For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಬೋಳು ತಲೆಗೆ ನೀವು ಕೂದಲನ್ನು ಕಸಿ ಮಾಡಲು ಅಥವಾ ಬೇರೆ ಯಾವುದೇ ರೀತಿಯ ದುಬಾರಿ ಚಿಕಿತ್ಸೆಗೆ ಮುಂದಾಗಿದ್ದರೆ ಒಂದು ನಿಮಿಷ ನಿಲ್ಲಿ ಮತ್ತು ಇತ್ತ ಗಮನಹರಿಸಿ. ಯಾಕೆಂದರೆ ಹರಳೆಣ್ಣೆ ನಿಮ್ಮ ಬೋಳು ತಲೆಯ ಸಮಸ್ಯೆ ನಿವಾರಿಸಬಹುದು.

By Manu
|

ಬೋಳು ಅಥವಾ ಬೊಕ್ಕ ತಲೆ ಹೊಂದಿದ್ದರೆ ಅವರ ಸಮಸ್ಯೆ ಹೇಳತೀರದು. ಈ ಬೋಳುತಲೆಯನ್ನು ಹಿಡಿದುಕೊಂಡು ಎಲ್ಲಿಗೂ ಹೋಗುವಂತಿಲ್ಲ. ನಾಲ್ಕು ಜನರ ಮಧ್ಯೆ ನಿಂತರೆ ಬೋಳುತಲೆಯೇ ಎದ್ದು ಕಾಣುವಂತಿರುತ್ತದೆ. ಇಂತಹ ಬೋಳು ತಲೆಯಿಂದಾಗಿ ನಿಮ್ಮ ನಿದ್ದೆ ಮಾಯವಾಗಿದೆಯಾ? ಬೋಳುತಲೆಯ ಬಗ್ಗೆ ನೀವು ಈಗಲೇ ಗಮನಹರಿಸದೇ ಇದ್ದರೆ ಅದು ದೊಡ್ಡ ಸಮಸ್ಯೆಯನ್ನೇ ಉಂಟು ಮಾಡಬಹುದು. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು

ಬೋಳು ತಲೆಗೆ ನೀವು ಕೂದಲನ್ನು ಕಸಿ ಮಾಡಲು ಅಥವಾ ಬೇರೆ ಯಾವುದೇ ರೀತಿಯ ದುಬಾರಿ ಚಿಕಿತ್ಸೆಗೆ ಮುಂದಾಗಿದ್ದರೆ ಒಂದು ನಿಮಿಷ ನಿಲ್ಲಿ ಮತ್ತು ಇತ್ತ ಗಮನಹರಿಸಿ. ಯಾಕೆಂದರೆ ಹರಳೆಣ್ಣೆ ನಿಮ್ಮ ಬೋಳು ತಲೆಯ ಸಮಸ್ಯೆ ನಿವಾರಿಸಬಹುದು. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಿಮಗೆ ಕಾತುರತೆ ಇದೆಯಾ ಹಾಗಾದರೆ ಲೇಖನವನ್ನು ಮುಂದಕ್ಕೆ ಓದಿ... ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದು

ರಕ್ತ ಪರಿಚಲನೆ ಹೆಚ್ಚಿಸುವುದು

ರಕ್ತ ಪರಿಚಲನೆ ಹೆಚ್ಚಿಸುವುದು

ಬೋಳು ತಲೆಯ ಮೇಲೆ ನೀವು ಹರಳೆಣ್ಣೆಯನ್ನು ಹಚ್ಚಿಕೊಂಡರೆ ಅದು ತಲೆಬುರುಡೆಯ ರಕ್ತಪರಿಚಲನೆಯನ್ನು ಹೆಚ್ಚಿಸುವುದು. ಇದು ಕೂದಲಿನ ಬುಡಕ್ಕೆ ಮತ್ತು ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲು ಸೊಂಪಾಗಿ ಬೆಳೆಯುವುದು

ತಲೆಕೂದಲು ಉದುರುವುದನ್ನು ತಡೆಯುವುದು

ತಲೆಕೂದಲು ಉದುರುವುದನ್ನು ತಡೆಯುವುದು

ಹರಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಲ್ ವಿರೋಧಿ ಗುಣಗಳು ಇರುವ ಕಾರಣ ನಿಯಮಿತ ಬಳಕೆಯಿಂದ ತಲೆಬುರುಡೆಯಲ್ಲಿ ಯಾವುದೇ ಸೋಂಕು ಆಗದಂತೆ ತಡೆಯುವುದು. ಹರಳೆಣ್ಣೆಯನ್ನು ನಿಯಮಿತವಾಗಿ ಬಳಕೆ ಮಾಡುವವರಲ್ಲಿ ತಲೆಯಲ್ಲಿ ಕಾಣಿಸುವಂತಹ ಕಚ್ಚಿ ಸುತ್ತು ಮುಂತಾದ ಸಮಸ್ಯೆಗಳು ನಿವಾರಣೆಯಾಗಿದೆ.

ಕೂದಲು ತುಂಡಾಗುವುದನ್ನು ನಿವಾರಿಸುವುದು

ಕೂದಲು ತುಂಡಾಗುವುದನ್ನು ನಿವಾರಿಸುವುದು

ಹರಳೆಣ್ಣೆಯು ಕೂದಲನ್ನು ಬಲಗೊಳಿಸುವುದರಿಂದ ಕೂದಲು ತುಂಡಾಗುವುದು ಮತ್ತು ಉದುರುವುದು ಕಡಿಮೆಯಾಗುತ್ತದೆ. ಕೂದಲು ತುಂಡಾಗುವ ಮತ್ತು ಒರಟು ಕೂದಲನ್ನು ಹೊಂದಿರುವವರು ಹರಳೆಣ್ಣೆ ಬಳಕೆ ಮಾಡಿಕೊಂಡರೆ ಆಗ ಸಮಸ್ಯೆ ನಿವಾರಣೆಯಾಗುವುದು.

ತಲೆಬುರುಡೆಗೆ ತೇವಾಂಶ ನೀಡುವುದು

ತಲೆಬುರುಡೆಗೆ ತೇವಾಂಶ ನೀಡುವುದು

ಹರಳೆಣ್ಣೆಯು ತುಂಬಾ ದಪ್ಪಗೆ ಇರುವ ಕಾರಣ ಇದು ದೀರ್ಘ ಕಾಲ ಕೂದಲು ಮತ್ತು ತಲೆಬುರುಡೆಯಲ್ಲಿ ಉಳಿದುಕೊಂಡು ಯಾವಾಗಲೂ ತೇವಾಂಶ ಉಳಿದುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಒರಟಾಗಿರುವ ಕೂದಲನ್ನು ಮೃದು ಮಾಡಿ ಕೂದಲಿಗೆ ಆರೋಗ್ಯವನ್ನು ನೀಡುವುದು.

 ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆಯು ತುಂಬಾ ದಪ್ಪಗಿರುವ ಕಾರಣ ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳುವುದು ದೊಡ್ಡ ಸಮಸ್ಯೆ. ಇಂತಹ ಸಂದರ್ಭಗಳಲ್ಲಿ ಇದನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಜತೆಗೆ ಮಿಶ್ರಣ ಮಾಡಿ ಬಳಸಿಕೊಳ್ಳಬಹುದು.

 ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆ ಬಳಸುವುದು ಹೇಗೆ?

ಕೂದಲು ಕಡಿಮೆ ಇರುವವರು ರಾತ್ರಿ ವೇಳೆ ಇದನ್ನು ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಿ ತೊಳೆದುಕೊಳ್ಳಬೇಕು. ಕೂದಲು ತೊಳೆಯದೆ ಇದ್ದರೆ ದಪ್ಪಗಿನ ಹರಳೆಣ್ಣೆಯು ಕೂದಲನ್ನು ಬೇಕಾದಂತೆ

ಬಾಚಲು ಸಮಸ್ಯೆ ಉಂಟುಮಾಡಬಹುದು.

 ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಅದರಲ್ಲೂ ಇದು ಅಗ್ಗದಲ್ಲಿ ಸಿಗುವ ಕಾರಣ ಧಾರಾಳವಾಗಿ ಬಳಸಬಹುದು. ಇದು ನಿಮ್ಮ ಅಡುಗೆ ಕೋಣೆಯಲ್ಲೂ ಕಾಣಸಿಗುವುದು.ಬೋಳು ತಲೆಗೆ ಹರಳೆಣ್ಣೆಯ ಲಾಭಗಳನ್ನು ನೀವು ತಿಳಿದುಕೊಂಡಿದ್ದೀರಿ. ಇದನ್ನು ಪ್ರಯತ್ನಿಸಿ ನೋಡಿ. ಇನ್ನು ಕೂಡ ಅಲ್ಲಿ ಕೂತಿರುವುದು ಯಾಕೆ? ಹೋಗಿ ಓಡಿ ಹೋಗಿ ಹರಳೆಣ್ಣೆ ತಂದು ತಲೆಗೆ ಹಚ್ಚಿಕೊಳ್ಳಿ. ಲಾಭ ಪಡೆದುಕೊಂಡು ಅದನ್ನು ಇತರರೊಂದಿಗೆ ಹಂಚಿಕೊಳ್ಳಿ.


English summary

Is Castor Oil Helpful To Treat Baldness?

Are you worried about your hair fall? Is your hairline receding and is that giving you sleepless nights? Hair fall is a common problem most of us face, and if not taken care of immediately, it might lead to permanent baldness.
X
Desktop Bottom Promotion