ಬಿಳಿಕೂದಲಿನ ಸಮಸ್ಯೆಗೆ-ತೆಂಗಿನ ಎಣ್ಣೆ+ಲಿಂಬೆರಸದ ಹೇರ್ ಪ್ಯಾಕ್

ತೆಂಗಿನೆಣ್ಣೆ ಮತ್ತು ಲಿಂಬೆರಸವನ್ನು ಬಳಸಿಕೊಂಡು ನರೆಗೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

By: Jaya subramanya
Subscribe to Boldsky

ಬಿಳಿಗೂದಲಿನ ಸಮಸ್ಯೆ ಇಂದು ವಯಸ್ಸಾದವರನ್ನು ಮಾತ್ರ ಕಾಡುವ ಸಮಸ್ಯೆಯಾಗಿರದೇ ಯುವಕ ಯುವತಿಯನ್ನು ಪೇಚಿಗೆ ಸಿಲುಕುವಂತೆ ಮಾಡುತ್ತದೆ. ಪೋಷಕಾಂಶವು ನಿಮ್ಮ ಕೂದಲಿನ ಬೇರುಗಳನ್ನು ತಲುಪದೇ ಇರುವುದು ಬಿಳಿಗೂದಲಿನ ಸಮಸ್ಯೆಗೆ ಕಾರಣವಾಗಿರುತ್ತದೆ. ಹಾಗಿದ್ದರೆ ಬಿಳಿ ಗೂದಲು ಅಥವಾ ನೆರೆಗೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಇಂದಿಲ್ಲಿ ಅದ್ಭುತವಾದ ಮನೆಮದ್ದಿನ ಬಳಕೆಯನ್ನು ನೀವು ಮಾಡಿಕೊಳ್ಳಬಹುದಾಗಿದೆ.

Coconut Oil + Lemon Juice
 

ಹೌದು ತೆಂಗಿನೆಣ್ಣೆ ಮತ್ತು ಲಿಂಬೆರಸವನ್ನು ಬಳಸಿಕೊಂಡು ನರೆಗೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು
ತೆಂಗಿನೆಣ್ಣೆಯಲ್ಲಿ ಲಾರಿಕ್ ಆಸಿಡ್ ಇದ್ದು, ತಲೆಯ ಮೇಲ್ಮೈಯಲ್ಲಿ ಬೆಳೆದಿರುವ ಸೆಬಮ್ ಅನ್ನು ನಿವಾರಿಸುತ್ತದೆ, ರಕ್ತದ ಹರಿವನ್ನು ಉತ್ತಮಗೊಳಿಸಿ ಹೊಸ ಕೂದಲಿನ ಕೋಶಗಳು ಬೆಳವಣಿಗೆಯಾಗುವಂತೆ ಮಾಡುತ್ತದೆ ಲಿಂಬೆ ರಸವು ವಿಟಮಿನ್ ಸಿ ಅಂಶವನ್ನು ಒಳಗೊಂಡಿದ್ದು, ಸಿಟ್ರಿಕ್ ಆಸಿಡ್, ಫ್ಲಾವೊನಾಯಿಡ್ಸ್ ಮತ್ತು ವಿಟಮಿನ್ ಬಿ ಅಂಶಗಳಿವೆ.  ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

ಇದು ಕೂದಲನ್ನು ಹೈಡ್ರೇಟ್ ಮಾಡಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲು ಬೆಳೆಯಲು ಉತ್ತೇಜನವನ್ನು ನೀಡುತ್ತದೆ. ಹಾಗಿದ್ದರೆ ಈ ಪ್ಯಾಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ನಾವು ನೀಡುತ್ತಿದ್ದೇವೆ.

Coconut Oil + Lemon Juice pack
 

ಹಂತ:1
ಪಾತ್ರೆಯಲ್ಲಿ 2 ಚಮಚಗಳಷ್ಟು ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ನಿಮ್ಮ ಕೂದಲಿನ ದಪ್ಪ ಮತ್ತು ಉದ್ದಕ್ಕೆ ತಕ್ಕಂತೆ ಮಿಶ್ರಣವನ್ನು ಸಿದ್ಧಪಡಿಸಿ

Coconut Oil + Lemon Juice
 

ಹಂತ:2
ಅರ್ಧಕ್ಕೆ ಲಿಂಬೆಯನ್ನು ಕತ್ತರಿಸಿಕೊಳ್ಳಿ ಮತ್ತು ಲಿಂಬೆಯ ರಸವನ್ನು ಪಾತ್ರೆಗೆ ಹಿಂಡಿಕೊಳ್ಳಿ ಈ ಪಾತ್ರೆಯಲ್ಲಿ ತೆಂಗಿನೆಣ್ಣೆ ಇರಲಿ

Coconut Oil + Lemon Juice
 

ಹಂತ:3
ಫೋರ್ಕ್ ಸ್ಟಿರ್ ಅನ್ನು ಬಳಸಿಕೊಂಡು ಮಿಶ್ರಣವನ್ನು ಚೆನ್ನಾಗಿ ಕಲಸಿ

Coconut Oil + Lemon Juice
 

ಹಂತ:4
ನಿಮ್ಮ ಕೂದಲನ್ನು ಸಣ್ಣ ಭಾಗಗಳನ್ನಾಗಿ ಮಾಡಿ ಮತ್ತು ತಲೆಬುಡಕ್ಕೆ ಹಾಗೂ ಕೂದಲಿನ ಉದ್ದಕ್ಕೆ ಅನುಗುಣವಾಗಿ ಮಿಶ್ರಣವನ್ನು ಹಚ್ಚಿಕೊಳ್ಳಿ. ನಿಮ್ಮ ಬೆರಳುಗಳನ್ನು ಬಳಸಿಕೊಂಡು ಮಸಾಜ್ ಮಾಡಿ

Coconut Oil + Lemon Juice
 

ಹಂತ:5
ತಲೆಬುಡಕ್ಕೆ ದ್ರಾವಣವು ಚೆನ್ನಾಗಿ ಹೀರಿಕೊಳ್ಳುವಂತೆ ನೋಡಿಕೊಳ್ಳಿ. ಒಂದು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಮತ್ತು ಕಂಡೀಷನರ್ ಅನ್ನು ಬಳಸಿ. ಬಿಳಿಗೂದಲನ್ನು ನಿವಾರಿಸಿಕೊಳ್ಳಲು, ಈ ತೆಂಗಿನೆಣ್ಣೆ ಮತ್ತು ಲಿಂಬೆ ರಸದ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಿಕೊಳ್ಳಿ.ಬಿಳಿಗೂದಲು ಅಥವಾ ನೆರೆಗೂದಲಿನ ನಿವಾರಣೆಯಲ್ಲಿ ನೀವು ಇನ್ನೊಂದಿಷ್ಟು ಸಲಹೆಗಳನ್ನು ಅರಿತಿದ್ದರೆ ನಮ್ಮೊಂದಿಗೆ ಅದನ್ನು ಹಂಚಿಕೊಳ್ಳಿ.   ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!

Story first published: Saturday, November 12, 2016, 13:05 [IST]
English summary

Coconut Oil + Lemon Juice = Goodbye Gray Hair!

Greying hair at early 20's? Time to up your hair care game and go for something potent. And with potent we don't mean toxic chemicals, we mean home remedies for grey hair! Now that you know precisely what these ingredients can do for your hair, lets get down to the coconut oil and lemon juice mask recipe for grey hair.
Please Wait while comments are loading...
Subscribe Newsletter