ತಲೆ ತುರಿಕೆಯನ್ನು ಸಮರ್ಥವಾಗಿ ನಿವಾರಿಸಬಲ್ಲ ತೈಲಗಳು

ತಲೆಹೊಟ್ಟಿನ ಪರಿಹಾರಕ್ಕೆ ಕೆಮಿಕಲ್ ಇರುವ ಶಾಂಪೂ ಬಳಸುವ ಬದಲು ಎಣ್ಣೆ ಮಸಾಜ್ ಮಾಡಿದರೆ ತಲೆಹೊಟ್ಟು ಕಡಿಮೆಯಾಗುವುದು. ಅದರಲ್ಲೂ ಈ ಕೆಳಗಿನ ಎಣ್ಣೆಗಳು ತಲೆಹೊಟ್ಟನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ:

By: Arshad
Subscribe to Boldsky

ಎಲ್ಲರ ಗಮನ ನಿಮ್ಮತ್ತ ಇರುವಾಗಲೇ ನಿಮ್ಮ ತಲೆಯಲ್ಲಿ ತುರಿಕೆ ಪ್ರಾರಂಭವಾದರೆ ಆ ಸಂಕಟ ಹೇಳತೀರದು ಅಲ್ಲವೇ?, ಅದರಲ್ಲೂ ನವೆ ತಡೆಯಲಾಗದೇ ತುರಿಸಿಕೊಂಡಾಗ ಅತೀವ ಮುಜುಗರ ಅನುಭವಿಸಬೇಕಾಗುತ್ತದೆ. ತಲೆಯ ತುರಿಕೆಗೆ ಕೆಲವಾರು ಕಾರಣಗಳಿವೆ.

dandruff
 

ಆದರೆ ಇನ್ನು ಮುಂದೆ ಚಿಂತೆಗೆ ಕಾರಣವಿಲ್ಲ. ಏಕೆಂದರೆ ಈ ತೊಂದರೆಯನ್ನು ನಿವಾರಿಸಲು ಕೆಲವು ನೈಸರ್ಗಿಕ ಎಣ್ಣೆಗಳು ಸಮರ್ಥವಾಗಿವೆ. ಬನ್ನಿ, ಈ ಎಣ್ಣೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ:  ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ  

lavender oil

ಲ್ಯಾವೆಂಡರ್ ಎಣ್ಣೆ
ಇದೊಂದು ಅವಶ್ಯಕ ತೈಲವಾಗಿದ್ದು ಈ ಎಣ್ಣೆಯ ಸುಗಂಧದ ಕಾರಣದಿಂದಾಗಿ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಎಣ್ಣೆಯ ಗುಣಗಳು ತಲೆಯ ತುರಿಕೆಯನ್ನೂ ಕಡಿಮೆಗೊಳಿಸಲು ಸಮರ್ಥವಾಗಿವೆ. ಈ ಎಣ್ಣೆಯನ್ನು ತಲೆಗೆ ಕೊಂಚವೇ ಮಸಾಜ್ ಮೂಲಕ ಹಚ್ಚಿಕೊಂಡ ಬಳಿಕ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ.

lavender oil

ಇದು ತಲೆಗೂದಲನ್ನು ಬೆಳೆಯಲು ಉತ್ತೇಜಿಸುತ್ತದೆ. ಆದರೆ ಈ ಎಣ್ಣೆ ಕೊಂಚ ಕಟುವಾಗಿರುವುದರಿಂದ ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಕೊಂಚವೇ ಬಿಸಿಮಾಡಿ ತಲೆಗೆ ಹಚ್ಚಿಕೊಳ್ಳಬೇಕು.    ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು

ಕೊಬ್ಬರಿ ಎಣ್ಣೆ
ತಲೆಗೂದಲಿಗೆ ಕೊಬ್ಬರಿ ಎಣ್ಣೆ ಉತ್ತಮವಾಗಿದ್ದು ಇದರ ಬಳಕೆಯಿಂದ ತಲೆಯ ತುರಿಕೆಯೂ ಕಡಿಮೆಯಾಗುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣ ತಲೆಯ ತುರಿಕೆ ತಡೆಯಲೂ ನೆರವಾಗುತ್ತದೆ.

coconut oil

ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ ಕೊಂಚವೇ ಮಸಾಜ್ ಮೂಲಕ ತಲೆಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಪುದೀನಾ ಎಣ್ಣೆ
ಪುದಿನಾ ಎಣ್ಣೆಯಲ್ಲಿ ಸೂಕ್ಷ್ಮಜೀವಿ ನಿವಾರಕ ಗುಣವಿದೆ. ಅಲ್ಲದೇ ಇದರ ಇತರ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯಂತ ಹೆಚ್ಚಿನ ಬಳಕೆಯ ಅವಶ್ಯಕ ತೈಲವೆಂದು ಪರಿಗಣಿಸಲಾಗುತ್ತದೆ. ಇದರ ಸುವಾಸನೆಯ ಕಾರಣ ಹಲವು ರೀತಿಯ ಸುಗಂಧದ್ರವ್ಯಗಳಲ್ಲಿಯೂ ಬಳಕೆಯಾಗುತ್ತದೆ. ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು  

pudina oil
 

ಅಲ್ಲದೇ ಅರೋಮಾಥೆರಪಿ ಅಥವಾ ಸುವಾಸನೆಯ ಆರೈಕೆಯಲ್ಲಿಯೂ ಬಳಕೆಯಾಗುತ್ತದೆ. ಇದರ ಔಷಧೀಯ ಗುಣಗಳಿಂದಾಗಿ ಆಯುರ್ವೇದದಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ.

pudina oil

ತಲೆಯ ತುರಿಕೆಗೂ ಪುದೀನಾ ಎಣ್ಣೆ ಉತ್ತಮವಾಗಿದೆ. ಇದಕ್ಕಾಗಿ ನಿತ್ಯವೂ ಕೊಂಚವೇ ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಸಾಕು.

ಕಿತ್ತಳೆಯ ಎಣ್ಣೆ (Orange Oil)

orange oil

ಕಿತ್ತಳೆ ಹಣ್ಣಿನ ರಸ ದೇಹಕ್ಕೆ ಎಷ್ಟು ಉತ್ತಮವೋ ಇದರ ಎಣ್ಣೆಯೂ ಕೂದಲಿಗೆ ಅಷ್ಟೇ ಉತ್ತಮ. ಇದಕ್ಕಾಗಿ ಕೊಂಚ ಕಿತ್ತಳೆ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ ನೇರವಾಗಿ ತಲೆಗೆ ಹಚ್ಚಿಕೊಳ್ಳಿ. ಬಳಿಕ ದಪ್ಪ ಟವೆಲ್ಲೊಂದನ್ನು ತಲೆಗೆ ಆವರಿಸಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಟವೆಲ್ ನಿವಾರಿಸಿ ಸುಮಾರು ಎರಡು ಘಂಟೆಗಳ ಕಾಲ ಹಾಗೇ ಇರಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

Story first published: Friday, October 28, 2016, 10:18 [IST]
English summary

Herbal Oils That Work Like A Charm On Itchy Scalp!

Itchy scalp relates to a condition of the scalp where you keep scratching at it quite often. Itchy scalp can lead to embarrassing situations various times, as a person can keep scratching his head even in public. Not to worry, we have listed a few herbal oils here that can naturally treat the problem of itchy scalp.
Please Wait while comments are loading...
Subscribe Newsletter