For Quick Alerts
ALLOW NOTIFICATIONS  
For Daily Alerts

ಚೆಲುವೆಯ ಅಂದದ ಜಡೆಗೆ ಕರಿಬೇವು+ಮೆಂತೆಯ ಕಮಾಲ್...

By Arshad
|

ಕರಿಬೇವಿನ ಎಲೆಗಳು ಒಗ್ಗರಣೆಗೆ ಮಾತ್ರ ಎಂದು ತಿಳಿದುಕೊಂಡಿದ್ದರೆ ಇದು ತಪ್ಪಾಗುತ್ತದೆ. ಏಕೆಂದರೆ ಕರಿಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳು ಹತ್ತು ಹಲವು ವಿಧದಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಕೂದಲ ಬೆಳವಣಿಗೆಯಲ್ಲಿಯೂ ಕರಿಬೇವು ಪ್ರಮುಖ ಪಾತ್ರ ವಹಿಸುತ್ತದೆ.

ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆಗೆ ಸಹಕರಿಸುವ ಇನ್ನೊಂದು ಅಡುಗೆಯ ಸಾಮಾಗ್ರಿ ಎಂದರೆ ಮೆಂತೆ. ಹೌದು ಕರಿಬೇವಿನ ಎಲೆ ಮತ್ತು ಮೆಂತೆಯನ್ನು ಜೋಡಿಯಾಗಿಸಿದರೆ ಇದು ಕೂದಲಿಗೆ ಒಟ್ಟು ಹನ್ನೆರಡು ಬಗೆಯ ಪ್ರಯೋಜನಗಳನ್ನು ನೀಡುತ್ತದೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು, ಏಕೆಂದರೆ ಈ ಹನ್ನೆರಡೂ ಗುಣಗಳನ್ನು ಆಯುರ್ವೇದವೂ ಪುರಸ್ಕರಿಸಿದೆ. ಇದರ ಬಳಕೆಯೂ ಕಷ್ಟವಿಲ್ಲ. ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

ಕೆಲವು ಕರಿಬೇವಿನ ಎಲೆಗಳು ಮತ್ತು ಕೊಂಚ ಮೆಂತೆಯನ್ನು ನೀರಿನೊಂದಿಗೆ ಮಿಕ್ಸಿಯಲ್ಲಿ ನಯವಾಗಿ ಕಡೆದು ಕೂದಲಿಗೆ ಹಚ್ಚಬಹುದಾದಷ್ಟು ಗಾಢವಾದ ಲೇಪನ ತಯಾರಿಸಿ. ಈ ಮಿಶ್ರಣವನ್ನು ಈಗ ತಾನೇ ತೊಳೆದು ನೆನೆಸಿದ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಬುಡಗಳಿಗೆ ಕೊಂಚ ಮಸಾಜ್ ನೀಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬನ್ನಿ, ಈ ವಿಧಾನದಿಂದ ಯಾವ ರೀತಿಯ ಪ್ರಯೋಜನಗಳು ದೊರಕುತ್ತವೆ ಎಂಬುದನ್ನು ಮುಂದೆ ಓದಿ..... ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?

ಕೂದಲನ್ನು ಮೃದುವಾಗಿಸುತ್ತದೆ

ಕೂದಲನ್ನು ಮೃದುವಾಗಿಸುತ್ತದೆ

ಈ ಅದ್ಭುತ ನೈಸರ್ಗಿಕ ಮಿಶ್ರಣ ಕೂದಲು ತೇವವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ತೇವ ಹಿಡಿದಿಟ್ಟುಕೊಂಡಿರುವ ಕೂದಲು ಮೃದುವಾಗಿದ್ದು ಸುಲಭವಾಗಿ ಬಾಚಲು ಬರುತ್ತದೆ ಹಾಗೂ ಗಾಳಿಯಲ್ಲಿ ಹಾರಾಡುತ್ತದೆ.

ಸೀಳಿದ ತುದಿಗಳನ್ನು ಕಡಿಮೆಗೊಳಿಸುತ್ತದೆ

ಸೀಳಿದ ತುದಿಗಳನ್ನು ಕಡಿಮೆಗೊಳಿಸುತ್ತದೆ

ಪೋಷಣೆ ಕೂದಲ ತುದಿಯವರೆಗೆ ತಲುಪದಿರುವುದೇ ಸೀಳಿದ ತುದಿಗಳಿಗೆ ಕಾರಣ. ಈ ಲೇಪನದಿಂದ ಕೂದಲ ಬುಡಕ್ಕೆ ದೊರೆತ ಅಪಾರ ಪೋಷಣೆ ತುದಿಯವರೆಗೂ ಮುಂದುವರೆಯುವ ಕಾರಣ ಕೂದಲ ತುದಿ ಸೀಳುವ ಪ್ರಮೇಯವೇ ಇಲ್ಲವಾಗುತ್ತದೆ.

ಕೂದಲ ಹೊಳಪು ಹೆಚ್ಚಿಸುತ್ತದೆ

ಕೂದಲ ಹೊಳಪು ಹೆಚ್ಚಿಸುತ್ತದೆ

ಕರಿಬೇವು ಮತ್ತು ಮೆಂತೆಯಲ್ಲಿರುವ ವಿಟಮಿನ್ನುಗಳು ಕೂದಲ ಹೊಳಪು ಹೆಚ್ಚಿಸಲು ನೆರವಾಗುತ್ತದೆ. ಕೂದಲ ಪ್ರತಿ ಜೀವಕೋಶವೂ ಉತ್ತಮ ಪೋಷಣೆ ಪಡೆಯುವ ಕಾರಣ ಒಂದೇ ಮಗ್ಗುಗಲ್ಲಿ ಪದರಪದರವಾಗಿರಲು ನೆರವಾಗುತ್ತದೆ. ಈ ಪದರಗಳು ಬೆಳಕನ್ನು ಒಂದೇ ದಿಕ್ಕಿನತ್ತ ಪ್ರತಿಫಲಿಸುವ ಮೂಲಕ ಹೊಳಪು ಹೆಚ್ಚುತ್ತದೆ.

ನೆರೆತ ಕೂದಲನ್ನು ತಡೆಯುತ್ತದೆ

ನೆರೆತ ಕೂದಲನ್ನು ತಡೆಯುತ್ತದೆ

ಕೂದಲ ಬುಡದಲ್ಲಿ ಪೋಷಣೆ ಕಡಿಮೆಯಾದರೆ ವೃದ್ಧಾಪ್ಯಕ್ಕೂ ಮುನ್ನವೇ ಕೂದಲು ನೆರೆಯತೊಡಗುತ್ತದೆ. ಇದನ್ನು ತಪ್ಪಿಸಲು ಕರಿಬೇವು ಮತ್ತು ಮೆಂತೆಯಲ್ಲಿ ಉತ್ತಮ ಪೋಷಕಾಂಶಗಳಿದ್ದು ನೆರೆತ ಕೂದಲ ಅಕಾರಣವಾಗಿ ಮೂಡುವುದನ್ನು ತಡೆಯುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರಲು ಕೂದಲ ಬುಡ ಶಿಥಿಲವಾಗುವುದು ಪ್ರಮುಖ ಕಾರಣ. ಈ ಲೇಪನದಲ್ಲಿ ಕೂದಲ ಬುಡವನ್ನು ದೃಢಗೊಳಿಸುವ ಪೋಷಕಾಂಶಗಳಿರುವ ಕಾರಣ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ಉದುರಿದರೂ ಈ ಬುಡದಿಂದ ಹೊಸ ಕೂದಲು ಬೆಳೆಯಲು ನೆರವಾಗುತ್ತದೆ.

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ತಲೆಗೂದಲ ಚರ್ಮದ ಹೊರಪದರದಲ್ಲಿ ಆರ್ದ್ರತೆ ಕಡಿಮೆಯಾಗಿ ಒಣಗಿದ ಚರ್ಮ ಪಕಳೆ ಎದ್ದು ಸಡಿಲವಾಗಿ ಪುಡಿಯ ರೂಪದಲ್ಲಿರುತ್ತವೆ. ಇದೇ ತಲೆಹೊಟ್ಟು. ಇದರಲ್ಲಿ ಬ್ಯಾಕ್ಟೀರಿಯಾಗಳು ಆಶ್ರಯ ಪಡೆದು ಸೋಂಕು ಹರಡುವ ಸಾಧ್ಯತೆ ಇದೆ. ಕರಿಬೇವಿನಲ್ಲಿರುವ ಪೋಷಕಾಂಶಗಳು ಬ್ಯಾಕ್ಟೀರಿಯಾಗಳನ್ನು ಕೊಂದು ಪಕಳೆಗಳನ್ನು ನಿವಾರಿಸಿ ಕೂದಲಿಗೆ ಆರ್ದ್ರತೆ ನೀಡುವ ಮೂಲಕ ತಲೆಹೊಟ್ಟಿನ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ.

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ಕೂದಲ ಹೊಟ್ಟನ್ನು ನಿವಾರಿಸುತ್ತದೆ

ಒಂದು ವೇಳೆ ತಲೆಯ ಚರ್ಮದಲ್ಲಿ ವಿಪರೀತ ಧೂಳು, ಕೊಳೆ, ಎಣ್ಣೆಯ ಜಿಡ್ಡು ತುಂಬಿದ್ದು ಸುಲಭವಾಗಿ ನಿವಾರಣೆಯಾಗಲು ಸಾಧ್ಯವಾಗದೇ ಇದ್ದಾಗ ಈ ಲೇಪನದೊಂದಿಗೆ ಕೊಂಚ ಲಿಂಬೆಯ ರಸವನ್ನೂ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಹಠಮಾರಿ ಜಿಡ್ಡು ಸಹಾ ಸಡಿಲಗೊಂಡು ತಲೆಯನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.

 ತಲೆ ಒಣಗುವುದನ್ನು ತಡೆಯುತ್ತದೆ

ತಲೆ ಒಣಗುವುದನ್ನು ತಡೆಯುತ್ತದೆ

ಈ ಅದ್ಭುತ ಮನೆಮದ್ದಿನಲ್ಲಿ ತಲೆಯ ಚರ್ಮ ಮತ್ತು ಕೂದಲ ಪ್ರತಿ ಜೀವಕೋಶಕ್ಕೂ ಪೋಷಣೆ ನೀಡುವ ಶಕ್ತಿಯಿದ್ದು ಇದರಿಂದ ತಲೆ ಒಣಗುಣ ಮತ್ತು ಒಣಕೂದಲ ಸ್ಥಿತಿಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ತಲೆಗೂದಲು ತುಂಬಿಕೊಂಡಿರಲು ನೆರವಾಗುತ್ತದೆ

ತಲೆಗೂದಲು ತುಂಬಿಕೊಂಡಿರಲು ನೆರವಾಗುತ್ತದೆ

ಈ ಲೇಪನದ ಪೋಷಣೆಯ ಮೂಲಕ ಪ್ರತಿ ಕೂದಲೂ ಸಾಧ್ಯವಾದಷ್ಟು ದಪ್ಪನಾಗುವ ಕಾರಣ ಒಟ್ಟಾರೆ ತಲೆಗೂದಲಿನ ಪ್ರಮಾಣ ಹೆಚ್ಚುತ್ತದೆ ಹಾಗೂ ಇದು ತಲೆಗೂದಲು ತುಂಬಿಕೊಂಡಿದ್ದು ಕಳೆಕಳೆಯಾಗಿರುವ ಸೌಂದರ್ಯ ನೀಡುತ್ತದೆ.

ಎಣ್ಣೆಜಿಡ್ಡನ್ನು ಕಡಿಮೆಗೊಳಿಸುತ್ತದೆ

ಎಣ್ಣೆಜಿಡ್ಡನ್ನು ಕಡಿಮೆಗೊಳಿಸುತ್ತದೆ

ತಲೆಯ ಚರ್ಮದಲ್ಲಿ ಹೆಚ್ಚಿನ ತೈಲಗ್ರಂಥಿಗಳಿವೆ (sebum). ಒಂದು ವೇಳೆ ಈ ಎಣ್ಣೆಯ ಸ್ರವಿಕೆ ಹೆಚ್ಚಾದರೆ ತಲೆಗೂದಲು ವಿಪರೀತವಾಗಿ ಎಣ್ಣೆಯಂಶ ಹೊಂದಿದ್ದು ಕೊಂಚವೇ ಸಮಯದಲ್ಲಿ ಜಿಡ್ದನ್ನು ಅಂಟಿಸಿಕೊಳ್ಳುತ್ತದೆ. ಈ ಮನೆಮದ್ದಿನಿಂದ ತೈಲ ಅವಶ್ಯಕ ಪ್ರಮಾಣದಲ್ಲಿ ಮಾತ್ರವೇ ಸ್ರವಿಸಿ ಕೂದಲ ಹೊಳಪು ನೈಸರ್ಗಿಕವಾಗುವಂತೆ ಮಾಡುತ್ತದೆ.

ಕೂದಲು ತುಂಡಾಗುವುದನ್ನ ತಡೆಯುತ್ತದೆ

ಕೂದಲು ತುಂಡಾಗುವುದನ್ನ ತಡೆಯುತ್ತದೆ

ಕೂದಲಿಗೆ ಪೋಷಣೆಯ ಜೊತೆಗೇ ದೃಢತೆಯೂ ಸಿಗುವ ಮೂಲಕ ಕೂದಲು ನಡುವಿನಲ್ಲಿ ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ತುದಿಯವರೆಗೂ ಒಂದೇ ಬಗೆಯ ದಪ್ಪನೆಯ ಕೂದಲು ಹೊಂದಲು ಸಾಧ್ಯವಾಗುತ್ತದೆ.

English summary

Hair benefits of curry leafs and methi

Did you know that kitchen ingredients like curry leaves and methi (fenugreek) come with more than 12 hair benefits? So, have a look at the hair benefits of the curry leaf and methi hair pack, here.
X
Desktop Bottom Promotion