For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟಿನ ಸಮಸ್ಯೆಗೆ ಹೊಸ ಔಷಧ ಅದೇ 'ಮೌತ್ ವಾಶ್'!

ತಲೆಯ ಚರ್ಮದಲ್ಲಿ ಆರ್ದ್ರತೆಯ ಕೊರತೆಯಿಂದಾಗಿ ಹೊರಪದರ ತೀರಾ ಒಣಗಿ ಪಕಳೆಯಂತಾಗಿ ಪರೆ ಏಳುತ್ತದೆ, ಇದೇ ತಲೆಹೊಟ್ಟು. ಮೌತ್‍ವಾಶ್ ನಲ್ಲಿರುವ ದ್ರವ ಈ ತಲೆಹೊಟ್ಟನ್ನು ತೇವಗೊಳಿಸಿ ಸಡಿಲಿಸಿ ಚರ್ಮಕ್ಕೆ ಅಂಟಿಕೊಂಡಿರುವುದರಿಂದ ತಪ್ಪಿಸುತ್ತದೆ.

By Manu
|

ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಉಪಯೋಗವೇನೆಂದು ಅದರ ಮೇಲೆ ಬರೆದಿರುವ ವಿವರದಿಂದಲೇ ಗೊತ್ತಾಗುವಂತೆ ಹೆಸರಿಸಲಾಗುತ್ತದೆ. ಉದಾಹರಣೆಗೆ ಸೋಪು. ಸೋಪು ಎಂದರೆ ಸ್ವಚ್ಛಗೊಳಿಸುವ ವಸ್ತು. ಇದನ್ನು ಸ್ವಚ್ಛಗೊಳಿಸಲೇ ಉಪಯೋಗಿಸಬೇಕು.

Mouthwash

ಅದರ ಬದಲು ಬಣ್ಣ ಹಚ್ಚಲು ಉಪಯೋಗಿಸಲಾಗುವುದಿಲ್ಲ. ಆದರೆ ಕೆಲವು ವಸ್ತುಗಳು ಅವುಗಳ ನಿಗದಿತ ಉಪಯೋಗದ ಹೊರತಾಗಿ ಬೇರೆಯ ಉಪಯೋಗಗಳಿಂದಲೂ ಬಹುಪಯೋಗಿಯಾಗಿವೆ. ಉದಾಹರಣೆಗೆ ನಿಮ್ಮ ಕಾರಿನ ಹೆಡ್ ಲೈಟ್‌ನ ಹೊರಕವಚ ಕೆಲವರ್ಷಗಳ ಬಳಿಕ ಕೊಂಚ ಹಳದಿಯಾಗಿದ್ದರೆ ಇದರ ಮೇಲೆ ಕೊಂಚ ಟೂಥ್ ಪೇಸ್ಟ್ ಹಚ್ಚಿ ಹಲ್ಲುಜ್ಜುವಂತೆಯೇ ಹಳೆಯ ಬ್ರಶ್ ಒಂದರಿಂದ ಉಜ್ಜಿ. ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ-ಹಲ್ಲುಜ್ಜುವ ಪೇಸ್ಟ್!

ಇದರ ಪರಿಣಾಮವೇನು ಎಂಬುದನ್ನು ನೀರಿನಿಂದ ತೊಳೆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದೇ ರೀತಿ ನಮ್ಮ ಆರೋಗ್ಯ ಮತ್ತು ಸೌಂದರ್ಯಗಳ ವೃದ್ಧಿಗೂ ಕೆಲವು ವಸ್ತುಗಳ ನಿಗದಿತ ಉಪಯೋಗದ ವಿಪರೀತವಾಗಿಗೂ ಬಳಕೆಗೆ ಬರುತ್ತವೆ.

ಇಂದು ಇಂತಹ ಒಂದು ಪ್ರಬಲ ಉಪಾಯವನ್ನು ಪ್ರಸ್ತುತಪಡಿಸಲಾಗುತ್ತಿದೆ. ತಲೆಯಲ್ಲಿ ತುರಿಕೆ ತರಿಸುವ ತಲೆಹೊಟ್ಟಿನ ನಿವಾರಣೆಗೆ ಮೌತ್ ವಾಶ್ ಅಥವಾ ಬಾಯಿಯನ್ನು ದುರ್ಗಂಧದಿಂದ ರಕ್ಷಿಸುವ ದ್ರವದ ಬಳಕೆ. ಇದನ್ನು ಮೊದಲ ಬಾರಿ ಕೇಳಿದವರಿಗೆ ಅಚ್ಚರಿಯಾಗುವುದು ಖಂಡಿತ. ಯಾರೋ ಸುಮ್ಮಸುಮ್ಮನೇ ತಮಾಷೆಗಾಗಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರಬಹುದು ಎಂದು ಅಸಡ್ಡೆ ತೋರಿದರೂ ಇದರ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ನಡೆಸಿದ ಅನ್ವೇಷಣೆಯಿಂದ ಕಂಡುಬಂದ ಕೆಲ ವಿಷಯಗಳನ್ನು ನೀಡಿದ್ದೇವೆ ಮುಂದೆ ಓದಿ....

ಒಂದು ಸಾಮಾನ್ಯ ಮೌತ್ ವಾಶ್ ದ್ರವದಲ್ಲಿ ಪ್ರಮುಖವಾಗಿ ಆಲ್ಕೋಹಾಲ್ ಇರುತ್ತದೆ. ಇವು ಬಾಯಿಯ ಒಳಗಣ ಭಾಗಗಳಲ್ಲಿ ಅಂಟಿಕೊಂಡಿರುವ ಆಹಾರಕಣಗಳನ್ನು ಸಡಿಲಗೊಳಿಸಿ ನಿವಾರಿಸುವ ಮೂಲಕ ಇವುಗಳಲ್ಲಿ ಅಡಗಿ ಕುಳಿತಿದ್ದು ದುರ್ವಾಸನೆ ಮೂಡಿಸುತ್ತಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸುತ್ತದೆ. ಇದೇ ಗುಣ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ.

ತಲೆಯ ಚರ್ಮದಲ್ಲಿ ಆರ್ದ್ರತೆಯ ಕೊರತೆಯಿಂದಾಗಿ ಹೊರಪದರ ತೀರಾ ಒಣಗಿ ಪಕಳೆಯಂತಾಗಿ ಪರೆ ಏಳುತ್ತದೆ. ಇದೇ ತಲೆಹೊಟ್ಟು. ಮೌಥ್ ವಾಶ್ ನಲ್ಲಿರುವ ದ್ರವ ಈ ತಲೆಹೊಟ್ಟನ್ನು ತೇವಗೊಳಿಸಿ ಸಡಿಲಿಸಿ ಚರ್ಮಕ್ಕೆ ಅಂಟಿಕೊಂಡಿರುವುದರಿಂದ ತಪ್ಪಿಸುತ್ತದೆ. ಬಳಿಕ ಸ್ನಾನ ಮಾಡಿದಾಗ ಸಡಿಲಗೊಂಡ ಈ ಪಕಳೆ ಸುಲಭವಾಗಿ ಹೊರಹೋಗುತ್ತದೆ.

ಇತ್ತ ಪಕಳೆಯಿಲ್ಲದ ಚರ್ಮಕ್ಕೆ ಸೂಕ್ತ ಆರ್ದ್ರತೆ ನೀಡುವ ಮೂಲಕ ಚರ್ಮಕ್ಕೆ ಕಳೆ ನೀಡಿದಂತಾಗುತ್ತದೆ ಹಾಗೂ ಮತ್ತೊಮ್ಮೆ ತಲೆಹೊಟ್ಟಾಗದಂತೆ ನೋಡಿಕೊಳ್ಳುತ್ತದೆ. ಆದರೆ ಇಲ್ಲಿ ಒಂದು ಎಚ್ಚರಿಕೆಯನ್ನು ವಹಿಸಬೇಕು. ಇದರಲ್ಲಿನ ಆಲ್ಕೋಹಾಲ್ ಉರಿ ತರಿಸುವ ದ್ರವವಾದ ಕಾರಣ ತಲೆಯ ಚರ್ಮ ಸೂಕ್ಷ್ಮಸಂವೇದಿಯಾಗಿರುವವರು ಹಾಗೂ ಸೂಕ್ಷ್ಮವಾದ ಗಾಯವಿರುವವರು ಬಳಸಬಾರದು. ಏಕೆಂದರೆ ಈ ದ್ರವವನ್ನು ಹಚ್ಚಿದ ತಕ್ಷಣ ವಿಪರೀತ ಉರಿ ಪ್ರಾರಂಭವಾಗುತ್ತದೆ.

ಅಲ್ಲದೇ ತಲೆಹೊಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಇದು ನಿಮಗೆ ಸಹ್ಯವೋ ಅಲ್ಲವೋ ಎಂಬುದನ್ನು ಕೊಂಚ ದ್ರವವನ್ನು ತಲೆಗೆ ಒಂದು ಭಾಗಕ್ಕೆ ಮಾತ್ರವೇ ಹಚ್ಚಿ ಪರೀಕ್ಷಿಸಿಕೊಂಡ ಬಳಿಕವೇ ಮುಂದುವರೆಯುವುದು ಕ್ಷೇಮ. ಬನ್ನಿ, ಇದನ್ನು ಬಳಸುವ ವಿಧಾನವನ್ನು ನೋಡೋಣ:

ಹಂತ 1:
ಅರ್ಧ ಕಪ್ ಮೌತ್ ವಾಶ್ ದ್ರವವನ್ನು ಸಮಪ್ರಮಾಣದಲ್ಲಿ ಮಗುವಿನ ತೈಲ (baby oil) ದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ದ್ರವ ಸಿಂಪಡಿಸಬಲ್ಲ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಕಲಕಿ.

ಹಂತ 2:
ಮೊದಲು ನಿಮ್ಮ ಕೂದಲನ್ನು ನೀವು ಸದಾ ಬಳಸುವ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಳಿಕ ಕೊಂಚವೇ ಪ್ರಮಾಣದಲ್ಲಿ ಕಂಡೀಶನರ್ ಬಳಸಿ ತೇವಗೊಳಿಸಿ. ಆದರೆ ಈ ಕಂಡೀಶನರ್ ಕೂದಲ ತುದಿಗೆ ಮಾತ್ರವೇ ತಗುಲಬೇಕೇ ವಿನಃ ತಲೆಯ ಚರ್ಮಕ್ಕಲ್ಲ. ಕಂಡೀಶನರ್ ಅನ್ನು ಈಗ ತೊಳೆಯಬೇಡಿ.

ಹಂತ 3
ಈಗ ಬಾಟಲಿಯಲ್ಲಿದ್ದ ದ್ರವವನ್ನು ತಲೆಯ ಮೇಲೆ, ವಿಶೇಷವಾಗಿ ತಲೆಹೊಟ್ಟು ಇದ್ದೆಡೆ ಹೆಚ್ಚಿಗೆ ತಗಲುವಂತೆ ಸಿಂಪಡಿಸಿ. ಆದರೆ ಕೂದಲ ತುದಿಗಳಿಗೆ ತಾಕದಂತೆ ಎಚ್ಚರವಹಿಸಿ. ಏಕೆಂದರೆ ಈ ದ್ರವ ತಗುಲಿದ ಕೂದಲ ತುದಿಗಳು ಒಣಗಿ ಸೀಳುತ್ತವೆ. ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

ಹಂತ 4:
ಬಳಿಕ ಮುಂದಿನ ಎರಡರಿಂದ ಐದು ನಿಮಿಷಗಳವರೆಗೆ ಬೆರಳುಗಳ ತುದಿಯಿಂದ ತಲೆಗೂದಲ ಬುಡಗಳನ್ನು ನಯವಾಗಿ ಮಸಾಜ್ ಮಾಡಿ. ಮಸಾಜ್ ಮಾಡುವಾಗ ವೃತ್ತಾಕಾರವನ್ನು ಅನುಸರಿಸಿ. ತಲೆಹೊಟ್ಟು ಇದ್ದೆಡೆ ಕೊಂಚ ಒತ್ತಡದಿಂದ ಮಸಾಜ್ ಮಾಡಿ. ಬಳಿಕ ಸುಮಾರು ಐದು ನಿಮಿಷ ಹಾಗೇ ಬಿಡಿ.

ಹಂತ 5:
ನಂತರ ಕೇವಲ ತಣ್ಣೀರಿನಿಂದ ತಲೆಯ ಚರ್ಮವನ್ನು ತೊಳೆದುಕೊಳ್ಳಿ. ತಕ್ಷಣ ಒರೆಸಬೇಡಿ, ಬದಲಿಗೆ ದಪ್ಪ ಟವೆಲ್ ಅನ್ನು ಒತ್ತಿ ಒರೆಸಿ. ಏಕೆಂದರೆ ಕೂದಲು ಈ ದ್ರವದ ಪರಿಣಾಮವಾಗಿ ಕೊಂಚ ಶಕ್ತಿ ಕಳೆದುಕೊಂಡಿರುತ್ತದೆ. ಒರೆಸಿಕೊಂಡರೆ ತುಂಡಾಗುವ ಭಯವಿದೆ. ಇದರಲ್ಲಿರುವ ಬೇಬಿ ಆಯಿಲ್ ಪರಿಣಾಮದಿಂದ ಕೂದಲಿನಲ್ಲಿ ಕೊಂಚ ಎಣ್ಣೆಯಂಶ ಉಳಿದಿರಬಹುದು. ಹೆಚ್ಚು ಉಳಿದಿದ್ದರೆ ಕೊಂಚವೇ ಸೌಮ್ಯ ಶಾಂಪೂ ಬಳಸಿ ಮತ್ತೊಮ್ಮೆ ತೊಳೆದುಕೊಳ್ಳಿ. ಆದರೆ ಕೂದಲು ತುಂಡಾಗದಂತೆ ವಿಪರೀತ ಎಚ್ಚರವಹಿಸಿ. ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ನೈಸರ್ಗಿಕ ಶಾಂಪೂ

ಹಂತ 6:
ಕೂದಲು ಚೆನ್ನಾಗಿ ಒಣಗಲು ಬಿಡಿ. ಒಂದು ವೇಳೆ ಅಪ್ಪಿ ತಪ್ಪಿ ಕಣ್ಣಿಗೆ ಈ ದ್ರವ ಹೋದರೆ ತಕ್ಷಣ ಕುಡಿಯುವ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ತಲೆಹೊಟ್ಟು ವಿಪರೀತವಿಲ್ಲದಿದ್ದರೆ ಬೇಬಿ ಆಯಿಲ್ ಬದಲು ಸಾದಾ ನೀರನ್ನೇ ಉಪಯೋಗಿಸಬಹುದು. ಒಂದು ವೇಳೆ ಮಧ್ಯಮ ಪ್ರಮಾಣದಲ್ಲಿದ್ದರೆ ಬೇಬಿ ಆಯಿಲ್ ಬದಲು ನಿಮ್ಮ ನಿತ್ಯದ ಶಾಂಪೂವಿನೊಂದಿಗೂ ಬಳಸಬಹುದು.

ಈ ದ್ರವ ನಿಮ್ಮ ಕೂದಲ ಉದ್ದಕ್ಕೆ ಅನುಗುಣವಾಗಿರಲಿ. ಏಕೆಂದರೆ ಕೂದಲ ಉದ್ದ ಕಡಿಮೆ ಇದ್ದು ಹೆಚ್ಚಿನ ದ್ರವ ಬಳಕೆಯಾದರೆ ಇದು ಕೂದಲನ್ನು ಹೆಚ್ಚು ಒಣಗಿಸಿ ಶಿಥಿಲವಾಗಿಸಬಹುದು. ನಿಮ್ಮ ತಲೆಹೊಟ್ಟಿನ ತೊಂದರೆಯನ್ನು ಈ ಅದ್ಭುತ ದ್ರವ ಒಂದೇ ಬಳಕೆಯಲ್ಲಿ ಹೇಗೆ ನಿವಾರಿಸುತ್ತದೆ ಎಂದು ನೋಡಿ. ಈರುಳ್ಳಿ ಬಳಸಿ ತಲೆ ಕೂದಲಿನ ಸಮಸ್ಯೆಗೆ ವಿದಾಯ ಹೇಳಿ

English summary

Can Mouthwash Treat Dandruff?

When we come across an off-beat beauty hack, we treat it with a mix of apprehensiveness and a lot of excitement. The beauty trick we are gushing over this time is using mouthwash to control dandruff. Yeah, we were as surprised as you are! We got down to research, and here is what we found out. here is how to use mouthwash to get rid of dandruff. Take a look.
X
Desktop Bottom Promotion