For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ, ಮೊಸರು-ಬೇವಿನ ಮ್ಯಾಜಿಕ್ ಚಿಕಿತ್ಸೆ

By Deepu
|

ಕೂದಲು ನಮ್ಮ ಸೌಂದರ್ಯಕ್ಕೆ ಕಿರೀಟ ಪ್ರಾಯವಾಗಿ ಕಾಣಿಸಿಕೊಳ್ಳುವ ಒಂದು ಅಂಶವಾಗಿದೆ. ಸುಂದರವಾದ ಕೂದಲು ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೂದಲು ಕಳೆಗುಂದಿದದರೆ, ನಮ್ಮ ಒಟ್ಟಾರೆ ಸೌಂದರ್ಯ ಸಹ ಕಳೆಯನ್ನು ಕಳೆದುಕೊಳ್ಳುತ್ತದೆ. ಆದರೆ ಇಂತಹ ಕೂದಲಿಗೆ ಕಂಟಕಗಳು ಹಲವಾರು. ತಲೆ ಹೊಟ್ಟು, ಒಣಗಿದ, ನಿರ್ಜೀವವಾದ ಮತ್ತು ಸಿಕ್ಕು ಸಿಕ್ಕಾದ ಕೂದಲು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ನೀವು ತಲೆ ಹೊಟ್ಟು ನಿವಾರಿಸುವ, ಅಥವಾ ನಿರ್ದಿಷ್ಟ ಸಮಸ್ಯೆಯನ್ನು ಹೋಗಲಾಡಿಸುವ ಶಾಂಪೂಗಳನ್ನು ಬಳಸಬಹುದು. ಅಥವಾ ಕೆಲವೊಂದು ಕೇಶ ಸಂರಕ್ಷಕ ಉತ್ಪನ್ನಗಳನ್ನು ಬಳಸಬಹುದು. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

ಆದರೆ ನೆನಪಿಡಿ, ಇವುಗಳು ನಿಮಗೆ ಅಪರೂಪವಾಗಿ ಸಹಾಯ ಮಾಡಬಹುದು ಅಷ್ಟೇ. ಆದರೆ ಈ ಔಷಧೀಯ ಉತ್ಪನ್ನಗಳನ್ನು ಬಳಸುವ ಮುನ್ನ, ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ದೊರೆಯುವ ಉತ್ಪನ್ನಗಳನ್ನು ಒಮ್ಮೆ ಬಳಸಿ ನೋಡಿ. ಈ ಉತ್ಪನ್ನಗಳ ಬೆಲೆಯು ಕಡಿಮೆ, ಮತ್ತು ಇವುಗಳಿಂದ ನಿಮ್ಮ ಕೂದಲಿನ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಇವುಗಳು ನಿಮ್ಮ ಕೂದಲನ್ನು ತಲೆ ಹೊಟ್ಟಿನಿಂದ ರಕ್ಷಿಸಿ, ಆರೋಗ್ಯವನ್ನು ನೀಡುತ್ತವೆ. ಬನ್ನಿ ಆ ವಸ್ತುಗಳು ಯಾವುವು ಎಂದು ತಿಳಿದುಕೊಂಡು ಬರೋಣ. ಇಂದು ನಾವು ನಿಮ್ಮ ತಲೆಹೊಟ್ಟಿಗೆ ರಾಮಬಾಣವಾದ ಮೊಸರು, ಬೇವು, ಲಿಂಬೆ ರಸ ಮತ್ತು ತೆಂಗಿನ ಎಣ್ಣೆಯ ಕುರಿತು ತಿಳಿಸುತ್ತಿದ್ದೇವೆ.

ಮೊಸರು ಮತ್ತು ಲಿಂಬೆರಸ

ಮೊಸರು ಮತ್ತು ಲಿಂಬೆರಸ

ಮೊಸರು ಮತ್ತು ಲಿಂಬೆರಸದಲ್ಲಿ ಲ್ಯಾಕ್ಟಿಕ್ ಮತ್ತು ಸಿಟ್ರಿಕ್ ಆಮ್ಲಗಳು ಹೆಚ್ಚಾಗಿದ್ದು, ಈ ಆಮ್ಲಗಳು ಕೂದಲಿನ ಬುಡದಲ್ಲಿರುವ ಉರಿಯೂತವನ್ನು ನಿವಾರಿಸುತ್ತವೆ. ಈ ಉರಿಯೂತಗಳು ತಲೆ ಹೊಟ್ಟಿನ ಪ್ರಮುಖ ಮೂಲಗಳಾಗಿವೆ. ಮೊಸರು ಮತ್ತು ಲಿಂಬೆಯು ನಿಮ್ಮ ಕೂದಲಿನ ಮೇಲೆ ಸ್ವಾಭಾವಿಕ ಕಂಡೀಶನರ್ ಆಗಿ ವರ್ತಿಸುತ್ತವೆ ಹಾಗು ನಿಮ್ಮ ಕೂದಲಿಗೆ ಸ್ವಾಭಾವಿಕ ಹೊಳಪನ್ನು ನೀಡಿ, ಅದನ್ನು ಆರೋಗ್ಯಕರವಾಗಿ ಇರಿಸುತ್ತದೆ.

ಇದನ್ನು ಹೇಗೆ ಬಳಸುವುದು

ಇದನ್ನು ಹೇಗೆ ಬಳಸುವುದು

ಒಂದು ಕಪ್ ಮೊಸರಿಗೆ, ಅರ್ಧ ಲಿಂಬೆರಸವನ್ನು ಬೆರೆಸಿ. ಇವುಗಳನ್ನು ಚೆನ್ನಾಗಿ ಬೆರೆಸಿಕೊಂಡು ಕೂದಲಿನ ಬುಡಕ್ಕೆ ಲೇಪಿಸಿ. ಇದು ಒಣಗುವವರೆಗೆ ಕಾಯಿರಿ, ನಂತರ ಚೆನ್ನಾಗಿ ತೊಳೆಯಿರಿ.

ಬೇವು ಮತ್ತು ತೆಂಗಿನ ಎಣ್ಣೆ

ಬೇವು ಮತ್ತು ತೆಂಗಿನ ಎಣ್ಣೆ

ಬೇವು ಒಂದು ಶಿಲೀಂಧ್ರ ನಿವಾರಕ ಗುಣಗಳು ಇರುವ ಪದಾರ್ಥವಾಗಿದೆ. ಇದು ತುರಿಕೆ ಮತ್ತು ಕಿರಿ ಕಿರಿಯುಂಟು ಮಾಡುವ ಇನ್‌ಫೆಕ್ಷನ್‌ಗಳ ವಿರುದ್ಧ ಸಮರ್ಥವಾಗಿ ಹೊರಾಡುತ್ತದೆ. ತೆಂಗಿನ ಎಣ್ಣೆಯು ಕೂದಲಿನ ಬುಡಕ್ಕೆ ಆರಾಮವನ್ನು ನೀಡುತ್ತದೆ ಮತ್ತು ಕೂದಲ ಬುಡ ಕೆಂಪಾಗುವಿಕೆಯಿಂದ ರಕ್ಷಿಸುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ತೆಂಗಿನ ಎಣ್ಣೆಯಲ್ಲಿ ಬೇವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. 15-20 ನಿಮಿಷ ಬಿಟ್ಟು, ನಂತರ ಇದನ್ನು ನೀರಿನಿಂದ ತೊಳೆಯಿರಿ.

ಬೇವು ಮತ್ತು ಮೊಸರು

ಬೇವು ಮತ್ತು ಮೊಸರು

ಬೇವಿನಲ್ಲಿರುವ ಶಿಲೀಂಧ್ರ ನಿವಾರಕ ಗುಣಗಳು ಮತ್ತು ಮೊಸರಿನಲ್ಲಿರುವ ತಂಪು ಗುಣಗಳು ಎರಡೂ ಸೇರಿ ತಲೆ ಹೊಟ್ಟಿನ ಮೇಲೆ ದಾಳಿ ಮಾಡುತ್ತವೆ. ಇವು ನಿಮ್ಮ ಕೂದಲಿಗೆ ಮತ್ತೆ ಹೊಳಪು ಮತ್ತು ಲವಲವಿಕೆಯನ್ನು ನೀಡುತ್ತದೆ. ಈ ಪ್ಯಾಕ್ ನಿಮಗೆ ಅವಧಿಗೆ ಮುನ್ನ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.

ಬಳಸುವುದು ಹೇಗೆ?

ಬಳಸುವುದು ಹೇಗೆ?

ನೀರಿನೊಂದಿಗೆ ಬೇವನ್ನು ಬೆರೆಸಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿಕೊಂಡು, 15-20 ನಿಮಿಷ ಬಿಟ್ಟು, ನಂತರ ತೊಳೆದುಕೊಳ್ಳಿ.

English summary

Home remedy–curd and neem to fight dandruff and dry hair in winter

Dandruff, dry, dull, and frizzy hair is a very common problem in winter. You might think using special anti-shampoos that promise to banish dandruff and also nourish your hair will solve your hair woes, but such shampoos barely help. And, we don’t realise that the solution is right in our kitchen. These cheap and easily available ingredients can give you smooth, healthy, and dandruff free hair! here are the Some some easy-to-make hair masks made by combining curd, neem, lemon juice and coconut oil.
X
Desktop Bottom Promotion