ಬಿಳಿ ಕೂದಲಿನ ಸಮಸ್ಯೆಗೆ-ಸ್ಟೆಪ್ ಬೈ ಸ್ಟೆಪ್ ನೆಲ್ಲಿಕಾಯಿಯ ಚಿಕಿತ್ಸೆ!

By: manu
Subscribe to Boldsky

ವಯಸ್ಸಲ್ಲದ ವಯಸ್ಸಿನಲ್ಲಿ ಕೆಲವರ ಕೂದಲು ಬಿಳಿಯಾಗುತ್ತಿದೆ. ಹೆಚ್ಚುತ್ತಿರುವ ಒತ್ತಡ, ವಾತಾವರಣ ಹಾಗೂ ಹಲವಾರು ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ಇಂದಿನ ದಿನಗಳಲ್ಲಿ 30 ದಾಟುತ್ತಿರುವಾಗಲೇ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಶಾಂಪೂಗಳಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಇದಕ್ಕೆ ಕಾರಣವಾಗಿದೆ.   ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

ಬಿಳಿಕೂದಲಿಗೆ ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ಬಿಳಿ ಕೂದಲನ್ನು ಕಪ್ಪಗೆ ಮಾಡುವಂತಹ ಸಾಮರ್ಥ್ಯವಿದೆ. ಇದರಲ್ಲಿ ದಾಳಿಂಬೆಗಿಂತ 17 ಪಟ್ಟು ಹೆಚ್ಚು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಆ್ಯಂಟಿಆಕ್ಸಿಡೆಂಟ್‌‌ಗಳು ಕೂದಲಿನ ಬುಡವನ್ನು ಬಲಿಷ್ಠಗೊಳಿಸಿ ಫ್ರೀ ರ್ಯಾಡಿಕಲ್ ವಿರುದ್ಧ ರಕ್ಷಣಾ ಪದರವನ್ನು ನಿರ್ಮಿಸುತ್ತದೆ. ಪಿಎಚ್ ಸಮತೋಲನವನ್ನು ಸ್ಥಾಪಿಸುವುದರಿಂದ ಕೂದಲು ಬಿಳಿಯಾಗುವುದು ನಿಲ್ಲುವುದು. ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದು   

Amla
 

ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಮಟ್ಟವನ್ನು ವೃದ್ಧಿಸುತ್ತದೆ. ಇದರಿಂದ ಕೂದಲಿನ ಸ್ಥಿತಿಸ್ಥಾಪಕತ್ವ ಸುಧಾರಣೆಯಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನೆಲ್ಲಿಕಾಯಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಹಾಗೂ ಖನಿಜಾಂಶಗಳು ಇವೆ. ಇದರಿಂದ ಕೂದಲು ಬಲಿಷ್ಠ, ದಪ್ಪಗೆ ಹಾಗೂ ಕಪ್ಪಗೆ ಆಗುವುದು. ಬನ್ನಿ ನೆಲ್ಲಿಕಾಯಿ ಬಳಸಿಕೊಂಡು ಬಿಳಿ ಕೂದಲು ತಡೆಯುವ ವಿಧಾನವನ್ನು ತಿಳಿಯಿರಿ.      ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!   

 

*ಸ್ಟೆಪ್-1

Amla For Premature Graying Hair

ನೆಲ್ಲಿಕಾಯಿಯನ್ನು ತುಂಡು ಮಾಡಿಕೊಳ್ಳಿ.
*ಸ್ಟೆಪ್-2
Amla For Premature Graying Hair

ಅದನ್ನು ಮಿಕ್ಸಿಗೆ ಹಾಕಿ ಜ್ಯೂಸ್ ತೆಗೆಯಿರಿ
*ಸ್ಟೆಪ್-3
Amla For Premature Graying Hair

ಒಂದು ಪಿಂಗಾಣಿಗೆ ಜ್ಯೂಸ್ ಅನ್ನು ಹಾಕಿ.
*ಸ್ಟೆಪ್-4
Amla For Premature Graying Hair

ಕೂದಲನ್ನು ಸಣ್ಣ ಸಣ್ಣ ವಿಭಾಗವಾಗಿ ಮಾಡಿಕೊಂಡು ನೆಲ್ಲಿಕಾಯಿ ಜ್ಯೂಸ್ ಹಾಗೂ ಅದರ ತಿರುಳನ್ನು ಕೂದಲಿಗೆ ಹಚ್ಚಿಕೊಳ್ಳಿ.
*ಸ್ಟೆಪ್-5
Amla For Premature Graying Hair

ಕೂದಲು ಮತ್ತು ಸಂಪೂರ್ಣ ಬುರುಡೆ ನೆಲ್ಲಿಕಾಯಿ ಜ್ಯೂಸ್‌ನಿಂದ ಒದ್ದೆಯಾಗಿರುವಂತೆ ನೋಡಿಕೊಳ್ಳಿ.
*ಸ್ಟೆಪ್-6
Amla For Premature Graying Hair

ಒಂದು ಗಂಟೆ ಹಾಗೆ ಇರಲಿ. ಬಳಿಕ ಶಾಂಪೂವಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ಮನೆಮದ್ದನ್ನು ಬಳಸಿದರೆ ಮುಂದಿನ ಕೆಲವೇ ವಾರಗಳಲ್ಲಿ ನೀವು ಫಲಿತಾಂಶವನ್ನು ಕಾಣಬಹುದು.  ಬಿಳಿ ಕೂದಲಿಗೆ ನಿಮ್ಮಲ್ಲಿ ಯಾವುದೇ ರೀತಿಯ ಮನೆಮದ್ದು ಇದ್ದರೆ ಅದನ್ನು ಕಮೆಂಟ್ ಕಾಲಂನಲ್ಲಿ ಬರೆದು ನಮಗೆ ತಿಳಿಸಿ.    ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!

Story first published: Thursday, October 6, 2016, 13:11 [IST]
English summary

How To Use Amla For Premature Graying Hair?

Wondering how amla can treat graying hair? Here is how! Homemade amla mask for graying hair has 17 times more antioxidants than what is found in pomegranate. It is these antioxidants that strengthen hair roots, form a protective layer against free radicals, restore the pH balance and prevent premature graying.
Please Wait while comments are loading...
Subscribe Newsletter