಮಾಸ್ಕ್
ತಾಜಾ ಮೊಸರನ್ನು ತೆಗೆದುಕೊಂಡು ಇದಕ್ಕೆ ಮೊಳೆಯ ಬಿಳಿ ಭಾಗ ಮತ್ತು ಕೆಲವು ಹನಿಗಳಷ್ಟು ಟಿ ಟ್ರಿ ಆಯಿಲ್ ಅನ್ನು ಸೇರಿಸಿಕೊಳ್ಳಿ ಫೋರ್ಕ್ ಬಳಸಿಕೊಂಡು ಚೆನ್ನಾಗಿ ಕಲಸಿ ನಿಮ್ಮ ಕೂದಲಿನ ಬುಡಕ್ಕೆ ಮಾಸ್ಕ್ ಹಚ್ಚಿಕೊಳ್ಳಿ ಮಾಸ್ಕ್ ಒಣಗುವವರೆಗೆ ಹಾಗೆಯೇ ಬಿಟ್ಟುಬಿಡಿ ಮತ್ತು ಕೊಂಚ ಗರಿಗರಿಯಾಗುವವರೆಗೆ ಹಾಗೆಯೇ ಇರಲಿ ಮೃದುವಾದ ಶಾಂಪೂ ಬಳಸಿಕೊಂಡು, ನಿಮ್ಮ ಕೂದಲನ್ನು ತೊಳೆದುಕೊಳ್ಳಿ ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಬಳಸಿಕೊಂಡು ಕೂದಲು ಉದುರುವುದನ್ನು ತಡೆಗಟ್ಟಿ ಕೂದಲನ್ನು ಅತ್ಯುತ್ತಮಗೊಳಿಸುವ ಮಾಸ್ಕ್ ತುಂಬಾ ಕ್ಯೂಟಿಕಲ್ ರಕ್ಷಣೆಯನ್ನು ಮಾಡಲು, ಮಂಕಾದ ಕೂದಲಿಗೆ ಹೊಳಪನ್ನು ತಂದುಕೊಡಲು ಹೀಗೆ ಬಹುಉಪಯೋಗಕಾರಿಯಾಗಿ ಮೊಟ್ಟೆಯ ಮಾಸ್ಕ್ ಅನ್ನು ಕೂದಲಿಗೆ ಬಳಸಿಕೊಳ್ಳಬಹುದಾಗಿದೆ

Egg hair pack
 

ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚದಷ್ಟು ಯೋಗರ್ಟ್ ಸೇರಿಸಿ ತದನಂತರ ತೆಂಗಿನೆಣ್ಣೆ ಮತ್ತು ಚಮಚದಷ್ಟು ಆಲೀವ್ ಎಣ್ಣೆಯನ್ನು ಬೆರೆಸಿ ಫೋರ್ಕ್ ಬಳಸಿಕೊಂಡು ಸಾಮಾಗ್ರಿಗಳನ್ನು ಮಿಶ್ರ ಮಾಡಿ ಮೃದುವಾದ ಪೇಸ್ಟ್ ತಯಾರಿಸಿ ನಿಮ್ಮ ಕೂದಲನ್ನು ಪಾಲು ಮಾಡಿಕೊಂಡು, ಬ್ರಶ್ ಬಳಸಿಕೊಂಡು ಮಾಸ್ಕ್ ಅನ್ನು ಹಚ್ಚಿ ಸರಳವಾದ ಗಂಟು ಕಟ್ಟಿ ಕೂದಲನ್ನು ಇರಿಸಿ, ಶವರ್ ಕ್ಯಾಪ್ ಬಳಸಿಕೊಂಡು ಕೂದಲನ್ನು ಕವರ್ ಮಾಡಿ ಒಂದು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ನಂತರ ಶಾಂಪೂ ಮತ್ತು ಕಂಡೀಷನಿಂಗ್ ಮಾಡಿ

ಕೂದಲನ್ನು ದೃಢಗೊಳಿಸುವ ಮಾಸ್ಕ್
ನಿಮ್ಮ ಕೂದಲಿನ ಬುಡವನ್ನು ಗಟ್ಟಿಮಾಡಿ ಕೂದಲಿನ ಬೆಳವಣಿಗೆಯನ್ನು ಈ ಮಾಸ್ಕ್ ಮಾಡುತ್ತದೆ
ಒಂದು ಪಾತ್ರೆಯಲ್ಲಿ ಎರಡು ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ, ಇದಕ್ಕೆ ಒಂದು ಚಮಚ ಅಲೋವೇರಾ ಜ್ಯೂಸ್ ಬೆರೆಸಿ, ಐದು ಹನಿ ಬಾದಾಮಿ ಎಣ್ಣೆ ಸೇರಿಸಿಕೊಳ್ಳಿ ಮತ್ತು ಐದು ಹನಿ ರೋಸ್‎ಮೇರಿ ಆಯಿಲ್ ಸೇರಿಸಿ ದಪ್ಪನೆಯ ಮಿಶ್ರಣ ದೊರೆಯುವವರೆಗೆ ಕಲಸಿಕೊಳ್ಳಿ

ನಿಮ್ಮ ಕೂದಲಿನ ಬುಡಕ್ಕೆ ಮತ್ತು ತುದಿಗೆ ಹಚ್ಚಿ, ಗಂಟೆಗಳಷ್ಟು ಕಾಲ ಕಾಯಿರಿ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ, ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲು ತೊಳೆದುಕೊಳ್ಳಿ ಬಿರುಸಾದ ಕೂದಲಿಗೂ ಈ ಹೇರ್ ಮಾಸ್ಕ್ ಅನ್ನು ಬಳಸಿಕೊಳ್ಳಬಹುದಾಗಿದೆ. ಸ್ಪಿಲ್ಟ್ ಎಂಡ್ ಮಾಸ್ಕ್ ತುಂಡಾದ ಸೀಳುಗೂದಲನ್ನು ಸಂರಕ್ಷಿಸಲು ಈ ಮಾಸ್ಕ್ ಅನ್ನು ಬಳಸಿಕೊಳ್ಳಿ ನೊರೆಕಾಯಿ ಹುಡಿಯನ್ನು ತೆಗೆದುಕೊಂಡು ಇದಕ್ಕೆ ಮೊಟ್ಟೆಯ ಬಿಳಿಭಾಗ ಮತ್ತು ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಸೇರಿಸಿ ಸೂಕ್ತವಾಗಿ ಮಿಶ್ರವಾಗುವವರೆಗೂ ಮಿಶ್ರಣವನ್ನು ಕಲಸಿ ಮಾಸ್ಕ್ ಅನ್ನು ಹಚ್ಚಿಕೊಳ್ಳಿ, ಮತ್ತು ಕೂದಲಿನ ಬುಡಕ್ಕೆ ಇದು ತಲುಪುವವರೆಗೂ ಒಂದು ಗಂಟೆ ಹಾಗೆಯೇ ಬಿಡಿ ಶಾಂಪೂ ಮತ್ತು ಕಂಡೀಷನಿಂಗ್ ಅನ್ನು ಕೂದಲಿಗೆ ಬಳಸಿ ತೊಳೆದುಕೊಳ್ಳಿ.

English summary

Speed Up Your Hair Growth With Egg Hair Masks!

For longer, stronger and darker hair, try these egg hair masks that will suit most hair types. Also, mentioned are egg masks that can suit different hair types.
Please Wait while comments are loading...
Subscribe Newsletter