For Quick Alerts
ALLOW NOTIFICATIONS  
For Daily Alerts

ರೇಷ್ಮೆಯಂತಹ ಕೂದಲಿಗೆ ಬಾಳೆಹಣ್ಣಿನ ಕಂಡೀಷನರ್

By Hemanth
|

ಧೂಳು, ಪ್ರದೂಷಣೆಯಿಂದಾಗಿ ಇಂದಿನ ದಿನಗಳಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೂದಲು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಮುಖಕ್ಕೊಂದು ಕಾಂತಿ ಬರುವುದು. ಆದರೆ ಕೂದಲು ನಿರ್ಜೀವವಾಗಿದ್ದರೆ ಅದನ್ನು ಬಾಚಲು ಮತ್ತು ನಮಗೆ ಬೇಕಾದಂತೆ ಇಟ್ಟುಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ.

Homemade Banana Conditioner For Silky Hair

ಪ್ರದೂಷಣೆಯೊಂದಿಗೆ ಕೆಟ್ಟ ಆಹಾರ ಕ್ರಮ ಮತ್ತು ಕೂದಲಿನ ಬಗ್ಗೆ ನಾವು ಗಮನ ಹರಿಸದೆ ಇರುವುದು ಕೂದಲು ಉದುರಲು ಮತ್ತು ತುಂಡಾಗಲು ಪ್ರಮುಖ ಕಾರಣವಾಗಿದೆ. ನೀವು ಸುಂದರವಾಗಿ ಕಾಣಬೇಕೆಂದರೆ ಕೂದಲನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಇದಕ್ಕಾಗಿ ನಿಯಮಿತವಾಗಿ ಕೂದಲನ್ನು ತೊಳೆದು ಅದರ ಆರೈಕೆ ಮಾಡುತ್ತಿರಬೇಕು. ಉದುರುವ ಕೂದಲು ಮತ್ತು ಒಣ ಕೂದಲಿಗೆ ಆಳವಾಗಿ ಕಂಡಿಷನರ್ ಹಾಕಿಕೊಳ್ಳಬೇಕು. ಹೇರ್ ಕಂಡೀಷನರ್ ಬಳಸುವ ವಿಧಾನ

ಆಳವಾಗಿ ಕಂಡೀಷನರ್ ಹಾಕಿಕೊಳ್ಳುವುದರಿಂದ ಕೂದಲಿನ ಬೇರುಗಳು ಹೆಚ್ಚಿನ ತೇವಾಂಶವನ್ನು ಪಡೆದುಕೊಂಡು ಆರೋಗ್ಯವಾಗಿರುತ್ತದೆ. ಆದರೆ ರಾಸಾಯನಿಕಯುಕ್ತ ಕಂಡೀಷನರ್ ಗಳಿಂದ ನಿಮ್ಮ ಕೂದಲು ಈಗಲೇ ಹಾಳಾಗಿರಬಹುದು. ಇದಕ್ಕಾಗಿ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಮಾಡಿದಂತಹ ಕಂಡೀಷನರ್ ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಿ. ಬಾಳೆಹಣ್ಣಿನ ಕಂಡೀಷನರ್ ಹೇಗೆ ಮಾಡಿಕೊಳ್ಳುವುದು ಮತ್ತು ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ಬಾಳೆಹಣ್ಣಿನ ಕಂಡೀಷನರ್ ಮಾಡಿಕೊಳ್ಳುವುದು ಹೇಗೆ?
*ಬೇಕಾಗುವ ಸಾಮಗ್ರಿಗಳು: ಸಿಪ್ಪೆ ತೆಗೆದ ಒಂದು ಬಾಳೆಹಣ್ಣು,
*2 ಕಪ್ ತೆಂಗಿನಕಾಯಿ ಹಾಲು ಮತ್ತು ಎರಡು ಚಮಚ ಜೇನುತುಪ್ಪ. ಉತ್ತಮ ಆರೋಗ್ಯವನ್ನು ನೀಡುವಂತಹ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ, ಸಿ ಮತ್ತು ಇ ಹಾಗೂ ಪೊಟಾಶಿಯಂ ಹೇರಳವಾಗಿದೆ. ಪೊಟಾಶಿಯಂ ನಿಮ್ಮ ಕೂದಲನ್ನು ಬಲಪಡಿಸುವುದು ಮತ್ತು ಕೂದಲು ಉದುರುವುದನ್ನು ಇದು ತಡೆಯುವುದು. ಬಾಳೆಹಣ್ಣಿನಲ್ಲಿರುವ ವಿಟಮಿನ್ ಕೂದಲಿಗೆ ಹೆಚ್ಚಿನ ತೇವಾಂಶ ನೀಡುವುದು. ಇದರಿಂದ ಕೂದಲು ಮೃಧು ಹಾಗೂ ಹೊಳೆಯುವಂತಾಗುವುದು.

ಜೇನಿನಲ್ಲಿ ಹೆಚ್ಚಿನ ಮಟ್ಟದ ನೈಸರ್ಗಿಕ ಅಂಶಗಳಿದ್ದು, ಇದು ಕೂದಲಿಗೆ ತೇವಾಂಶವನ್ನು ನೀಡುವುದು. ಇದರಿಂದ ಕೂದಲು ಮೃಧುವಾಗುವುದು. ತೆಂಗಿನಕಾಯಿ ಹಾಲಿನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಪ್ರೋಟೀನ್ ಗಳಿವೆ. ಇದು ಕೂದಲಿನ ಆರೋಗ್ಯವನ್ನು ಎಲ್ಲಾ ರೀತಿಯಿಂದಲೂ ಕಾಪಾಡುವುದು.

ತಯಾರಿಸುವುದು ಹೇಗೆ?
*ಒಂದು ಪಾತ್ರೆಗೆ ಒಂದು ಬಾಳೆಹಣ್ಣು, ಅರ್ಧಕಪ್ ತೆಂಗಿನಕಾಯಿ ಹಾಲು ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕಲಸಿ. ಇದು ದಪ್ಪಗೆ ಪೇಸ್ಟ್ ಆಗುವ ತನಕ ಕಲಸಿಕೊಳ್ಳಿ. ಬ್ಲೆಂಡರ್ ಗೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಈಗ ಇದನ್ನು ಬಳಸಿಕೊಳ್ಳಬಹುದು.

*ನೀವು ಕೂದಲನ್ನು ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ. ಶಾಂಪೂ ಕೂದಲಿಗೆ ತೆಗೆದ ಬಳಿಕ ಕಂಡೀಷನರ್ ಹಚ್ಚಿಕೊಳ್ಳಿ. ಬೇರಿನಿಂದ ಹಿಡಿದು ತುದಿಯ ತನಕ ಇದನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆ ಬಿಟ್ಟುಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

English summary

Homemade Banana Conditioner For Silky Hair

Do you feel the need to go to a saloon to get your hair fixed, every time you have to attend an event? Do you spend hours every morning trying to get your mane to look presentable? Many of us go through the same problem. When your hair is unhealthy and lifeless, no matter what you do to try and fix it, it still looks shabby!
X
Desktop Bottom Promotion