For Quick Alerts
ALLOW NOTIFICATIONS  
For Daily Alerts

ಕೂದಲಿನ ಸೀಳು ತುದಿಯ ಸಮಸ್ಯೆಗೆ-ಬಾಳೆಹಣ್ಣಿನ ಪ್ಯಾಕ್

By Jaya Subramanya
|

ಸ್ತ್ರೀಯರಿಗೆ ತಲೆಗೂದಲಿನ ಸಮಸ್ಯೆಯು ಮುಗಿಯದ ಕಗ್ಗಂಟಾಗಿದೆ. ಕೂದಲುದುರುವುದು, ತಲೆಹೊಟ್ಟು, ತಲೆಕೂದಲು ಬಿಳಿಯಾಗುವುದು ಇದರ ಜೊತೆಗೆ ಸೀಳು ಕೂದಲು ಸಮಸ್ಯೆಗಳು ಇನ್ನಷ್ಟು ತೀರದ ಸಮಸ್ಯೆಯಾಗಿ ಕಾಡುತ್ತದೆ. ಸೀಳುಗೂದಲಿನ ನಿವಾರಣೆಗೆ ನೀವು ಪಾರ್ಲರ್‎ಗೆ ಹೋಗಿ ಕೂದಲನ್ನು ಟ್ರಿಮ್ ಮಾಡಿಸಿಕೊಂಡು ಬರುತ್ತೀರಿ ಅಲ್ಲವೇ? ಇದಕ್ಕಾಗಿ ಕೊಂಚ ಹಣ ಕೂಡ ನೀವು ಖರ್ಚು ಮಾಡುತ್ತೀರಿ. ಆದರೆ ಸ್ವಲ್ಪ ಸಮಯದ ನಂತರ ಇದು ಪುನಃ ಕಾಣಿಸಿಕೊಂಡು ನಿಮಗೆ ಕಿರಿಕಿರಿಯನ್ನುಂಟು ಮಾಡುವುದು ಖಂಡಿತ. ಕೂದಲು ತುಂಡಾಗುವಿಕೆಯನ್ನು ತಡೆಗಟ್ಟಲು 10 ವಿಧಾನಗಳು

ಪಾರ್ಲರ್‎ಗೆ ಹೋದಗೆಯೇ ಕೆಲವೊಂದು ನೈಸರ್ಗಿಕ ಮನೆಮದ್ದುಗಳ ಮೂಲಕ ಪ್ಯಾಕ್‎ಗಳ ಮೂಲಕ ಸೀಳುಗೂದಲಿನ ನಿವಾರಣೆಯನ್ನು ಮಾಡಿ ತಲೆಗೂದಲಿನ ಪೋಷಣೆಯನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಯಾವುದೇ ರಾಸಾಯನಿಕಗಳಿಲ್ಲದೆ ನೈಸರ್ಗಿಕ ಅಂಶಗಳನ್ನು ಮೈಗೂಡಿಸಿಕೊಂಡಿರುವ ಈ ಉತ್ಪನ್ನಗಳು ನಿಮ್ಮ ಕೂದಲನ್ನು ಪೋಷಿಸುವುದು ಮಾತ್ರವಲ್ಲದೆ ಕೂದಲಿನ ಚೆಲುವನ್ನು ವೃದ್ಧಿಸುತ್ತದೆ. ಬಾಳೆಹಣ್ಣನ್ನೇ ಇಂದಿನ ಲೇಖನದಲ್ಲಿ ನಿಮ್ಮ ಕೂದಲಿನ ಚೆಲುವನ್ನು ವೃದ್ಧಿಸುವ ಪೋಷಕ ಅಂಶವಾಗಿ ನಾವು ತೆಗೆದುಕೊಂಡಿರುವುದು. ಈ ಹಣ್ಣಿನ ಜೊತೆಗೆ ಕೆಲವೊಂದು ವಸ್ತುಗಳನ್ನು ಮಿಶ್ರ ಮಾಡಿ ಕೂದಲಿನ ಪ್ಯಾಕ್ ಅನ್ನು ಸಿದ್ಧಪಡಿಸಿಕೊಳ್ಳಬಹುದು. ಹಾಗಿದ್ದರೆ ಬನ್ನಿ ಕೆಳಗಿನ ಲೇಖನದಲ್ಲಿ ಆ ಪ್ಯಾಕ್‎ಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ. ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್

ಬಾಳೆಹಣ್ಣು ಮತ್ತು ಮೊಟ್ಟೆ

ಬಾಳೆಹಣ್ಣು ಮತ್ತು ಮೊಟ್ಟೆ

ಒಂದು ಪಾತ್ರೆಗೆ ಮೊಟ್ಟೆಯ ಬಿಳಿಭಾಗ ಮತ್ತು ಬಾಳೆಹಣ್ಣನ್ನು ಹಾಕಿ. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಸೀಳ್ಗೂದಲಿನ ನಿವಾರಣೆಗಾಗಿ ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ಕೂದಲಿಗೆ ಬಳಸಿ. ಮೊಟ್ಟೆಯು ಪ್ರೋಟೀನ್ ಅನ್ನು ಒಳಗೊಂಡಿರುವುದರಿಂದ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ.

ಬಾಳೆಹಣ್ಣು ಮತ್ತು ತೆಂಗಿನೆಣ್ಣೆ

ಬಾಳೆಹಣ್ಣು ಮತ್ತು ತೆಂಗಿನೆಣ್ಣೆ

ಪಾತ್ರೆಗೆ ಬಾಳೆಹಣ್ಣನ್ನು ಹಾಕಿ. ಇದಕ್ಕೆ 2 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಂಡು ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳುತ್ತಾ ಕೂದಲಿಗೆ ಹಚ್ಚಿಕೊಳ್ಳಿ. ಈ ಪ್ಯಾಕ್ ಸೀಳ್ಗೂದಲನ್ನು ನಿವಾರಿಸುವುದರ ಜೊತೆಗೆ ದಪ್ಪನೆಯ ಹೊಳೆಯುವ ಕೂದಲನ್ನು ನಿಮಗೆ ನೀಡುವುದು ಖಂಡಿತ.

ಬಾಳೆಹಣ್ಣು ಮತ್ತು ಜೇನು

ಬಾಳೆಹಣ್ಣು ಮತ್ತು ಜೇನು

ನಿಮ್ಮ ಕೂದಲು ವಿಪರೀತ ಉದುರುತ್ತಿದೆ ಎಂದಾದಲ್ಲಿ, ಈ ಸಮಸ್ಯೆಯನ್ನು ನಿವಾರಿಸಲು ಇರುವ ಮಾರ್ಗವೆಂದರೆ ಜೇನಾಗಿದೆ. ಬಾಳೆಹಣ್ಣು ಮಿಶ್ರಣಕ್ಕೆ ಎರಡು ಚಮಚಗಳಷ್ಟು ಜೇನು ಸೇರಿಸಿ. ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಅಂತೆಯೇ ಸೀಳ್ಗೂದಲಿನ ಸಮಸ್ಯೆ ಪರಿಹಾರಕ್ಕಾಗಿ ಈ ಮಿಶ್ರಣವನ್ನು ಹೇರ್ ಮಾಸ್ಕ್‎ನಂತೆ ಬಳಸಿ.

ಬಾಳೆಹಣ್ಣು ಮತ್ತು ಆಲೀವ್ ಆಯಿಲ್

ಬಾಳೆಹಣ್ಣು ಮತ್ತು ಆಲೀವ್ ಆಯಿಲ್

ತಲೆಬುರುಡೆಯ ಮಾಯಿಶ್ಚರೈಸ್ ಮಾಡಲು ಮತ್ತು ಸೀಳುಗೂದಲಿನ ನಿವಾರಣೆಗಾಗಿ ಆಲೀವ್ ಆಯಿಲ್ ಅನ್ನು ಬಳಸಲಾಗುತ್ತದೆ.ಬಾಳೆಹಣ್ಣಿನಿಂದ ಕೂದಲನ್ನು ಮಸಾಜ್ ಮಾಡಿದ ನಂತರ ಆಲೀವ್ ಆಯಿಲ್ ಮಸಾಜ್ ಅನ್ನು ಮಾಡಿ. ಈ ಕೂದಲಿನ ಕಾಳಜಿ ಸಲಹೆಯು ತಲೆಬುರುಡೆ ಒಣಗುವುದನ್ನು ತಪ್ಪಿಸುತ್ತದೆ.

ಬಾಳೆಹಣ್ಣು ಮತ್ತು ಹಾಲು

ಬಾಳೆಹಣ್ಣು ಮತ್ತು ಹಾಲು

ಬಾಳೆಹಣ್ಣು ಮಿಶ್ರಣಕ್ಕೆ ಒಂದು ಕಪ್‎ನಷ್ಟು ಹಾಲನ್ನು ಸೇರಿಸಿ. ದಪ್ಪನೆಯ ಮಿಶ್ರಣವನ್ನು ತಯಾರಿಸುವುದಕ್ಕಾಗಿ ಈ ಸಾಮಾಗ್ರಿಗಳನ್ನು ಕಲಸಿಕೊಳ್ಳಿ. ಕೂದಲಿಗೆ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ಹತ್ತು ನಿಮಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆತೊಳೆದುಕೊಳ್ಳಿ. ಕೂದಲು ಒಣಗಿದ ನಂತರ ಬಾಚಿಕೊಂಡಾಗ ಸೀಳ್ಗೂದಲು ಉದುರುವುದನ್ನು ನಿಮಗೆ ಕಾಣಬಹುದು.

ಬಾಳೆಹಣ್ಣು ಮತ್ತು ಮೊಸರು

ಬಾಳೆಹಣ್ಣು ಮತ್ತು ಮೊಸರು

ಒಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಬಾಳೆಹಣ್ಣನ್ನು ಇದಕ್ಕೆ ಸೇರಿಸಿ. ಎಲ್ಲಾ ಮಿಶ್ರಣಗಳನ್ನು ಚೆನ್ನಾಗಿ ಕಲಸಿಕೊಂಡು ಸೀಳ್ಗೂದಲು ಇರುವಲ್ಲಿ ಇದನ್ನು ಹಚ್ಚಿಕೊಳ್ಳಿ. ಕೂದಲಿನ ತುದಿಯಲ್ಲಿ ಮಿಶ್ರಣ ಚೆನ್ನಾಗಿ ಕೂರುವುದಕ್ಕಾಗಿ ತಲೆಗೂದಲನ್ನು ಬಾಚಿಕೊಳ್ಳಿ. 20 ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ.

English summary

Remove Thy Split Ends With A Banana

Every time you visit a saloon, doesn't the hair dresser cut off those split ends, calling your hair dry and rough too? Well, with this effective home remedy at hand, there will be no need of you visiting a hair dresser to trim your split ends. This yellow fleshy fruit has all the properties to look after and pamper your hair with love. However, you also need to add in a few extra ingredients that will help your tresses to shine naturally and beautifully.
Story first published: Wednesday, March 23, 2016, 20:10 [IST]
X
Desktop Bottom Promotion