ಕೂದಲುದುರುವ ಸಮಸ್ಯೆಗೆ-ಗ್ರೀನ್ ಟೀ ಹೇರ್ ಪ್ಯಾಕ್...

By: Arshad
Subscribe to Boldsky

ಹಸಿರು ಟೀ ಅಥವಾ ಗ್ರೀನ್ ಟೀ ಸೇವನೆಯಿಂದ ದೇಹಕ್ಕೆ ಹತ್ತು ಹಲವು ವಿಧದ ಪ್ರಯೋಜನಗಳಿವೆ, ಎಂಬುದನ್ನು ನಾವು ಹಲವು ಬಾರಿ ನಮ್ಮ ಬೋಲ್ಡ್ ಸ್ಕೈ ತಾಣದಲ್ಲಿ ಪ್ರಕಟಿಸಿದ್ದೇವೆ... ಅದರಲ್ಲೂ ವಿಶೇಷವಾಗಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ, ಅಷ್ಟೇ ಅಲ್ಲದೆ ಉತ್ತಮಗೊಂಡ ಪರಿಚಲನೆ ತಲೆಗೂದಲ ಬುಡಕ್ಕೂ ತಲುಪುತ್ತದೆ...

Green tea
 

ಇನ್ನೂ ಇದರ ವಿಶೇಷತೆ ಏನೆಂದರೆ ಹಸಿರು ಟೀಯಲ್ಲಿರುವ epigallocatechin gallate ಅಥವಾ EGCG ಎಂಬ ಪೋಷಕಾಂಶ ಕೂದಲ ಬುಡವನ್ನು ಹೊಸ ಕೂದಲು ಹುಟ್ಟಲು ಅಗತ್ಯ ಪೋಷಣೆ ನೀಡುತ್ತದೆ ಹಾಗೂ catechin ಎಂಬ ಇನ್ನೊಂದು ಪೋಶಕಾಂಶ ಹೊಸ ಕೂದಲು ಹುಟ್ಟಲು ಪ್ರಚೋದಿಸುತ್ತದೆ.  ಗ್ರೀನ್ ಟೀನಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ

ಪರಿಣಾಮವಾಗಿ ಹೊಸ ಕೂದಲು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಬನ್ನಿ, ಹಸಿರು ಟೀಯನ್ನು ಒಂದು ಲೇಪನದ ಮೂಲಕ ಹೇಗೆ ಕೂದಲಿಗೆ ಬಳಸಬಹುದು ಎಂಬು ಬಗ್ಗೆ ಕೇಶತಜ್ಞರು ನೀಡುವ ವಿವರಗಳನ್ನು ನೋಡೋಣ: 

hair fall

ಹಸಿರು ಟೀ ಮತ್ತು ಕೊಬ್ಬರಿ ಎಣ್ಣೆ
ಕೊಂಚ ಹಸಿರು ಟೀಪುಡಿಯನ್ನು ನಿಮ್ಮ ನೆಚ್ಚಿನ ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಡನೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಕೂದಲ ಬುಡಕ್ಕೆ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಲೇಪನದಲ್ಲಿ ಎಣ್ಣೆಗಿಂತಲೂ ಹಸಿರು ಟೀ ಪ್ರಮಾಣವೇ ಹೆಚ್ಚಿರಲಿ.  ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!  

Green tea
 

ಹಸಿರು ಟೀ ಮತ್ತು ಬೆಣ್ಣೆಹಣ್ಣಿನ ಲೇಪನ
ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಚೆನ್ನಾಗಿ ಗೊಟಾಯಿಸಿ ಲೇಪನ ತಯಾರಿಸಿ. ಈ ತಿರುಳಿಗೆ ಒಂದು ದೊಡ್ಡ ಚಮಚ ಹಸಿರು ಟೀ ಪುಡಿ ಮತ್ತು ಒಂದು ದೊಡ್ಡ ಚಮಚ ಮೆಂತೆಕಾಳಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ. ಕೊಂಚವೇ ಉಗುರುಬೆಚ್ಚನೆಯ ನೀರು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳುವಷ್ಟು ಗಾಢವಾಗಿಸಿ. ಈ ಲೇಪನವನ್ನು ಈಗತಾನೇ ತೊಳೆದ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.      

Green tea
 

ಹಸಿರು ಟೀ ಮತ್ತು ಪುದೀನಾ ಎಲೆಗಳು
ಎರಡು ಕಪ್ ಟೀ ಮಾಡಲು ಅಗತ್ಯವಿರುವಷ್ಟು (ಅಥವಾ ಎರಡು ಮುಳುಗಿಸಬಹುದಾದ ಸ್ಯಾಶೆಗಳ) ಹಸಿರು ಟೀ ಪುಡಿಯನ್ನು ಐದು ಪುದೀನಾ ಎಲೆಗಳೊಂದಿಗೆ ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಕನಿಷ್ಠವಾಗಿಸಿ ಅರ್ಧ ಗಂಟೆ ಹಾಗೇ ಇರಿಸಿ. ಬಳಿಕ ಉರಿ ಆರಿಸಿ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಒಂದು ದೊಡ್ಡ ಗಾತ್ರದ ಲಿಂಬೆರಸವನ್ನು ಸೇರಿಸಿ ತಣಿಯಲು ಬಿಡಿ. ಈ ನೀರಿನಿಂದ ಇಡಿಯ ತಲೆಯನ್ನು ನೆನೆಸಿ ಹದಿನೈದು ನಿಮಿಷ ಕಾಲ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.  ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!   

ಹಸಿರು ಟೀ ಮತ್ತು ಮದರಂಗಿ
ಒಂದು ಕಪ್ ನೀರಿನಲ್ಲಿ ಕೊಂಚ ಹಸಿರು ಟೀ ಕುದಿಸಿ ಗಾಢ ಹಸಿರು ಬಣ್ಣ ಬಂದ ಬಳಿಕ ತಣಿಸಿ ಈ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈ ನೀರಿಗೆ ಕೊಂಚ ಮದರಂಗಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.   ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್  

Mehandi


ಈ ಮಿಶ್ರಣವನ್ನು ಇಡಿಯ ರಾತ್ರಿ ಹಾಗೇ ಇರಿಸಿ. ಮರುದಿನ ನಿಮಗೆ ಸೂಕ್ತವಾದ ಸಮಯದಲ್ಲಿ ಇದನ್ನು ಹಚ್ಚುವ ಮುನ್ನ ಕೆಲವು ಹನಿ ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲವನ್ನು ತಲೆಗೆ ಹಚ್ಚಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ನಯವಾದ ಮಸಾಜ್ ಮೂಲಕ ಇಡಿಯ ತಲೆ ಆವರಿಸುವಂತೆ ಹಚ್ಚಿ ಒಂದು ಗಂಟೆಯಾದರೂ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.  

English summary

Green tea masks you must try to beat hair fall

Green can work as an excellent remedy to fight hair fall. The tea helps to strengthen the roots and increase blood circulation in the scalp. Green tea contains epigallocatechin gallate or EGCG which prepares the hair follicles for regrowth and the catechin in green tea stimulates hair growth. So, try using these green tea masks recommended by hair expert
Please Wait while comments are loading...
Subscribe Newsletter