ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದಕ್ಕೂ ನೀತಿ ನಿಯಮವಿದೆ!

ಕೂದಲು ತುಂಡಾಗುತ್ತಾ ಇದ್ದರೆ ಹೆಚ್ಚಿನ ಸಮಯ ಕೂದಲಿಗೆ ಎಣ್ಣೆ ಹಚ್ಚಿ ಕುಳಿತುಕೊಳ್ಳಬೇಕಾಗುತ್ತದೆ. ಪ್ರತೀ ವಾರವು ಕೂದಲಿಗೆ ಎಣ್ಣೆ ಹಚ್ಚುವ ವಿಧಾನವನ್ನು ಬದಲಾಯಿಸುತ್ತಾ ಇದ್ದರೆ ಕೂದಲಿಗೆ ಒಳ್ಳೆಯದು.

By: Hemanth
Subscribe to Boldsky

ಕೂದಲಿಗೆ ಹೆಚ್ಚಿನವರು ಎಣ್ಣೆ ಹಾಕಿಕೊಳ್ಳುವುದು ಸಾಮಾನ್ಯ. ಕೆಲವರು ಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿಕೊಳ್ಳುತ್ತಾರೆ. ಅದೇ ಇನ್ನು ಕೆಲವರಿಗೆ ಸ್ನಾನ ಮಾಡಿದ ಬಳಿಕ ಎಣ್ಣೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಕೂದಲಿಗೆ ಹಾಕಿರುವ ಎಣ್ಣೆಯನ್ನು ಎಷ್ಟು ಕಾಲ ಹಾಗೆ ಬಿಡಬೇಕು ಎನ್ನುವ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಚೆಲುವೆಯ ಅಂದದ ತಲೆಗೂದಲಿಗೆ ಯಾವ ಎಣ್ಣೆ ಸೂಕ್ತ?

ಎಣ್ಣೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಟ್ಟರೆ ಒಳ್ಳೆಯದು. ಒಂದು ಗಂಟೆ ಕಾಲ ಎಣ್ಣೆ ಹಚ್ಚಿಕೊಂಡು ಕುಳಿತುಕೊಳ್ಳಬೇಕು ಎನ್ನುವ ಮಾತುಗಳು ಕೇಳಿ ಬರುತ್ತದೆ. ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದರಿಂದ ಕೂದಲಿಗೆ ಕೋಶಗಳು ಬಲಗೊಳ್ಳುತ್ತದೆ. ಬುಡಕ್ಕೆ ಶಕ್ತಿ ಬರುತ್ತದೆ. ತಲೆಬುರುಡೆಗೆ ಪೋಷಕಾಂಶವನ್ನು ನೀಡಿ ಕೂದಲು ಬೆಳೆಯಲು ನೆರವಾಗುತ್ತದೆ. ನಿಮ್ಮ ಕೂದಲು ಆರೋಗ್ಯವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲವೆಂದಾದರೆ ಆಗ ನೀವು ಎಣ್ಣೆ ಹಚ್ಚಿಕೊಂಡು ಸ್ವಲ್ಪ ಕಾಲ ಮಾತ್ರ ಹಾಗೆ ಇರಬಹುದು.   ಕೂದಲಿಗೆ 'ಹರಳೆಣ್ಣೆ'ಯ ಮುಂದೆ ಯಾವುದೇ ಎಣ್ಣೆ ಸರಿಸಾಟಿಯಾಗದು!

ಕೂದಲು ತುಂಡಾಗುತ್ತಾ ಇದ್ದರೆ ಹೆಚ್ಚಿನ ಸಮಯ ಕೂದಲಿಗೆ ಎಣ್ಣೆ ಹಚ್ಚಿ ಕುಳಿತುಕೊಳ್ಳಬೇಕಾಗುತ್ತದೆ. ಪ್ರತೀ ವಾರವು ಕೂದಲಿಗೆ ಎಣ್ಣೆ ಹಚ್ಚುವ ವಿಧಾನವನ್ನು ಬದಲಾಯಿಸುತ್ತಾ ಇದ್ದರೆ ಕೂದಲಿಗೆ ಒಳ್ಳೆಯದು. ಆದರೆ ಹೆಚ್ಚಿನವರು ಹಿಂದಿನ ಕಾಲದಿಂದಲೂ ಒಂದೇ ರೀತಿಯ ವಿಧಾನವನ್ನು ಅನುಸರಿಸಿಕೊಂಡು ಬರುತ್ತಾ ಇದ್ದಾರೆ. ಕೂದಲಿಗೆ ಸರಿಯಾದ ವಿಧಾನದಲ್ಲಿ ಎಣ್ಣೆ ಹಚ್ಚಿಕೊಳ್ಳಲು ಇರುವಂತಹ ಒಂದೊಂದೇ ಹಂತಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.....    

ಟಿಪ್ಸ್ #1

ಅಗಲವಾದ ಹಲ್ಲುಗಳು ಇರುವ ಬಾಚಣಿಗೆಯನ್ನು ಬಳಸಿ. ಇದರಿಂದ ಕೂದಲಿನಲ್ಲಿರುವ ಗಂಟುಗಳು ಹಾಗೂ ಗೋಜಲುಗಳನ್ನು ತೆಗೆದು ಹಾಕುತ್ತದೆ.

ಟಿಪ್ಸ್ #2

ನಿಮಗೆ ಇಷ್ಟವಿರುವ ಕೂದಲಿನ ಎಣ್ಣೆಯನ್ನು ತೆಗೆದುಕೊಂಡು ಹದವಾದ ಬೆಂಕಿಯಲ್ಲಿ ಎರಡು ನಿಮಿಷ ಕಾಲ ಅದನ್ನು ಕುದಿಸಿ. ಬಳಿಕ ಅದನ್ನು ತಂಪಾಗಲು ಬಿಡಿ.

ಟಿಪ್ಸ್ #3

ನೇರವಾಗಿ ಕೂದಲಿಗೆ ಎಣ್ಣೆಯನ್ನು ಹಾಕಬೇಡಿ. ಇದರಿಂದ ಕೂದಲು ಮತ್ತಷ್ಟು ಜಿಡ್ಡನ್ನು ಪಡೆಯುತ್ತದೆ. ಇಂತಹ ಕೂದಲು ತೊಳೆಯಲು ಹೆಚ್ಚಿನ ಶಾಂಪೂ ಬೇಕಾಗುತ್ತದೆ.

ಟಿಪ್ಸ್ #4

ಕೂದಲನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿಕೊಳ್ಳಿ. ಹದಬೆಚ್ಚಗಿನ ಎಣ್ಣೆಗೆ ಬೆರಳನ್ನು ಹಾಕಿ ಕೂದಲಿನ ಒಂದೊಂದೇ ಭಾಗಕ್ಕೆ ಹಚ್ಚಿಕೊಳ್ಳಿ.

ಟಿಪ್ಸ್ #5

ಅಂಗೈಯಿಂದ ತಲೆಬುರುಡೆಗೆ ಎಣ್ಣೆ ಹಚ್ಚಿಕೊಂಡು ಉಜ್ಜಿಕೊಳ್ಳಬೇಡಿ. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಹೆಚ್ಚಿದೆ. ಬೆರಳಿನಿಂದ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.

ಟಿಪ್ಸ್ #6

ತಲೆಬುರುಡೆಗೆ ಎಣ್ಣೆ ಚೆನ್ನಾಗಿ ಎಳೆದುಕೊಳ್ಳಬೇಕಾದರೆ ನೀರಿನಲ್ಲಿ ಒಂದು ಟವೆಲ್ ನ್ನು ಮುಳುಗಿಸಿ ಅದರಲ್ಲಿನ ಹೆಚ್ಚುವರಿ ನೀರನ್ನು ಹಿಂಡಿಕೊಂಡು ಬಳಿಕ ತಲೆಗೆ ಕಟ್ಟಿಕೊಳ್ಳಿ.

ಟಿಪ್ಸ್ #6

ಎಣ್ಣೆ ಹೆಚ್ಚಿನ ಕಾಲ ಕೂದಲಿನಲ್ಲಿದ್ದರೆ ಅದು ಧೂಳನ್ನು ತನ್ನತ್ತ ಆಕರ್ಷಿಸುತ್ತದೆ. ಇದರಿಂದ ತಲೆಯಲ್ಲಿ ತಲೆಹೊಟ್ಟು ನಿರ್ಮಾಣವಾಗಬಹುದು. 12 ಗಂಟೆಗಿಂತ ಹೆಚ್ಚಿನ ಕಾಲ ಕೂದಲಿನಲ್ಲಿ ಎಣ್ಣೆಯನ್ನು ಬಿಡಬೇಡಿ.

Story first published: Friday, November 4, 2016, 13:11 [IST]
English summary

How Long Should You Leave Hair Oil On?

How long should you leave oil on your hair? Overnight or 1 hour? Is the age-old belief, the longer the hair oil stays, the better it is, really true? We set out to find answers and here is what we found. Hair oil basically does the job of seeping deep into hair follicles, strengthening the roots, sealing cuticles, nourishing scalp and promoting hair growth. Now, how long you should leave oil on your hair comes down to your hair type.
Please Wait while comments are loading...
Subscribe Newsletter