For Quick Alerts
ALLOW NOTIFICATIONS  
For Daily Alerts

ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ತೆಂಗಿನೆಣ್ಣೆ ಮತ್ತು ಲಿಂಬೆರಸವನ್ನು ಬಳಸಿಕೊಂಡು ನರೆಗೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

By Hemanth
|

ಹಲವಾರು ಕಾರಣಗಳಿಂದ ಅಕಾಲಿಕವಾಗಿ ಕೂದಲುಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಕಲುಷಿತ ವಾತಾವರಣ, ಹಾರ್ಮೋನು ಅಸಮತೋಲನ, ಪೋಷಕಾಂಶಗಳ ಕೊರತೆ ಮತ್ತು ವಂಶವಾಹಿನಿ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ಕಪ್ಪು ಮಾಡಲು ರಾಸಾಯನಿಕಯುಕ್ತ ಹೇರ್ ಡೈಗಳನ್ನು ಬಳಸುತ್ತೇವೆ.

ಇದರಿಂದ ಹಲವಾರು ರೀತಿಯ ಅಡ್ಡ ಪರಿಣಾಮಗಳು ಆಗುವುದು. ಕೆಲವರಿಗೆ ರಾಸಾಯನಿಕಯುಕ್ತ ಹೇರ್ ಡೈ ನಿಂದ ಅಲರ್ಜಿಯಾಗುವುದು. ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಕೂದಲು ಕಪ್ಪಾಗಿಸಬಹುದು ಮತ್ತು ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಈ ಲೇಖನದಲ್ಲಿ ಕೂದಲನ್ನು ಬಿಳಿಯಾಗಿಸುವ ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಇದನ್ನು ತಿಳಿಯಿರಿ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

lime

ತೆಂಗಿನ ಎಣ್ಣೆ ಮತ್ತು ಲಿಂಬೆ
ಲೌರಿಕ್ ಆಮ್ಲ, ಸೂಕ್ಷ್ಮಾಣುಜೀವಿ ವಿರೋಧಿ ಗುಣ ಹಾಗೂ ಮಧ್ಯಮ ಮಟ್ಟದ ಕೊಬ್ಬಿನಾಮ್ಲವು ತಲೆಬುರುಡೆಗೆ ತೇವಾಂಶ ನೀಡಿ, ಕೂದಲನ್ನು ಬಲಗೊಳಿಸಿ ಕೂದಲು ಬೆಳೆಯಲು ನೆರವಾಗುವುದು. ಹಾನಿಗೊಂಡಿರುವ ಮತ್ತು ಹಾನಿಗೊಳ್ಳದೆ ಇರುವ ಕೂದಲಿನಲ್ಲಿ ಉಂಟಾಗುವ ಪ್ರೋಟೀನ್‌ನ ಕೊರತೆಯನ್ನು ಇದು ನೀಗಿಸುವುದು.

ಆ್ಯಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಇದನ್ನು ದೀರ್ಘಕಾಲದ ತನಕ ಬಳಸಿದರೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಕೂದಲು ಬಿಳಿಯಾಗುವುದನ್ನು ತಡೆಯಲು ವೈದ್ಯರು ಲಿಂಬೆಯನ್ನು ಸೂಚಿಸುತ್ತಾರೆ. ಲಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಪೋಸ್ಪರಸ್ ಇದೆ. ಇದು ಕೂದಲಿಗೆ ಪೋಷಕಾಂಶವನ್ನು ನೀಡಿ ಬಿಳಿ ಕೂದಲನ್ನು ತೆಗೆಯುವುದು. ಬಿಳಿ ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು ಸಂಗತಿ

ಬೇಕಾಗುವ ಸಾಮಗ್ರಿಗಳು
*ತೆಂಗಿನ ಎಣ್ಣೆ
*ಮೂರು ಚಮಚ ಲಿಂಬೆರಸ

ತಯಾರಿಸುವ ವಿಧಾನ
ತೆಂಗಿನ ಎಣ್ಣೆಯಲ್ಲಿ ಮೂರು ಚಮಚ ಲಿಂಬೆರಸವನ್ನು ಮಿಶ್ರಣ ಮಾಡಿಕೊಳ್ಳಿ. ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಕಾಲ ಇದು ಕೂದಲಿನಲ್ಲಿ ಹಾಗೆ ಇರಲಿ. ಕೂದಲನ್ನು ಶಾಂಪೂ ಹಾಕಿಕೊಂಡು ತೊಳೆದು ಸ್ವಚ್ಛಗೊಳಿಸಿ.

ವಾರದಲ್ಲಿ ಒಂದು ಸಲ ಹೀಗೆ ಮಾಡಿಕೊಳ್ಳಿ. ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ತಲೆಹೊಟ್ಟನ್ನು ನಿವಾರಿಸಬಹುದು. ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ಉಗುರುಬೆಚ್ಚಗಿನ ನೀರು ತಲೆಹೊಟ್ಟಿಗೆ ತುಂಬಾ ಒಳ್ಳೆಯದು. ತಲೆಬುರುಡೆಯನ್ನು ಸರಿಯಾಗಿ ಮಸಾಜ್ ಮಾಡಿಕೊಂಡು ಅತ್ಯುತ್ತಮ ಫಲಿತಾಂಶ ಪಡೆಯಿರಿ. ಬಿಳಿಕೂದಲಿನ ಸಮಸ್ಯೆ- ಕಾರಣ ತಿಳಿದು, ಆರೈಕೆ ಶುರುಮಾಡಿ!

English summary

Lemon+Coconut Oil, perfect home remedies for Gray Hair

This problem can be caused by many different factors like hyperthyroidism, hypothyroidism, hormonal imbalance, nutritional deficiency, malnutrition, the use of concentrated hair dyes and electric dryers, radiation, chemotherapy and genetic disorders. Also, the harsh chemicals in your hair care products can leave the hair dry, damaged, and flat. So, we recommend you to try this home remedy, and also to eat a nutritious diet.
X
Desktop Bottom Promotion