For Quick Alerts
ALLOW NOTIFICATIONS  
For Daily Alerts

ನಂಬಲೇಬೇಕು 'ಸಾಸಿವೆ ಎಣ್ಣೆ' ಕೂದಲಿಗೆ ಬಹಳ ಒಳ್ಳೆಯದು....

ತೆಂಗಿನ ಎಣ್ಣೆಯಂತೆ ಸಾಸಿವೆ ಎಣ್ಣೆಯನ್ನು ಕೂಡ ಕೂದಲಿಗೆ ಬಳಸುತ್ತಾರಾ ಎಂದು ಹೆಚ್ಚಿನವರು ಹುಬ್ಬೇರಿಸಬಹುದು... ಆದರೆ ಸಾಸಿವೆ ಎಣ್ಣೆಯಿಂದ ಕೂದಲಿಗೆ ಹಲವಾರು ರೀತಿಯ ಉಪಯೋಗಗಳಿವೆ....

By Manu
|

ದಕ್ಷಿಣ ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಿಗೆ ತೆಂಗಿನ ಎಣ್ಣೆಯನ್ನು ಬಳಸಿಕೊಂಡರೆ ಉತ್ತರ ಭಾರತೀಯ ಕಡೆ ಹೆಚ್ಚಾಗಿ ಸಾಸಿವೆ ಎಣ್ಣೆಯನ್ನು ಉಪಯೋಗಿಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಅಧ್ಯಯನಗಳು ಹೇಳಿವೆ. ಒಂದೇ ರೀತಿಯ ಎಣ್ಣೆಯನ್ನು ಬಳಸುವ ಬದಲು ಪ್ರತೀ ಆರು ತಿಂಗಳಿಗೆ ಅಡುಗೆಗೆ ಬಳಸುವ ಎಣ್ಣೆಯನ್ನು ಬದಲಾಯಿಸುತ್ತಾ ಇದ್ದರೆ ಅದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ತೆಂಗಿನ ಎಣ್ಣೆಯಂತೆ ಸಾಸಿವೆ ಎಣ್ಣೆಯನ್ನು ಕೂಡ ಕೂದಲಿಗೆ ಬಳಸುತ್ತಾರಾ ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಸಾಸಿವೆ ಎಣ್ಣೆಯಿಂದ ಕೂದಲಿಗೆ ಹಲವಾರು ರೀತಿಯ ಉಪಯೋಗಗಳಿವೆ. ಆದರೆ ಹೆಚ್ಚಿನವರು ಇದರ ಘಾಟು ವಾಸನೆಯಿಂದಾಗಿ ಕೂದಲಿಗೆ ಇದನ್ನು ಬಳಸುವುದರಿಂದ ದೂರವೇ ಉಳಿಯುತ್ತಾರೆ. ಕೂದಲು ತೊಳೆದರೂ ಇದರ ವಾಸನೆ ಮಾತ್ರ ಹಾಗೆ ಉಳಿದಿರುತ್ತದೆ. ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!

ಆದರೆ ಶಾಂಪೂ ಹಾಕಿಕೊಂಡು ಸ್ನಾನ ಮಾಡಿದರೆ ವಾಸನೆ ಮಾಯವಾಗುತ್ತದೆ. ಇದು ಕೂದಲಿನ ಹಲವಾರು ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇನ್ನು ತಡಮಾಡದೆ ಸಾಸಿವೆ ಎಣ್ಣೆಯನ್ನು ಬಳಸಿನೋಡಿ. ಸಾಸಿವೆ ಎಣ್ಣೆಯನ್ನು ಕೂದಲಿಗೆ ಯಾವ ರೀತಿಯಿಂದ ಬಳಸಬಹುದು ಎಂದು ಈ ಲೇಖನದಲ್ಲಿ ಸೂಚಿಸಲಾಗಿದೆ.... ಮುಂದೆ ಓದಿ.....

ಕೂದಲು ಬಿಳಿಯಾಗುವುದನ್ನು ತಡೆಯುವುದು

ಕೂದಲು ಬಿಳಿಯಾಗುವುದನ್ನು ತಡೆಯುವುದು

ಸಾಸಿವೆ ಎಣ್ಣೆಯ ಅತೀ ಮುಖ್ಯ ಉಪಯೋಗವೆಂದರೆ ಅದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಇದು ನೈಸರ್ಗಿಕವಾಗಿ ಕೂದಲನ್ನು ಕಪ್ಪಗೆ ಮಾಡುತ್ತದೆ. 20ರ ಹರೆಯದಲ್ಲೇ ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಲು ಆರಂಭಿಸಿದರೆ ವಯಸ್ಸಾಗುತ್ತಿರುವಂತೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ತಲೆಬುರುಡೆ ಮಸಾಜ್‌ಗಾಗಿ

ತಲೆಬುರುಡೆ ಮಸಾಜ್‌ಗಾಗಿ

ತಲೆಬುರುಡೆಯನ್ನು ಮಸಾಜ್ ಮಾಡಿಕೊಳ್ಳಲು ಇದು ಅತ್ಯುತ್ತಮ ಎಣ್ಣೆಯಾಗಿದೆ. ತಲೆಬುರುಡೆಗೆ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮಗೊಂಡು ಕೂದಲಿನ ಬೆಳವಣಿಗೆ ಹಾಗೂ ಕೂದಲು ರೇಷ್ಮೆಯಂತೆ ಹೊಳೆಯಲು ನೆರವಾಗುವುದು.

ಒಣ ಕೂದಲಿಗೆ

ಒಣ ಕೂದಲಿಗೆ

ನೀವು ಒಣ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಾ ಇದ್ದರೆ ಕೂದಲಿಗೆ ತೇವಾಂಶವನ್ನು ನೀಡುವಂತಹ ಅತ್ಯುತ್ತಮ ಎಣ್ಣೆ ಇದಾಗಿದೆ. ಸಾಸಿವೆ ಎಣ್ಣೆಯು ಕೂದಲಿಗೆ ತುಂಬಾ ಪರಿಣಾಮಕಾರಿ.

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟು ನಿವಾರಣೆಗೆ

ತಲೆಬುರುಡೆಯಲ್ಲಿ ತಲೆಹೊಟ್ಟು ಶೇಖರಣೆಯಾಗುವುದನ್ನು ಇದು ತಡೆಯುತ್ತದೆ. ತಲೆಬುರುಡೆಯನ್ನು ಆರೋಗ್ಯವಾಗಿಡಲು ಶತಮಾನಗಳಿಂದಲೂ ಭಾರತೀಯ ಮಹಿಳೆಯರು ಇದನ್ನು ಬಳಸುತ್ತಾ ಇದ್ದಾರೆ.

ಕೂದಲು ಬೆಳವಣಿಗೆಗೆ

ಕೂದಲು ಬೆಳವಣಿಗೆಗೆ

ಪ್ರತೀ ವಾರ ಸಾಸಿವೆ ಎಣ್ಣೆಯಿಂದ ತಲೆಬುರುಡೆಗೆ ಮಸಾಜ್ ಮಾಡಿದರೆ ಒಂದೇ ತಿಂಗಳಲ್ಲಿ ಕೂದಲು ಉದ್ದವಾಗಿ ಬೆಳವಣಿಗೆ ಆಗಲಿದೆ. ರಾತ್ರಿ ಮಲಗುವ ಮೊದಲು ಕೂದಲಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿದರೆ ಆಗ ಶವರ್ ಕ್ಯಾಪ್ ಬಳಸಿ. ಇದರಿಂದ ತಲೆದಿಂಬು ಮತ್ತು ಇತರ ಕಡೆಗೆ ಎಣ್ಣೆ ಹರಡುವುದು ತಪ್ಪುತ್ತದೆ.

ಕೂದಲು ತುಂಡಾಗುವುದನ್ನು ತಡೆಯಲು

ಕೂದಲು ತುಂಡಾಗುವುದನ್ನು ತಡೆಯಲು

ಕೂದಲು ತುಂಡಾಗುವ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ಆದರೆ ಇದಕ್ಕೆ ಪರಿಹಾರ ಮಾತ್ರ ಸಿಕ್ಕಿರುವುದಿಲ್ಲ. ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಾಣಬಹುದು. ಇದು ಕೂದಲನ್ನು ಬಲಿಷ್ಠವಾಗಿಸಿ ಮುಂದೆ ಕೂದಲು ತುಂಡಾಗದಂತೆ ಮಾಡುತ್ತದೆ.

English summary

Can You Use Mustard Oil For Hair? Find Out How!

Mustard oil also has a lot of benefits for the hair. Most people avoid using it because they fear of the strong, pungent smell. It is easy to believe that the smell would not go away even after washing, but it would go away once you shampoo your hair well. In fact, once you get over your fear of the smell of the oil, you would find a unique, all in one cure to most of your hair problems. So, don't be reluctant and do go and give it a try before cringing away! These are the ways in which you could use mustard oil for hair, take a look.
X
Desktop Bottom Promotion