ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ನೈಸರ್ಗಿಕವಾದ ಕೂದಲ ಆರೈಕೆಯ ಸಾಮಗ್ರಿಗೆ ಸ೦ಬ೦ಧಿಸಿದ ಹಾಗೆ ಮತ್ತೊ೦ದು ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಮೆ೦ತೆಕಾಳುಗಳು ಸುಲಭವಾಗಿ ಲಭ್ಯವಿದ್ದು, ಕೈಗೆಟಕುವ ದರದಲ್ಲಿ ದೊರೆಯುತ್ತವೆ....

By: Hemanth
Subscribe to Boldsky

ಹೊಳೆಯುವ ರೇಷ್ಮೆಯಂತಹ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಂತಹ ಕೂದಲು ಹೊಂದಿರುವವರನ್ನು ನೋಡುವುದೇ ಖುಷಿ. ಕೂದಲು ಆರೋಗ್ಯವಾಗಿ ಹಾಗೂ ಹೊಳೆಯುತ್ತಾ ಇದ್ದರೆ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.  ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್

ಕೂದಲು ನಿರ್ಜೀವವಾಗಿದ್ದರೆ ಏನೋ ಒಂದು ಕಳೆದುಕೊಂಡಂತೆ. ಇದರಿಂದ ಕೂದಲಿನ ಆರೈಕೆ ತುಂಬಾ ಮುಖ್ಯ.ಸುಂದರವಾಗಿರುವ ಕೂದಲು ಕೂಡ ನಮ್ಮ ವ್ಯಕ್ತಿತ್ವದ ಪ್ರತೀಕವಾಗಿದೆ. ಮೆಂತೆಯನ್ನು ಬಳಸಿಕೊಂಡು ಕೂದಲನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಮೆಂತೆಯಲ್ಲಿ ಪೊಟಾಶಿಯಂ, ಸೋಡಿಯಂ ಮತ್ತು ಮೆಗ್ನಿಶಿಯಂ ನೈಸರ್ಗಿಕವಾಗಿ ಲಭ್ಯವಾಗಿದೆ. ಇದರಲ್ಲಿರುವ ವಿಟಮಿನ್ ಸಿ, ಕಬ್ಬಿಣ, ನಿಕೋಟಿನಿಕ್ ಆ್ಯಸಿಡ್, ಲೆಸಿಥಿನ್ ಅಂಶಗಳು ಕೂದಲಿನ ಕೋಶಗಳನ್ನು ಆರೋಗ್ಯಕರ ಹಾಗೂ ಬಲಿಷ್ಠವಾಗಿಸುತ್ತದೆ. ಇದು ಕೂದಲಿನ ಬೆಳವಣಿಗೆ ಮತ್ತು ಕೂದಲಿನ ಕೋಶಗಳು ಮರುನಿರ್ಮಾಣಕ್ಕೆ ನೆರವಾಗುತ್ತದೆ. ಮೆಂತೆಯ ಮಾಸ್ಕ್‌ನಿಂದ ಕೂದಲನ್ನು ಯಾವ ರೀತಿ ಆರೈಕೆ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....

ತಲೆಹೊಟ್ಟಿಗೆ ಅತ್ಯುತ್ತಮ ಮಾಸ್ಕ್

ಮೆಂತೆಯ ಪೇಸ್ಟ್‌ಗೆ ಲಿಂಬೆರಸವನ್ನು ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಬೇಕು. ಒಂದು ಹಿಡಿಯಷ್ಟು ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕಿ ಮರುದಿನ ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಒಂದು ಚಮಚ ಲಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ.

ಮೊಸರಿನೊಂದಿಗೆ ಮೆಂತೆ

ಮೆಂತೆಯ ಎಲೆ ಮತ್ತು ಮೊಸರಿನಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದಾಗಿದೆ. ಸ್ವಲ್ಪ ಮೆಂತೆಯ ಸೊಪ್ಪನ್ನು ಬೇಯಿಸಿ ಅದರ ರಸ ತೆಗೆಯಿರಿ. ಈ ರಸಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

ನೆಲ್ಲಿಕಾಯಿ ಜತೆ ಮೆಂತೆ

ಕೂದಲು ಬಿಳಿಯಾಗುವುದನ್ನು ತಡೆಯಲು ಮೆಂತೆಯ ಹುಡಿಗೆ ಸ್ವಲ್ಪ ನೆಲ್ಲಿಕಾಯಿ ಹುಡಿ ಮತ್ತು ನಿಂಬೆರಸ ಬೆರೆಸಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸರಿಯಾಗಿ ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತಂಪಾದ ನೀರಿನಿಂದ ಕೂದಲು ತೊಳೆಯಿರಿ.

ಮೊಟ್ಟೆ ಮತ್ತು ಮೆಂತೆ

ತುಂಬಾ ಒಣ ಕೂದಲನ್ನು ಹೊಂದಿರುವವರು ಮೆಂತೆಯ ಜತೆಗೆ ಮೊಟ್ಟೆಯನ್ನು ಬೆರೆಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಬೇಕು. ಸ್ವಲ್ಪ ಮೆಂತೆಯನ್ನು ನೆನೆಸಿಟ್ಟು ಬಳಿಕ ಪೇಸ್ಟ್ ಮಾಡಿಕೊಳ್ಳಿ. ಒಂದು ಮೊಟ್ಟೆಯನ್ನು ಇದಕ್ಕೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನಿಯಮಿತವಾಗಿ ಬಳಸಿದರೆ ಫಲಿತಾಂಶ ಸಿಗುವುದು.

ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ

ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ ಮಾಡಲು ನೀವು ಮೆ೦ತೆಯ ಪೇಸ್ಟ್ ಅನ್ನು ಇತರ ನೈಸರ್ಗಿಕ ಅಡುಗೆ ಮನೆ ಸಾಮಗ್ರಿಗಳಾದ ಮೊಸರು, ಆಪಲ್ ಸೈಡರ್ ವಿನೆಗರ್, ಹಾಗೂ ಇನ್ನೂ ಅನೇಕ ಬಗೆಯ ವಸ್ತುಗಳೊ೦ದಿಗೆ ಮಿಶ್ರಗೊಳಿಸಬಹುದು.

ನೆತ್ತಿಯ ತುರಿಕೆಗೆ ರಾಮಬಾಣ

ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.

 

 

Story first published: Tuesday, November 29, 2016, 13:14 [IST]
English summary

Fenugreek Seed Hair Mask Recipes For Thicker & Stronger Hair

Fenugreek or methi is one among the most commonly used natural hair products that is known t provide long-lasting effects. It is one of the natural spices that contains potassium, sodium and magnesium. Along with all these, it also carries proteins, vitamin C, iron, nicotinic acid, and lecithin that help to make your hair follicles healthier and stronger.
Please Wait while comments are loading...
Subscribe Newsletter