ಕೂದಲು ತೊಳೆಯಲು ಬಿಸಿನೀರಿಗಿಂತ ತಣ್ಣೀರೇ ಉತ್ತಮ ಏಕೆ?

ಕೂದಲು ತೊಳೆಯಲು ತಣ್ಣೀರು ಉತ್ತಮವೇ ಅಥವಾ ಬಿಸಿನೀರೇ? ಹಾಗಾದರೆ ಮುಂದೆ ಓದಿ....

By: Jaya subramanaya
Subscribe to Boldsky

ಕೂದಲಿನ ಪೋಷಣೆಯಲ್ಲಿ ನಾವು ಆದಷ್ಟು ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದಷ್ಟು ನೈಸರ್ಗಿಕ ರೂಪದಲ್ಲಿ ಕೂದಲಿನ ಪೋಷಣೆಯನ್ನು ಮಾಡಬೇಕಾಗುತ್ತದೆ. ಕೂದಲಿಗೆ ಹಚ್ಚುವ ಎಣ್ಣೆಯಿಂದ ಹಿಡಿದು, ಹಾಕುವ ಪ್ಯಾಕ್, ಕೂದಲನ್ನು ತೊಳೆಯುವ ವಿಧಾನ ಕೂಡ ಅತಿ ಮಹತ್ವದ್ದಾಗಿರುತ್ತದೆ.

hair wash
 

ಇಂದಿನ ಲೇಖನದಲ್ಲಿ ಅತಿ ಮಹತ್ವದ ಅಂಶವೊಂದನ್ನು ನಾವು ತಿಳಿಸುತ್ತಿದ್ದು ಕೂದಲಿನ ಬಗ್ಗೆ ಹೆಚ್ಚುವರಿ ಕಾಳಜಿಯನ್ನು ನೀವು ವಹಿಸುತ್ತೀರಿ ಎಂದಾದಲ್ಲಿ ಈ ಜಾಗರೂಕತೆಯನ್ನು ನೀವು ಪಾಲಿಸಲೇಬೇಕು. ಕೂದಲು ತೊಳೆಯಲು ತಣ್ಣೀರು ಉತ್ತಮವೇ ಅಥವಾ ಬಿಸಿನೀರೇ ಎಂಬುದನ್ನು ಇಂದಿಲ್ಲಿ ನಾವು ತಿಳಿಸುತ್ತಿದ್ದೇವೆ.     ಅಷ್ಟಕ್ಕೂ, ವಾರದಲ್ಲಿ ಎಷ್ಟು ಬಾರಿ ಕೂದಲು ತೊಳೆಯಬೇಕು?

ಹಾಗಿದ್ದರೆ ಈ ಎರಡಲ್ಲಿ ನೀವು ಯಾವುದನ್ನೂ ಆರಿಸಿಕೊಳ್ಳುತ್ತಿದ್ದರೂ ಅವುಗಳ ಮಹತ್ವ ಮತ್ತು ಇವುಗಳಲ್ಲಿ ತಲೆತೊಳೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ನೀಡಬೇಕಾದ ಮಹತ್ವಗಳೇನು ಎಂಬುದನ್ನು ಕಂಡುಕೊಳ್ಳಿ. ತಣ್ಣೀರಿನಿಂದ ಕೂದಲು ತೊಳೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಈ ಹಿಂದೆ ತಣ್ಣೀರಿನಿಂದ ಯಾವಾಗ ನಿಮ್ಮ ಕೂದಲನ್ನು ತೊಳೆದುಕೊಂಡಿದ್ದೀರಿ ಎಂಬುದು ನಿಮಗೆ ನೆನಪಿದೆಯೇ?

hair wash

ಹೊರಗಿನ ವಾತಾವರಣ ತುಂಬಾ ಬಿಸಿಯಿದೆ ಎಂದಾಗ ಅಲ್ಲವೇ? ಈ ಸಮಯದಲ್ಲಿ ಕೊಂಚವಾದರೂ ತಂಪನ್ನು ಪಡೆದುಕೊಳ್ಳಲು ತಣ್ಣೀರನ್ನು ಆಯ್ದುಕೊಳ್ಳಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಂಡರೆ ಆಗುವ ಪ್ರಯೋಜನಗಳನ್ನು ಇಲ್ಲಿ ಪಟ್ಟಿಮಾಡುತ್ತಿದ್ದೇವೆ. ಅಧ್ಯಯನಗಳ ಪ್ರಕಾರ, ನಿಮ್ಮ ಕೂದಲಿಗೆ ಕಾಂತಿಯನ್ನು ಒದಗಿಸಲು ತಣ್ಣೀರಿನ ಆಯ್ಕೆ ಸೂಕ್ತ ಎಂದಾಗಿದೆ.

ತಲೆಯ ಬುಡಕ್ಕೆ ರಕ್ತಸಂಚಾರವುಂಟಾಗಲು ಇದು ನೆರವನ್ನು ನೀಡಲಿದೆ ತಣ್ಣೀರಿನಿಂದ ಕೂದಲು ತೊಳೆದಲ್ಲಿ ಅಷ್ಟು ಸಿಕ್ಕಾಗುವುದು ಕಡಿಮೆಯಾಗುತ್ತದೆ. ಕೂದಲಿನ ತುದಿ ಸೀಳುವುದಿಲ್ಲ ಮತ್ತು ಕ್ಯುಟಿಕಲ್ಸ್ ಮುಚ್ಚಿರುತ್ತದೆ.

hair wash
 

ನೀವು ಬಿಸಿನೀರಿನಲ್ಲಿ ಕೂದಲು ತೊಳೆದರೂ ಕೊನೆಗೆ ಕೂದಲು ತೊಳೆದುಕೊಳ್ಳಲು ತಣ್ಣೀರನ್ನು ಬಳಸಿ ಇದು ಕ್ಯುಟಿಕಲ್‎ಗಳನ್ನು ಮುಚ್ಚಲು ಸಹಕಾರಿಯಾಗಿರುತ್ತದೆ. ಇದರಿಂದ ಕೂದಲಿಗೆ ಹಾನಿ ಕೂಡ ಕಡಿಮೆ. ಅಂತೆಯೇ ಹೊಳಪನ್ನು ತಂದುಕೊಡುವಲ್ಲಿ ತಣ್ಣೀರು ಸಹಾಯ ಮಾಡಲಿದೆ. ದೀರ್ಘಕಾಲದವರೆಗೆ ನಿಮ್ಮ ಕೂದಲನ್ನು ಗಟ್ಟಿಯಾಗಿರಿಸುವಲ್ಲಿ ಕೂಡ ತಣ್ಣೀರು ಸಹಾಯಕ

hair wash
 

ತಲೆಯ ಬುಡದಲ್ಲಿರುವ ಜಿಡ್ಡನ್ನು ನಿವಾರಿಸಿ ಕೊಳೆಯನ್ನು ಹೋಗಲಾಡಿಸುವಲ್ಲಿ ತಣ್ಣೀರು ಸಹಾಯಕ. ತಲೆಬುಡದ ಪೋರ್ಸ್ ಮುಚ್ಚಲು ತಣ್ಣೀರು ಉಪಯೋಗಕಾರಿ. ಇದರಿಂದ ಕೊಳೆ, ಜಿಡ್ಡು ಮತ್ತು ಗ್ರೀಸ್ ನಿವಾರಣೆಯಾಗುತ್ತದೆ ಹಲವಾರು ಅಧ್ಯನಗಳಿಂದ ತಿಳಿದು ಬಂದಿರುವುದೇನೆಂದರೆ, ತಣ್ಣೀರಿನಿಂದ ಕೂದಲನ್ನು ತೊಳೆದುಕೊಂಡಲ್ಲಿ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂದಾಗಿದೆ. ಏನೇ ಹೇಳಿ, ಕೂದಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇದೆ!

ಬಿಸಿ ನೀರಿನಲ್ಲಿ ಕೂದಲು ತೊಳೆದುಕೊಂಡಲ್ಲಿ ಏನಾಗುತ್ತದೆ
ಚಳಿಗಾಲದಲ್ಲಿ ನಾವು ಕೂದಲನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳುತ್ತೇವೆ. ಹೊರಗಿನ ವಾತಾವರಣ ಹೆಚ್ಚು ತಣ್ಣಗಿದ್ದಾಗ ಬಿಸಿ ನೀರಿನಲ್ಲಿ ಕೂದಲು ತೊಳೆಯಲು ನಾವು ಬಯಸುತ್ತೇವೆ. ಆದರೆ ಬಿಸಿ ನೀರಿನಲ್ಲಿ ಕೂದಲು ತೊಳೆಯುವಲ್ಲಿ ಕೆಲವೊಂದು ಸಮಸ್ಯೆಗಳಿವೆ. ಬಿಸಿ ನೀರಿನಲ್ಲಿ ಕೂದಲು ತೊಳೆದಾಗ ಕೂದಲು ಉದುರುವ ಸಾಧ್ಯತೆ ಇರುತ್ತದೆ.

hair wash
 

ನಿಮಗೆ ಬಿರುಸಾದ ಕೂದಲನ್ನು ಇದು ನೀಡಬಹುದು, ನೀವು ಕೂದಲು ಬಾಚುವಾಗ ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುವ ಸಾಧ್ಯತೆ ಇರುತ್ತದೆ. ಬಿಸಿ ನೀರಿನಲ್ಲಿ ಕೂದಲು ತೊಳೆಯುವುದರಿಂದ ಬೇರುಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಅಂತೆಯೇ ಹಲವಾರು ಕೂದಲಿನ ಸಮಸ್ಯೆಗಳನ್ನು ತಂದೊಡ್ಡಬಹುದು. ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುವ ಸಾಧ್ಯತೆ ಕೂಡ ಇದೆ.  ಕೂದಲು ತೊಳೆದುಕೊಳ್ಳುವ ಮುನ್ನ, ಒಮ್ಮೆ ಈ ಲೇಖನ ಓದಿ

ಬಿಸಿ ನೀರಿನಲ್ಲಿ ಕೂದಲು ತೊಳೆಯುವುದು ನೆರೆಗೂದಲಿನ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಕೂದಲನ್ನು ತೊಳೆಯಲು ತಣ್ಣೀರನ್ನೇ ಬಳಸಿ. ಬಿಸಿ ನೀರಿಗಿಂತಲೂ ತಣ್ಣಿರೇ ಅತ್ಯುತ್ತಮ.

Story first published: Wednesday, November 16, 2016, 7:04 [IST]
English summary

Hot or cold water -- which is better for a hair wash?

According to studies, it has been found out that your grandma prefers cold wash for hair while your mother opts for a hot wash for hair.
Please Wait while comments are loading...
Subscribe Newsletter