For Quick Alerts
ALLOW NOTIFICATIONS  
For Daily Alerts

ಚೆಲುವೆಯ ಅಂದದ ತಲೆಗೂದಲಿಗೆ ಯಾವ ಎಣ್ಣೆ ಸೂಕ್ತ?

By Manu
|

ನಮ್ಮ ದೇಹದಂತೆಯೇ ನಮ್ಮ ಕೂದಲಿಗೂ ನಿಯಮಿತವಾದ ಆರೈಕೆಯ ಅಗತ್ಯವಿದೆ. ಸೂಕ್ತ ಪೋಷಕಾಂಶಗಳ ಪೂರೈಕೆ ಇಲ್ಲದಿದ್ದರೆ ಸುದೃಢ ಮತ್ತು ನೀಳವಾದ ಕೂದಲು ಲಭ್ಯವಾಗದು. ತಲೆಗೂದಲು ಉದ್ದ ಮತ್ತು ಸೊಂಪಗಾಗಬೇಕಾದರೆ ಕೂದಲ ಬುಡದ ಚರ್ಮಕ್ಕೆ ಹೆಚ್ಚಿನ ಆರೈಕೆ ಬೇಕು. ಈ ಆರೈಕೆಯನ್ನು ಕೆಲವು ತೈಲಗಳನ್ನು ಹಚ್ಚುವ ಮೂಲಕ ಮತ್ತು ನಯವಾದ ಮಸಾಜ್ ಮೂಲಕ ಪಡೆಯಬಹುದು. ಆದರೆ ಇಂದಿನ ಯುವಜನಾಂಗ ಎಣ್ಣೆಯ ಪೋಷಣೆಯ ಉತ್ತಮ ಗುಣಕ್ಕಿಂತಲೂ ಇದರ ಜಿಡ್ಡುಗುಣವನ್ನೇ ಹೆಚ್ಚು ಪರಿಗಣಿಸಿ ತಮ್ಮ ತಲೆಗೂದಲ ವಿನ್ಯಾಸಕ್ಕೆ ಕುಂದಾಗುತ್ತದೆ ಎಂದು ಭಾವಿಸಿದ್ದಾರೆ. ಕೂದಲಿಗೆ ಎಣ್ಣೆ ಏಕೆ ಮತ್ತು ಹೇಗೆ ಹಚ್ಚಬೇಕು?

ಎಣ್ಣೆಗೂದಲು ಗಾಳಿಗೆ ಹಾರುವುದಿಲ್ಲವಾದುದರಿಂದ ಯುವಜನತೆ ಇದನ್ನೊಂದು ಅವಲಕ್ಷಣ ಎಂದು ಭಾವಿಸಿದ್ದಾರೆ. ಇಂದಿನ ಜನಾಂಗ ಗಾಳಿಗೆ ಹಾರುತ್ತಿರುವ ಕೂದಲನ್ನು ಅಥವಾ ಜೆಲ್ ಮೊದಲಾದ ಅನಾರೋಗ್ಯಕರ ರಾಸಾಯನಿಕಗಳನ್ನು ಉಪಯೋಗಿಸಿ ಚಿತ್ರವಿನ್ಯಾಸದ ಭಂಗಿಯಲ್ಲಿ ಕೂದಲು ನಿಂತರಬೇಕೆಂದು ಬಯಸುತ್ತಾರೆ. ಈ ಮನೋವೃತ್ತಿಯ ಯುವಕ ಯುವತಿಯರಿಗೆ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವಂತೆ ಮಾಡುವುದು ಮಾತ್ರ ಕಠಿಣವೇ ಸರಿ. ಆದರೆ ಎಣ್ಣೆಯ ಆರೈಕೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಈ ಯುವಕರ ಕೂದಲೂ ಹದಗೆಡುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕನಿಷ್ಟ ವಾರಕ್ಕೊಂದು ಬಾರಿಯಾದರೂ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡುವುದು ಅಗತ್ಯವಾಗಿದೆ.

How Often Should You Oil Your Hair

ಕೂದಲಿಗೆ ಎಣ್ಣೆ ಹಾಕಬೇಕು ಎಂದರೆ ಸದಾ ಹಾಕಿಯೇ ಇರಬೇಕೆಂದು ಅರ್ಥವಲ್ಲ, ಪ್ರತಿದಿನವೂ ತೋಯುವಷ್ಟು ಹಚ್ಚಬೇಕೆಂದೂ ಅಲ್ಲ. ಆದರೆ ಕೂದಲ ಬುಡಕ್ಕೆ ಅಗತ್ಯವಿದ್ದಷ್ಟು ಪ್ರಮಾಣವನ್ನು ಮಾತ್ರ ಪೂರೈಸಲೇಬೇಕು. ತಲೆಗೆ ಎಣ್ಣೆ ಹಚ್ಚುವ ಪ್ರಯೋಜನಗಳು ಕೂದಲ ಪೋಷಣೆಯ ಹೊರತಾಗಿಯೂ ಹಲವಾರಿವೆ.

ಆದರೆ ಎಣ್ಣೆ ಹಚ್ಚಿಕೊಳ್ಳದೇ ಇರುವ ಇಂದಿನ ದ್ವಂದ್ವದಲ್ಲಿ ಎಷ್ಟು ಅವಧಿಯ ಅಂತರದಲ್ಲಿ ಹಚ್ಚಿಕೊಂಡರೆ ಲೇಸು? ಕಡಿಮೆಯಾದರೆ ಪೋಷಣೆ ಸಿಗದು, ಹೆಚ್ಚಾದರೆ ತಲೆಯ ಜಿಡ್ಡು ಧೂಳು, ಹೊಗೆಯನ್ನು ಅಂಟಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಬಹುದು. ಈ ಪ್ರಶ್ನೆಯನ್ನು ಕೇಳುವ ಯುವಜನಾಂಗಕ್ಕೆ ಉತ್ತರ ಕೊಡಲು ಕೆಳಗಿನ ಸ್ಲೈಡ್ ಷೋ ನಿಮ್ಮ ನೆರವಿಗೆ ಬರಲಿದೆ:

ಯಾವ ಎಣ್ಣೆಗಳು ಸೂಕ್ತ?
ತಲೆಗೆ ಕೊಬ್ಬರಿ ಎಣ್ಣೆ ಅತ್ಯಂತ ಸೂಕ್ತವಾಗಿದೆ. ಇನ್ನುಳಿದಂತೆ ಕೊಬ್ಬರಿ ಎಣ್ಣೆಯ ಜೊತೆ ಆಲಿವ್ ಎಣ್ಣೆ, ಬಾದಾಮಿ ಎಣ್ಣೆಗಳನ್ನು, ಬ್ರಾಹ್ಮಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚುವುದೂ ಸೂಕ್ತವಾಗಿದೆ. ಇದರಿಂದ ಕೂದಲ ಬುಡಕ್ಕೆ ಪೋಷಣೆಯ ಜೊತೆಗೇ ಆರ್ದ್ರತೆಯೂ ದೊರಕುತ್ತದೆ. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗುವ ಕಾರಣ ಕೂದಲೂ ಒಣಗುತ್ತದೆ. ನಿಮ್ಮ ಕೂದಲು ಶುಷ್ಕವಾಗಿದ್ದರೆ ಈ ಸಮಯದಲ್ಲಿ ಸುಲಭವಾಗಿ ತುಂಡಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಹಚ್ಚುವುದು ಅಗತ್ಯ. ಬನ್ನಿ, ವಿವಿಧ ಬಗೆಯ ಕೂದಲಿಗೆ ಎಣ್ಣೆಯನ್ನು ಎಷ್ಟು ಅಂತರದಲ್ಲಿ ಹಚ್ಚುವುದು ಸೂಕ್ತ ಎಂಬುದನ್ನು ನೋಡೋಣ:

ಒಣ ಕೂದಲಿಗೆ
ಒಣ ಕೂದಲಿನವರು ನಿತ್ಯವೂ ಕಡ್ಡಾಯವಾಗಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ವಾರಕ್ಕೆ ಮೂರು ಬಾರಿಯಾದರೂ ಆಗುವುದೇ ಇಲ್ಲ ಎಂದಾದಲ್ಲಿ ಎರಡು ಬಾರಿಯಾದರೂ ಹಚ್ಚಬೇಕು. ಚರ್ಮದ ಆಳಕ್ಕೆ ನೀಡುವ ಪೋಷಣೆಗೆ ಅನುಸಾರವಾಗಿ ಹರಳೆಣ್ಣೆ, ಕೊಬ್ಬರಿ ಎಣ್ಣೆ ಹಚ್ಚಿದರೆ ಸೂಕ್ತ. ಇದರೊಂದಿಗೆ ಕೊಂಚ ಹಬೆಯಿಂದ ಕೂದಲನ್ನು ತೋಯಿಸಿಕೊಂಡರೆ ಎಣ್ಣೆ ಚರ್ಮದ ಆಳಕ್ಕೆ ಇಳಿಯಲು ಇನ್ನಷ್ಟು ನೆರವು ಲಭಿಸುತ್ತದೆ.

ಎಣ್ಣೆ ಪಸೆಯ ಕೂದಲಿನವರಿಗೆ
ಎಣ್ಣೆ ಪಸೆಯ ಕೂದಲಿಗೆ ಎಣ್ಣೆಯನ್ನು ಇನ್ನಷ್ಟು ಹಚ್ಚುವುದರಿಂದ ಹೆಚ್ಚು ಅಂಟಂಟಾಗುತ್ತದೆ ಹಾಗೂ ಕಮಟು ವಾಸನೆಯೂ ಆವರಿಸಿಕೊಳ್ಳುತ್ತದೆ. ಈ ಕೂದಲನ್ನು ವಾರಕ್ಕೊಮ್ಮೆ ಎಣ್ಣೆಯ ಅರೈಕೆ ಮಾಡಿದರೆ ಸಾಕು. ಇದರೊಂದಿಗೆ ಉತ್ತಮ ಗುಣಮಟ್ಟದ ಸೌಮ್ಯ ಶಾಂಪೂ ಬಳಸಿದಾಗ ಹೆಚ್ಚುವರಿ ಪ್ರಮಾಣದ ಎಣ್ಣೆಯನ್ನು ನಿವಾರಿಸಬಹುದು. ಈ ಕೂದಲಿನವರು ಗಾಢವಾದ ಹರಳೆಣ್ಣೆ ಅಥವಾ ಆಲಿವ್ ಎಣ್ಣೆಗಳನ್ನು ಬಳಸದಿರುವುದು ಉತ್ತಮ. ಬದಲಿಗೆ ಬಾದಾಮಿ ಎಣ್ಣೆ ಬೆರೆಸಿದ ಕೊಬ್ಬರಿ ಎಣ್ಣೆ ಹೆಚ್ಚು ತೆಳುವಾಗಿದ್ದು ಇದನ್ನು ಕೊಂಚಪ್ರಮಾಣದಲ್ಲಿ ಬಳಸಬಹುದು.

ಸಾಮಾನ್ಯ ಕೂದಲಿನವರಿಗೆ
ಸಾಮಾನ್ಯ ಕೂದಲಿನವರಿಗೆ ಕೂದಲು ಗಂಟಾಗುವುದು ಅಥವಾ ತುಂಡಾಗುವ ಸಂಭವ ಕಡಿಮೆ ಇರುವುದರಿಂದ ವಾರಕ್ಕೆರಡು ಬಾರಿ ಎಣ್ಣೆ ಹಚ್ಚಿಕೊಂಡರೆ ಸಾಕು. ಈ ಕೂದಲಿನವರು ಸಾಮಾನ್ಯ ಮತ್ತು ಪರಿಶುದ್ಧ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು. ಬ್ರಾಹ್ಮಿ ಎಣ್ಣೆಯೂ ಸೂಕ್ತವಾಗಿದೆ. ಇನ್ನೊಂದು ವಿಧಾನದಂತೆ ಒಂದು ಬಾರಿ ಬ್ರಾಹ್ಮಿ ಒಂದು ಬಾರಿ ಕೊಬ್ಬರಿ ಎಣ್ಣೆಯ ಬಳಕೆಯೂ ಸೂಕ್ತವಾಗಿದೆ.

ಇಡಿಯ ರಾತ್ರಿ ಹಚ್ಚಿಕೊಂಡಿರಲು
ಒಂದು ವೇಳೆ ಕೂದಲಿಗೆ ಹೆಚ್ಚಿನ ಪೋಷಣೆಯ ಅಗತ್ಯವಿದೆ ಎನಿಸಿದರೆ ಇಡಿಯ ರಾತ್ರಿ ಹಚ್ಚಿಕೊಂಡಿರುವ ಮೂಲಕ ಹೆಚ್ಚಿನ ಪೋಷಣೆ ಪಡೆಯಬಹುದು. ಇದಕ್ಕಾಗಿ ಕೊಂಚ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ರಾತ್ರಿ ಮಲಗುವ ಮುನ್ನ ಹಚ್ಚಿ ಟವೆಲ್ಲೊಂದನ್ನು ಕೂದಲಿಗೆ ಆವರಿಸಿಕೊಂಡು ಮಲಗಿ. ರಾತ್ರಿಯ ವಿಶ್ರಾಂತಿಯ ವೇಳೆ ಎಣ್ಣೆಯ ಪೋಷಣೆಯನ್ನು ಕೂದಲು ಮತ್ತು ತಲೆಗೂದಲ ಬುಡದ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬಿಸಿ ಎಣ್ಣೆಯ ಮಸಾಜ್ ಗಾಗಿ
ಬಹಳ ಹಿಂದಿನ ಕಾಲದಿಂದ ನಡೆದು ಬಂದಿರುವ ಈ ಪದ್ಧತಿಯಲ್ಲಿ ಎಣ್ಣೆಯನ್ನು ಚರ್ಮ ಸಹಿಸುವಷ್ಟು ಬಿಸಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುವ ಮೂಲಕ ಅಗತ್ಯವಿರುವ ಪೋಷಣೆಯನ್ನು ಪಡೆಯಬಹುದು. ಇದರಿಂದ ಕೂದಲು ದೃಢವಾಗುವ ಜೊತೆಗೇ ಕೂದಲಬುಡದ ಚರ್ಮವೂ ಹೆಚ್ಚು ದೃಢವಾಗುತ್ತದೆ.

ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸಿದರೆ ಸಾಕು. ಇದಕ್ಕಾಗಿ ಪರಿಣಿತರ ಸೇವೆಯೇ ಬೇಕೆಂದಿಲ್ಲ ಸ್ವತಃ ಮಾಡಿಕೊಳ್ಳಬಹುದು. ಕೊಂಚ ಎಣ್ಣೆಯನ್ನು ಬಿಸಿಮಾಡಿ ಕೈಗಳಿಗೆ ಹಚ್ಚಿಕೊಳ್ಳಿ. ಕೈಗಳ ಚರ್ಮಕ್ಕೆ ಬಿಸಿಯಾಗುವಷ್ಟು ಬಿಸಿಯಾದರೆ ಸಾಕು. ಇದನ್ನು ತಲೆಗೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಒಂದು ಗಂಟೆಯ ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.

English summary

How Often Should You Oil Your Hair

Like your body, your hair requires nourishment too. Without proper nutrients, you won’t be able to get long, strong and healthy hair. And to provide nourishment to your hair and scalp, oiling your hair becomes a crucial thing. Nowadays, teenagers always run away in the name of “oiling hair”, as they feel this makes their hair turn more greasy. After all, you can’t go out having oily hair, right? But, you should treat your hair with oil at least over the weekends.
X
Desktop Bottom Promotion