ಮಲಗುವ ಮುನ್ನ ಕೂದಲಿನ ಆರೈಕೆ ಹೀಗಿರಲಿ-ಸಮಸ್ಯೆಯೇ ಬರಲ್ಲ...

ದಿನನಿತ್ಯ ರಾತ್ರಿ ಮಲಗುವ ಮುನ್ನವೇ ಕೂದಲನ್ನು ಮರುದಿನಕ್ಕೆ ಸಜ್ಜುಗೊಳಿಸಿ ಇರಿಸಿದರೆ, ಮರುದಿನ ಬೆಳಿಗ್ಗೆ ಕೊಂಚವೇ ಶ್ರಮದಿಂದ ಕೂದಲನ್ನು ಸುಂದರವಾಗಿ ಬಾಚಿಕೊಳ್ಳಲು ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಾಧ್ಯ.....

By: manu
Subscribe to Boldsky

ಬೆಳಿಗ್ಗೆದ್ದು ತಯಾರಾಗಿ ಹೊರಡಲು ಸಮಯವಿಲ್ಲದಿರುವಾಗ ತಲೆ ಬಾಚುವುದು ಭಾರಿಯಾಗಿ ಪರಿಣಮಿಸುತ್ತದೆ. ಅದರಲ್ಲೂ ಉದ್ಯೊಗಸ್ಥ ಮಹಿಳೆಯರಿಗೆ ಕಡಿಮೆ ಸಮಯದಲ್ಲಿ ಸಿದ್ಧರಾಗುವುದು ಬಹಳ ಪ್ರಯಾಸದ ಕೆಲಸ. ಕೂದಲು ಸಿಕ್ಕುಸಿಕ್ಕಾಗಿದ್ದರೆ ಇದನ್ನು ಬಿಡಿಸಿ ಬಾಚಿಕೊಳ್ಳುವುದು ಪ್ರಯಾಸಕರ ಮಾತ್ರವಲ್ಲ, ಲಗುಬಗೆಯಿಂದ ಬಾಚಿಕೊಳ್ಳುವಾಗ ತುಂಡಾಗುವ ಸಂಭವವೂ ಇರುತ್ತದೆ.

ಇದರ ಬದಲು ರಾತ್ರಿ ಮಲಗುವ ಮುನ್ನವೇ ಕೂದಲನ್ನು ಮರುದಿನಕ್ಕೆ ಸಜ್ಜುಗೊಳಿಸಿ ಇರಿಸಿದರೆ, ಮರುದಿನ ಬೆಳಿಗ್ಗೆ ಕೊಂಚವೇ ಶ್ರಮದಿಂದ ಕೂದಲನ್ನು ಸುಂದರವಾಗಿ ಬಾಚಿಕೊಳ್ಳಲು ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

haircare tricks
  

ಅಲೆಯಂತಿರುವ ಕೂದಲು
ಮಲಗುವ ಮುನ್ನ ಫ್ರೆಂಚ್ ಬ್ರೇಡ್ ಅಥವಾ ಶಿಖೆಯಿಂದಲೇ ಪ್ರಾರಂಭವಾಗುವ ಜಡೆಯನ್ನು ಹೆಣೆದು ಮಲಗಿದರೆ ಬೆಳಿಗ್ಗೆದ್ದ ಬಳಿಕ ಮೃದುವಾದ, ಅಲೆಯಲೆಯಾಗಿರುವ ಕೂದಲು ಲಭ್ಯವಾಗುತ್ತದೆ. ಆದರೆ ಬಾಚಿಕೊಳ್ಳಲು ಅಗಲವಾದ ಹಲ್ಲುಗಳಿರುವ ಬಾಚಣಿಗೆಯನ್ನು ಬಳಸುವುದು ಉತ್ತಮ. ಈ ಬಾಚಣಿಗೆಯಿಂದ ನಿಧಾನವಾಗಿ, ಹೆಚ್ಚಿನ ಒತ್ತಡವಿಲ್ಲದೇ ಬುಡದಿಂದ ತುದಿಯವರೆಗೆ ಬಾಚಿಕೊಂಡು ಬಿಡಿಸಿ ನಿಮ್ಮ ಇಷ್ಟದ ವಿನ್ಯಾಸವನ್ನು ಪಡೆದುಕೊಳ್ಳಬಹುದು. ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೇ? ಈ ಟಿಪ್ಸ್ ಅನುಸರಿಸಿ   

haircare tricks

ಗುಂಗುರು ಕೂದಲು
ಮರುದಿನ ಕೂದಲು ಗುಂಗುರುಗುಂಗುರಾಗಿರಬೇಕು ಎಂದೆನಿಸಿದರೆ ರಾತ್ರಿ ಮಲಗುವ ಮುನ್ನ ತಲೆಗೂದಲನ್ನು ಶಿಖೆಯಲ್ಲಿ ಗಂಟುಕಟ್ಟಿ. ಬಳಿಕ ಇಡಿಯ ತಲೆಗೂದಲು ಆವರಿಸುವಂತೆ ರೇಶ್ಮೆಯ ಬಟ್ಟೆ ಅಥವಾ ಸ್ಕಾರ್ಫ್ ಬಳಸಿ ಸುತ್ತಿಕೊಳ್ಳಿ. ಈ ಬಟ್ಟೆ ಹತ್ತಿಯದ್ದಾಗಿರಬಾರದು, ಏಕೆಂದರೆ ಹತ್ತಿ ಕೂದಲಿನ ತೇವಾಂಶವನ್ನು ಸೆಳೆಯುತ್ತದೆ. ಇದು ಕೂದಲನ್ನು ಒಣದಾಗಿಸುತ್ತದೆ. ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು  

ನೇರವಾದ ಕೂದಲು
ಒಂದು ವೇಳೆ ನಿಮ್ಮ ಕೂದಲು ನೇರವಾಗಿದ್ದು ಮರುದಿನವೂ ನೇರವಾಗಿಯೇ ಇರಬೇಕು ಎನಿಸಿದರೆ ತಲೆಗೂದಲನ್ನು ಶಿಖೆಯ ಮೇಲೆ ಬರುವಂತೆ ಒಂದೇ ಜುಟ್ಟು ಕಟ್ಟಿ ಸಡಿಲವಾದ ರಬ್ಬರ್ ಬ್ಯಾಂಡ್ ಹಾಕಿ. ಇದರಿಂದ ಮರುದಿನ ಬೆಳಿಗ್ಗೆ ತಲೆಗೂದಲು ನೇರವಾಗಿಯೇ ಇರಲು ಸಾಧ್ಯವಾಗುತ್ತದೆ.  

haircare tricks
 

ಉದ್ದವಾದ ಕೂದಲು
ಒಂದು ವೇಳೆ ನಿಮ್ಮ ತಲೆಗೂದಲು ನೀಳವಾಗಿದ್ದು ಮರುದಿನ ನೀವು ತಲೆಯ ಹಿಂದೆ ಕುತ್ತಿಗೆಯ ಹಿಂಭಾಗದಲ್ಲಿ ತುರುಬು ಕಟ್ಟಿಕೊಳ್ಳಬೇಕು ಎಂದಿದ್ದರೆ ರಾತ್ರಿಯೇ ಸಡಿಲವಾಗಿ ತುರುಬು ಕಟ್ಟಿ ಮಲಗಿ. ಬೆಳಿಗ್ಗೆದ್ದ ಬಳಿಕ ಬಿಡಿಸಿ ಮತ್ತೊಮ್ಮೆ ತುರುಬು ಕಟ್ಟಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೇ ನೀಳ ಕೂದಲು ತುಂಡಾಗುವ ಸಂಭವವೂ ಕಡಿಮೆಯಾಗುತ್ತದೆ. ಉದ್ದನೆಯ ಕೂದಲನ್ನು ಹೊಂದಲು ಆರೈಕೆ ಹೀಗಿರಲಿ

ಗುಂಗುರು ಕೂದಲು ಬಿಡಿಬಿಡಿಯಾಗಿರಬೇಕಿದ್ದರೆ 

haircare tricks

ಒಂದು ವೇಳೆ ನಿಮ್ಮ ಕೂದಲು ಗುಂಗುರಾಗಿದ್ದು ಮರುದಿನ ತಲೆಗೂದಲು ಗುಂಗುರಾಗಿ ಬೆನ್ನ ಮೇಲೆ ಹರಡಿರಬೇಕು ಎಂದಿದ್ದರೆ ರಾತ್ರಿ ಮಲಗುವ ಮುನ್ನ ಅಷ್ಟೂ ತಲೆಗೂದಲನ್ನು ನೆತ್ತಿನ ಮೇಲೆ ಬರುವಂತೆ ಸಡಿಲವಾದ ರಬ್ಬರ್ ಬ್ಯಾಂಡ್ ಹಾಕಿ ಸಡಿಲವಾಗಿ ಜುಟ್ಟುಕಟ್ಟಿ. ಇದರಿಂದ ನಿಮ್ಮ ನಿದ್ದೆಯಲ್ಲಿ ಕೂದಲು ಅಡ್ಡಬರದು ಹಾಗೂ ಮರುದಿನ ನಿಮ್ಮ ನೆಚ್ಚಿನ ಕೇಶ ಶೃಂಗಾರ ಪಡೆಯಲು ಸಾಧ್ಯವಾಗುತ್ತದೆ.

English summary

Bedtime haircare tricks To Wake Up To PERFECT Hair!

Getting your strands to look flawless in the morning can take time and effort. However, with a few tricks, you can get smooth, tangle-free locks in the morning. Here are a few hacks from beauty for every hair type.
Please Wait while comments are loading...
Subscribe Newsletter