For Quick Alerts
ALLOW NOTIFICATIONS  
For Daily Alerts

ಸೊಂಪಾದ ಕಪ್ಪಗಿನ ಕೂದಲಿಗೆ ಇಲ್ಲಿದೆ ನೈಸರ್ಗಿಕ ಎಣ್ಣೆ!

By Manu
|

ಬಿಳಿ ಕೂದಲಿಗೆ ಬಣ್ಣ ಹಾಕಿಕೊಳ್ಳುವ ಕ್ರಮ ಈಗ ಹಳೆಯದಾಗಿದೆ. ಇಂದು ಕಪ್ಪಗಿರುವ ಕೂದಲನ್ನೇ ಕೆಂಚಗಾಗಿಸುವುದು ವಾಡಿಕೆಯಲ್ಲಿದೆ. ಆದರೆ ಘನ, ಕಾಂತಿಯುಕ್ತ, ಕಪ್ಪುಬಣ್ಣದ ಕೂದಲಿಗೆ ಯಾವತ್ತಿಗೂ ಆಕರ್ಷಣೆ ಇದ್ದೇ ಇರುತ್ತದೆ. ಚಿಂತಿಸದಿರಿ, ನೀವೂ ಕೂಡ ಕಪ್ಪು ಕೂದಲಿನ ಒಡತಿಯಾಗಬಹುದು

Natural Hair Care-Hair Oils For Black Hair

ಇಂದಿನ ದಿನಗಳಲ್ಲಿ ಸೊಂಪಾದ ಕಪ್ಪಗಿನ ಕೂದಲು ಹೊಂದುವುದು ಬಹಳ ಪ್ರಯಾಸಕರವಾಗಿದೆ. ಏಕೆಂದರೆ ನಮ್ಮ ನಿಯಂತ್ರಣದಲ್ಲಿರದ ಹಲವು ವಿಷಯಗಳು ಕೂದಲ ಪೋಷಣೆಗೆ ಅಡ್ಡಿಯಾಗುತ್ತವೆ. ವಾತಾವರಣದಲ್ಲಿ ಏರುಪೇರು, ಗಾಳಿಯಲ್ಲಿನ ಪ್ರದೂಷಣೆ, ಹೊಗೆ, ಬಿಸಿಲು, ಸೂಕ್ತ ಸಮಯದಲ್ಲಿ ಆರೈಕೆ ನೀಡಲು ಸಾಧ್ಯವಾಗದಿರುವುದು ಇತ್ಯಾದಿಗಳು ಕಪ್ಪು ಕೂದಲನ್ನು ಪಡೆಯಲು ಅಡ್ಡಿಯುಂಟುಮಾಡುತ್ತವೆ.

ಕೂದಲ ಆರೈಕೆಗೆ ಅತ್ಯಂತ ಸಮರ್ಪಕ ಪ್ರಸಾಧನ ಎಂದರೆ ಎಣ್ಣೆಗಳು. ಅದರಲ್ಲೂ ಸಾಸಿವೆ ಎಣ್ಣೆ ಕೂದಲಿನ ಆರೈಕೆಯಲ್ಲಿ ಎತ್ತಿದ ಕೈ! ಹೌದು ಕಪ್ಪು ಕೂದಲಿಗೆ ಸಾಸಿವೆ ಎಣ್ಣೆಯೂ ಉತ್ತಮವಾಗಿದೆ. ಇದನ್ನು ಬಳಸುವ ವಿಧಾನ ಹೀಗಿದೆ: ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

* ಮೊದಲು ಸಾಸಿವೆ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಕೈಗಳಲ್ಲಿ ತೆಗೆದುಕೊಂಡು ಕೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ
* ಬಳಿಕ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ಕೂದಲ ತುದಿಯವರೆಗೆ ಹಚ್ಚಿ.
* ನಂತರ ಎಣ್ಣೆ ಇಳಿಯದಂತೆ ಗಟ್ಟಿಯಾಗಿ ಕೂದಲನ್ನು ತುರುಬುಕಟ್ಟಿ ಗಂಟುಹಾಕಿ ಒಂದು ಘಂಟೆ ಹಾಗೇ ಬಿಡಿ.
* ನಂತರ ಉಗುರು ಬೆಚ್ಚನೆಯ ನೀರಿನಿಂದ ಸೀಗೇಕಾಯಿಪುಡಿ ಅಥವಾ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
* ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.
* ಕೆಲವರಿಗೆ ಈ ಎಣ್ಣೆ ಹಚ್ಚಿದ ಬಳಿಕ ಶೀತ ಮತ್ತು ಮೂಗು ಕಟ್ಟುವುದು ಕಂಡುಬರಬಹುದು.

ಈ ಸಂದರ್ಭದಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡುವಾಗ ಕೆಲವು ಕಾಳುಮೆಣಸಿನ ಕಾಳುಗಳನ್ನು ಸೇರಿಸಿ. ಈ ಎಣ್ಣೆಯನ್ನು ಹಚ್ಚಿಕೊಂಡಾಗ ಶೀತವಾಗುವುದಿಲ್ಲ. ಆದರೆ ಮೈಗ್ರೇನ್ ತಲೆನೋವು, ಅಸ್ತಮಾ, ಅತಿಯಾದ ಶೀತ ಇರುವವರು ಈ ಎಣ್ಣೆಯನ್ನು ಹಚ್ಚಿಕೊಳ್ಳುವುದಾದರೆ ಒಂದು ಘಂಟೆ ಇಡಬಾರದು ಹದಿನೈದರಿಂದ ಮೂವತ್ತು ನಿಮಿಷ ಅಥವಾ ನಿಮಗೆ ಸೂಕ್ತವೆನಿಸುವಷ್ಟು ಬೇಗನೇ ತೊಳೆದುಕೊಳ್ಳಬೇಕು. ಈ ಸಂದರ್ಭದಲ್ಲಿ ವಾರಕ್ಕೆ ಮೂರು ಬಾರಿ ಅನುಸರಿಸಬೇಕು. ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ಕರಿಬೇವಿನ ಎಲೆ, ಕೊಬ್ಬರಿ ಮತ್ತು ಸಾಸಿವೆ ಎಣ್ಣೆ
ಕೂದಲ ಆರೈಕೆಗೆ ನಮ್ಮ ಒಗ್ಗರಣೆಗೆ ಬಳಸುವ ಕರಿಬೇವಿನ ಎಲೆಗಳ ಎಣ್ಣೆಯೂ ಉತ್ತಮವಾಗಿದೆ. ಇದನ್ನು ಬಳಸುವ ವಿಧಾನ ಹೀಗಿದೆ:
* ಮೊದಲು ಕೊಬ್ಬರಿ ಅಥವಾ ಸಾಸಿವೆ ಎಣ್ಣೆಯನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಇದರಲ್ಲಿ ಹೆಚ್ಚೂಕಡಿಮೆ ಎಣ್ಣೆಯಲ್ಲಿ ಪೂರ್ಣ ಮುಳುಗುವಷ್ಟು ಪ್ರಮಾಣದ ಕರಿಬೇವಿನ ಎಲೆಗಳನ್ನು ಬೆರೆಸಿ. ಈ ಪಾತ್ರೆಯನ್ನು ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಆದರೆ ಎಣ್ಣೆ ಕುದಿಯಬಾರದು, ಬೇವಿನ ಎಲೆಗಳು ಮಾತ್ರ ಕಪ್ಪಗಾಗಬೇಕು ಅಷ್ಟರವರೆಗೆ ಬಿಸಿಮಾಡಿ.


* ಎಲೆಗಳು ಕಪ್ಪಗಾಗತೊಡಗಿದ ಕೂಡಲೇ ಉರಿ ನಂದಿಸಿ ತಣಿಯಲು ಬಿಡಿ.
* ಪೂರ್ತಿಯಾಗಿ ತಣಿದ ಬಳಿಕ ಈ ಎಣ್ಣೆಯನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ.
* ಕೊಬ್ಬರಿ ಎಣ್ಣೆಯಾದರೆ ನಿತ್ಯವೂ ಬಳಸಬಹುದು. ಆದರೆ ಸಾಸಿವೆ ಎಣ್ಣೆಯಾದರೆ ಸ್ನಾನಕ್ಕೂ ಮುನ್ನ ಮಾತ್ರ ಹಚ್ಚಿಕೊಳ್ಳಬೇಕು. ಏಕೆಂದರೆ ಸಾಸಿವೆ ಮತ್ತು ಬೇವಿನ ಪರಿಮಳಗಳು ಘಾಟು ಹೊಂದಿದ್ದು ಈ ಎಣ್ಣೆ ಹಚ್ಚಿ ಹೊರಹೋಗಲು ಸಾಧ್ಯವಿಲ್ಲ.
* ಉತ್ತಮ ಪರಿಣಾಮ ಪಡೆಯಲು ಈ ಎಣ್ಣೆಯಿಂದ ಮೊದಲು ಕೂದಲ ಬುಡ ಮಸಾಜ್ ಮಾಡಿ ನಂತರ ಕೂದಲ ತುದಿಯವರೆಗೆ ಹೆಚ್ಚಿನ ಪ್ರಮಾಣವನ್ನು ಬಳಸಿ ತುರುಬು ಕಟ್ಟಿಕೊಳ್ಳಿ. ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

ಸುಮಾರು ಮೂವತ್ತು ನಿಮಿಷದಿಂದ ಒಂದು ಗಂಟೆಯ ಅವಧಿಯ ಬಳಿಕ ಸೀಗೇಕಾಯಿಪುಡಿ ಅಥವಾ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಇವೆರಡು ವಿಧಾನಗಳನ್ನು ನಿಯಮಿತ ರೂಪದಲ್ಲಿ ಅನುಸರಿಸಿಕೊಂಡು ಬರುತ್ತಿದ್ದರೆ ಕೂದಲು ಕಪ್ಪು, ನೀಳ ಮತ್ತು ಸೊಂಪಾಗಿ ಬೆಳೆಯುತ್ತದೆ.

English summary

Natural Hair Care-Hair Oils For Black Hair

To have shiny black hair is a challenge today, as hair loses its colour owing to many factors like weather conditions, lack of maintenance etc. Hair oils have ever been the natural way for hair care. Here are some natural hair care tips, hair oils, to retain the colour of the hair.
X
Desktop Bottom Promotion