For Quick Alerts
ALLOW NOTIFICATIONS  
For Daily Alerts

ಎಲೆಲೆ ಬೆಟ್ಟದ ನೆಲ್ಲಿಕಾಯಿಯೇ, ನಿನಗೆ ಸರಿ ಸಾಟಿ ಯಾರಿಲ್ಲಿ?

ಕೂದಲಿನ ಸಮಸ್ಯೆಗೆ ಹೆಚ್ಚಿನವರು ನೆಲ್ಲಿಕಾಯಿ ಎಣ್ಣೆಯಿಂದ ಪರಿಹಾರವನ್ನು ಕಂಡು ಕೊಳ್ಳುತ್ತಾರೆ. ಕೂದಲಿನ ಆರೋಗ್ಯ ವೃದ್ಧಿಸುವ ಸಾಮರ್ಥ್ಯ ನೆಲ್ಲಿಕಾಯಿಗಿದೆ.

By Manu
|

ನೆಲ್ಲಿಕಾಯಿಯ ಎಣ್ಣೆಯನ್ನು ತಲೆಗೆ ನೇರವಾಗಿ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಈಗಾಗಲೇ ಸಾಬೀತುಗೊಳಿಸಲಾಗಿರುವ ಸಂಗತಿಯಾಗಿದೆ. ಆದರೆ ಈ ಅದ್ಭುತ ಎಣ್ಣೆಯ ನಿಜವಾದ ಪರಿಣಾಮ ಪಡೆಯಬೇಕೆಂದರೆ ಇದರ ಗುಣಗಳು ನಮ್ಮ ರಕ್ತದಲ್ಲಿ ಬರಬೇಕು. ಆಗಲೇ ಕೂದಲ ಬುಡಕ್ಕೆ ಧಾವಿಸುವ ರಕ್ತದ ಮೂಲಕ ಈ ಪೋಷಕಾಂಶಗಳು ಕೂದಲ ಬುಡವನ್ನು ದೃಢಗೊಳಿಸಿ ಕೂದಲು ಉದುರುವುದನ್ನು ತಡೆಯುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

Amla hair oil

ಇದನ್ನು ಸಾಧಿಸಲು ದಿನಕ್ಕೊಂದು ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದರೆ ಸಾಕು. ಇದರೊಂದಿಗೆ ನೆಲ್ಲಿಕಾಯಿಯನ್ನು ಬಳಸಿ ತಯಾರಿಸಲಾಗುವ ಕೂದಲ ಲೇಪಗಳು ಕೂದಲನ್ನು ದೃಢಗೊಳಿಸುವುದು ಮಾತ್ರವಲ್ಲ, ಕಾಂತಿಯುಕ್ತ ಮತ್ತು ನೀಳವೂ ಆಗಿಸುತ್ತದೆ. ಬನ್ನಿ, ಈ ಪರಿಯ ಪರಿಣಾಮವನ್ನು ಪಡೆಯಲು ಕೂದಲ ಲೇಪಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ನೆಲ್ಲಿಕಾಯಿಯ ಎಣ್ಣೆ
ಸುಮಾರು ಐದಾರು ಮಧ್ಯಮ ಗಾತ್ರದ ನೆಲ್ಲಿಕಾಯಿಯನ್ನು ಚಿಕ್ಕದಾಗಿ ತುಂಡರಿಸಿ. ಸುಮಾರು ಐದಾರು ದಾಸವಾಳದ ಎಲೆಗಳನ್ನೂ ಚಿಕ್ಕದಾಗಿ ಹೆಚ್ಚಿ. ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಚಿಕ್ಕ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ತಕ್ಷಣ ಇವೆರಡನ್ನೂ ಎಣ್ಣೆಯಲ್ಲಿ ಹಾಕಿ ಸುಮಾರು ಇಪ್ಪತ್ತು ನಿಮಿಷ ಕುದಿಯಲು ಬಿಡಿ.


ಬಳಿಕ ಉರಿಯನ್ನು ಆರಿಸಿ ತಣಿಯಲು ಬಿಡಿ. ಈ ಎಣ್ಣೆಯನ್ನು ಸೋಸಿ ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನಿತ್ಯವೂ ನಿಮ್ಮ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯಾಗಿ ಬಳಸಿ. ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ಕೂದಲನ್ನು ದೃಢಗೊಳಿಸಲು
ಒಂದು ದೊಡ್ಡಚಮಚ ಮೆಂತೆಕಾಳುಗಳನ್ನು ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಈ ಕಾಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ದೊಡ್ಡ ಚಮಚ ನೆಲ್ಲಿಕಾಯಿಯ ಪುಡಿ ಮತ್ತು ಕೊಂಚ ಮೊಸರನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳುವಷ್ಟು ದಪ್ಪನೆಯ ಲೇಪನವಾಗಿಸಿ.


ಈ ಲೇಪನವನ್ನು ಕೂದಲ ಬುಡದಿಂದ ತುದಿಯವರೆಗೆ ದಪ್ಪನಾಗಿ ಹಚ್ಚಿ ಒಂದು ಗಂಟೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಕೊಲೆಸ್ಟ್ರಾಲ್‌ನ್ನು ಹದ್ದು ಬಸ್ತಿನಲ್ಲಿಡುವ ಪುಟ್ಟ 'ನೆಲ್ಲಿಕಾಯಿ'

ಕೂದಲು ನೆರೆಯುವುದನ್ನು ತಡೆಯಲು
ಒಂದು ಕಪ್ ಆಲಿವ್ ಎಣ್ಣೆ, ಒಂದು ದೊಡ್ಡ ಚಮಚ ನೆಲ್ಲಿಕಾಯಿ ಪುಡಿ ಮತ್ತು ಒಂದು ಮುಷ್ಠಿಯಷ್ಟು ಕರಿಬೇವಿನ ಎಲೆಗಳನ್ನು ಬೆರೆಸಿ. ಈ ಎಣ್ಣೆಯನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ಎಣ್ಣೆ ಉಗುರುಬೆಚ್ಚಗಿರುವಷ್ಟು ತಣ್ಣಗಾದ ಬಳಿಕ ಈ ಎಣ್ಣೆಯಿಂದ ಕೊಂಚ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿಕೊಳ್ಳಿ.


ಈ ಎಣ್ಣೆ ಇಡಿಯ ರಾತ್ರಿ ಹಾಗೇ ಇರಲಿ. ಬೆಳಿಗ್ಗೆ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಮತ್ತು ಕಂಡೀಶನರ್ ಬಳಸಿ ಸ್ನಾನ ಮಾಡಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ನೆರೆತಿರುವ ಕೂದಲುಗಳೆಲ್ಲಾ ಕಪ್ಪಗಾಗಲು ತೊಡಗುತ್ತವೆ. ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ಕೂದಲ ಕಂಡೀಶನಿಂಗ್‌ಗಾಗಿ
ಒಂದು ಮೊಟ್ಟೆಯ ಬಿಳಿಭಾಗ, ಒಂದು ದೊಡ್ಡ ಚಮಚ ನೆಲ್ಲಿಕಾಯಿಯ ಪುಡಿ ಮತ್ತು ಒಂದು ಚಿಕ್ಕಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬಳಸುವ ಮೊದಲು ಕೂದಲನ್ನು ನೆನೆಸಿ ಈ ಲೇಪನವನ್ನು ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನ ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಡಿ. ಒಣಗಿದ ಬಳಿಕ ಮಡಚಿದರೆ ಮುರಿಯುವಂತಾದಾಗ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

English summary

Amla Hair Mask to Get Thicker Hair Naturally

Here are some homemade amla hair mask recipes that will work great in your hair care regimen. Other than that, here are some homemade amla hair mask recipes that will work great in your hair care regimen.
X
Desktop Bottom Promotion