For Quick Alerts
ALLOW NOTIFICATIONS  
For Daily Alerts

ಬರೀ ಒಂದೇ ವಾರದಲ್ಲಿ 'ತಲೆಹೊಟ್ಟು ಸಮಸ್ಯೆ' ಮಂಗಮಾಯ!

ತಲೆಹೊಟ್ಟು ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಕಂಡು ಬರುವ ಸಮಸ್ಯೆಯಾಗಿದೆ. ತಲೆಹೊಟ್ಟು ಸಮಸ್ಯೆಯೂ ತಲೆ ಕೂದಲಿನ ಆರೈಕೆ ಸರಿಯಾಗಿ ಮಾಡದಿದ್ದರೆ, ತಲೆ ಬುಡ ಒಣಗುವುದರಿಂದ, ಕೆಲವರಿಗೆ ಕಾಯಿಲೆಯಿಂದಾಗಿ ಕಾಣಿಸಿಕೊಳ್ಳುತ್ತದೆ.

By Manu
|

ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ವೈದ್ಯಕೀಯ ವಿಜ್ಞಾನವು ಇದನ್ನು ಇನ್‍ಫೆಕ್ಷನ್ ಎಂದು ಪರಿಗಣಿಸುತ್ತದೆ. ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

ಚಿಂತಿಸದಿರಿ ಈ ಲೇಖನದಲ್ಲಿ ಕೆಲವೊಂದು ಸಿಂಪಲ್ ಮನೆಮದ್ದನ್ನು ಬಳಸಿಕೊಂಡು ತಲೆಹೊಟ್ಟನ್ನು ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿದುಕೊಳ್ಳುವ. ಇದು ತಲೆಹೊಟ್ಟನ್ನು ನಿವಾರಿಸಿ ಅದರಿಂದ ಆಗುವಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.....ಮುಂದೆ ಓದಿ....

ಮೆಂತೆ-ಬೇವು

ಮೆಂತೆ-ಬೇವು

•ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ.

*ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಕೆಲವು ಹನಿ ನೀರು ಹಾಕಿ ಸರಿಯಾಗಿ ಪೇಸ್ಟ್ ಮಾಡಿ.

•ಪೇಸ್ಟ್ ಮೃದುವಾದ ಬಳಿಕ ಅದಕ್ಕೆ ನಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ.

•ಎಣ್ಣೆಯಂಶವಿರುವ ಕೂದಲಿಗೆ ಇದನ್ನು ಹಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

•ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಸೀಗೆಪುಡಿ ಬಳಸಿ

ಸೀಗೆಪುಡಿ ಬಳಸಿ

ಸೀಗೆ ಅಥವಾ ಶಿಕಾಕಾಯಿ ಪೌಡರ್ ಎಂದು ದೊರಕುವ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೀಗೆಪುಡಿ ತಲೆಹೊಟ್ಟನ್ನು ನಿವರಿಸುವ ಜೊತೆ ಕೂದಲಿಗೆ ಕಾಂತಿಯನ್ನೂ ನೀಡುತ್ತದೆ.

ನೆಲ್ಲಿಕಾಯಿ ಪೇಸ್ಟ್

ನೆಲ್ಲಿಕಾಯಿ ಪೇಸ್ಟ್

ನೆಲ್ಲಿಕಾಯಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ತಲೆ ಕೂದಲ ಬುಡಕ್ಕೆ ಲೇಪಿಸಿ. ಇದನ್ನು ಲೇಪಿಸಿ, 30 ನಿಮಿಷಗಳ ಕಾಲ ಬಿಡಿ, ನಂತರ ನೀರಿನಿಂದ ತೊಳೆಯಿರಿ. ಇದು ತಲೆ ಹೊಟ್ಟನ್ನು ನಿವಾರಿಸಿಕೊಳ್ಳಲು ಅದ್ಭುತವಾದ ಪರಿಹಾರವಾಗಿರುತ್ತದೆ.

ದಾಸವಾಳ ಹೂವು....

ದಾಸವಾಳ ಹೂವು....

ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ಮೊಸರು...

ಮೊಸರು...

*ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿ, ಕನಿಷ್ಠ ಒಂದು ಗಂಟೆ ನೆನೆಯಲು ಬಿಡಿ.

*ನಂತರ ಇದನ್ನು ಒಂದು ನೈಸರ್ಗಿಕ ಶಾಂಪೂವನ್ನು ಬಳಸಿಕೊಂಡು ಚೆನ್ನಾಗಿ ತೊಳೆಯಿರಿ.

*ಹೀಗೆ ವಾರಕ್ಕೆ ಕನಿಷ್ಠ ಎರಡು ಬಾರಿಯಾದರು ಮಾಡಿ.

English summary

Simple Tips To Get Rid Of Dandruff Permanently

There are many products available in the market that can help you get rid of dandruff. But, most are not really effective in keeping your scalp dandruff-free on a long-term basis. Some might or might not help... So We have compiled a list of the top home remedies for dandruff that are effective and long-lasting.
X
Desktop Bottom Promotion