ಪಪ್ಪಾಯಿ ಹಣ್ಣಿನ 'ಹೇರ್ ಪ್ಯಾಕ್' ಪಕ್ಕಾ ನೈಸರ್ಗಿಕ ಚಿಕಿತ್ಸೆ...

ಪಪ್ಪಾಯಿ ಹಣ್ಣಿನಲ್ಲಿ ನಿಮ್ಮ ಚರ್ಮ ಹಾಗೂ ತಲೆಗೂದಲುಗಳಿಗೆ ಹೆಚ್ಚು ಉಪಯೋಗವಾಗುವ ಹಲವಾರು ಅಂಶಗಳಿವೆ. ಆದ್ದರಿಂದಲೇ ಈ ಹಣ್ಣು ಹಲವಾರು ಸೌಂದರ್ಯವರ್ಧಕಗಳು, ಸೌಂದರ್ಯ ಮತ್ತು ತಲೆಗೂದಲ ರಕ್ಷಣೆಯ ಉತ್ಪನ್ನಗಳಿಗೆ ಬಳಸಲಾಗುತ್ತಿದೆ....

By: Hemanth
Subscribe to Boldsky

ಆಯಾಯ ಹವಾಮಾನಕ್ಕೆ ಅನುಗುಣವಾಗಿ ಹಣ್ಣುಗಳು ಬೆಳೆಯುತ್ತಾ ಇರುತ್ತದೆ. ಕೆಲವು ಹಣ್ಣುಗಳು ಮಳೆಗಾಲದಲ್ಲಿ ಲಭ್ಯವಾದರೆ ಇನ್ನು ಕೆಲವು ಬೇಸಿಗೆ ಹಾಗೂ ಚಳಿಗಾಲದಲ್ಲಿ ಲಭ್ಯವಾಗುತ್ತದೆ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ ಆಗಿದೆ. ಅದೇ ಹಣ್ಣುಗಳನ್ನು ಈಗೀಗ ಸೌಂದರ್ಯವರ್ಧಕಗಳಲ್ಲೂ ಬಳಸಲಾಗುತ್ತಿದೆ. ಇಂತಹ ಕೆಲವೊಂದು ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದಾಗಿದೆ.

Papaya
 

ಪಪ್ಪಾಯ ಹಣ್ಣಿನಲ್ಲಿ ತ್ವಚೆಗೆ ನೆರವಾಗುವಂತಹ ಹಲವಾರು ಅಂಶಗಳು ಇವೆ. ಪಪ್ಪಾಯ ಹಣ್ಣು ಮಾತ್ರವಲ್ಲದ ಇದರ ಇತರ ಕೆಲವೊಂದು ಭಾಗಗಳು ಕೂಡ ತ್ವಚೆ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪಪೈನ್ ಎನ್ನುವ ಕಿಣ್ವವು ಪ್ರೋಟೀನ್ ನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಈ ಕಾರಣದಿಂದಾಗಿ ಕೆಲವೊಂದು ಜೂಯಿಂಗ್ ಗಮ್ ಹಾಗೂ ಜೀರ್ಣಕ್ರಿಯೆಯ ಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ.    ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!   

papaya
 

ಪಪ್ಪಾಯವನ್ನು ನಿಯಮಿತವಾಗಿ ತಿನ್ನುವುದರಿಂದ ಮತ್ತು ಪಪ್ಪಾಯವನ್ನು ಪ್ರಮುಖ ಅಂಶವಾಗಿ ಬಳಸಿರುವ ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸುವುದರಿಂದ ಕೂದಲನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಬಹುದು. ಪಪ್ಪಾಯಿಯು ಕೂದಲಿಗೆ ಪೋಷಕಾಂಶವನ್ನು ನೀಡಿ ಹೆಚ್ಚಿನ ಕೂದಲು ಬೆಳೆಯುವಂತೆ ಮಾಡುತ್ತದೆ... ಹಾಗಾದರೆ ಇನ್ನು ಬಳಸುವುದು ಹೇಗೆ ಎಂಬ ಪ್ರಶ್ನೆಯೇ? ಮುಂದೆ ಓದಿ... 

haircare
 

ಕೂದಲಿಗೆ ಪಪ್ಪಾಯ ಬಳಕೆ ಹೇಗೆ
ಪಪ್ಪಾಯ ಹೇರ್ ಮಾಸ್ಕ್ ಕೂದಲನ್ನು ಬಲಿಷ್ಠ, ದಪ್ಪ ಹಾಗೂ ಕಾಂತಿಯುತವಾಗಿ ಮಾಡುತ್ತದೆ. ಪಪ್ಪಾಯದ ಹೇರ್ ಮಾಸ್ಕ್ ಮಾಡುವ ವಿಧಾನ          ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ   
 

haircare

ಬೇಕಾಗುವ ಸಾಮಗ್ರಿಗಳು
*ಹಣ್ಣದ ಪಪ್ಪಾಯ ತುಂಡು ಮಾಡಿರುವುದು ಒಂದು ಕಪ್
*ಹಣ್ಣಾದ ಬಾಳೆಹಣ್ಣು ಒಂದು ಕಪ್ಪು ತುಂಡು ಮಾಡಿರುವುದು
*ಕಾಕಂಬಿ ಒಂದು ಚಮಚ
*ತೆಂಗಿನ ಎಣ್ಣೆ ಒಂದು ಚಮಚ
*ಮೊಸರು ಒಂದು ಕಪ್                  ಬೆಳಿಗ್ಗೆ ಎದ್ದಾಕ್ಷಣ ಪಪ್ಪಾಯಿ+ಲಿಂಬೆಯ ಜ್ಯೂಸ್ ಕುಡಿಯಿರಿ!  

papaya
 

ಮಾಡುವ ವಿಧಾನ
• ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಂಡು ರುಬ್ಬಿಕೊಳ್ಳಿ. ಯಾವುದೇ ತುಂಡು ಮಿಕ್ಸಿಯಲ್ಲಿ ಉಳಿಯದಂತೆ ನೋಡಿಕೊಳ್ಳಿ.
• ಈ ಪೇಸ್ಟ್ ಅನ್ನು ಒಣ ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ.
• ಪೇಸ್ಟ್ ಹಚ್ಚಿಕೊಂಡ ಬಳಿಕ ಪ್ಲಾಸ್ಟಿಕ್ ಅಥವಾ ಶವರ್ ಕ್ಯಾಪ್ ಹಾಕಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.

Papaya

• ಈಗ ಶವರ್ ಕ್ಯಾಪ್ ಸುತ್ತಲೂ ಒಂದು ಟವೆಲ್ ಅನ್ನು ಸರಿಯಾಗಿ ಕಟ್ಟಿಕೊಂಡು ಉಷ್ಣತೆ ಹೆಚ್ಚಾಗುವಂತೆ ನೋಡಿಕೊಳ್ಳಿ.
• ಅರ್ಧ ಗಂಟೆ ಕಾಲ ಹಾಗೆ ಬಿಟ್ಟುಬಿಡಿ.
• ನಿಯಮಿತವಾಗಿ ಕೂದಲು ತೊಳೆಯುವಂತೆ ಕೂದಲು ತೊಳೆಯಿರಿ.
• ಕಂಡೀಷನರ್ ಅನ್ನು ಬಳಸಬಹುದಾಗಿದೆ. ಇದರಿಂದ ಕೂದಲು ಮತ್ತಷ್ಟು ರೇಷ್ಮೆಯಂತೆ ಆಗಬಹುದು.     ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

Story first published: Saturday, October 15, 2016, 10:53 [IST]
English summary

Amazing Benefits Of Papaya For Hair

Papaya is the only fruit that is available all through the year. It is pear-shaped luscious and sweet fruit; the consistency of the pulp will be like soft butter. Usually it will be around 1 pound in weight and 7 inches long. The flesh inside the papaya will be in orange colour with slight shades of yellow Other hair benefits of papaya are mentioned below
Please Wait while comments are loading...
Subscribe Newsletter