For Quick Alerts
ALLOW NOTIFICATIONS  
For Daily Alerts

'ಸೀಬೆ ಎಲೆ' ಕೂದಲಿನ ಸರ್ವ ರೋಗಕ್ಕೂ ಪರ್ಫೆಕ್ಟ್ ಮನೆಮದ್ದು

By hemanth
|

ಕೂದಲಿನ ಸಮಸ್ಯೆಗೆ ಯಾವಾಗಲೂ ಶಾಂಪೂ, ಕಂಡೀಷನರ್ ಬಳಸಿದರೂ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದ್ದರೆ ಬೇಸರವಾಗುವುದು ಸಹಜ. ಏನೇ ಮಾಡಿದರೂ ಕೂದಲು ಉದುರುವುದು, ತುಂಡಾಗುವುದು ಹಾಗೆ ಉಳಿದುಕೊಂಡಿದೆಯಲ್ಲಾ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಈಗೀಗ ಕೂದಲಿನ ಆರೈಕೆಗಾಗಿ ದಿನಕ್ಕೊಂದು ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಾ ಇರುತ್ತದೆ. ಇದನ್ನು ಬಳಸಿದರೆ ಸಮಸ್ಯೆಗಳು ಸ್ವಲ್ಪ ಕಡಿಮೆಯಾದರೂ ಇದರಲ್ಲಿನ ಕೆಲವೊಂದು ರಾಸಾಯನಿಕಗಳು ಕೆಲವೇ ಸಮಯದಲ್ಲಿ ನಿಮ್ಮ ಕೂದಲಿನ ಮೇಲೆ ಅಡ್ಡಪರಿಣಾಮ ಬೀರಬಹುದು.

How Are Guava Leaves Beneficial For Your Hair?

ಇದನ್ನು ಕಡೆಗಣಿಸಿದರೆ ಒಳ್ಳೆಯದು. ಹಿಂದಿನ ಕಾಲದಿಂದಲೂ ಮಹಿಳೆಯರು ತಮ್ಮ ಕೂದಲಿನ ಆರೈಕೆಗಾಗಿ ಪ್ರಕೃತಿಯಲ್ಲಿ ಸಿಗುವ ಹಣ್ಣುಗಳು ಹಾಗೂ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿದ್ದರು. ಇದರಲ್ಲಿ ಪೇರಳೆ ಹಣ್ಣಿನ ಎಲೆಗಳು (ಸೀಬೆ ಹಣ್ಣಿನ ಎಲೆ) ಕೂಡ ಒಳಗೊಂಡಿದೆ. ಪೇರಳೆಯಿಂದ ಕೂದಲಿಗೆ ಆಗುವ ಲಾಭಗಳೇನು?

ಪೇರಳೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇದು ಆರೋಗ್ಯ, ಕೂದಲು, ಚರ್ಮಕ್ಕೆ ತುಂಬಾ ಲಾಭಕರ. ಇದು ದೇಹದಲ್ಲಿರುವ ವಿವಿಧ ಅಂಗಾಂಗಗಳ ಮೇಲೆ ಧನಾತ್ಮಕವಾದ ಪರಿಣಾಮವನ್ನು ಉಂಟುಮಾಡುತ್ತದೆ. ಪೇರಳೆ ಹಣ್ಣಿನಲ್ಲಿ ವಿಟಮಿನ್ ಬಿ ಇರುವುದರಿಂದ ಅದು ಕೂದಲಿಗೆ ಆರೋಗ್ಯಕ್ಕೆ ಲಾಭಕಾರಿ. ಆಹಾರದಲ್ಲಿ ವಿಟಮಿನ್ ಬಿ ಅಳವಡಿಸಿಕೊಂಡಾಗ ಕೂದಲಿನ ಆರೋಗ್ಯವು ಉತ್ತಮವಾಗುವುದು.

ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಬಿ ಆರೋಗ್ಯಕಾರಿ ಕೂದಲಿನ ಬೆಳವಣಿಗೆ ಮತ್ತು ನಿರ್ವಹಣೆಗೆ ನೆರವಾಗುವುದು. ಪೇರಳೆಯಲ್ಲಿರುವ ವಿಟಮಿನ್ ಬಿ3, ಬಿ5 ಮತ್ತು ಬಿ6 ಕೂದಲಿನ ಕಾಂತಿಗೆ ನೆರವಾಗುವುದು. ವಿಟಮಿನ್ ಬಿ2 ಕೋಶಗಳನ್ನು ರಿಪೇರಿ ಮಾಡುತ್ತದೆ. ಪೇರಳೆಯಲ್ಲಿನ ಈ ಪೋಷಕಾಂಶಗಳಿಂದಾಗಿ ಅದನ್ನು ಚರ್ಮ ಮತ್ತು ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಹಾಗಾಗಿ ಸಿಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ವೈದ್ಯಲೋಕಕ್ಕೆ ಸವಾಲೊಡ್ಡುವ 'ಸೀಬೆ ಎಲೆಯ' ಪವರ್

ಕೂದಲಿಗೆ ಪೇರಳೆ ಹಣ್ಣು ಅಥವಾ ಸೇಬೆ ಹಣ್ಣು ಮಾತ್ರವಲ್ಲದೆ ಅದರ ಎಲೆಗಳು ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಕೂದಲಿನ ಆರೈಕೆಯಲ್ಲಿ ನಿಯಮಿತವಾಗಿ ಪೇರಳೆ ಎಲೆಯನ್ನು ಬಳಸಿಕೊಂಡರೆ ಕೂದಲು ಉದುರುವುದನ್ನು ತಡೆಯಬಹುದಾಗಿದೆ. ಒಂದು ಹಿಡಿಯಷ್ಟು ಪೇರಳೆ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಸುಮಾರು 15-20 ನಿಮಿಷ ಕಾಲ ಕುದಿಸಿ. ಬಿಸಿ ಆರಿದ ಬಳಿಕ ನೀರನ್ನು ಸೋಸಿಕೊಂಡು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. ತಲೆಬುರುಡೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚಿಗೆ ಹಚ್ಚಿಕೊಳ್ಳಿ. ಸೀಬೆ ಎಲೆಯಲ್ಲಿದೆ ಸೀಮಾತೀತ ಆರೋಗ್ಯ ಗುಣಗಳು

ಸೀಬೆ ಎಲೆಗಳ ಬಿಸಿ ಮಾಡಿದ ನೀರನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಈ ನೀರಿನಿಂದ ತಲೆಯಬುರುಡೆಗೆ ಯಾವಾಗಲೂ ಮಸಾಜ್ ಮಾಡಿದರೆ ಕೂದಲಿನ ಬುಡವು ಬಲಗೊಳ್ಳುವುದು. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಕೇವಲ ಬುಡಗಳು ಬಲಗೊಳ್ಳುವುದು ಮಾತ್ರವಲ್ಲದೆ ಕೂದಲು ದಪ್ಪ ಹಾಗೂ ಕಾಂತಿಯುತವಾಗುವುದು. ಪೇರಳೆ ಹಣ್ಣಿನ ಎಲೆಗಳು ನೈಸರ್ಗಿಕವಾಗಿ ಕೂದಲು ಉದುರುವುದನ್ನು ಕಡಿಮೆ ಮಾಡುವುದು.

ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಉತ್ಪನ್ನಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರೂ ಇದು ಸಾಧ್ಯವಾಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಇದರಲ್ಲಿನ ಕೆಲವೊಂದು ರಾಸಾಯನಿಕಗಳು ಕೂದಲಿಗೆ ಮತ್ತಷ್ಟು ಹಾನಿಯುಂಟು ಮಾಡಬಹುದು. ಪೇರಳೆ ಎಲೆಗಳಂತಹ ಪ್ರಕೃತಿದತ್ತ ಸಾಮಗ್ರಿಗಳನ್ನು ಬಳಸಿದರೆ ನಿಮ್ಮ ಕೂದಲಿಗೆ ಯಾವುದೇ ಹಾನಿಯಾಗದು.

English summary

How Are Guava Leaves Beneficial For Your Hair?

Did you know that your hair can benefit immensely from guava leaves? Have you ever imagined that something as simple as the leaves of guava fruit can do your hair a lot of good? Well, it’s true!Would you like to know more on how guava leaves can improve your hair health? Then keep reading this post.
X
Desktop Bottom Promotion