For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಬೇಕೇ?-ಪದೇ ಪದೇ ತೊಳೆಯದಿರಿ

By Arshad
|

ಸೊಂಪಾದ, ಕಾಂತಿಯುಕ್ತ ಮತ್ತು ನೀಳವಾದ ತಲೆಗೂದಲು ಯಾರಿಗೆ ಬೇಡ? ಆದರೆ ಇದು ಇದ್ದವರಲ್ಲಿ ಇದರ ಆರೈಕೆಯ ಗುಟ್ಟು ಕೇಳಿದರೆ ಇದನ್ನು ಅವರು ಪದೇ ಪದೇ ತೊಳೆಯದೇ ಇರುವ ಮಾಹಿತಿಯನ್ನು ನೀಡುತ್ತಾರೆ. ಇವರು ಹೇಳಿದ್ದು ಸರಿ. ತಲೆಗೂದಲನ್ನು ಸ್ವಚ್ಛಗೊಳಿಸಲು ನಿತ್ಯ ಅಥವಾ ಅದಕ್ಕೂ ಹೆಚ್ಚು ಬಾರಿ ತೊಳೆದುಕೊಳ್ಳುವುದರಿಂದಲೇ ಕೂದಲು ಸೊಂಪಾಗಿ ಬೆಳೆಯದಿರಲು ಕಾರಣವಾಗುತ್ತದೆ. ಆದರೆ ಶಾಂಪೂ ಉಪಯೋಗಿಸಿ ತೊಳೆಯುವುದನ್ನು ಕಡಿಮೆ ಮಾಡಬೇಕು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ.

ವಾಸ್ತವವಾಗಿ ತಲೆಗೆ ನೀರು ಹಾಕಿಕೊಳ್ಳುವುದನ್ನೇ ಕಡಿಮೆ ಮಾಡಬೇಕು. ಹಾಗಾದರೆ ಸ್ನಾನವನ್ನೇ ಮಾಡಬಾರದೇ? ತಲೆ ತೊಳೆಯದೇ ಜಿಡ್ಡು ಹೆಚ್ಚಾಗಿ ವಾಸನೆ ಬರುವುದಿಲ್ಲವೇ? ಸ್ವಚ್ಛವಾಗಿಲ್ಲದ ಕೂದಲಿನಲ್ಲಿ ಕಲ್ಮಶ, ಕೀಟಾಣುಗಳು ಸೇರಿಕೊಳ್ಳುವುದಿಲ್ಲವೇ ಎಂಬೆಲ್ಲಾ ಅನುಮಾನಗಳು ನಿಮ್ಮನ್ನು ಕಾಡುತ್ತಿರಬಹುದು. ಕೆಳಗಿನ ಸ್ಲೈಡ್ ಶೋ ಈ ಎಲ್ಲಾ ಅನುಮಾನಗಳನ್ನು ಪರಿಹರಿಸಲಿದೆ....

ಮುಂಜಾನೆಯ ದುಗುಡವನ್ನು ಹೆಚ್ಚಿಸುತ್ತದೆ

ಮುಂಜಾನೆಯ ದುಗುಡವನ್ನು ಹೆಚ್ಚಿಸುತ್ತದೆ

ಮಹಿಳೆಯರಿಗೆ ತಲೆಸ್ನಾನ ಮಾಡಲೇ ಹೆಚ್ಚು ಸಮಯ ಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಉದ್ಯೋಗಸ್ಥ ಮಹಿಳೆಯರ ಸಹಿತ ಗೃಹಿಣಿಯರಿಗೂ ಬೆಳಗ್ಗಿನ ಹೊತ್ತು ಅತಿ ಹೆಚ್ಚು ವ್ಯಸ್ತರಾಗಿರಬೇಕಾಗುತ್ತದೆ. ಬೆಳಿಗ್ಗೆ ಸ್ನಾನಕ್ಕೆಂದು ಹೆಚ್ಚು ಸಮಯ ತೆಗೆದುಕೊಂಡರೆ ಬೆಳಗ್ಗಿನ ಧಾವಂತ ಇನ್ನಷ್ಟು ಹೆಚ್ಚಿ ದುಗುಡವೂ ಹೆಚ್ಚುತ್ತದೆ. ಬದಲಿಗೆ ವಾರಕ್ಕೆರಡು ಬಾರಿ ಮಾತ್ರ ತಲೆಸ್ನಾನ ಮಾಡಿ ಉಳಿದ ದಿನಗಳಲ್ಲಿ ತಲೆಸ್ನಾನ ಮಾಡದೇ ಮೈಸ್ನಾನ ಮಾಡಿಕೊಳ್ಳುವುದು ಜಾಣತನ. ಈ ಎರಡು ದಿನಗಳಲ್ಲಿ ಒಂದು ರಜಾದಿನವಾಗಿದ್ದರೆ ಇನ್ನೊಂದು ನಿಮ್ಮ ಆಯ್ಕೆಯ ದಿನವಾಗಿದ್ದು ಆದಿನ ಮಾತ್ರ ಕೊಂಚ ಬೇಗನೇ ಎದ್ದರೆ ಸಾಕು.

ಈ ವಿಧಾನದಿಂದ ಕೂದಲು ಆರೋಗ್ಯಕರವಾಗಿರುತ್ತದೆ

ಈ ವಿಧಾನದಿಂದ ಕೂದಲು ಆರೋಗ್ಯಕರವಾಗಿರುತ್ತದೆ

ಪ್ರತಿದಿನ ಸ್ನಾನದ ಸಮಯದಲ್ಲಿ ತಲೆಗೆ ಹಚ್ಚುವ ಸೋಪು ಶಾಂಪೂಗಳಲ್ಲಿರುವ ರಾಸಾಯನಿಕಗಳು ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲಗಳನ್ನೂ ನಿವಾರಿಸಿಬಿಡುತ್ತವೆ. ಇದು ಮತ್ತೆ ಉತ್ಪತ್ತಿಯಾಗುವುದು ಬಹಳ ನಿಧಾನವಾಗಿ. ಇದು ಪೂರ್ತಿಯಾಗಿ ಉತ್ಪತ್ತಿಯಾಗುವ ಮುನ್ನವೇ ಮತ್ತೊಮ್ಮೆ ಸ್ನಾನ ಮಾಡಿದರೆ ಉತ್ಪತ್ತಿಯಾಗಿದ್ದ ಅಲ್ಪ ಪ್ರಮಾಣವೂ ತೊಳೆದು ಹೋಗಿ ಚರ್ಮ ವಿಪರೀತವಾಗಿ ಬಳಲುತ್ತದೆ. ಪರಿಣಾಮವಾಗಿ ಸಡಿಲವಾದ ಚರ್ಮ, ಸುಲಭವಾಗಿ ಕಿತ್ತು ಬರುವ ಕೂದಲು, ತಲೆಹೊಟ್ಟು ಮೊದಲಾದವು ಎದುರಾಗುತ್ತವೆ. ಆದ್ದರಿಂದ ವಾರಕ್ಕೆರಡು ಬಾರಿ ಸ್ನಾನ ಮಾಡಿದರೆ ನೈಸರ್ಗಿಕ ತೈಲಗಳು ಪುನರುತ್ಪತ್ತಿಯಾಗಲು ಸಾಕಷ್ಟು ಸಮಯಾವಕಾಶ ನೀಡಿದಂತಾಗುತ್ತದೆ.

ಬಣ್ಣದ ಗಾಢತೆ ಉಳಿಯುತ್ತದೆ

ಬಣ್ಣದ ಗಾಢತೆ ಉಳಿಯುತ್ತದೆ

ಒಂದು ವೇಳೆ ನೀವು ನಿಮ್ಮ ಕೂದಲಿಗೆ ಬಣ್ಣ ಅಥವಾ ಮದರಂಗಿ ಹಚ್ಚಿಕೊಂಡಿದ್ದರೆ ನಿತ್ಯದ ಸ್ನಾನದ ಮೂಲಕ ಈ ಬಣ್ಣ ಸುಲಭವಾಗಿ ಕಳೆಯುತ್ತದೆ. ಆದರೆ ವಾರಕ್ಕೆರಡು ಬಾರಿಯ ಸ್ನಾನದಿಂದ ಈ ಬಣ್ಣ ಬಹುಕಾಲ ಉಳಿಯುತ್ತದೆ. ಪ್ರತಿ ಸ್ನಾನದಿಂದಲೂ ಈ ಬಣ್ಣ ತಿಳಿಯಾಗುತ್ತಾ ಹೋಗುವ ಕಾರಣ ಹೆಚ್ಚಿನ ಅಂತರದ ದಿನಗಳಲ್ಲಿ ತಲೆಸ್ನಾನ ಮಾಡುವುದು ಉತ್ತಮ.

ಜಡೆಕಟ್ಟಲು ಅನುಕೂಲಕರವಾಗಿದೆ

ಜಡೆಕಟ್ಟಲು ಅನುಕೂಲಕರವಾಗಿದೆ

ಸ್ನಾನದ ಬಳಿಕ ಕೂದಲು ಅತಿ ಸೌಮ್ಯವಾಗುವ ಕಾರಣ ಸುಲಭವಾಗಿ ಬಿಗಿಯಾದ ಜಡೆ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ನುಣುಪಾದ ಕೂದಲು ಜಾರುತ್ತದೆ. ಹೆಚ್ಚಿನ ಒತ್ತಡ ಹೇರಿದರೆ ತುಂಡಾಗುತ್ತದೆ. ಬದಲಿಗೆ ವಾರಕ್ಕೆರಡು ಬಾರಿ ಸ್ನಾನ ಮಾಡಿ ಪೂರ್ಣ ಒಣಗುವವರೆಗೆ ಜಡೆಕಟ್ಟದೇ ಇದ್ದರೆ ಒಣಗಿದ ನಂತರ ಜಡೆ ಕಟ್ಟಲು ಸುಲಭವಾಗುತ್ತದೆ ಹಾಗೂ ಈ ಕೂದಲು ಹೆಚ್ಚು ದೃಢ ಮತ್ತು ಆರೋಗ್ಯಕರವಾಗಿರುತ್ತದೆ.

ಕೂದಲ ಕಾಂತಿ ಹೆಚ್ಚುತ್ತದೆ

ಕೂದಲ ಕಾಂತಿ ಹೆಚ್ಚುತ್ತದೆ

ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲೆಗಳು ಕೂದಲಿಗೆ ಅಗತ್ಯವಾದ ಆರ್ದ್ರತೆ ನೀಡುವುದರ ಜೊತೆಗೇ ಕೂದಲಿಗೆ ನೈಸರ್ಗಿಕ ಕಾಂತಿಯನ್ನೂ ನೀಡುತ್ತದೆ. ಹೆಚ್ಚಿನ ಅಂತರದಲ್ಲಿ ತಲೆಸ್ನಾನ ಮಾಡುವ ಮೂಲಕ ಈ ತೈಲ ನಷ್ಟವಾಗದೇ ಕೂದಲು ಸೊಂಪಾಗಿ, ಕಾಂತಿಯುಕ್ತವಾಗಿ ಬೆಳೆಯಲು ಸಹಕರಿಸುತ್ತದೆ.

English summary

Reasons To Stop Washing Hair Right Now!

Who does not want to flaunt a thick mane? Have you ever wondered what the secret to shining amazing hair is? One of the reasons can be washing it less often. Yes, you read it right. In this article, we are here to share some of the basic tips on why you should stop washing your hair often. May be you have always heard shampooing less often is better for your hair and this may confuse you.So, read on to know more about the advantages of having "dirty" hair.
X
Desktop Bottom Promotion