For Quick Alerts
ALLOW NOTIFICATIONS  
For Daily Alerts

ಎಣ್ಣೆ ಮಸಾಜ್‌ನಲ್ಲಿದೆ ಮಿರಿಮಿರಿ ಮಿನುಗುವ ಕೂದಲಿನ ಗುಟ್ಟು!

By Manu
|

ಹೆಣ್ಣಿಗೆ ನೈಸರ್ಗಿವಾದ ಕೊಡುಗೆಗಳಲ್ಲಿ ತಲೆಗೂದಲು ಕೂಡ ಒಂದಾಗಿದೆ. ಆದರೆ ಏನು ಮಾಡೋದು ಎಲ್ಲರ ತಲೆಗೂದಲು ನೈಸರ್ಗಿಕ ಚೆಲುವನ್ನು ಹೊಂದಿಕೊಂಡು ಬಂದಿರುವುದಿಲ್ಲ. ಕೆಲವರು ಕೂದಲು ಚಿಕ್ಕದಾಗಿ ಹೊಳಪು ಕಳೆದುಕೊಂಡು ತೆಳುವಾಗಿದ್ದರೆ ಇನ್ನು ಕೆಲವರದು ಹೊಳೆಯುವ ದಪ್ಪನೆಯ ಮಂಡಿಯನ್ನು ಮುಟ್ಟುವ ಕೂದಲಾಗಿರುತ್ತದೆ. ಹೀಗೆ ತೆಲಗೂದಲಿನ ಸೌಂದರ್ಯ ವೈವಿಧ್ಯಮಯವಾಗಿದ್ದರೂ ನಮ್ಮ ತಲೆಗೂದಲು ನಮ್ಮ ಸೌಂದರ್ಯಕ್ಕೆ ಕೈಗನ್ನಡಿಯಂತಿರಬೇಕು. ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಿರಬೇಕು.

ತಲೆಗೂದಲು ಚೆನ್ನಾಗಿಲ್ಲವೆಂದು ಮರುಗುವ ಎಷ್ಟೋ ಯುವತಿಯರನ್ನು ಹೆಂಗಳೆಯರನ್ನು ನೀವು ಕಂಡಿರುತ್ತೀರಿ. ಅಷ್ಟೇ ಏಕೆ ನೀವು ಒಮ್ಮೊಮ್ಮೆ ಮರುಗಿರುತ್ತೀರಿ. ಮೊದಲು ಉದ್ದವಾಗಿದ್ದು ದಪ್ಪ ಇದ್ದ ಕೂದಲು ಈಗ ವಿಪರೀತ ಉದುರಿ ತೆಳುವಾಗಿದೆ, ಎಷ್ಟೋ ಬಗೆಯ ಶಾಂಪೂ ಬಳಸಿದರೂ ಕೂದಲು ಮಾತ್ರ ಬೆಳೆಯುತ್ತಿಲ್ಲ, ನನ್ನ ಕೂದಲು ತುಂಬಾ ಒರಟಾಗಿದೆ ನಯತ್ವ ಇಲ್ಲ ಹೀಗೆ ತಮ್ಮ ದುಃಖ ತೋಡಿಕೊಳ್ಳುವ ಎಷ್ಟೋ ಮಹಿಳೆಯರು ಇದ್ದಾರೆ. ಹಾರ್ಮೋನಿನನಲ್ಲಿ ಕೆಲವೊಮ್ಮೆ ಏರುಪೇರಾದಾಗ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಈ ಸತ್ಯವನ್ನು ಯಾರೂ ಕೂಡ ಒಪ್ಪಿಕೊಳ್ಳುವುದೇ ಇಲ್ಲ.

ಒತ್ತಡದ ಜೀವನ ಶೈಲಿ, ವಿಪರೀತ ರಾಸಾಯನಿಕಗಳ ಬಳಕೆ, ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡದೇ ಇರುವುದು ಹೀಗೆ ನಿಮ್ಮ ಕೂದಲಿನ ಬಗೆಗೆ ನೀವು ಅಸಡ್ಡೆ ತೋರುವ ಹಲವಾರು ಕೆಲಸಗಳನ್ನು ಮಾಡುತ್ತಿರುತ್ತೀರಿ ಕೊನೆಗೆ ನಿಮ್ಮನ್ನು ನೀವೇ ಹಳಿದುಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗೆ ನೀವೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದ್ದರೂ ನೀವು ಈ ಬಗೆಯಲ್ಲಿ ಯೋಚಿಸಲು ಹೋಗುವುದೇ ಇಲ್ಲ. ಅದಾಗ್ಯೂ ಇಂದಿನ ಲೇಖನದಲ್ಲಿ ಕೂದಲಿನ ಬೆಳವಣಿಗೆಗೆ ಎಣ್ಣೆ ಮಸಾಜ್ ಎಷ್ಟು ಮುಖ್ಯ ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ. ನೀವು ಸಣ್ಣವರಿದ್ದಾಗ ನಿಮ್ಮ ಅಜ್ಜಿ ಇಲ್ಲವೇ ನಿಮ್ಮ ತಾಯಿ ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ನಂತರ ಸೀಗೆಕಾಯಿಯಲ್ಲಿ ತಲೆ ತೊಳೆಯುತ್ತಿದ್ದ ನೆನಪು ಮನದಲ್ಲಿದೆಯೇ? ಆಗೆಲ್ಲಾ ಚೆನ್ನಾಗಿದ್ದ ಕೂದಲು ಈಗ ಮಾತ್ರ ಏಕೆ ಹೀಗೆ ಎಂದು ನಾವು ಆಶ್ಚರ್ಯಪಟ್ಟಿರುತ್ತೀರಿ? ಆದರೆ ಆ ಗುಟ್ಟನ್ನು ನಾವಿಂದು ಇಲ್ಲಿ ತಿಳಿಸಲಿದ್ದೇವೆ.

ನಿಮ್ಮ ಕೂದಲ ಬೆಳವಣಿಗೆ ಇರುವುದು ಕೂದಲಿಗೆ ಮಾಡುವ ಎಣ್ಣೆ ಮಸಾಜ್ ಅನ್ನು ಆಧರಿಸಿ. ನೀವು ತಲೆಗೂದಲಿಗೆ ಹಚ್ಚುವ ಯಾವುದೇ ಎಣ್ಣೆ ಇರಲಿ ಅದನ್ನು ಸರಿಯಾದ ಪ್ರಮಾಣದಲ್ಲಿ ರೀತಿಯಲ್ಲಿ ನೀವು ಕೂದಲಿಗೆ ಬಳಸಿದಲ್ಲಿ ಅದ್ಭುತ ಪ್ರತಿಫಲವನ್ನು ನಿಮಗೆ ಪಡೆದುಕೊಳ್ಳಬಹುದು. ಮಸಾಜ್ ಮಾಡುವುದರಿಂದ ಕೂದಲಿಗೆ ರಕ್ತ ಪ್ರಸಾರಣೆ ಚೆನ್ನಾಗಿ ನಡೆಯುತ್ತದೆ. ಇದರಿಂದ ಕೂದಲು ಸ್ವಾಭಾವಿಕ ಹೊಳಪನ್ನು ಪಡೆದುಕೊಂಡು ತನ್ನಿಂದ ತಾನೇ ಬೆಳೆಯುತ್ತದೆ. ಹಾಗಿದ್ದರೆ ತಲೆಗೂದಲ ಮಸಾಜ್‌ನ ಇನ್ನಷ್ಟು ಲಾಭಗಳನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.

ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ

ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ

ನಿಯಮಿತವಾಗಿ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲು ಸಣ್ಣ ವಯಸ್ಸಿನಲ್ಲಿಯೇ ಬೆಳ್ಳಗಾಗುವುದನ್ನು ತಪ್ಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿತ್ಯವೂ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲು ಬಲಯುತವಾಗಿ ಆರೋಗ್ಯಕರವಾಗಿ ಇರುತ್ತದೆ.

ಮಾಲಿನ್ಯದಿಂದ ರಕ್ಷಿಸುತ್ತದೆ

ಮಾಲಿನ್ಯದಿಂದ ರಕ್ಷಿಸುತ್ತದೆ

ನಿಮ್ಮ ಕೂದಲನ್ನು ಮಾಲಿನ್ಯ ವಾತಾವರಣದಿಂದ ರಕ್ಷಿಸಿಕೊಳ್ಳುವಲ್ಲಿ ಎಣ್ಣೆ ಮಸಾಜ್ ಪರಿಣಾಮಕಾರಿಯಾಗಿದೆ. ನಮ್ಮ ಮುಖವನ್ನು ನಾವು ನಿತ್ಯವೂ ತೊಳೆದುಕೊಳ್ಳುತ್ತೇವೆ ಅದೇ ಮಾದರಿಯಲ್ಲಿ ಆಗಾಗ್ಗೆ ಕೂದಲುನ್ನು ತೊಳೆದುಕೊಳ್ಳುವುದು ಕಷ್ಟವಾಗಲಿದೆಯೇ? ಇಲ್ಲ. ಇದರಿಂದ ಕೂದಲಿಗೆ ಆರೋಗ್ಯ ಹೊಳಪು ನೈಸರ್ಗಿಕವಾಗಿ ಬರುತ್ತದೆ. ಕೂದಲಿಗೆ ನೀವು ಹಚ್ಚುವ ಎಣ್ಣೆ ಕೂದಲಿಗೆ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಧೂಳು, ಕೊಳೆ, ಮಾಲಿನ್ಯ, ಸೂರ್ಯನ ಆಲ್ಟ್ರಾ ವೈಲೆಟ್ ಕಿರಣದಿಂದ ಕೂದಲನ್ನು ಸಂರಕ್ಷಿಸುತ್ತದೆ.

ಕೂದಲಿನ ಒಣಗುವಿಕೆಯನ್ನು ಕಡಿಮೆ ಮಾಡುತ್ತದೆ

ಕೂದಲಿನ ಒಣಗುವಿಕೆಯನ್ನು ಕಡಿಮೆ ಮಾಡುತ್ತದೆ

ಕೂದಲನ್ನು ಡ್ರೈನೆಸ್‌ನಿಂದ ಕಾಪಾಡಲು ಎಣ್ಣೆ ಮಸಾಜ್ ತುಂಬಾ ಪರಿಣಾಮಕಾರಿಯಾದುದು. ಅಂತೆಯೇ ದೀರ್ಘ ಸಮಯದವರೆಗೆ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ತಲೆಯನ್ನು ತಂಪಾಗಿಸುವ ಗುಣವನ್ನು ಮಸಾಜ್ ಹೊಂದಿರುವುದರಿಂದ ತಲೆಬಿಸಿಯಾಗುವಂತಹ ಕಠಿಣ ಪರಿಸ್ಥಿತಿಗಳಿಂದ ನಿಮ್ಮನ್ನು ಸಂರಕ್ಷಿಸುತ್ತದೆ. ನಿಮ್ಮ ಕೂದಲು ತೀಕ್ಷ್ಣವಾಗಿ ಒಣಗಿದ್ದಲ್ಲಿ, ಕೂದಲಿಗೆ ಎಣ್ಣೆಯನ್ನು ಹಚ್ಚಿ ನಂತರ ಟವೆಲ್ ಅನ್ನು ಬಿಸಿನೀರಲ್ಲಿ ಮುಳುಗಿಸಿ ಕೂದಲಿಗೆ ಕಟ್ಟಿಕೊಳ್ಳಿ. ಇದು ನಿಮ್ಮ ತಲೆಬುರುಡೆಗೂ ಎಣ್ಣೆ ಒದಗುವಂತೆ ಮಾಡುತ್ತದೆ.

ಕೂದಲನ್ನು ಮೃದುಗೊಳಿಸುತ್ತದೆ

ಕೂದಲನ್ನು ಮೃದುಗೊಳಿಸುತ್ತದೆ

ನಿಮ್ಮ ಕೂದಲಿಗೆ ನಿಯಮಿತವಾಗಿ ಇಲ್ಲವೇ ಆಗಾಗ್ಗೆ ಎಣ್ಣೆ ಮಸಜ್ ಮಾಡುವುದರಿಂದ ಕೂದಲು ಮೃದುಗೊಳ್ಳುತ್ತದೆ. ನಿಮ್ಮ ಕೂದಲಿಗೆ ಎಣ್ಣೆ ಮಸಾಜ್ ಮಾಡುವುದರಿಂದ ತಲೆಬುರುಡೆಗೆ ರಕ್ತ ಪರಿಚಲನೆಯನ್ನು ನೀಡುತ್ತದೆ. ಅಂತೆಯೇ ಹಾನಿಯಾದ ಕೂದಲನ್ನು ರಿಪೇರಿ ಮಾಡುತ್ತದೆ. ಇದರಿಂದ ನಿಮ್ಮ ಕೂದಲು ಮೃದುವಾಗಿ ಹೊಳೆಯುತ್ತದೆ.

English summary

Should You Oil Your Hair Every Day?

Certainly, many of us still swear by our grandma's special weekend 'champi' or the more famously known 'maalish,' many of us have forgotten the goodness of oiling hair regularly. While many of you may not know, but regularly oiling hair is super beneficial in the long run. From covering your hair from becoming grey unanimously, to fighting fungal and dandruff, regular oiling of hair has many benefits.
Story first published: Thursday, March 10, 2016, 19:43 [IST]
X
Desktop Bottom Promotion