ಕೂದಲಿಗೆ 'ಹರಳೆಣ್ಣೆ'ಯ ಮುಂದೆ ಯಾವುದೇ ಎಣ್ಣೆ ಸರಿಸಾಟಿಯಾಗದು!

ಮುಖ ಸಿಂಡರಿಸಿಕೊಂಡವರನ್ನು 'ಹರಳೆಣ್ಣೆ ಕುಡಿದವರಂತೆ' ಎಂಬ ಉಪಮೇಯವನ್ನು ಉಪಯೋಗಿಸುವುದನ್ನು ಬಹಳಷ್ಟು ಕೃತಿಗಳಲ್ಲಿ ನೋಡಬಹುದು. ಆದರೆ ಕೂದಲಿನ ವಿಷಯಕ್ಕೆ ಬಂದರೆ 'ಹರಳೆಣ್ಣೆ'ಯ ಮುಂದೆ ಯಾವುದೇ ಎಣ್ಣೆ ಸರಿಸಾಟಿಯಾಗದು!

By: Arshad
Subscribe to Boldsky

ಕೂದಲ ಪೋಷಣೆಗೆ ಸಮಯ ನೀಡುವ ಮೂಲಕ ಮಾತ್ರ ಸಾಧ್ಯ. ಇಂದಿನ ದಿನಗಳಲ್ಲಿ ಕೂದಲ, ತ್ವಚೆಯ ಆರೈಕೆಗೆ ಸಮಯ ನೀಡಲು ಸಾಧ್ಯವಾಗದೇ ಕೂದಲು ಸಹಜ ಸೌಂದರ್ಯ ಪಡೆಯುವುದರಿಂದ ವಂಚಿತವಾಗುತ್ತಿದೆ. ಆದರೆ ಕಡಿಮೆ ಸಮಯದಲ್ಲಿ ಕೂದಲನ್ನು ಒಪ್ಪ ಓರಣವಾಗಿಸಿ ಹೆಚ್ಚಿನ ಹೊತ್ತಿನವರೆಗೆ ಪೋಷಣೆ ನೀಡಲು ನಿಸರ್ಗ ನಮಗೊಂದು ಅದ್ಭುತ ಎಣ್ಣೆಯನ್ನು ನೀಡಿದೆ, ಇದೇ ಹರಳೆಣ್ಣೆ. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು 

ಇದರ ವಿರೇಚಕ ಗುಣದಿಂದಾಗಿ ಹೆಚ್ಚಿನವರು ಇದನ್ನು ಅವಹೇಳನ ದೃಷ್ಟಿಯಿಂದ ನೋಡುವ ಕಾರಣದಿಂದಲೇ ತಲೆಗೆ ಹಚ್ಚಿಕೊಳ್ಳಲು ಹಿಂದೆ ಮುಂದೆ ನೋಡುವ ಹಾಗಾಗಿದೆಯೇ ಹೊರತು ಹಿಂದೆಲ್ಲಾ ತಲೆಗೆ ಹರಳೆಣ್ಣೆಯನ್ನೇ ಹಚ್ಚಲಾಗುತ್ತಿತ್ತು. ಹರಳೆಣ್ಣೆ ಹಚ್ಚಿಕೊಂಡರೆ ಕೂದಲು ಕೊಂಚ ಅಂಟಿಕೊಂಡಿದ್ದು ಗಾಳಿಗೆ ಹಾರುವುದಿಲ್ಲ ಎಂಬ ಒಂದೇ ಕಾರಣ ಬಿಟ್ಟರೆ ಇದನ್ನು ಹಚ್ಚಿಕೊಳ್ಳದಿರಲು ಯಾವುದೇ ಕಾರಣ ಉಳಿಯುವುದಿಲ್ಲ.

ಒಂದು ಬಗೆಯ ಮುಳ್ಳುಗಳಿರುವ ಬೀಜಗಳನ್ನು ಒಣಗಿಸಿ ಹಿಂಡಲಾಗುವ ಹರಳೆಣ್ಣೆ ಗಾಢ ಹಳದಿ ಬಣ್ಣ ಹೊಂದಿದ್ದು ಅತಿ ಹೆಚ್ಚಿನ ಸಾಂದ್ರತೆ ಹೊಂದಿದೆ. ಇದರಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದು ಅಸಂತುಲಿತ ಕೊಬ್ಬಿನ ಆಮ್ಲಗಳೂ ಇರುವ ಕಾರಣ ಚರ್ಮ, ಕೂದಲ ಸಹಿತ ಇತರ ಅಂಗಗಳಿಗೂ ಯೋಗ್ಯವಾಗಿದೆ.   ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಆದರೆ ಕೂದಲಿಗೆ ಹರಳೆಣ್ಣೆ ಯಾವ ರೀತಿಯಲ್ಲಿ ಉಪಕಾರ ಮಾಡುತ್ತದೆ ಎಂದು ಗೊತ್ತಿಲ್ಲದಿರುವವರು ಕೆಳಗಿನ ಮಾಹಿತಿ ನೋಡಿದ ಬಳಿಕ ಮುಂದಿನ ಬಾರಿ ಅಂಗಡಿಯಿಂದ ತರಬೇಕಾದ ಸಾಮಾನುಗಳ ಪಟ್ಟಿಯಲ್ಲಿ ಹರಳೆಣ್ಣೆಯನ್ನು ಬರೆಯುವುದನ್ನು ಖಂಡಿತಾ ತಪ್ಪಿಸಲಾಗದು...

ಕೂದಲು ನೆರೆಯುವುದನ್ನು ತಡೆಯಲು

ಕೂದಲ ನಡುವೆ ಬಿಳಿಕೂದಲುಗಳು ಕಾಣತೊಡಗುವುದು ಈಗ ವಯಸ್ಸಾಗುತ್ತಿರುವ ಲಕ್ಷಣವಲ್ಲ, ಬದಲಿಗೆ ಕೆಲವು ಪೋಷಕಾಂಶಗಳ ಕೊರತೆಯೂ ಕಾರಣವಾಗಿರಬಹುದು.

ಕೂದಲು ನೆರೆಯುವುದನ್ನು ತಡೆಯಲು

ಒಂದು ವೇಳೆ ಅಕಾಲಿಕವಾಗಿ ಕೂದಲು ನೆರೆಯತೊಡಗಿದ್ದರೆ ವಾರಕ್ಕೊಂದು ದಿನ ರಾತ್ರಿ ಮಲಗುವ ಮುನ್ನ ಹರಳೆಣ್ಣೆಯಿಂದ ಇಡಿಯ ತಲೆಗೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಬೇಕು. ಈ ಕೂದಲು ಉದುರಿ ಹೊಸ ಕೂದಲು ಹುಟ್ಟುವಾಗ ಇದು ಕಪ್ಪುಬಣ್ಣದ್ದಾಗಿರುತ್ತದೆ. ಇದರ ಮೂಲಕ ಕೂದಲು ನೆರೆಯುವುದನ್ನು ತಪ್ಪಿಸಬಹುದು.

ಕೂದಲು ಉದುರುವುದನ್ನು ತಡೆಯಲು

ಇರದಲ್ಲಿರುವ ಒಮೆಗಾ 9 ಕೊಬ್ಬಿನ ಆಮ್ಲಗಳು, ವಿವಿಧ ಪೋಷಕಾಂಶಗಳು ಕೂದಲ ಬುಡವನ್ನು ದೃಢಗೊಳಿಸುವ ಕ್ಷಮತೆ ಹೊಂದಿವೆ. ಇದಕ್ಕಾಗಿ ಕೂದಲ ಬುಡಕ್ಕೆ ಹರಳೆಣ್ಣೆಯಿಂದ ವಾರಕ್ಕೊಂದು ದಿನ ಮಸಾಜ್ ಮಾಡಿದರೆ ಸಾಕು. ಒಂದೇ ತಿಂಗಳಲ್ಲಿ ಕೂದಲು ಉದುರುವುದು ಕಡಿಮೆಯಾಗಿರುವುದು ಮಾತ್ರವಲ್ಲ, ಹೊಸ ಕೂದಲು ಬೆಳೆಯತೊಡಗಿರುವುದನ್ನೂ ಕಾಣಬಹುದು.

ತುದಿ ಸೀಳಿದ ಕೂದಲಿಗೆ

ಒಂದು ವೇಳೆ ತುದಿ ಸೀಳಿದ್ದರೆ ಹರಳೆಣ್ಣೆಯನ್ನು ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ. ವಿಶೇಷವಾಗಿ ತುದಿಗಳಿಗೆ ಹಚ್ಚಿ. ಇದರಿಂದ ಕೂದಲು ದೃಢವಾಗಿ ಸೀಳಿದ ತುದಿಯ ಬುಡ ಗಟ್ಟಿಯಾಗಿ ಇನ್ನಷ್ಟು ಸೀಳದಂತೆ ತಡೆಯುತ್ತದೆ. ಸೀಳಿದ ತುದಿಗಳನ್ನು ಒಂದು ಹಂತಕ್ಕೆ ಕತ್ತರಿಸಿಕೊಂಡರೆ ಸುಂದರ ಕೂದಲು ಪಡೆಯಬಹುದು.

ತಲೆಹೊಟ್ಟು ಆಗಿದ್ದರೆ

ಹರಳೆಣ್ಣೆ ತಲೆಹೊಟ್ಟನ್ನು ನಿವಾರಿಸಲೂ ಸಕ್ಷಮವಾಗಿದೆ. ತಲೆಯ ಚರ್ಮ ಒಣಗಿದರೆ ಆರ್ದ್ರತೆಯ ಕೊರತೆಯಿಂದ ತಲೆಯ ಚರ್ಮದ ಹೊರಪದರ ಪಕಳೆಯಂತಾಗಿ ಪರೆ ಏಳುತ್ತದೆ. ಇದೇ ತಲೆಹೊಟ್ಟು. ಇದನ್ನು ನಿವಾರಿಸಲು ಚರ್ಮಕ್ಕೆ ಆರ್ದ್ರತೆ ನೀಡಬೇಕು. ಹರಳೆಣ್ಣೆಯಿಂದ ತಲೆಯ ಚರ್ಮವನ್ನು ನಯವಾಗಿ ವಾರಕ್ಕೊಂದು ಬಾರಿ ಮಸಾಜ್ ಮಾಡುವ ಮೂಲಕ ತಲೆಹೊಟ್ಟನ್ನು ನಿವಾರಿಸಬಹುದು.

ತಲೆಯಲ್ಲಿ ಸೋಂಕು ಆಗಿದ್ದರೆ

ಕೆಲವೊಮ್ಮೆ ಕೂದಲ ಬುಡಗಳಲ್ಲಿ ಸೋಂಕು ಉಂಟಾಗಿ ಕೀವು ತುಂಬಿಕೊಳ್ಳುತ್ತದೆ. ಈ ಭಾಗವನ್ನು ಮುಟ್ಟಲೂ ಸಾಧ್ಯವಾಗದಷ್ಟು ನೋವು ಇರುತ್ತದೆ. ಇದಕ್ಕೆ ಕೂದಲ ಚರ್ಮದ ತೈಲಗ್ರಂಥಿಗಳ ಸೂಕ್ಷ್ಮರಂಧ್ರಗಳು ಮುಚ್ಚಿಕೊಂಡಿದ್ದು ಒಳಗೆ ಬ್ಯಾಕ್ಟೀರಿಯಾಗಳ ಸೋಂಕು ಹೆಚ್ಚಾಗಿರುವುದೇ ಕಾರಣ.

ತಲೆಯಲ್ಲಿ ಸೋಂಕು ಆಗಿದ್ದರೆ

ಇದಕ್ಕಾಗಿ ಹರಳೆಣ್ಣೆಯನ್ನು ನೇರವಾಗಿ ತಲೆಗೆ ಹಚ್ಚಿಕೊಂಡರೆ ಸಾಕು. ಸೋಂಕು ಹೆಚ್ಚಿದ್ದರೆ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಬೇಕು. ಇದರ ಮೂಲಕ ಸೂಕ್ಷ್ಮರಂಧ್ರಗಳು ತೆರೆಯಲ್ಪಟ್ಟು ಸೋಂಕು ಹೊರಬರಲು ಸಾಧ್ಯವಾಗುತ್ತದೆ ಹಾಗೂ ದೇಹ ಇದರ ಪರಿಣಾಮವನ್ನು ದುರಸ್ತಿಗೊಳಿಸಲು ಸಾಧ್ಯವಾಗುತ್ತದೆ.

 

English summary

Castor Oil Can Make Your Hair Perfect! Find Out How!

Castor oil is a vegetable oil that is obtained from pressing castor beans. It is a pale yellow oil. This oil is rich in nutrients like monounsaturated fatty acids. So, here is a list of ways in which castor oil can help you get the perfect hair that you had only dreamt of. This one oil is all you need!
Please Wait while comments are loading...
Subscribe Newsletter