ದುರ್ವಾಸನೆ ಬೀರುವ ಕೂದಲು! ಇದೋ ಇಲ್ಲಿದೆ ಮನೆಮದ್ದು

ತಲೆಕೂದಲನ್ನು ಎಷ್ಟೇ ಸ್ವಚ್ಛಮಾಡಿದರೂ ಒಮ್ಮೆಮ್ಮೆ ಅದು ಧೂಳು ಬೆವರಿನಿಂದ ಕಲ್ಮಷಗೊಂಡು ಕೆಟ್ಟ ವಾಸನೆ ಬರುವ ಸಾಧ್ಯತೆ ಕೂಡ ಇರುತ್ತದೆ, ಅದಕ್ಕೆಂದೇ ಕೆಲವೊಂದು ಮನೆ ಮದ್ದುಗಳಿವೆ ಪ್ರಯತ್ನಿಸಿ ನೋಡಿ...

By: Jaya Subramanya
Subscribe to Boldsky

ಕೂದಲಿನ ಸ್ವಚ್ಛತೆ ಎಂದರೆ ನಿತ್ಯವೂ ಎಣ್ಣೆ ಹಚ್ಚಿ ಶಾಂಪೂ ಮಾಡಿ ತೊಳೆಯುವುದು ಮಾತ್ರವಲ್ಲದೆ ಕೆಲವೊಂದು ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಬೆವರಿನಿಂದ ಕೂದಲನ್ನು ಸಂರಕ್ಷಿಸುವುದೂ ಆಗಿದೆ. ನೀವು ತಲೆಕೂದಲನ್ನು ಎಷ್ಟೇ ಸ್ವಚ್ಛಮಾಡಿದರೂ ಒಮ್ಮೆಮ್ಮೆ ಅದು ಧೂಳು ಬೆವರಿನಿಂದ ಕಲ್ಮಷಗೊಳ್ಳುತ್ತದೆ ಅಂತೆಯೇ ಇದರಿಂದ ಕೆಟ್ಟ ವಾಸನೆ ಬರುವ ಸಾಧ್ಯತೆ ಕೂಡ ಇದೆ.   ಏನೇ ಹೇಳಿ ಕೂದಲುದುರುವ ಸಮಸ್ಯೆಗೆ ಮನೆಮದ್ದೇ ಸರಿ  

Hair care
 

ತಲೆಬುರುಡೆಯಲ್ಲಿ ಹೆಚ್ಚುವರಿ ಎಣ್ಣೆ ಸ್ರವಿಸುವಿಕೆಯಿಂದ ಕೂಡ ಕೂದಲು ಒಮ್ಮೊಮ್ಮೆ ವಾಸನೆ ಬರುತ್ತದೆ ಮತ್ತು ಇದು ನಿಮಗೆ ಮುಜುಗರವನ್ನುಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಹಾಗಿದ್ದರೆ ಇಂತಹ ಕೆಟ್ಟ ವಾಸನೆ ಬರುವ ಕೂದಲನ್ನು ಸಂರಕ್ಷಿಸುವುದು ಹೇಗೆ ಎಂಬುದಕ್ಕೆ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಮನೆಮದ್ದುಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

lemon
 

ಲಿಂಬೆ ರಸ
ತಲೆಬುರುಡೆಯನ್ನು ಸ್ವಚ್ಛಗೊಳಿಸಿ ಕೂದಲನ್ನು ನಯ ಮತ್ತು ಹೊಳಪಿರುವಂತೆ ಲಿಂಬೆ ರಸ ಮಾಡುತ್ತದೆ. ವಾಸನೆ ಬರುವ ತಲೆಬುರುಡೆಗೆ ಇದು ಪರಿಣಾಮಕಾರಿ ನೈಸರ್ಗಿಕ ಸ್ವಚ್ಛಕ ಎಂದೆನಿಸಿದೆ. ನಿಮ್ಮ ತಲೆಬುರುಡೆಗೆ ಲಿಂಬೆ ರಸವನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಅದನ್ನು ತೊಳೆದುಕೊಳ್ಳಿ.

apple cider vinegar
 

ಆಪಲ್ ಸೀಡರ್ ವಿನೇಗರ್
ತಲೆಬುರುಡೆ ಮತ್ತು ಕೂದಲಿನ ವಾಸನೆಯನ್ನು ಹೊಡೆದೋಡಿಸಿ ಸ್ವಚ್ಛಗೊಳಿಸಲು ಇದು ಪರಿಣಾಮಕಾರಿ ಮನೆಮದ್ದಾಗಿದೆ. ಕೂದಲಿಗೆ ನಯತ್ವ ಮತ್ತು ಹೊಳಪನ್ನು ನೀಡುವಲ್ಲಿ ಇದು ಸಹಕಾರಿಯಾಗಿದೆ. ನೀರಿನೊಂದಿಗೆ ಆಪಲ್ ಸೀಡರ್ ವಿನೇಗರ್ ಅನ್ನು ಮಿಶ್ರ ಮಾಡಿಕೊಳ್ಳಿ ಮತ್ತು ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಪ್ರಮಾಣದಲ್ಲಿ ಕೂದಲಿಗೆ ಇದನ್ನು ಬಳಸಿಕೊಳ್ಳಿ ಮತ್ತು ಕಂಡೀಷನ್ ಬಳಸಿ ತಲೆ ತೊಳೆದುಕೊಳ್ಳಿ.  ಆಪಲ್ ಸೈಡರ್ ವಿನೆಗರ್‌ನ ಹತ್ತಾರು ಅನುಕೂಲಗಳು...

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ

Baking Soda

ಯಾವುದೇ ಬಗೆಯ ವಾಸನೆಯನ್ನು ನಿವಾರಿಸುವಲ್ಲಿ ಇದನ್ನು ಬಳಸಬಹುದಾಗಿದೆ. ತಲೆಬುರುಡೆಯ ಜಿಡ್ಡನ್ನು ನಿವಾರಿಸಿ ವಾಸನೆಯನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಬೇಕಿಂಗ್ ಸೋಡಾ ಪಡೆದುಕೊಂಡಿದೆ. ನೀರಿನೊಂದಿಗೆ ಸೋಡಾವನ್ನು ಮಿಶ್ರ ಮಾಡಿ ಮತ್ತು ನಿಯಮಿತ ಶಾಂಪೂ ಬದಲಿಗೆ ಇದನ್ನು ಉಪಯೋಗಿಸಿ.   ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಟಿ ಟ್ರೀ ಆಯಿಲ್

tree tree oil

ಮೈಕ್ರೋಬಯಲ್ ಅಂಶಗಳನ್ನು ಈ ಎಣ್ಣೆ ಪಡೆದುಕೊಂಡಿದ್ದು ತಲೆಬುರುಡೆಯಲ್ಲಿರುವ ವಾಸನೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಅಂತೆಯೇ ಸೋಂಕು ಮತ್ತು ತಲೆಹೊಟ್ಟನ್ನು ಇದು ದೂರಮಾಡುತ್ತದೆ. ನೀವು ಬಳಸುವ ಶಾಂಪೂಗೆ ಸ್ವಲ್ಪ ಹನಿಗಳಷ್ಟು ಈ ಎಣ್ಣೆಯನ್ನು ಬಳಸಿಕೊಳ್ಳಿ.

ಬೇವು
ಬೇವು ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಅಂಶಗಳನ್ನು ಒಳಗೊಂಡಿದೆ. ನೀರಿನಲ್ಲಿ ನೆನೆಸಿಟ್ಟ ಬೇವನ್ನು ಅರೆದುಕೊಂಡು ಪೇಸ್ಟ್ ತಯಾರಿಸಿ. ತದನಂತರ ಅದನ್ನು ತಲೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಹಾಗೆಯೇ ಬಿಡಿ ನಂತರ ಶಾಂಪೂವಿನಿಂದ ತೊಳೆದುಕೊಳ್ಳಿ.  ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

neem
 

ಕಿತ್ತಳೆ ಸಿಪ್ಪೆ
ತಲೆಕೂದಲಿನಿಂದ ವಾಸನೆ ಬರುತ್ತಿದೆಯಾದಲ್ಲಿ ಇಲ್ಲಿದೆ ನೋಡಿ ಚಮತ್ಕಾರೀ ಮನೆ ಮದ್ದು. ಕಿತ್ತಳೆ ಸಿಪ್ಪೆಯನ್ನು ತಲೆಬುರುಡೆಗೆ ಉಜ್ಜಿಕೊಳ್ಳಿ ಇದರಲ್ಲಿರುವ ಸಿಟ್ರಸ್ ಪರಿಮಳ ವಾಸನೆಯನ್ನು ಹೋಗಲಾಡಿಸುತ್ತದೆ. ನಿಮ್ಮ ಕೂದಲಿಗೆ ಶಾಂಪೂ ಮಾಡಿಕೊಂಡ ನಂತರ ಕೂಡ ಇದು ಹಾಗೆಯೇ ಇರುತ್ತದೆ. ಇದರಿಂದ ಇಡೀ ದಿನ ನಿಮ್ಮ ಕೂದಲು ಸುವಾಸನೆಯಿಂದ ಕೂಡಿರುತ್ತದೆ.   ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

oranges
 

ದಾಲ್ಚಿನ್ನಿ
ಆಂಟಿ ಇನ್‎ಫ್ಲಾಮೇಟರಿ ಅಂಶವನ್ನು ದಾಲ್ಚಿನ್ನಿ ಪಡೆದುಕೊಂಡಿದ್ದು ಕೂದಲಿನ ದುರ್ವಾಸನೆಯನ್ನು ನಿವಾರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ನಿಮ್ಮ ತಲೆಕೂದಲಿನ ವಾಸನೆ ಸಮಸ್ಯೆ ನಿವಾರಿಸಿಕೊಳ್ಳಲು ಇದು ಹೆಚ್ಚು ಉಪಕಾರಿಯಾಗಿದೆ.

cinnamon
 

Story first published: Wednesday, October 19, 2016, 11:37 [IST]
English summary

Is Your Hair Smelling Bad? It's Time You Treat This Issue Now!

Sometimes, your hair can start smelling really bad and you don't understand exactly what is causing it. The tips that have been listed below can help you combat the problem of smelly hair at any time! Smelly hair is a problem that is associated with an unpleasant odour from the scalp and hair.
Please Wait while comments are loading...
Subscribe Newsletter